ಅಮಿತ್ ಪಂಗಲ್

ಅಮಿತ್ ಪಂಗಲ್
Statistics
ತೂಕLight flyweight (49 kg)
ರಾಷ್ಟ್ರೀಯತೆIndian
ಜನನ (1995-10-16) ೧೬ ಅಕ್ಟೋಬರ್ ೧೯೯೫ (ವಯಸ್ಸು ೨೯)
Mayna, ಹರಿಯಾಣ, India

ಅಮಿತ್ ಪಂಗಲ್ ಒಬ್ಬ ಭಾರತೀಯ ಬಾಕ್ಸರ್. ಇವರು ೨೦೧೮ರ ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಮತ್ತು ೨೦೧೭ರ ಏಷ್ಯನ್ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಶಿಪ್ಸ್ ನಲ್ಲಿ ಲೈಟ್ ಫ಼್ಲೈವೈಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.[]

ಬಾಲ್ಯ ಮತ್ತು ವೈಯಕ್ತಿಕ ಜೀವನ

[ಬದಲಾಯಿಸಿ]

ಅಮಿತ್ ಪಂಗಲ್ ಹುಟ್ಟಿದ್ದು ೧೯೯೫ರ ಅಕ್ಟೋಬರ್ ೧೬ರಂದು. ಇವರು ಜನಿಸಿದ್ದು ಹರ್ಯಾಣದ ರೋಹ್ಟಕ್ ಜಿಲ್ಲೆಯ ಮಾಯ್ನಾ ಎಂಬ ಹಳ್ಳಿಯಲ್ಲಿ. ಅವರ ತಂದೆ ವಿಜೇಂದರ್ ಸಿಂಗ್ ಆ ಹಳ್ಳಿಯಲ್ಲಿ ರೈತರಾಗಿದ್ದರು. ಅಮಿತ್ ರವರ ಅಣ್ಣ ಅಜಯ್ ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ೨೦೦೯ರಲ್ಲಿ ಅಮಿತ್ ಪಂಗಲ್ ಬಾಕ್ಸಿಂಗ್ ಸೇರಿಕೊಳ್ಳಲು ಅವರ ಅಣ್ಣನೇ ಸ್ಪೂರ್ತಿಯಾಗಿ ನಿಂತಿದ್ದರು.[] ಮಾರ್ಚ್ ೨೦೧೮ರಿಂದ ಅಮಿತ್ ಭಾರತೀಯ ಸೈನ್ಯದಲ್ಲಿ ಜೂನಿಯರ್ ನಿಯೋಜಿತ ಅಧಿಕಾರಿಯಾಗಿ (ಜೂನಿಯರ್ ಕಮಿಶನ್ಡ್ ಆಫ಼ೀಸರ್) ಕೆಲಸ ನಿರ್ವಹಿಸುತ್ತಿದ್ದಾರೆ.

ಸಾಧನೆ

[ಬದಲಾಯಿಸಿ]

ಅಮಿತ್ ಪಂಗಲ್ ಅವರು ೨೦೧೭ರ ರಾಷ್ಟ್ರೀಯ ಚಾಂಪಿಯನ್ ಶಿಪ್ಸ್ ನಲ್ಲಿ ಚೊಚ್ಚಲ ಪ್ರದರ್ಶನ ನೀಡಿದ್ದಲ್ಲದೆ ಬಂಗಾರದ ಪದಕವನ್ನೂ ಗೆದ್ದಿದ್ದರು. ೨೦೧೭ರ ಮೇ ತಿಂಗಳಲ್ಲಿ ತಾಶ್ಕೆಂಟ್ ನಲ್ಲಿ ನಡೆದ ಏಷ್ಯನ್ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಶಿಪ್ಸ್ ಲೈಟ್ ಫ಼್ಲೈ ವೈಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಲ್ಲದೆ, ೨೦೧೭ರ ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ಸ್ ಗೆ ಆಯ್ಕೆಯಾಗಿದ್ದರು. ಇಲ್ಲಿ ಕ್ವಾರ್ಟರ್ ಫ಼ೈನಲ್ ಹಂತದಲ್ಲಿ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಪಡೆದ ಉಜ್ಬೇಕಿಸ್ತಾನದ ಹಸನ್ಬಾಯ್ ದುಸ್ಮತೋವ್ ರಿಂದ ಸೋಲಿಸಲ್ಪಟ್ಟರು. ೨೦೧೮ರ ಫ಼ೆಬ್ರುವರಿಯಲ್ಲಿ ಸೋಫ಼ಿಯಾದಲ್ಲಿ ನಡೆದ ಸ್ಟ್ರಾಂಜಾ ಕಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ೨೦೧೮ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಲೈಟ್ ಫ಼್ಲೈವೈಟ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ೨೦೧೮ರ ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಹಸನ್ಬಾಯ್ ದುಸ್ಮತೋವ್ ರನ್ನು ಮಣಿಸಿ ಸ್ವರ್ಣ ಪದಕವನ್ನು ಗೆದ್ದಿದ್ದಾರೆ ಅಮಿತ್ ಪಂಗಲ್.

ಉಲ್ಲೇಖಗಳು

[ಬದಲಾಯಿಸಿ]