ಇಬ್ರಾಹಿಂ ಸುತಾರ್ | |
---|---|
![]() | |
Born | ಮಹಾಲಿಂಗಪುರ[೧] | ೧೦ ಮೇ ೧೯೪೦
Died | 5 February 2022 | (aged 81)
Citizenship | ಭಾರತೀಯ |
Education | ತರಗತಿ 3[೧] |
Occupation | ನೇಕಾರ[೧] |
Known for | ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆದ 40 ವರ್ಷಗಳಿಂದ ತಮ್ಮ ಹಾಡುಗಳು ಮತ್ತು ಭಜನೆಗಳ ಮೂಲಕ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ಹೆಸರುವಾಸಿಯಾಗಿದ್ದಾರೆ[೧] |
Spouse | ಮಾರೆಂಬಿ[೧] |
Children | ಹುಮಾಯೂನ್ ಸುತಾರ್ ಮತ್ತು ಇತರ ಇಬ್ಬರು ಮಕ್ಕಳು[೧][೨] |
Website | www |
ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (೧೦ ಮೇ ೧೯೪೦ - ೦೫ ಫೆಬ್ರವರಿ ೨೦೨೨[೩]) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.[೪]
ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್, ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.
ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು, ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ, ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ, ಭಗವದ್ಗೀತೆಗಳ ಅಧ್ಯಯನ ಮಾಡಿದರು.
ದೇವರು, ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು
ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ.
ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ.