ಉತ್ತರೀಯ ಎಂದರೆ ಭಾರತದ ಒಂದು ಕೊರಳವಸ್ತ್ರದಂತಹ ಬಟ್ಟೆಯ ತುಂಡು. ಇದು ಒಂದು ಶಾಲಿನಂತೆ ಇರುತ್ತದೆ ಮತ್ತು ಎರಡೂ ತೋಳುಗಳ ಸುತ್ತ ಸುತ್ತಿಕೊಳ್ಳುವಂತೆ ಕುತ್ತಿಗೆಯ ಹಿಂಭಾಗದಿಂದ ಇಳಿಯುತ್ತದೆ, ಮತ್ತು ದೇಹದ ಮೇಲ್ಭಾಗವನ್ನು ಹೊದಿಸಲು ಇದನ್ನು ಬಳಸಬಹುದು. ಇದನ್ನು ಸಾಮಾನ್ಯವಾಗಿ ನವುರಾದ ಹತ್ತಿ ಅಥವಾ ರೇಷ್ಮೆಯಿಂದ ತಯಾರಿಸಲಾಗುತ್ತಿತ್ತು, ಆದರೆ ನವುರಾದ ಚಕ್ಕಳದಿಂದಲೂ ತಯಾರಿಸಬಹುದು. ಈ ಉಡುಪನ್ನು ಚಿತ್ರಿಸುವ ಕೆತ್ತನೆಗಳು ಬಹಳ ಹಿಂದಿನ ಕಾಲದ್ದೆಂದು ನಿರ್ಧರಿಸಲಾಗಿದೆ ಆದರೆ ಇದರ ಉಳಿದುಕೊಂಡಿರುವ ಉದಾಹರಣೆಗಳು ಕಡಿಮೆ ಇರುವುದರಿಂದ ಫ಼್ಯಾಷನ್ ಇತಿಹಾಸಕಾರರು ಉಬ್ಬುಕೆತ್ತನೆಗಳನ್ನು ಅಧ್ಯಯನ ಮಾಡುತ್ತಾರೆ.[೧]
ದುಪಟ್ಟಾ ಉತ್ತರೀಯದ ಒಂದು ವಿಕಸಿತ ರೂಪವಾಗಿದೆ.
ಇದನ್ನು ಈಗಲೂ ಭಾರತೀಯ ಉಪಖಂಡದಾದ್ಯಂತ ಧರಿಸಲಾಗುತ್ತದೆ ಮತ್ತು ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಕುರ್ತಾ, ಅಚ್ಕನ್ ಅಥವಾ ಶೇರ್ವಾನಿ ಮೇಲೆ ಧರಿಸಲಾಗುತ್ತದೆ.ಇದನ್ನು ಸಾಮಾನ್ಯವಾಗಿ ಅಂತರೀಯದ ಜೊತೆಗೆ ಬಳಸಲಾಗುತ್ತಿತ್ತು. ಅಂತರೀಯ ಎಂದರೆ ಪಂಚೆಯ ಒಂದು ಪ್ರಾಚೀನ ಸ್ವರೂಪವಾಗಿತ್ತು. ಸೊಂಟವಸ್ತ್ರ ಅಥವಾ ಕಾಯಾಬಂಧ್ ಇದನ್ನು ಭದ್ರವಾಗಿ ಹಿಡಿದಿಡುತ್ತಿತ್ತು. ಉತ್ತರೀಯವನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ರುಮಾಲಾಗಿ ಬಳಸುತ್ತಿದ್ದರು.
ಬೌದ್ಧ ಸಮುದಾಯದ ಕಾಯಕ ಸಹೋದರರು ಸಾಮಾನ್ಯವಾಗಿ ಕೇಸರಿ ಬಣ್ಣದ ಅಂತರೀಯ, ಜೊತೆಗೆ ಉತ್ತರೀಯ ಮತ್ತು ಹೆಚ್ಚು ದೊಡ್ಡ ಚಾದರವನ್ನು ಧರಿಸುತ್ತಿದ್ದರು.