ಅಬ್ದುಲ್ ಗಫುರ್ ಖತ್ರಿ | |
---|---|
ಜನನ | |
ವೃತ್ತಿ | ಕಲಾವಿದ |
ಗಮನಾರ್ಹ ಕೆಲಸಗಳು | ರೋಗನ್ ಕಲೆ ಯ ಟ್ರೀ ಆಫ್ ಲೈಫ್ ಮೋಟಿಫ್ |
ಪ್ರಶಸ್ತಿಗಳು | ಪದ್ಮಶ್ರಿ ೨೦೧೯ ನ್ಯಾಷನಲ್ ಅವಾರ್ಡ್ ೧೯೯೭ ಸ್ಟೇಟ್ ಅವಾರ್ಡ್ ೧೯೮೮ |
ಮಾಸ್ಟರ್, ಅಬ್ದುಲ್ ಗಫೂರ್ ಖತ್ರಿ ಭಾರತದ ಗುಜರಾತ್‌ನ ಕಚ್ ಜಿಲ್ಲೆಯ ನಿರೋನಾ ಗ್ರಾಮದ ರೋಗನ್ ಕಲಾವಿದ. [೧]
ಅಬ್ದುಲ್ಗಫುರ್ ಖತ್ರಿ ಅವರು ಕಚ್‌ನ ನಿರೋನಾ ಗ್ರಾಮದ ರೋಗನ್ ಕಲಾವಿದರ ಕುಟುಂಬದಲ್ಲಿ ಜನಿಸಿದರು. ಇವರದು ರೋಗನ್ ಕಲಾವಿದರ ಕೊನೆಯ ಕುಟುಂಬವಾಗಿತ್ತು. [೨] ೧೯೮೦ ರ ದಶಕದಲ್ಲಿ, ಅಬ್ದುಲ್ಗಫುರ್ ಖತ್ರಿ ನಿರೋನಾ ಗ್ರಾಮವನ್ನು ತೊರೆದು ಅಹಮದಾಬಾದ್ ಮತ್ತು ನಂತರ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿದರು. ಎರಡು ವರ್ಷಗಳ ನಂತರ, ಅವರು ಹಿಂದಿರುಗಿ ತನ್ನ ತಂದೆ ಮತ್ತು ಅಜ್ಜನಿಂದ ರೋಗನ್ ಕಲೆಯನ್ನು ಕಲಿತರು [೩] [೪] [೫]. ಇವರ ಪ್ರಯತ್ನದಿಂದಾಗಿ ರೋಗನ್ ಚಿತ್ರಕಲೆ ಪುನರುತ್ಥಾನ ಕಂಡಿತು. ಇದರ ಜೊತೆಗೆ, ಅಬ್ದುಲ್ಗಫುರ್ ಖತ್ರಿ ಮತ್ತು ಅವರ ಕುಟುಂಬವು ಈ ಹಿಂದೆ ಪುರುಷರಿಂದ ಮಾತ್ರ ಅಭ್ಯಾಸ ಮಾಡುತ್ತಿದ್ದ ಕಲೆಯನ್ನು ಮಹಿಳೆಯರಿಗೂ ಸಹ ತರಬೇತಿ ನೀಡಲು ಪ್ರಾರಂಭಿಸಿದರು. ೨೦೧೪ ರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾದ ಶ್ವೇತಭವನಕ್ಕೆ ಭೇಟಿ ನೀಡಿದ್ದಾಗ ಅಧ್ಯಕ್ಷ ಒಬಾಮಾ ಅವರಿಗೆ ಎರಡು ರೋಗನ್ ಪೇಂಟಿಂಗ್‌ಗಳನ್ನು ನೀಡಿದರು. ಅದರಲ್ಲಿ ಟ್ರೀ ಆಫ್ ಲೈಫ್ ಸೇರಿದಂತೆ, ಅಬ್ದುಲ್‌ಗಫೂರ್ ಖತ್ರಿ ಮತ್ತು ಅವರ ಕಿರಿಯ ಸಹೋದರ ಸುಮರ್ ಖತ್ರಿ ಅವರು ಚಿತ್ರಿಸಿದ್ದಾಗಿತ್ತು. [೬]
ಅಬ್ದುಲ್ಗಫುರ್ ಖತ್ರಿ ಅವರಿಗೆ ೧೯೮೮ ರಲ್ಲಿ ನ್ಯಾಷನಲ್ ಮೆರಿಟ್ ಸರ್ಟಿಫಿಕೇಟ್
, ೧೯೮೯ ರಲ್ಲಿ ರಾಜ್ಯ ಪ್ರಶಸ್ತಿ, ೧೯೯೭ ರಲ್ಲಿ ರಾಷ್ಟ್ರೀಯ ಪ್ರಶಸ್ತಿ, [೭] ಮತ್ತು ೨೦೧೩ ರಲ್ಲಿ ಗುಜರಾತಿನ ಮುಖ್ಯಮಂತ್ರಿ ಅವರಿಂದ ರಾಜ್ಯ ಪ್ರಮಾಣಪತ್ರವನ್ನು ನೀಡಲಾಯಿತು. ಅವರಿಗೆ ೨೦೧೯ ರಲ್ಲಿ ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ, [೭] ಮತ್ತು ೨೦೨೧ ರಲ್ಲಿ ಗುಜರಾತ್ ಪ್ರವಾಸೋದ್ಯಮ ಮತ್ತು ಟ್ರಾವೆಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಯಿತು.