ಎನ್. ರವಿಕಿರಣ್

ಎನ್. ರವಿಕಿರಣ್
[[File:
|frameless|center=yes|alt=]]
ಎನ್. ರವಿಕಿರಣ್
ಜನನ೧೨ ಫೆಬ್ರವರಿ ೧೯೬೭
ಮೈಸೂರು, ಭಾರತ
ವೃತ್ತಿಸಂಗೀತಗಾರ
ರಾಷ್ಟ್ರೀಯತೆಭಾರತೀಯ

ಎನ್. ರವಿಕಿರಣ್ ಭಾರತದ ಪ್ರಸಿದ್ಧ ಸಂಗೀತಗಾರ, ಪ್ರಸಿದ್ಧ ಸಂಗೀತ ಪ್ರಚಂಡರೂ ಹೌದು.[] ಅವರು ೧೨ ಫೆಬ್ರವರಿ ೧೯೬೭ರಂದು ಜನಿಸಿದರು.[] ತಮ್ಮ ಐದನೇ ವರ್ಷದಲ್ಲಿಯೇ ಗಾಯಕ ಹಾಗೂ ವಾದ್ಯಗಾರರಾಗಿದ್ದರು. ಇವರು ಸಂಗೀತ ಸಂಯೋಜಕರು, ಗುರುಗಳು, ಲೇಖಕರು ಮತ್ತು ಉತ್ತಮ ವಾಗ್ಮಯರಾಗಿದಾರೆ. ಇವರು ಕ್ರಾಂತಿಕಾರಿ ಚಿತ್ರವೀಣ ನರಸಿಂಹನ್ರವರ ಪುತ್ರ.[] ಹಾಗೂ ಪ್ರಸಿದ್ಧ ಸಂಗೀತಗಾರ ನಾರಾಯನ್ ಅಯ್ಯಂಗರ್‌ರವರ ಮೊಮ್ಮಗ.

ಬಾಲ್ಯ ಜೀವನ ಹಾಗೂ ಅವರ ಸಾಧನೆ

[ಬದಲಾಯಿಸಿ]

ರವಿಕಿರಣ್ ಕರ್ನಾಟಕಮೈಸೂರಿನಲ್ಲಿ ಜನಿಸಿದರು.[] ಅವರು ಪ್ರಥಮಮವಾಗಿ ಬೆಂಗಳೂರಿನಲ್ಲಿ ಕಾಣಿಸಿಕೊಂಡರು. ಆಗ ಅವರಿಗೆ ೨ ವರ್ಷವಾಗಿತ್ತು. ಇದಾದ ನಂತರ ಅವರು ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ಪ್ರದರ್ಶನ ನೀಡಿದರು. ಕೃಷ್ಣ ಘಾನಾ ಸಭಾ ಹಾಡಿನ ಸ್ವರತರಂಗಗಳನ್ನು ಗುರುತಿಸಿ ಕರ್ನಾಟಕ ಸಂಗೀತದ ಸುಮಾರು ೩೨೫ ರಾಗಗಳು ಮತ್ತು ೧೭೫ ತಾಳಗಳನ್ನು ಹಾಡಿದರು. ಇವರನ್ನು ಸೆಮ್ಮ೦ಗುಡಿ ಶ್ರೀನಿವಾಸ ಅಯ್ಯರ್, ಪಂಡಿತ್ ರವಿಶಂಕರ್, ಎಮ್.ಎಸ್ ಸುಬ್ಬಲಕ್ಷ್ಮಿ, ಟಿ.ಆರ್ ಮಹಲಿಂಗಮ್ ಸೇರಿದಂತೆ ಪ್ರಸಿದ್ಧ ಸಂಗೀತಗಾರರು ಪರೀಕ್ಷಿಸಿದರು. ಅವರಿಗೆ ಮದ್ರಾಸ್ ಸಂಗೀತ ಅಕಾಡೆಮಿಯಿಂದ ವಿದ್ಯಾರ್ಥಿ ವೇತನ ದೊರಕುತ್ತಿತ್ತು. ನಂತರ ಮುಂಬಾಯಿಯ ಷನ್ಮುಖಾನಂದ ಕಲಾ ಸಂಸ್ಥೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದರು.

ತಂದೆ ಚಿತ್ರವೀಣ ನರಸಿಂಹನ್ ಅಡಿಯಲ್ಲಿ ಸೂಕ್ತವಾಗಿ ತರಬೇತಿಯಾದ ನಂತರ, ರವಿಕಿರಣ್, ೧೯೭೨ ರಲ್ಲಿ ಕೊಯಂಬತ್ತೂರಿನ ಒಂದು ಕಾರ್ಯಕ್ರಮದಲ್ಲಿ ಗಾಯಕರಾಗಿ ಪಾದಾರ್ಪಣೆ ಮಾಡಿ, ಒಂದು ದಾಖಲೆಯನ್ನು ಸೃಷ್ಟಿಸಿದರು. ಆಗ ಅವರಿಗೆ ಐದು ವರ್ಷವಾಗಿತ್ತು ,ನಂತರ ಮೈಸೂರು ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ, ತಮ್ಮ ಹತ್ತನೇ ವಯಸ್ಸಿನವರೆಗೆ ಸಂಗೀತವನ್ನು ಪ್ರಸ್ತುತಪಡಿಸಿದರು. ಅವರ ಸತತವಾದ ಎರಡುವರೆ ಗಂಟೆಗಳ ವಾಚನ, ಜನರನ್ನು ಸೆಳೆಯಿತು. ಭಾರತೀಯ ಮಾಧ್ಯಮಗಳಲ್ಲೂ ಇವರ ಸಾಹಸವನ್ನು ಕೊಂಡಾಡಲಾಯಿತು. ಅವರು ೧೯೯೯ ರಿಂದ ಪುನಃ ಗಾಯಕರಾಗಿ ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ ಚೆನೈ, ನ್ಯೂಯಾರ್ಕ್, ಬೆಂಗಳೂರು, ಸನ್ ಜೋಸ್, ವಾಷಿಂಗ್ಟನ್ ಡಿ.ಸಿ, ಡಲ್ಲಾಸನಂತಹ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕ್ಲೀವಿಲಾಂಡ್ ಮತ್ತು ಚಿಕಾಗೋದಲ್ಲಿ ವರ್ಲ್ಡ್ ಮ್ಯೂಸಿಕ್ ಫೆಸ್ಟಿವಲ್ ನಂತಹ ದೊಡ್ಡ ಕಾರ್ಯಕ್ರಮದಲ್ಲಿ ತಮ್ಮ ಹಾಡನ್ನು ಹಾಡಿ ಉತ್ತಮ ಹಾಡುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[]

ಪಕ್ಕ ವಾದ್ಯಗಾರ

[ಬದಲಾಯಿಸಿ]

ಹತ್ತನೇ ವಯಸ್ಸಿನಲ್ಲಿಯೇ, ಅವರು ೨೧ ತಂತಿಯ ಚಿತ್ರವೀಣ ಬದಲಾವಣೆಗಳನ್ನು ಕಲಿತು, ಹನ್ನೊಂದನೇ ವಯಸ್ಸಿನಲ್ಲಿ ತಮ್ಮ ಮೊದಲ ಚಿತ್ರವೀಣ ಸಂಗೀತ ಕಾರ್ಯಕ್ರಮ ನೀಡಿದರು ಹಲವಾರು ಸ್ಥಳಗಳಲ್ಲಿ, ಹಬ್ಬಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ ಭಾರತದ ಪ್ರಸಿದ್ಧ ಹಾಡುಗಾರ ಎಂದು ಹೆಸರು ಮಾಡಿದರು. ೧೯೮೫ರಂದು, ಚೆನೈನಲ್ಲಿ ಸತತವಾಗಿ ಇಪತ್ನಾಲ್ಕು ಗಂಟೆಯ ತಡೆರಹಿತ ಏಕವ್ಯಕ್ತಿ ಸಂಗೀತ ಕಾರ್ಯಕ್ರಮ ನೀಡಿ ದಾಖಲೆಯಾದರು. ಮತ್ತು ದೂರದರ್ಶನದಲ್ಲಿ ವೃತ್ತಿಪರ ಸಂಗೀತ ಗೋಷ್ಠಿಗಳನ್ನು ನೀಡಲು ಕೋರಿಕೆ ಬಂದ್ದಿತ್ತು. ಭಾರತದ ಸಂಪ್ರದಾಯವನ್ನು ಪ್ರತಿನಿಧಿಸಲು ಪೋಲಂಡ್ ಜೆಕ್ ರಿಪಬ್ಲಿಕ್, ಆಸ್ಟ್ರೇಲಿಯ ಮತ್ತು ಯುಗೊಸ್ಲೇವಿಯ ಹೀಗೆ ಹಲವಾರು ದೇಶಗಳಿಂದ ಆಹ್ವಾನ ಬಂದ್ದಿತ್ತು. ಯೂಎಸ್ಎ, ಯುಕೆ, ಕೆನಡಾ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲ್ಯಾಂಡ್, ನೆದರ್ಲ್ಯಾಂಡ್, ಬೆಲ್‌ಜಿಯಂ,[] ಸಿಂಗಪುರ ಮತ್ತು ಇತರ ದೇಶಗಳಲ್ಲಿ ತಮ್ಮ ಅಮೋಘವಾದ ಪ್ರದರ್ಶನಗಳನ್ನು ನೀಡಿದ್ದರೆ.

ಸಂಯೋಜಕ

[ಬದಲಾಯಿಸಿ]

ರವಿಕಿರಣ್‌ರವರು ವರ್ಮ, ಜವಳಿ, ತಿಲ್ಲಾನ ಮತ್ತು ಪದಂ ಎಂಬ ೭೦೦ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಭೇದಗಳನ್ನು ಸಂಯೋಜಿಸಿದ್ದಾರೆ. ಅವರು ಎರಡನೇ ವಯಸ್ಸಿನಲ್ಲಿ ರಾಗವನ್ನ್ನುಪತ್ತೆ ಮಾಡಿ ಅದನ್ನು ಚೂಡಮಣಿ ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೆ ಹೊಸ ರಾಗಗಳಿಗೆ ಸೃಷ್ಟಿಕರ್ತರಾಗುತ್ತಾರೆ. ಅವು ಕೇಶವಪ್ರಿಯ, ಸ್ನೇಹಪ್ರಿಯ, ಅಂಧಕಾರಿಣಿ, ಮತ್ತು ಮೋಹಿನಿ ಇವರ ಹೊಸ ರಾಗಗಳು. ಕರ್ನಾಟಕ ಸಂಗೀತದ ಪ್ರತೀ ಹಾಡಿನ ತುಣುಕಿನಲ್ಲಿ ೩೫ ತಾಳಗಳನ್ನು ಸೃಷ್ಟಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಹಾಡಿನ ಸಾಹಿತ್ಯದಲ್ಲಿ, ಭಾರತದ ಸಂಸ್ಕೃತ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಬಳಸಿಕೊಂಡಿದ್ದಾರೆ.

ನೃತ್ಯ ಸಂಯೋಜಕ

[ಬದಲಾಯಿಸಿ]

ರವಿಕಿರಣ್ ರವರ ನೃತ್ಯದಲ್ಲಿ "ಲಕ್ಷ್ಮೀ ವೈಭವಂ" ಎಂಬುದನ್ನು "ಸೃಜನಶೀಲ ಉಪಕರಣ" ಬಳಸಿ ಸೃಷ್ಟಿಮಾಡಲಾಗಿದೆ. ಸಾವಿತ್ರಿ, ವಿನಾಯಕ ವೈಭವಂ, ರಾಮಾಯಣ, ಮಹಾಭಾರತ ಮತ್ತು ಪಂಚಕ್ರಿಯ ಎಂಬ ನೃತ್ಯಗಳನ್ನು ಬಳಸಿಗೊಂಡಿದೆ. ಇವರು ಕಾಸ್ಮೊಸ್ ಎಂಬ ವಿಭಿನ್ನ ಸಂಸ್ಕೃತಿಯ ನೃತ್ಯವನ್ನು ನಿರ್ಮಾಣಮಾಡಿ, ವಿವಿಧ ರೀತಿಯ ನೃತ್ಯದ ಸಂಯೋಜಕರಾಗಿದ್ದಾರೆ.

ಎನ್. ರವಿಕಿರಣ್

ರವಿಕಿರಣ್ ತಮ್ಮ ವ್ಯಾಪಕ ಭಂಡಾರಕ್ಕೆ ಹೆಸರುವಾಸಿಯಾಗಿದ್ದಾರೆ. ಸಾವಿರಾರು ಭಾರತೀಯ ನೃತ್ಯಗಳನ್ನು ಸಂಯೋಜಿಸಿ ಪ್ರಪಂಚದಾದ್ಯಂತ ಹಲವಾರು ಶಿಷ್ಯರಿಗೆ ನೃತ್ಯ ತರಬೇತಿ ನೀಡಿದ್ದಾರೆ. ಇವರು ಅನೇಕ ಪ್ರಶಸ್ತಿ ವಿಜೇತರು, ಸಂಗೀತಗಾರರು ಮತ್ತು ಶಿಕ್ಷಕರಾಗಿದ್ದಾರೆ. ಅವರು ಆನ್ಲೈನ್‌ ಪಠ್ಯಕ್ರಮಗಳನ್ನು ಹೊಸದಾಗಿ ೧೯೯೬ರಂದು ಬಿಡುಗಡೆ ಮಾಡಿದರು. ಇವರೆ ಫ್ಲಿಪ್‌ ಭೋಧನೆಯ ಆನ್ಲೈನ್ ಪಠ್ಯಕ್ರಮಗಳನ್ನು ಉಪಯೋಗಿಸಿ ಬೋಧನೆ ಮಾಡಿದ ಮೊದಲ ಗುರು. ಟೆಲಿ ಬೋಧಿಸುವ ಪರಿಕಲ್ಪನೆಯ ಪ್ರವರ್ತಕರಿವರು. ಅವರು ೧೮ ನೇ ಕಾರ್ಯಾಗಾರಗಳ, ಪುಸ್ತಕಗಳ ಮತ್ತು ಲೇಖನಗಳ ಮೂಲಕ ನೂರಾರು ಸಂಯೋಜಕ ಸಂಯೋಜನೆಗಳನ್ನು ಬೆಳಕಿಗೆ ತಂದರು.

ರಾಯಭಾರ

[ಬದಲಾಯಿಸಿ]

ಸಂಸ್ಕೃತಿಯ ಸಕ್ರಿಯ ಚಾಂಪಿಯನ್ ಎಂದು ರವಿಕಿರಣ್ ಹೆಸರುವಾಸಿಯಾಗಿದ್ದಾರೆ. ಇವರು ಭಾರತ ಮತ್ತು ಅಮೇರಿಕದಲ್ಲಿ ಹಲವಾರು ಶಾಲಾ ಕಾಲೇಜುಗಳ ನೂರಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತಮ್ಮ ೨೦ ನೇ ವಯಸ್ಸಿನಲ್ಲಿ "ವಿಶ್ವದ ಶಾಂತಿ ಮತ್ತು ಸಮೃದ್ಧಿಯ" ಸಾಂಕೇತಿಕ ತಡೆರಹಿತ ೭೨-ಗಂಟೆಗಳ ಕಾಲ ಸಂಗೀತವನ್ನು ಆಯೋಜಿಸಿದ್ದರು. ಇದು ಅವರ ಜೀವನದ ಒಂದು ಅಮೋಘ ತಿರುವಿಗೆ ಕಾರಣವಾಯಿತು.

ಗ್ರಾಮೀಣ ಸಂಗೀತ ಶಿಕ್ಷಣ ಯೋಜನೆಗಳು

[ಬದಲಾಯಿಸಿ]

