The examples and perspective in this article may not represent a worldwide view of the subject. (September 2010) |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2010) |
ವ್ಯಾವಹಾರಿಕ ಮತ್ತು ಕಾನೂನು ಲೇವಾದೇವಿಗಳಲ್ಲಿ, ಖಾತರಿ ಕರಾರು ಎಂಬುದು ಬಹಳ ಪ್ರಮುಖ ದಾಖಲೆಪತ್ರವಾಗಿದೆ. ಉಕ್ತ ಮಾಹಿತಿಗಳು ಅಥವಾ ಸ್ಥಿತಿಗತಿಗಳು ಸತ್ಯವಾಗಿದ್ದು, ಅವು ಅನುಷ್ಟಾನವಾಗಲಿವೆ ಎಂಬ ಭರವಸೆಯನ್ನು ವ್ಯಾಪಾರಿ ವಲಯದಲ್ಲಿ ಒಬ್ಬರು ಇನ್ನೊಬ್ಬರಿಗೆ ನೀಡುವುದೇ ಈ ಖಾತರಿ ಕರಾರು. ಇನ್ನೊಂದು ಕಡೆಯ ವಹಿವಾಟುದಾರ ಈ ಭರವಸೆಯನ್ನು ಅವಲಂಬಿಸಿರುತ್ತಾನೆ. ಒಂದು ವೇಳೆ ಈ ಉಲ್ಲೇಖಿತ ಭರವಸೆಯು ಈಡೇರದಿದ್ದಲ್ಲಿ ಖಾತರಿ ಕರಾರು ಪಡೆದ ಪಕ್ಷ ಅಥವಾ ವ್ಯಾಪಾರಿ ಸಂಸ್ಥೆಯು ನಿರ್ದಿಷ್ಟ ಪರಿಹಾರ ಕೋರಬಹುದಾಗಿದೆ.
ಆಸ್ತಿಪಾಸ್ತಿ-ಜಮೀನು ವ್ಯವಹಾರದಲ್ಲಿ, ಖಾತರಿ ಕರಾರು ಪತ್ರ ಎಂಬುದು ಜಮೀನು ಕೊಂಡವರಿಗೆ ಆ ಜಮೀನಿನ ಮೇಲೆ ಎಲ್ಲ ಹಕ್ಕುಗಳೂ ಉಂಟು ಎಂಬ ಭರವಸೆಯಾಗಿದೆ.
ಖಾತರಿ ಕರಾರು ಸುವ್ಯಕ್ತವಾಗಿರಬಹುದು ಅಥವಾ ಸೂಚ್ಯಾರ್ಥಕವಾಗಿರಬಹುದು.
ಸುವ್ಯಕ್ತ ಖಾತರಿ ಕರಾರು ಎಂಬುದು ಉತ್ಪನ್ನ ಮಾರುವವರು ನೀಡುವ ಭರವಸೆಯಾಗಿದೆ. ಇದರಂತೆ, ಮಾರಲಾದ ಉತ್ಪನ್ನದ ಗುಣಮಟ್ಟ ಮತ್ತು ಕ್ಷಮತೆಯ ಬಗ್ಗೆ ನೀಡಲಾದ ಖಾತರಿ/ಭರವಸೆಯ ಪ್ರಮಾಣ, ಹಾಗೂ ಒಂದು ವೇಳೆ ಈ ಉತ್ಪನ್ನವು ಕೆಟ್ಟಲ್ಲಿ, ಅದನ್ನು ವಾಪಸು ದುರಸ್ತಿ ಮಾಡುವ/ಸರಿಪಡಿಸುವ ಷರತ್ತು-ನಿಬಂಧನೆಗಳನ್ನು ಸ್ಪಷ್ಟಪಡಿಸಲಾಗಿದೆ. ಇದನ್ನು ಬಹುಶಃ ವಿಶಿಷ್ಟ, ಲಿಖಿತ 'ಖಾತರಿ ಕರಾರು' ಪತ್ರದ ಮೂಲಕ ನೀಡಲಾಗುತ್ತದೆ. ಆದರೂ ಕೆಲವೊಮ್ಮೆ, ಮಾರಾಟವಾದ ಉತ್ಪನ್ನಗಳ ಬಗ್ಗೆ ಮಾರುವವರು ನೀಡುವ ವಿವರಣೆಗಳು ಹಾಗೂ ಕೆಲವೊಮ್ಮೆ ಆ ಉತ್ಪನ್ನಗಳ ಮೂಲ ಮತ್ತು ಗುಣಮಟ್ಟಗಳನ್ನು ಆಧರಿಸಿ ಕಾನೂನು ಅಥವಾ ನಿಯಮಾವಳಿಗಳಡಿ ಖಾತರಿ ಕರಾರು ಚಾಲ್ತಿಗೆ ಬರಬಹುದು. ಖಾತರಿ ಕರಾರಿನಲ್ಲಿ ಉಕ್ತ ವಿಶಿಷ್ಟತೆಗಳಿಗೆ ವ್ಯತಿರಿಕ್ತವಾಗಿ ಏನಾದರೂ ಸಂಭವಿಸಿದಲ್ಲಿ ಈ ಭರವಸೆಯನ್ನು ಮುರಿದಂತಾಗುತ್ತದೆ. ಉದಾಹರಣೆಗೆ, ಉತ್ಪನ್ನದ ಬಗ್ಗೆ ಮಾಹಿತಿ ನೀಡುವ ಜಾಹಿರಾತಿನಲ್ಲಿ ಸುವ್ಯಕ್ತ ಖಾತರಿ ಕರಾರುಗಳುಂಟು. ಕೊಳ್ಳುವ ಸಮಯದಲ್ಲೂ ಈ ಉತ್ಪನ್ನವು ಜಾಹೀರಾತಿನಲ್ಲಿ ತಿಳಿಸಲಾದ ಭರವಸೆಗಳನ್ನು ಗಮನಾರ್ಹ ಮಟ್ಟದಲ್ಲಿ ಪಾಲಿಸಬೇಕು. ಈ ಉದ್ದೇಶಕ್ಕಾಗಿ ಹಲವು ಜಾಹೀರಾತುದಾರರು ಹಕ್ಕುನಿರಾಕರಣೆಯನ್ನು ಸೇರಿಸುವರು (ಉದಾಹರಣೆಗೆ, 'ನೈಜ ಸಮಯದ ಬಣ್ಣ/ಮೈಲಿ ಮೊತ್ತ/ಫಲಿತಾಂಶಗಳಲ್ಲಿ ವ್ಯತ್ಯಾಸವಾಗಬಲ್ಲವು' ಅಥವಾ 'ಇದು ಸೂಚಿಸಲಾದ ನೈಜ ಗಾತ್ರವಲ್ಲ'). ಸಾಮಾನ್ಯವಾಗಿ, ಉತ್ಪನ್ನಗಳ ಉತ್ತಮ ಗುಣಮಟ್ಟದ್ದು, 'ಅದರ ಭಾಗಗಳು ಮತ್ತು ತಯಾರಿಕೆಯ ಸಮಯದಲ್ಲಿ ಉಂಟಾದ ನ್ಯೂನತೆಗಳ' ವಿರುದ್ಧ ಲಿಖಿತ ಖಾತರಿ ಕರಾರುಗಳು ಭರವಸೆ ನೀಡುತ್ತವೆ. ಒದಗಿಸಲಾದ ಸೇವೆಗಳಿಗೂ ಈ ಖಾತರಿ ಕರಾರುಗಳು ಅನ್ವಯಿಸಬಹುದು. ಉದಾಹರಣೆಗೆ, ವಾಹನವೊಂದರ ದುರಸ್ತಿ ನಡೆಸಿದ ಅಂಗಡಿಯು ಈ ದುರಸ್ತಿಯ ಮೇಲೆ 90 ದಿನಗಳ ಭರವಸೆ ನೀಡಬಹುದು.
ಮಾರುವವರು ಖಾತರಿ ಕರಾರನ್ನು ಸೃಷ್ಟಿಸುವ ಉದ್ದೇಶವಿಲ್ಲದೆಯೇ, ಮಾರುವವರು ಸುವ್ಯಕ್ತ ಖಾತರಿ ಕರಾರನ್ನು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ನೀಡಬಹುದು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಮಾರುವವರು ಮೌಲ್ಯದ ಕುರಿತು ತಮ್ಮ ಹೇಳಿಕೆಗಳನ್ನು ಅತಿಶಯವಾಗಿ ಸಾಧಿಸಲು ಅವಕಾಶವಿದೆ. ಕೊಳ್ಳುವ ಸಮಯದಲ್ಲಿ ಕೊಳ್ಳುವವರು ಕೇವಲ ಇದೊಂದನ್ನೇ ಅವಲಂಬಿಸಲಾರರು. ಉದಾಹರಣೆಗೆ, 'ಈ ಬೇಟೆಯ ಚೂರಿಯು ವಿಶ್ವದಲ್ಲೇ ಸರ್ವೋತ್ತಮ ಚೂರಿ' ಎಂಬ ಹೇಳಿಕೆಯು ಕೇವಲ ಅತಿಶಯೋಕ್ತಿ ಎನ್ನಬಹುದು. ಇನ್ನೊಂದೆಡೆ, ಚೂರಿಯನ್ನು ಅದರ ಉದ್ದೇಶಿತ ಬಳಕೆಗೆ ಮಾತ್ರ ಸೀಮಿತಗೊಳಿಸಿದಲ್ಲಿ, ಈ ಬೇಟೆಯ ಚೂರಿಯನ್ನು ಪುನಃ ಮೊನಚಾಗಿಸುವ ಅಗತ್ಯವೇ ಇಲ್ಲ ಎಂಬುದನ್ನು ಸುವ್ಯಕ್ತ ಕರಾರು ಎಂದು ಪರಿಗಣಿಸಬಹುದು. ಯುನೈಟೆಡ್ ಕಿಂಗ್ಡಮ್, ಕೆನಡಾ ಮತ್ತು ಟೈವಾನ್ನಂತಹ ಇತರೆ ದೇಶಗಳಲ್ಲಿ, ಜಾಹೀರಾತುದಾರರು ತಮ್ಮ ಉತ್ಪನ್ನಗಳ ಕುರಿತು ಅತಿಶಯದ ಅಥವಾ ಉಡಾಫೆ ಹೇಳಿಕೆ ನೀಡುವುದನ್ನು ತಡೆಗಟ್ಟಲು, ಗ್ರಾಹಕ ರಕ್ಷಣಾ ಕಾನೂನುಗಳನ್ನು ಜಾರಿಗೆ ತರಲಾಗಿವೆ.
ಬಹಳಷ್ಟು ಪ್ರಸಿದ್ಧ ಟ್ರೇಡ್ಮಾರ್ಕ್ (ವಿಶಿಷ್ಟ ಛಾಪು) ದುರ್ಬಳಕೆಯೂ ಸಹ ಸುವ್ಯಕ್ತ ಖಾತರಿ ಕರಾರಿನ ಸೃಷ್ಟಿಗೆ ಕಾರಣವಾಗಬಹುದು. ಇದರ ಉಲ್ಲಂಘನೆಯನ್ನು 'ನಕಲಿ ಮಾಲು' ಎನ್ನಲಾಗುತ್ತದೆ. ಇದರ ಮೂಲ ಮತ್ತು ಗುಣಮಟ್ಟಗಳ ಕುರಿತು ಸುಳ್ಳು ಮಾಹಿತಿ ನೀಡಲಾಗುತ್ತದೆ.
ಕೆಲವು ತಿಂಗಳುಗಳು, ವರ್ಷಗಳು ಅಥವಾ ಜೀವಾವಧಿಯ ಕಾಲದುದ್ದಕ್ಕೂ ದುರಸ್ತಿ ಅಥವಾ ಬದಲಿ ಮಾಲು ನೀಡುವ ಖಾತರಿ ಕರಾರುಗಳನ್ನು ಕೆಲವು ಉತ್ಪನ್ನಗಳು ಹೊಂದಿರುತ್ತವೆ. ಸೈದ್ಧಾಂತಿಕವಾಗಿ, ಕೊಳ್ಳುವವರು ತಾವು ಕೊಂಡ ಉತ್ಪನ್ನವನ್ನು ದುರಸ್ತಿಗಾಗಿ ