ಕ್ಷುದ್ರ ಅಗ್ನಿಮಂಥ | |
---|---|
Scientific classification | |
ಸಾಮ್ರಾಜ್ಯ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. phlomidis
|
Binomial name | |
Clerodendrum phlomidis |
ಕ್ಷುದ್ರ ಅಗ್ನಿಮಂಥ ಎನ್ನುವುದು ಲಾಮಿಯೇಸಿಯೆ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್(Clerodendrum phlomidis) ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಯುವ ಸಾಮಾನ್ಯವಾದ ದೊಡ್ಡ ಪೊದೆಸಸ್ಯವಾಗಿದೆ.
ಈ ಮೂಲಿಕೆ ಲ್ಯಾಮಿಯೇಸಿಯೆ ಕುಟುಂಬಕ್ಕೆ ಸೇರಿದೆ. ಎಲೆಗಳು ಅಂಡಾಕಾರವಾಗಿರುತ್ತದೆ. ಹೂಗಳು ಸಣ್ಣದಾಗಿ ದುಂಡಗಿರುತ್ತವೆ. ಹೂವುಗಳು ಆಗಸ್ಟ್ ನಿಂದ ಫೆಬ್ರವರಿಯ ಸಮಯದಲ್ಲಿ ಅರಳುತ್ತವೆ. ಹೂವುಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬಹಳ ಪರಿಮಳಯುಕ್ತವಾಗಿವೆ.[೨]