ಕ್ರೈಸ್ಟ್ ವಿಶ್ವವಿದ್ಯಾಲಯ | |
---|---|
ಧ್ಯೇಯ | ಶ್ರೇಷ್ಟತೆ ಮತ್ತು ಸೇವೆ |
ಸ್ಥಾಪನೆ | ೧೫ ಜುಲೈ ೧೯೬೯[೧] |
ಪ್ರಕಾರ | ಖಾಸಗೀ |
ಉಪಕುಲಪತಿಗಳು | ಡಾ|ವಂ| ಥೋಮಸ್ ಸಿ.ಥೋಮಸ್, ಸಿಎಂಐ[೨] |
ವಿದ್ಯಾರ್ಥಿಗಳ ಸಂಖ್ಯೆ | 12000 |
ಸ್ಥಳ | ಬೆಂಗಳೂರು, ಕರ್ನಾಟಕ[೩], ಭಾರತ 12°56′5″N 77°36′19″E / 12.93472°N 77.60528°E |
ಆವರಣ | ನಗರ |
ಅಂತರಜಾಲ ತಾಣ | www |
ಕ್ರೈಸ್ಟ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) [೪] ಎಂಬ ಮಾನ್ಯತೆ ದೊರಕಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಹತ್ತು ಸ್ಥಾನಗಳಲ್ಲಿ ಒಂದಾಗಿದೆ. ೨೦೧೪ರ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ಬಿ.ಬಿ.ಎ. ೧ನೇ ಸ್ಥಾನ, ಕಲಾ ವಿಭಾಗ ೬ನೇ ಸ್ಥಾನ, ವಿಜ್ಞಾನ ವಿಭಾಗ ೪ನೇ ಸ್ಥಾನ ಮತ್ತು ೪ನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಾನೂನು ೧೦ನೇ ಸ್ಥಾನಗಳನ್ನು ಪಡೆದಿದೆ.[೫]
ವಿಶ್ವವಿದ್ಯಾಲಯವು ರಾಷ್ಟ್ರೀಯ ಹಾಗೂ ಅಂರ್ತರಾಷ್ಟ್ರೀಯ ಮಾನ್ಯತೆ ಹೊಂದಿದ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು(ಕೋರ್ಸುಗಳನ್ನು) ತನ್ನ ವಿವಿಧ ವಿಭಾಗಗಳಾದ ಕಾನೂನು, ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್, ವಾಣಿಜ್ಯ, ಮ್ಯಾನೇಜ್ಮೆಂಟ್, ಮಾನವಿಕ, ವಿಜ್ಞಾನ, ಹಾಗೂ ಸಾಮಾಜಿಕ ವಿಜ್ಞಾನಗಳಲ್ಲಿ ಸೇರಿಸಿದೆ. ಇದರ ಜೊತೆಯಲ್ಲಿಯೇ, ಅನೇಕ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಗಣಕ(ಕಂಪ್ಯೂಟರ್) ಅನ್ವಯಗಳು(ಆಪ್ಲಿಕೇಶನ್ಸ್), ಹೊಟೇಲ್ ನಿರ್ವಹಣೆ(ಮ್ಯಾನೇಜ್ಮೆಂಟ್), ಸಮೂಹ ಸಂವಹನ, ಸಮಾಜ ಸೇವೆ, ಎಂಜಿನಿಯರಿಂಗ್ ಮತ್ತು ಪ್ರವಾಸೋದ್ಯಮಗಳನ್ನು ಕೋರ್ಸುಗಳನ್ನು ಹೊಂದಿದೆ.[೬][೭]
೧೭ ಜೂನ್ ೧೯೭೨ ರಂದು ಕ್ರೈಸ್ಟ್ ಕಾಲೇಜು ಭಾರತದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ), ಮಾನ್ಯತೆ ಪಡೆದಿದೆ. ೧೯೯೮ರಲ್ಲಿ ಈ ಸಂಸ್ಥೆಯನ್ನು ಪರೀಕ್ಷಾ ಮಾನ್ಯತೆಗೆ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ (ಎನ್ಎಎಸಿ), ಒಂದು ಯುಜಿಸಿ-ಅನುದಾನಿತ ಅಂಗ ಸಂಸ್ಥೆ, ಎಂದು ಗುರುತಿಸಲಾಯಿತು. ಮತ್ತ್ತು ೨೦೦೫ರಲ್ಲಿ ಇದನ್ನು ಮರು-ಮಾನ್ಯತೆಗೆ ಪಡೆದಿದೆ. ಪ್ರಸ್ತುತ ಈ ವಿಶ್ವವಿದ್ಯಾಲಯವನ್ನು ಎನ್ಎಎಸಿ-ಯಿಂದ A+ ಪಡೆದಿದೆ.[೮]
ಕ್ರೈಸ್ಟ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ನಾಲ್ಕು ವಿವಿಧ ಕ್ಯಾಂಪಸ್ ಗಳನ್ನು ಕೋರಮಂಗಲ, ಬನ್ನೇರುಘಟ್ಟ ರಸ್ತೆ, ಕೆಂಗೇರಿ ಮತ್ತು ಯಶವಂತಪುರಗಳಲ್ಲಿ ಹೊಂದಿರುವುದರ ಜೊತೆಗೆ ಮಹಾರಾಷ್ಟ್ರದ ಪುಣೆ ಬಳಿಯ ಲವಾಸಾದಲ್ಲಿ ಒಂದು ಕ್ಯಾಂಪಸ್ ಮತ್ತು ದೆಹಲಿಯ ಎನ್ ಸಿ ಆರ್ ನಲ್ಲಿ ಮತ್ತೊಂದು ಕ್ಯಾಂಪಸ್ ಹೊಂದಿದೆ. ದೇಶಾದ್ಯಂತ ಒಟ್ಟು ಆರು ಕ್ಯಾಂಪಸ್ ಗಳು ಕಾರ್ಯನಿರ್ವಹಿಸುತ್ತಿವೆ. ಆವರಣವು ಶೂನ್ಯ ತ್ಯಾಜ್ಯ ಪರಿಸರವನ್ನು ಹೊಂದಿದ್ದು, ಇಲ್ಲಿ ಉಪಯೋಗಿಸಿದ ಕಾಗದ ಹಾಗೂ ದ್ರವ ರೂಪದ ವಸ್ತುಗಳನ್ನು ಮರುಬಳಕೆಯ ವಸ್ತುಗಳನ್ನಾಗಿ ಮಾರ್ಪಡಿಸಲಾಗುತ್ತದೆ.[೯] ಗುರುತಿನ ಚೀಟಿ ಹಾಗೂ ಡೆಬಿಟ್ ಕಾರ್ಡ್-ಗಳನ್ನು ಒಂದರಲ್ಲೇ ನಮೂದಿಸಿ ಕ್ಯಾಂಪಸ್-ನಲ್ಲಿ ದ್ರವರೂಪದ ಹಣದ ಉಪಯೋಗವನ್ನು ಕಡಿಮೆ ಮಾಡಲಾಗಿದೆ. ಈ ಗುರುತಿನ ಚೀಟಿ ಹೊಂದಿದ ಸ್ಮಾರ್ಟ್ ಎಟಿಎಂ ಕಾರ್ಡ್-ನ್ನು ಸೌತ್ ಇಂಡಿಯನ್ ಬ್ಯಾಂಕು ಒದಗಿಸುತ್ತದೆ ಸೌತ್ ಇಂಡಿಯನ್ ಬ್ಯಾಂಕ್[೧೦]
ಕ್ರೈಸ್ಟ್ ವಿಶ್ವವಿದ್ಯಾಲಯದ ಕೋರಮಂಗಲ ಕ್ಯಾಂಪಸ್ ನಲ್ಲಿ ೬ ಕಟ್ಟಡಗಳಿದ್ದು, ಅವುಗಳನ್ನು ಬ್ಲಾಕ್-೧, ಬ್ಲಾಕ್-೨, ಬ್ಲಾಖ್-೩, ಬ್ಲಾಖ್-೪, ಕೇಂದ್ರೀಯ ಕಟ್ಟಡ, ಆಡಿಟೋರಿಯಂ ಕಟ್ಟಡ ಎಂದು ಹೆಸರಿಸಲಾಗಿದೆ. ಬ್ಲಾಕ್-೧'ರಲ್ಲಿ ಮೊದಲ ವರ್ಷದ ಬಿ.ಎ. ಮತ್ತು ಬಿ.ಎಸ್ಸಿ ತರಗತಿಗಳು ನಡೆಯುತ್ತವೆ. ಈ ಕಟ್ಟಡವು ಕ್ರೈಸ್ಟ್ ಕಾಲೇಜು ವಿಶ್ವವಿದ್ಯಾಲಯವಾಗುವಕ್ಕಿಂತಲೂ ಮುಂಚೆ ಕ್ರೈಸ್ಟ್ ಕಾಲೇಜಿನ ಮುಖ್ಯ ಆಡಳಿತ ಕಟ್ಟಡವಾಗಿತ್ತು. ಬ್ಲಾಕ್-೨ ಕಟ್ಟಡದಲ್ಲಿ, ಬಿ.ಕಾಂ. ಹಾಗೂ ಕೆಲವೊಂದು ಬಿ.ಎಸ್ಸಿ. ತರಗತಿಗಳು ನಡೆಯುತ್ತವೆ. ಬ್ಲಾಕ್-೩'ರಲ್ಲಿ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಬ್ಲಾಕ್-೪'ರಲ್ಲಿ ಪ್ರವಾಸೋದ್ಯಮ ಮತ್ತು ಗೌರವವಾನ್ವಿತ ಕೋರ್ಸುಗಳನ್ನು ಕಲಿಸಲಾಗುತ್ತದೆ. ಕೇಂದ್ರ ಕಟ್ಟಡವು ಸ್ನಾತಕೋತ್ತರ, ಕಾನೂನು ಮತ್ತು ವಿಶ್ವವಿದ್ಯಾಲಯದ ಪ್ರಮುಖ ಆಡಳಿತ ಮಂಡಳಿಯ ಕಛೇರಿಗಳಾದ, ಉಪ-ಕುಲಪತಿಗಳ ಕಛೇರಿ, ವಿಶ್ವವಿದ್ಯಾಲಯದ ಕಛೇರಿ ಮತ್ತು ಐಪಿಎಂ-ಗಳನ್ನು ಹೊಂದಿದೆ. ಇದರಲ್ಲಿ ಪ್ರಪಂಚದಾದ್ಯಂತ ಬಿತ್ತರಿಸಿದ ೧,೮೦,೦೦೦ ಪುಸ್ತಕ, ೪೦೦ ಪತ್ರಿಕೆ-ಪ್ರಕಟಣೆಗಳನ್ನು ಜ್ಞಾನ ಕೇಂದ್ರವೂ ಇದೆ.[೧೧] ಆಡಿಟೋರಿಯಂನ ಕಟ್ಟಡದಲ್ಲಿ ಕ್ರೈಸ್ಟ್ ಪದವಿಫೂರ್ವ ಕಾಲೇಜು ಹಾಗೂ ಇದೇ ಕಟ್ಟಡದಲ್ಲಿ ೪,೦೦೦ ಪ್ರೇಕ್ಷಕರಿಗೆ ಏಕಕಾಲದಲ್ಲಿ ಆಸೀನವನ್ನು ಒದಗಿಸುವ ಕ್ರೈಸ್ಟ್ ವಿಶ್ವವಿದ್ಯಾಲಯದ ಮುಖ್ಯ ಆಡಿಟೋರಿಯಂ ಸಹ ಇದೆ.
ಮುಖ್ಯ ಕ್ಯಾಂಪಸ್-ನಲ್ಲಿ ೩೦೦ ವಿದ್ಯಾರ್ಥಿನಿಯರು ವಾಸಿಸುವ ಜೋನಾಸ್ ಸಭಾಂಗಣ ಮತ್ತು ೨೬೦ ವಿದ್ಯಾರ್ಥಿಗಳು(ಹುಡುಗರು) ವಾಸಿಸುವ ಕ್ರೈಸ್ಟ್ ಸಭಾಂಗಣವನ್ನು ನಿರಮ್ಇಸಲಾಗಿದೆ. ೧೦೦೦ ಹುಡುಗ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸುವ ದೆವಡನ್ ಸಭಾಂಣವು ವಿಶ್ವವಿದ್ಯಾಲಯದ ಕೆಂಗೇರಿ ಆವರಣದಲ್ಲಿದ್ದು, ಕ್ರೈಸ್ಟ್ ವಿಶ್ವವಿದ್ಯಾಲಯವು ೨೦೦ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ವಸತಿಯನ್ನು ಕಲ್ಪಿಸುತ್ತದೆ. ವಿಶ್ವವಿದ್ಯಾಲಯವು ೫೦೦ ಹುಡುಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಸತಿಯನ್ನು ಆವರಣದ ಹೊರಗಿನ ಪ್ರದೇಶದಲ್ಲಿ ಕಲ್ಪಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ವಿಶ್ವವಿದ್ಯಾಲಯದ ಆವರಣವು ಬೆ<ಗಳೂರಿನ ಕೇದ್ರ ಭಾಗದಲ್ಲಿದ್ದು ಬಹು ವಿಸ್ರೀರ್ಣತೆಯನ್ನು ಹೊಂದಿದೆ. ಟೆಂಪ್ಲೇಟು:ಪರಿರ್ವತಿತ ಇದು 100-acre (40 ha) ಧರ್ಮರಾಂ ಕಾಲೇಜಿನ(ವಿದ್ಯಾಕ್ಷೇತ್ರಂ)ಆವರಣದ ಬೆಂಗಳೂರು ನಗರ ವ್ಯಾಪ್ತಿಯಲ್ಲಿದೆ. ಈ ಆವರಣದ ವಿಸ್ತರಣೆಯು ಹೊಸೂರು ರಸ್ತೆ (NH 7) ಬೆಂಗಳೂ ಡೈರಿ ಫ್ಲೈಓವರ್-ನ ವಿರುದ್ದ ದಿಕ್ಕಿನಲ್ಲಿದೆ.
೨೦೦೯ರಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ೭೫ ಎಕರೆ ಜಮೀನನಲ್ಲಿ ಪರಿಸರ ಸ್ನೇಹಿ ಆವರಣವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಂಗೇರಿ SH 17ಕಾರ್ಯಾರಂಭಗೊಳಿಸಿತು. ಇದರಲ್ಲಿ ಎಂಜಿನೀಯರಿಂಗ್, ಪದವಿಫೂರ್ವ ವಸತಿ ಕಾಲೇಜು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ (ಸಿಯುಐಎಂ) ಕೋರ್ಸುಗಳನ್ನು ಪ್ರಾರಂಭಿಸಿದೆ. ನಗರದಲ್ಲಿರುವ ಕಾಲೇಜು ಆವರಣವು ಬೆಂಗಳೂರಿನ ಪ್ರಮುಖ ವಸತಿ ಹಾಗೂ ವಾಣಿಜ್ಯ ತಾಣಗಳಾದ ಬಿಟಿಎಂ ವಸತಿ ಸಮುಚ್ಚಯಕ್ಕೆ ಬಲು ಹತ್ತಿರವಾಗಿದ್ದು, ನಗರದ ಪ್ರಖ್ಯಾತ ವಸತಿ ನಿಲಯಗಳ ಪೈಕಿ ಒಂದಾದ ಕೋರಮಂಗಲ, ಹಾಗೂ ಜಯನಗರ.ವಿಶ್ಚವಿದ್ಯಾಲಯವು ಭಾರತದ ವಿವಿಧ ಪ್ರದೇಶಗಳಿಂದ ಹಾಗೂ ಪ್ರಪಂಚದ ಕೆಲವು ಭಾಗಗಳಿಂದ ಬಂದಂತಹ ೧೨,೦೦೦ ವಿದ್ಯಾರ್ಥಿ ವೃಂದ ಮತ್ತು ೫೦೦ ಮಂದಿಯ ಶಿಕ್ಚಕ ವರ್ಗವನ್ನು ಹೊಂದಿದೆ.
ಕ್ರೈಸ್ಟ್ ವಿಶ್ವವಿದ್ಯಾಲಯ ಪ್ರಮಾಣೀಕೃತ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ, ಕೋರ್ಸುಗಳನ್ನು ತನ್ನ ಶೈಕ್ಷಣಿಕ ಪರಿಧಿಗೊಳಪಟ್ಟ ವಿಭಾಗಗಳಾದ ಕಾನೂನು ಶಾಲೆ, ಶಿಕ್ಷಣ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ವಿವಿಧ ಭಾಷೆಗಳು, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್ ಹಾಗೂ ಎಂಜಿನಿಯರಿಂಗ್-ನಲ್ಲಿ ಶೀಕ್ಷಣವನ್ನು ನೀಡುತ್ತಿದೆ.[೧೨] ೨೦೦೫ರಲ್ಲಿ, ಆಗಿನ ಕ್ರೈಸ್ಟ್ ಕಾಲೇಜು (ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯ) ಎನ್ಎಎಸಿಯಿಂದ A+ ಪಡೆದ ದಕ್ಷಿಣ ಬಾರತದಲ್ಲೇ ಪ್ರಥಮ ಹಾಗೂ ಏಕೈಕ ಶೀಕ್ಷಣ ಸಂಸ್ಥೆಯಾಗಿದೆ.
ವಿಶ್ವವಿದ್ಯಾಲಯವು ೪೫ ಪದಿ ಕೋರ್ಸುಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್, ಕಾನೂನು, ಶಿಕ್ಷಣ, ಹಾಗೂ ಎಂಜಿನಿಯರಿಂಗ್ ವಿಭಅಗಗಳಲ್ಲಿ ಪರಿಚಯಿಸಿದೆ. ಪದವಿ ಕೋರ್ಸುಗಳು ಮೂರು ವರ್ಷಗಳ ಕಾರ್ಯಕ್ರಮವನ್ನು ಹೊಂದಿದ್ದು ಇದರಲ್ಲಿ ಶೀಕ್ಷಣ ಪದವಿ (ಬಿ.ಎಡ್, ಎರಡು ವರ್ಷ), ಹೊಟೇಲ್ ಮ್ಯಾನೇಜ್ಮೆಂಟ್ ಪದವಿ (ಬಿ.ಹೆಚ್.ಎಮ್, ನಾಲ್ಕು ವರ್ಷ), ಕಾನೂನು ಪದವಿ (ಎಲ್.ಎಲ್.ಬಿ, ಐದು ವರ್ಷ), ತಾಂತ್ರಿಕ ಪದವಿ (ಬಿ.ಟೆಕ್, ನಾಲ್ಕು ವರ್ಷ) ಮತ್ತು ಸಮಗ್ರ ಬಿ.ಟೆಕ್ / ಎಮ್.ಟೆಕ್ ಅಥವಾ ಎಂ.ಬಿ.ಎ. (ಐದು ವರ್ಷ)ಆಗಿರುತ್ತದೆ.
ಮೂರು ಕೋರ್ಸುಗಳನ್ನು ಅಂದರೆ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ (ಬಿ.ಬಿ.ಎ), ವಾಣಿಜ್ಯ ಪದವಿ (ಬಿಕಾಂ), ಕಲಾ ಪದವಿ (ಬಿಎ) ಮತ್ತು ವಿಜ್ಞಾನ ಪದವಿ (ಬಿಎಸ್ಸಿ) ಹೊರತುಪಡಿಸಿ ಮೂರು ಪ್ರಮುಖ ಎಲ್ಲವುದಕ್ಕೂ ಒಂದು ವ್ಯವಸ್ಥೆಯಿಂದ ಕೂಡಿವೆ.
ವಿಶ್ವವಿದ್ಯಾಲಯವು, ಬೆಂಗಳೂರಿನಲ್ಲಿರುವ ಅಂರ್ತಜಾಲ ಮತ್ತು ಸಮಾಜ ಸಂಸ್ಥ (ಸಿಎಸ್ಐ)ಜೊತೆಗೂಡಿ ಮಾಡಿದ ಒಪ್ಪಂದ(ಎಂಒಯು)ದ ಮೇರೆಗೆ, ೧೬೦೦ ವಿದ್ಯಾರ್ಥಿಗಳು ವಿಕಿಪೀಡಯ ಅಂರ್ತಜಾಲಕ್ಕೆ ನಿರಂತರವಾಗಿ ಹಿಂದಿ, ಕನ್ನಡ, ತಮಿಳು, ಸಂಸ್ಕೃತ, ಮತ್ತು ಉರ್ದು ಭಾಷೆಗಳಲ್ಲಿ ಲೇಖನಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಕಿಪೀಡಿಯಾದ ಮೊದಲ ಟ್ಯುಟೋರಿಯಲ್ಸ್ ಚಿತ್ರೀಕರಣವನ್ನು ವಿಶ್ಚವಿದ್ಯಾಲಯದ ಸ್ಟುಡಿಯೋದಲ್ಲಿ ಮಾಡಲಾಗಿದೆ.[೧೩]
The ಹಿಂದಿ and ಕನ್ನಡ ಲೇಖನಗಳನ್ನು ಇಲ್ಲಿ ಓದಬಹುದು collection of Hindi articles and ಕನ್ನಡ ಲೇಖನಗಳ ಸಂಗ್ರಹ
ವಿಶ್ವವಿದ್ಯಾಲಯವು ೪೪ ಸ್ನಾತಕೋತ್ತರ, ೧೬ ಎಂ.ಫಿಲ್ ಮತ್ತು ೧೭ ಪಿ.ಹೆಚ್.ಡಿ ಕಾರ್ಯಕ್ರಮಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ಕಾನೂನು, ಶೀಕ್ಷಣ, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್, ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ಕೋರ್ಸುಗಳನ್ನು ನೀಡುತ್ತಿದೆ. ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು ಎರಡು ವರ್ಷ ಅವಧಿಯನ್ನು ಹೊಂದಿದ್ದೂ, ಇದರಲ್ಲಿ ಕಂಪ್ಯೂಟರ್ ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿಗಳು ಕ್ರಮೇಣವಾಗಿ ಮೂರು ವರ್ಷ ಹಾಗೂ ಒಂದು ಅವಧಿಯನ್ನು ಹೊಂದಿರುತ್ತದೆ.
ಇಂಡಿಯಾ ಟುಡೇ ಕೆಳಗೆ ವಿಸ್ತರಿಸಿದ ಪಟ್ಟಿಗಳಲ್ಲಿ 'ಇಂಡಿಯಾ ಟುಡೇ' ವಾರ ಪ್ತ್ರಿಕೆಯು ನಡೆಸಿದ ಶೈಕ್ಷಣಿಕ ಸಮೀಕ್ಷೆಯಲ್ಲಿ ೨೦೧೫ರವರೆಗೆ ಭಾರತದಲ್ಲಿ ವಿಶ್ವವಿದ್ಯಾಲಯಕ್ಕೆ ಸಿಕ್ಕಿದ ವಿವಿಧ ಶ್ರೇಣಿ ಹಾಗೂ ಅದರ ಕ್ರಮಾಂಕಗಳ ಸಂಕ್ಷಿಪ್ತ ವಿವರವನ್ನು ನೀಡಲಾಗಿದೆ. ಬಿಬಿಎ ಮತ್ತು ಬಿಸಿಎ ಕೋರ್ಸುಗಳನ್ನು ಉತ್ತಮ ಭಾರತದಲ್ಲಿ ಕಾರ್ಯಕ್ರಗಳೆಂದು ಇಲ್ಲಿ ಗುರುತಿಸಲಾಗಿದೆ. ವಿಶ್ವವಿದ್ಯಾಲಯವು ೨೦೧೨ ಸಮೀಕ್ಷೆಯಲ್ಲಿ ೩೧ನೇ ಸ್ಥಾನದಲ್ಲಿದ್ದು ಪ್ರಸ್ತುತ ೨೦೧೩ರ ಸಮೀಕ್ಷಯಲ್ಲಿ ೨೩ನೇ ಸ್ಥಾನವನ್ನು ಪಡೆದಿದೆ. ಇದೊಂದು ಖಾಸಗೀ ವಿಶ್ವವಿದ್ಯಾಲವಾಗಿದ್ದರೂ ಇದನ್ನು ಸರ್ಕಾರಿ ವಿಶ್ವವಿದ್ಯಾಲಯಗಳಷ್ಟೇ ಪ್ರಾಮುಖ್ಯತೆಯಿಂದ ನೋಡಿಕೊಳ್ಳುವುದು ಈ ಕ್ರೈಸ್ಟ್ ವಿಶ್ವವಿದ್ಯಾಲಯದ ವೈಶಿಷ್ಟ್ಯತೆಯನ್ನು ತೋರಿಸುತ್ತದೆ.
