ಎಪಿಗ್ರಾಫಿಯ ಕರ್ನಾಟಿಕ

ಎಪಿಗ್ರಾಫಿಯ ಕರ್ನಾಟಿಕ
ಎಪಿಗ್ರಫಿಯ ಕರ್ನಾಟಿಕದ ೯ನೇ ಸಂಪುಟದ ಮುಖಪುಟ
ಲೇಖಕಬಿ.ಎಲ್.ರೈಸ್
ಭಾಷೆಕನ್ನಡ, ಇಂಗ್ಲಿಪ್ ಮತ್ತು ರೋಮನ್
ಪ್ರಕಾಶಕಮೈಸೂರು ಪುರಾತತ್ವ ಇಲಾಖೆ
ಪುಸ್ತಕಗಳ ಸಂಖ್ಯೆ೧೨

ಎಪಿಗ್ರಾಫಿಯ ಕರ್ನಾಟಿಕ ಎಂಬುದು ಸ್ವಾತಂತ್ರ್ಯಪೂರ್ವದ ಮೈಸೂರು ರಾಜ್ಯ ಪ್ರದೇಶದ ಐತಿಹಾಸಿಕ ಬರೆಹ(ಕೆತ್ತಿದ ಬರೆಹ, ಕಲ್ಬರಹ, ತಾಮ್ರಬರಹ)ಗಳ ಸಂಗ್ರಹ. ಇದನ್ನು ಸಂಗ್ರಹಿಸಿದವರು ಮೈಸೂರು ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಬೆಂಜಮಿನ್ ಲೆವಿಸ್ ರೈಸ್ ಅಥವಾ ಬಿ.ಎಲ್.ರೈಸ್ ಅವರು.[] ೧೮೯೪ರಿಂದ ೧೯೦೫ ರ ನಡುವಿನ ಕಾಲದಲ್ಲಿ ಹನ್ನೆರಡು ಸಂಪುಟಗಳಲ್ಲಿ ಈ ಪುಸ್ತಕಗಳನ್ನು ಪ್ರಕಟಿಸಲಾಯಿತು. ಈ ಪುಸ್ತಕಗಳು ಹಳೇ ಮೈಸೂರು ಪ್ರಾಂತ್ಯದಲ್ಲಿ ದೊರಕಿದ್ದ ಸುಮಾರು ೯೦೦೦ ತಾಮ್ರ ಮತ್ತು ಶಿಲಾಶಾಸನಗಳಲ್ಲಿರುವ ಮಾಹಿತಿಯನ್ನು ಒಳಗೊಂಡಿದೆ. ಮೂಲ ಬರಹಗಳ ಜೊತೆಗೆ ಇದರಲ್ಲಿ ಇಂಗ್ಲೀಷ್ ಮತ್ತು ರೋಮನ್ ಲಿಪ್ಯಂತರಗಳನ್ನೂ ಕೊಡಲಾಗಿದೆ.

ಇತಿಹಾಸ

[ಬದಲಾಯಿಸಿ]

ಬೆಂಜಮಿನ್ ಲೆವಿಸ್ ರೈಸ್ ಅವರು ೧೮೯೭ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. ಇಂಗ್ಲೆಂಡಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಬಳಿಕ ಭಾರತಕ್ಕೆ ಮರಳಿದ ರೈಸ್ ಅವರು ಬೆಂಗಳೂರಿನ ಸೆಂಟ್ರಲ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಲು ಪ್ರಾರಂಬಿಸಿದರು. ಅವರನ್ನು ಇಲ್ಲಿನ ಶಿಕ್ಷಣ ಕಮಿಷನ್ನಿನ ಕಾರ್ಯದರ್ಶಿಯನ್ನಾಗಿಯೂ ನೇಮಿಸಲಾಯ್ತು. ಶಿಕ್ಷಣ ಇನ್ಸಪೆಕ್ಟರ್ ಆಗಿ ದೇಶಾದ್ಯಂತ ತಿರುಗಾಡುವ ಅವಕಾಶ ಸಿಕ್ಕಾಗ ಅವರು ವಿಭಿನ್ನ ಶಿಲಾಶಾಸನಗಳನ್ನು ಕಂಡರು. ಇದರಿಂದ ಶಾಸನಗಳ ಬಗ್ಗೆ ಆಸಕ್ತಿ ತಳೆದ ಅವರು ಆ ಶಾಸನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುವಾದಿಸಲು ತಮ್ಮ ಸಹಾಯಕರ ಸಹಾಯ ಪಡೆದರು. ೧೮೮೬ ರ ಸುಮಾರಿಗೆ ಈ ತರಹದ ಸುಮಾರು ೯೦೦೦ ಶಾಸನಗಳನ್ನು ಅರ್ಥೈಸಿ ಅನುವಾದಿಸಲಾಗಿತ್ತು. ೧೮೮೬ರಲ್ಲಿ ಬ್ರಿಟಿಷರು ಇವರನ್ನು ಪುರಾತತ್ವ ಇಲಾಖೆಯ ನಿರ್ದೇಶಕರನ್ನಾಗಿ ಮಾಡಿದಾಗ ಇವರು ತಮ್ಮ ಕೆಲಸಗಳನ್ನು ಮುದ್ರಿಸಲು ಆರಂಭಿಸಿದರು. ಆಗ ಪ್ರಕಟವಾದ ಹನ್ನೆರಡು ಸಂಪುಟಗಳೇ ಎಪಿಗ್ರಾಫಿಯ ಕರ್ನಾಟಿಕ[]. ಈ ಸಂಪುಟಗಳಲ್ಲಿರುವ ಮಾಹಿತಿಯನ್ನಾಧರಿಸಿ ರೈಸ್ ಅವರು 'The History of Mysore and Coorg' ಎನ್ನುವ ಪುಸ್ತಕವನ್ನೂ ಬರೆದಿದ್ದಾರೆ.