೨೦೦೬ ರಲ್ಲಿ, ರವಿಕಿರಣ್, ಭಾರತ ಸರ್ಕಾರದ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸುಮಾರು ೩೧೦೦೦ಕ್ಕೂ ಹೆಚ್ಚು ಮಕ್ಕಳಿಗೆ ಒಂದು ದೊಡ್ಡ ಸಂಗೀತ ಶಿಬಿರವನ್ನು ತಮಿಳುನಾಡಿನಲ್ಲಿ ಗ್ರಾಮೀಣ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. "ಇನೈಯತ್ರ ಇನ್ನಿಶೈ" ಎಂಬ ಪುಸ್ತಕವನ್ನು ಬರೆದಿದ್ದಾರೆ, ಕೆಲವು ವಿಶೇಷ ಬಹಿರಂಗ ಪ್ರದರ್ಶನ ಒಳಗೊಂಡಿತ್ತು ಅದೇ ಹೆಸರಿನ ಜೊತೆಗೆ ೨-ಸಂಪುಟದ ಡಿವಿಡಿಗಳನ್ನು ಸಿದ್ದಪಡಿಸಿದ್ದಾರೆ. ಸಹನ ಮತ್ತು ಯದುಕುಲಕಂಮ್‌ಭೋದಿ ಎಂಬ ಹೊಸ ರಾಗಗಳನ್ನು ಕಲ್ಪಿಸಿದರು. ರವಿಕಿರಣ್ ವೈವಿಧ್ಯಮಯ ಸಮುದಾಯಗಳ, ಧರ್ಮಗಳ ಮತ್ತು ರಾಷ್ಟ್ರಗಳ ಶಿಷ್ಯರಿಗೆ ತರಬೇತಿ ನೀಡಿದರು. ಇವರು ಭಾರತದ, ಯುಎಸ್ಎ ಮತ್ತು ಇತರ ದೇಶಗಳ ಶಾಲಾ ಕಾಲೇಜುಗಳಲ್ಲಿ ನೂರಾರು ಸಂಗೀತ ಉಪನ್ಯಾಸಗಳನ್ನು ನೀಡಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ರವಿಕಿರಣ್ ರವರು ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಕಲಾತ್ಮಕ ಮಟ್ಟದಲ್ಲಿ ಭಾರತದ ಅತ್ಯಂತ ಬಿರುದಾಂಕಿತ ಕಲಾವಿದರಲ್ಲಿ ಒಬ್ಬರು. ಅವರು ಅತೀ ಕಿರಿಯ ವಯಸ್ಸಿನಲ್ಲಿ ಮದ್ರಾಸ್ ಮ್ಯೂಸಿಕ್ ಅಕಡೆಮಿಯಾ ಫೆಲೋಶಿಪ್ ಪ್ರಶಸ್ತಿ ಸ್ವೀಕರಿಸಿದ್ದರೆ.[]

ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು

[ಬದಲಾಯಿಸಿ]
  • ಮಿಲೇನಿಯಮ್ ಫೆಸ್ಟಿವಲ್ ಅವಾರ್ಡ್ (ಮಿಲೇನಿಯಮ್ ಆಯೋಗ ಯು.ಕೆ ಸರ್ಕಾರ)
  • ಎ ಬೆಸ್ಟ್‌ ಕಾನ್‌ಟೆಂಪೂರರಿ ವಾರ್ಲ್ದ್‌ ಆಲ್ಬ್‌ಮ್ ಅವಾರ್ಡ್
  • ಸಿಟಿಷನ್‌ ಫ್ರಂಮ್ ಸಿಟಿ ಆಫ್‌ ಹೂಸ್ಟಂನ್‌ ಅವಾರ್ಡ್, ಯೂ.ಎಸ್‌.ಎ.
  • ಸಿಟಿಷನ್‌ ಫ್ರಂಮ್ ಸಿಟಿ ಆಫ್‌ ತುಲ್ಸ ಅವಾರ್ಡ್, ಯೂ.ಎಸ್‌.ಎ[]

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು

[ಬದಲಾಯಿಸಿ]

ಪ್ರೆಸಿಡೆಂಟ್ ಆಫ್‌ ಇಂಡಿಯಾ ಸಂಗೀತ್ ನಾಟಕ್ ಅವಾರ್ಡ್‌(೨೦೦೭)
ಸ್ಟೇಟ್‌ ಆಫ್ ಇಂಡಿಯ ಅವಾರ್ಡ್
ಸಾನ್‌ಸ್ಕ್ರಿಟ್ ಪ್ರಶಸ್ತಿ
ಕಲೈಮಾಮಣಿ (ತಮಿಳು ನಾಡು ಸ್ಟೇಟ್ ಅವಾರ್ಡ್),೧೯೮೫
ಕುಮಾರ್ ಗಂಧರ್ವ ಸಮ್ಮಾನ್.....ಇತ್ಯಾದಿ[]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2019-12-27. Retrieved 2020-01-11.
  2. ೨.೦ ೨.೧ https://www.allmusic.com/artist/n-ravikiran-mn0000380419/biography
  3. "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.
  4. https://www.thehindu.com/entertainment/music/n-ravikiran-on-his-musical-journey/article21223036.ece
  5. "ಬೆಲ್‌ಜಿಯಂ". Archived from the original on 2015-02-26. Retrieved 2015-11-04.
  6. "ಪ್ರಶಸ್ತಿಗಳು". Archived from the original on 2015-09-24. Retrieved 2015-11-04.
  7. https://www.pertout.com/Ravikiran.htm
  8. Ravikiran, Chitravina N. (24 November 2016). "A phenomenon beyond parallel". The Hindu (in Indian English). Retrieved 11 January 2020.