೨೦೧೫ ರ 'ಇಂಡಿಯಾ ಟುಡೇ' ನಡೆಸಿದ ಖಾಸಗೀ ವಿಶ್ವವಿದ್ಯಾಲಯಗಳಲ್ಲಿ, ಕ್ರೈಸ್ಟ್ ವಿಶ್ವವಿದ್ಯಾಲಯವು [೧೪] ಮೊದಲ ಸ್ಥಾನವನ್ನು ಪಡೆದಿರುತ್ತದೆ.
Year | Rank |
---|---|
೨೦೧೫ | ೧೧ |
೨೦೧೪ | ೧೮ |
೨೦೧೩ | ೨೩ |
೨೦೧೨ | ೩೧ |
Course | ಶ್ರೇಯಾಂಕ ೨೦೦೫ | ಶ್ರೇಯಾಂಕ ೨೦೦೬ | ಶ್ರೇಯಾಂಕ ೨೦೦೭ | ಶ್ರೇಯಾಂಕ ೨೦೦೮ | ಶ್ರೇಯಾಂಕ ೨೦೦೯ | ಶ್ರೇಯಾಂಕ ೨೦೧೦ | ಶ್ರೇಯಾಂಕ ೨೦೧೧ | ಶ್ರೇಯಾಂಕ ೨೦೧೨ | ಶ್ರೇಯಾಂಕ ೨೦೧೩ | ಶ್ರೇಯಾಂಕ ೨೦೧೪ | ಶ್ರೇಯಾಂಕ ೨೦೧೫ |
---|---|---|---|---|---|---|---|---|---|---|---|
ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ | - | - | - | - | - | - | - | - | ೧ | ೧ | ೧ |
ಕಂಪ್ಯೂಟರ್ ವಿಜ್ಞಾನ ಪದವಿ | - | - | - | - | - | - | - | - | ೧ | ೧ | ೧ |
ಸಮೂಹ ಸಂವಹನ | - | - | - | - | - | - | - | - | ೩ | ೩ | ೩ |
ವಿಜ್ಞಾನ | ೧೦ | ೧೦ | ೧೦ | ೮ | ೧೩ | ೭ | ೬ | ೬ | ೪ | ೪ | ೩ |
ವಾಣಿಜ್ಯ | - | - | ೫ | ೬ | ೪ | ೫ | ೫ | ೬ | ೫ | ೪ | ೪ |
ಮಾನವವೀಯ | - | ೧೨ | ೮ | ೬ | ೬ | ೮ | ೫ | ೬ | ೧೦ | ೬ | ೪ |
ಕಾನೂನು | - | - | - | - | - | - | ೧೫ | ೧೬ | ೧೩ | ೧೨ | ೧೨ |
ದಿ ವೀಕ್ಹಂಸ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ, ದಿ ವೀಕ್-ಹಂಸ ಸಂಶೋಧನಾ ಸಮೀಕ್ಷಯನ್ನು ಹಮ್ಮಿಕೊಂದ್ದು, ಈ ಆಧಾರದ ಮೇರೆಗೆ ೨೦೧೫ರ ಪಟ್ಟಿಯನ್ನು ಕೆಳಗಡೆ ವಿಸ್ತರಿಸಲಾಗಿದೆ.
Course | Rank 2015 |
---|---|
ಕಲೆ | ೯ |
ವಾಣಿಜ್ಯ | ೬ |
ವಿಜ್ಞಾನ | ೮ |
ಕಾನೂನು | ೨೬ |
ಹೋಟೆಲ್ ಮ್ಯಾನೇಜ್ಮೆಂಟ್ | ೧೫ |
ಕ್ರೈಸ್ಟ್ ವಿಶ್ವವಿದ್ಯಾಲಯವು, ವಿದೇಶೀ ವಿಶ್ವವಿದ್ಯಾಲಯಗಳ ಒಕ್ಕೂಟದ ಸದಸ್ಯ ಸಂಸ್ಥೆಯಾಗಿದೆ(ಯುಎಸ್ಎಸಿ) ಪ್ರಾನ್ಸ್-ನಲ್ಲಿ ಮತ್ತು ನೆದರ್ಲ್ಯಾಂಡ್ ದೇಶದ ಎ.ನ್.ಹೆಚ್.ಟಿ.ವಿ. ವಿಶ್ವವಿದ್ಯಾಲಯದ of ಅಪ್ಲೈಡ್ ವಿಜ್ಞಾನ. ೨೦೧೩ರಲ್ಲಿ ಕೊರಿಯಾ ದೇಶದ ೬ ವಿಶ್ವವಿದ್ಯಾಲಯಗಳೊಂದಿಗೆ ಪರಸ್ಪರ ವಿನಿಮಯ ಒಪ್ಪಂದವನ್ನು ಮಾಡಲಾಗಿದೆ.
ವಿದೇಶೀ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಭಾರತ ವೀಕ್ಷಣೆಯನ್ನು ನೀಡುವ ಸಲುವಾಗಿ ಭಾರತ ಗೇಟ್ವೇ (ಐಜಿಪಿ)ಎಂಬ ಕಿರು-ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (IGP).[೧೮][೧೯]
ನಗರದ ಆವರಣದಲ್ಲಿ ಎರಡು ಲೈಬ್ರರಿಗಳು ಇವೆ: ಮುಖ್ಯ ಲೈಬ್ರರಿ ಮತ್ತು 'ಜ್ಞಾನ ಕೇಂದ್ರ' ವು ಕೇಂದ್ರ ಕಟ್ಟಡದ ಆರು, ಏಳು, ಎಂಟು ಮತ್ತು ಒಂಭತ್ತನೇ ಮಳಿಗೆಗಳಿಗೆ ವಿಸ್ತರಿಸಿದೆ.[೨೦]
ವಿಶ್ವವಿದ್ಯಾಲಯವು ಮಾಸ್ಟರ್ ಆಫ್ ಫಿಲೋಸಫಿ (ಎಂಫಿಲ್) ಕೋರ್ಸಿನ ಮುಖಾಂತರ ಒಂದು ವರ್ಷ ಆರು ತಿಂಗಳ ಅವಧಿಗೆ ಸಂಶೋಧನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಿ.ಹೆಚ್.ಡಿ ಕಾರ್ಯಕ್ರಮವನ್ನು ೫ ವರ್ಷ್ಗಳ ಅವಧಿಗೆ ವಿಸ್ತರಿಸಿದೆ. ದೊಡ್ಡ ಮತ್ತು ಕಿತು ಸಂಶೋಧನಾ ಯೋಜನೆಗಳನ್ನು ಮಾಡಲು ವಿಶ್ವವಿದ್ಯಾಲಯದ ಶಿಕ್ಷಕ ವೃಂದಕ್ಕೆ ಸಂಶೋಧನಾ ಕೇಂದ್ರದ ಮುಖಾಂತರ ಅನುವು ಮಾಡಿಕೊಡಲಾಗಿದೆ. ಸಂಶೋಧನಾ ಪ್ರಬಂಧ ಹಾಗೂ ಪ್ರಕಟಣೆಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ.
ವಿಶ್ವವಿದ್ಯಾಲಯವು ಕನ್ನಡ ಸಂಘದಿಂದ ಸುಮಾರು ೨೨೦ ಕನ್ನಡಪುಸ್ತಕಗಳನ್ನು, ಇದೊಂದು ಲಾಭ-ರಹಿತ ವಿಶ್ವವಿದ್ಯಾಲಯದ ಸಂಘವಾಗಿದ್ದು ಕನ್ನಡವನ್ನು ಪ್ರಪಂಚದಾದ್ಯಂತ ಪಸರಿಸಲು ಪ್ರಯತ್ನಗಳನ್ನು ಮಾಡುತ್ತಿದ್ದುದಲ್ಲದೇ ಆರು ವಿರ್ಮಶಣಾ ಪತ್ರಿಕಾ ನಿಯತಕಾಲಿಕಗಳನ್ನು ಪ್ರಕಟಿಸಿದೆ:[೨೦]
ವಿವಿಧ ಸಂಸ್ಕೃತಿ, ವೈವಿದ್ಯಮಯ ಕಲೆಗಳ ಆಚರಣೆ-ಅನಾವರಣೇ ಭಾಷಾ ಉತ್ಸವ. ಇದರಲ್ಲಿ ಡೊಳ್ಳು-ಕುಣಿತ, ಬಯಲಾಟ ಮತ್ತು ಇತರ ನೃತ್ಯ ಪದರ್ಶನಗಳು ಕಂಡುಬರುತ್ತದೆ. ಈ ಹಬ್ಬ ಭಾರತ ದೇಶದ ವಿವಧ ಸಂಸ್ಕೃತಿಯನ್ನು ತೋರ್ಪಡಿಸುತ್ತದೆ.[೨೧] ಹಿಂದಿನ ವರ್ಷಗಳಲ್ಲಿ ಗಾರುಡಿ ಗೊಂಬೆ, ಚೆಂಡೆ ಸಿಂಗಾರ ಮೇಳ, ಕಳರಿಯಪಟ್ಟು, ವೇದ ಪಠಣ, ತಿರುವತ್ತಿರಕ್ಕಲ್, ರಬೀಂದ್ರ ಸಂಗೀತ, the ಕೇರಳ ನಟನಂ(ಕುಣೀತ), ಮೋಹಿನಿಯಾಟ್ಟಂ ಮತ್ತು ಕಥಕ್ಕಳಿಯ ತುಣುಕುಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತೀ ವರ್ಷದಲ್ಲಿ ಒಂದು ದಿನದ ಆಚರಣೆಯಾಗಿದ್ದು ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಸಂಗೀತಗಾರರ ತಾಳಕ್ಕೆ ಹೆಜ್ಜೆ ಹಾಕುತ್ತಾರೆ.[೨೨]
ವಿಶ್ವವಿದ್ಯಾಲಯದಲ್ಲಿ ಕ್ರೀಯಾಶೀಲ ರಂಗತಂಡವಿದ್ದು, ವರ್ಷಕ್ಕೊಂದು ರಂಗಪ್ರಯೋಗವನ್ನು ಮಾಡಲಾಗುತ್ತದೆ. 'ಅಭಿಷೇಕ'(೨೦೧೪) ನಡೆಸಿದಂತಹ ಅತಿ ದೊಡ್ಡ ರಂಗಪ್ರಯೋಗವಾಗಿರುತ್ತದೆ.[೨೩]
ವಿಶ್ವವಿದ್ಯಾಲಯವು ಭಾರತೀಯ ವಿಶ್ವವಿದ್ಯಾಲಯಗಳ ಸದಸ್ಯತ್ವವನ್ನು ಹೊಂದಿದೆ.[೨೪]
೧೦ ಜನವರಿ ೨೦೧೧ರಂದು, ಕ್ರೈಸ್ಟ್ ಪದವಿಪೂರ್ವ ಕಾಲೇಜು, ಬೆಂಗಳೂರು, ಇಲ್ಲಿ ನಿರ್ದೇಶಕ ವಿನೀತ್ ವಿನ್ಸೆಂಟ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮ 'ನೀವು ಬೀಟ್ ಬಾಕ್ಸ್ ಹೇಳಬಲ್ಲಿರಾ?' -ಇದು ೨೧೩೬ ಜನರ ಬಹುದೊಡ್ಡ ಭಾಗವಹಿಸುವಿಕೆಯಿಂದ ಲಿಮ್ಕಾ ವಿಶ್ವ ದಾಖಲೆ ಪುಸ್ತಕವನ್ನು ಸೇರಿತು.[೨೫][೨೬][೨೭][೨೮]
ವಿಶ್ವ ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ, ಅತ್ಯಂತ ಹೆಚ್ಚು ಜನರು ಭಅಗವಹಿಸಿದ ಬೀಟ್ ಬಾಕ್ಸ್ ಕಾರ್ಯಕ್ರಮ[೨೯] ಕ್ರೈಸ್ಟ್ ವಿಶ್ವವಿದ್ಯಾಲಯದ ಸಾಧನೆ (India) in ಬೆಂಗಳೂರು, ಕರ್ನಾಟಕ, ಭಾರತ, on ೫ ಫೆಬ್ರುವರಿ ೨೦೧೧ under ಸಮಗ್ರ ನಿರ್ದೇಶಕರಾದ ವಿನೀತ್ ವಿನಸ್ಎಂಟ್ ಅವರ ನೇತ್ರತ್ವದಲ್ಲಿ ೧,೨೪೬ಜನರ ಭಾಗವಹಿಸುವಿಕೆ. ೧೪ ನವೆಂಬರ್ ೨೦೧೧ರಲ್ಲಿ ಶ್ಲೊಮೊ ೨,೦೮೧ ಜನರ ಭಾಗವಹಿಸುವಿಕೆಯಿಂದ ಈ ದಾಖಲೆಯು ಮುರಿಯಲ್ಪಟ್ಟಿತು.[೩೦]
ಪ್ರಮಾನೀಕೃತ ವಿಶ್ವವಿದ್ಯಾಲಯ ಎಂಬ ಪತ್ರ ಪಡೆಯುವುದರಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ವಿವಾದಕ್ಕೊಳಪಟ್ಟಿದೆ. ವಿಶ್ವವಿದ್ಯಾಲಯ ಎಂಬ ಪ್ರಮಾಣೀಕೃತ ಪತ್ರ ಸಿಗುವ ಮೊದಲು, ಇದು(ಬೆಂಗಳೂರು ವಿಶ್ವವಿದ್ಯಾಲಯ ಈ ಮೊಕದ್ದಮೆ) ವ್ಯಾಪ್ತಿಗೊಳಟ್ಟಿದ್ದು ಇದು "ಆಕ್ಷೇಪಣಾ ರಹಿತ ಪತ್ರ" (ಎನ್ಒಸಿ)ವನ್ನು ಯುಜಿಸಿಗೆ ಕಳುಹಿಸಿಕೊಡಬೇಕಿತ್ತು. ಎನ್ಒಸಿ ಪತ್ರವನ್ನು ನೀಡಲು ರಾಜ್ಯ ಸರ್ಕಾರ ತಿರಸಕರಿಸಿತು ಅಲದ್ಲೇ, ಬೆಂಗಳೂರು ವಿಶ್ವವಿದ್ಯಾಲಯವು ಅಧಿಕೃತ ಎನ್ಒಸಿ-ಯನ್ನೂ ಕಳುಹಿಸಲಿಲ್ಲ. ಯುಜಿಸಿ-ಯು, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಳುಹಿಸಿದ ಪತ್ರದ ಮೆಲೆ ಅವಲಂಬಿಸಿತು.[೩೧] ಈ ಪತ್ರವು ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ೪೪ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸಿ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಎಂದು ಘೋಷಿಸಿತು.[೩೨] ಜುಲೈ ೨೦೧೪ ರಲ್ಲಿ ಯುಜಿಸಿ ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ, ಕ್ರೈಸ್ಟ್ ವಿಶ್ಚವಿದ್ಯಾಲಯವನ್ನು ೪೪ ವಿಶ್ಚವಿದ್ಯಾಲಯಗಳಲ್ಲಿ ಒಂದಾಗಿ ಪ್ರಕಟಿಸಿತು.[೩೩][೩೪]