ಸಂಕಲನ

[ಬದಲಾಯಿಸಿ]

'ಎಪಿಗ್ರಾಫಿಯ ಕರ್ನಾಟಿಕ'ದಲ್ಲಿ ೩ನೇ ಶತಮಾನದಿಂದ ೧೯ನೇ ಶತಮಾನದವರೆಗಿನ ಶಾಸನ ಬರಹಗಳ ಸಂಗ್ರಹವಿದೆ. ಮೈಸೂರು ಪ್ರಾಂತ್ಯವನ್ನಾಳಿದ ಚೋಳರು, ಕದಂಬರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ವಿಜಯನಗರದರಸರು, ಹೈದರ್ ಆಲಿ , ಟಿಪ್ಪು ಮತ್ತು ಮೈಸೂರು ಒಡೆಯರ್ಗಳಿಗೆ ಸಂಬಂಧಿಸಿದ ಶಾಸನಗಳು ಇದರಲ್ಲಿವೆ. ಇದರಲ್ಲಿರುವ ಹೆಚ್ಚಿನ ಶಾಸನಗಳನ್ನು ಕನ್ನಡದಲ್ಲೇ ಬರೆಯಲಾಗಿದ್ದರೂ ಕೆಲವನ್ನು ತಮಿಳು, ಸಂಸ್ಕೃತ, ತೆಲುಗು, ಉರ್ದು, ಪರ್ಶಿಯನ್ ಭಾಷೆಗಳಲ್ಲೂ ಬರೆಯಲಾಗಿದೆ.[]

ಪ್ರಕಟಣೆ

[ಬದಲಾಯಿಸಿ]

ರೈಸ್ ಅವರಿಂದ ಹನ್ನೆರಡು ಸಂಪುಟಗಳ ಪ್ರಕಟಣೆಯ ನಂತರ ಇಲಾಖೆಯ ನಿರ್ದೇಶಕರಾಗಿದ್ದ ಆರ್. ನರಸಿಂಹಾಚಾರ್ಯರು ೪೦೦೦ ಶಾಸನಗಳನ್ನು, ಅವರ ನಂತರ ಎಚ್. ಎಮ್. ಕೃಷ್ಣ ಆವರು ಚಂದ್ರವಳ್ಳಿ, ಬ್ರಹ್ಮಗಿರಿಯ ಉತ್ಖನನದಿಂದ ೨೦೦೦ ಶಾಸನಗಳನ್ನು ಪತ್ತೆಹಚ್ಚಿದರು. ಅದನ್ನು ೧೩, ೧೪, ೧೫ ಸಂಪುಟಗಳಲ್ಲಿ ಪ್ರಕಟಿಸಲಾಯಿತು.[]

ಸಂಪುಟಗಳು

[ಬದಲಾಯಿಸಿ]

ಇದರಲ್ಲಿರುವ ಹನ್ನೆರಡು ಸಂಪುಟಗಳೆಂದರೆ

  1. ಮಡಿಕೇರಿಯ ಶಾಸನಗಳು
  2. ಶ್ರವಣಬೆಳಗೊಳದ ಶಾಸನಗಳು
  3. ಮೈಸೂರು ಜಿಲ್ಲೆಯ ಶಾಸನಗಳು, ಭಾಗ ೧
  4. ಮೈಸೂರು ಜಿಲ್ಲೆಯ ಶಾಸನಗಳು, ಭಾಗ ೨
  5. ಹಾಸನ ಜಿಲ್ಲೆಯ ಶಾಸನಗಳು
  6. ಕಡೂರು ಜಿಲ್ಲೆಯ ಶಾಸನಗಳು
  7. ಶಿವಮೊಗ್ಗ ಜಿಲ್ಲೆಯ ಶಾಸನಗಳು, ಭಾಗ ೧
  8. ಶಿವಮೊಗ್ಗ ಜಿಲ್ಲೆಯ ಶಾಸನಗಳು, ಭಾಗ ೨
  9. ಬೆಂಗಳೂರು ಜಿಲ್ಲೆಯ ಶಾಸನಗಳು
  10. ಕೋಲಾರ ಜಿಲ್ಲೆಯ ಶಾಸನಗಳು
  11. ಚಿತ್ರದುರ್ಗ ಜಿಲ್ಲೆಯ ಶಾಸನಗಳು
  12. ತುಮಕೂರು ಜಿಲ್ಲೆಯ ಶಾಸನಗಳು

