ಅಲಕೆ

ಹಿಂದೂ ಧರ್ಮದಲ್ಲಿ, ಕೆಲವೊಮ್ಮೆ ಅಲಕಾಪುರಿ ಎಂದೂ ಕರೆಯಲ್ಪಡುವ ಅಲಕೆ ಒಂದು ಪೌರಾಣಿಕ ನಗರ. ಇದು ಯಕ್ಷರ ರಾಜ ಮತ್ತು ಸಂಪತ್ತಿನ ಒಡೆಯನಾದ ಕುಬೇರನ ತವರು. ಯಕ್ಷರು ಕುಬೇರನ ಸೇವಕರು.[] ಮಹಾಭಾರತವು ಈ ನಗರವನ್ನು ಯಕ್ಷ ರಾಜ್ಯದ ರಾಜಧಾನಿ ಎಂದು ಉಲ್ಲೇಖಿಸುತ್ತದೆ. ತನ್ನ ವಾಸ್ತುಶಿಲ್ಪ, ಸಮೃದ್ಧತೆ, ಮತ್ತು ಒಟ್ಟಾರೆ ವೈಭವದಲ್ಲಿ ಈ ನಗರವು ದೇವತೆಗಳ ರಾಜನಾದ ಇಂದ್ರನ ರಾಜಧಾನಿಗೆ ಸರಿಸಮನಾಗಿದೆ. ಈ ನಗರವನ್ನು ಕಾಳಿದಾಸನ ಪ್ರಸಿದ್ಧ ಗೀತಾತ್ಮಕ ಕವಿತೆ ಮೇಘದೂತದಲ್ಲಿ ಉಲ್ಲೇಖಿಸಲಾಗಿದೆ.

ಅಲಕಾ ಹಿಂದೂ ಹುಡುಗಿಯರ ಒಂದು ಸಾಮಾನ್ಯ ಹೆಸರಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. (Kramrisch, Stella). 1994. The Presence of Siva, p.137