ಆಕರಗಳು/ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Parvathi Menon. "Preserving inscriptions digitally". The Frontline, Volume 22 - Issue 23, Nov. 05 - 18, 2005. Archived from the original on 2008-02-20. Retrieved 2008-03-07. {{cite web}}: Unknown parameter |deadurl= ignored (help)
  2. "B.L. Rice - Father of Kannada Epigraphy". Kamat.com. Retrieved 2008-03-07.
  3. "Introduction". Directorate of Archaeology and Museums, Government of Karnataka. Retrieved 2008-03-07.
  • B. L. Rice (1897). Mysore: A Gazetteer Compiled for Government.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. ಎಪಿಗ್ರಾಫಿಕಾ ಕರ್ನಾಟಿಕಾದ ಆರ್ಕೈವ್.ಆರ್ಗ್ ಜಾಲತಾಣದ ಕೊಂಡಿ
  2. ಟ್ಯೂಬಿನ್ಜೆನ್ ಯೂನಿವರ್ಸಿಟಿಯ ಎಪಿಗ್ರಾಫಿಕಾ ಕರ್ನಾಟಿಕಾ ಸಂಪುಟಗಳ ಕೊಂಡಿ

ಎಪಿಗ್ರಾಫಿಯಾ ಪುಸ್ತಕಗಳ ಅಂತರಜಾಲ ಕೊಂಡಿಗಳು

  1. Coorg (Kodagu), Mysore, 1972ರ ಆವೃತ್ತಿ
  2. Sravanabelagola, Mysore, 1973ರ ಆವೃತ್ತಿ
  3. Epigraphia Carnatica: Inscriptions in the Mysore district (part I), Mysore, 1894 ಆವೃತ್ತಿ
  4. Mysore district: Gundlupete, Nanjanagudu, Heggadadevanakote taluks, Mysore, 1974ರ ಆವೃತ್ತಿ
  5. Epigraphia Carnatica: inscriptions in the Mysore distric (part II), Bangalore, 1898ರ ಆವೃತ್ತಿ
    1. Hassan district 1: Hassan, Belur, Channarayapattana, Hole-Nasipur, Arkalgud, Manjavabad, Arsikere Taluks, Mysore, 1902 ರ ಆವೃತ್ತಿ
    2. Hassan district 2: Hassan, Belur, Channarayapattana, Hole-Narsipur, Arkalgud, Manjavabad, Arsikere Taluks, Mysore, 1905ರ ಆವೃತ್ತಿ
  6. Kadur district: Kadur, Chikmugalur, Mudgere, Koppa Sringeri, Jagir, Tarikere, Mysore, 1901ರ ಆವೃತ್ತಿ
  7. Mandya district: Krishnarajapete, Pandavapura and Sirangapattana Taluks, Mysore, 1977ರ ಆವೃತ್ತಿ
  8. Shimoga district: Shimoga, Shikarpur, Honnali, Channagiri, Mysore, 1902ರ ಆವೃತ್ತಿ
  9. Shimoga district: vols. VII and VIII supplementary discriptions, Mysore, 1970ರ ಆವೃತ್ತಿ
    1. Shimoga district 2: nach Dynastien, Mysore, 1904ರ ಆವೃತ್ತಿ
  10. Bangalore district: Banalore, Nalamangala, Magadi, Dod-Ballapur, Devanhalli, Hoskote, Anekal, Kankanhalli, Channaptana, Mysore, 1905ರ ಆವೃತ್ತಿ
  11. Kolar district: Kolar, Mulbagal, Bowringpet, Malur, Sidlaghatta, Chik-Ballapur, Goribidnur, Bagepalli, Chinatamani, Srinivaspur, Mysore, 1905ರ ಆವೃತ್ತಿ
  12. Chitaldroog district: Chitaldroog, Davangere, Jagalur, Molakalmuru, Challakere, Hiriyur, Holalkere, Mysore, 1903ರ ಆವೃತ್ತಿ
  13. Tumkur district: nach Dynastien, Mysore, 1904ರ ಆವೃತ್ತಿ
  14. Mysore and Mandya districts: supplementary inscriptions, Mysore, 1943ರ ಆವೃತ್ತಿ
  15. Hassan district: supplementary inscriptions, Mysore, 1943ರ ಆವೃತ್ತಿ
  16. Tumkur district: supplementary inscriptions, Mysore, 1956ರ ಆವೃತ್ತಿ
  17. Kolar district: supplementary inscriptions, Mysore, 1965ರ ಆವೃತ್ತಿ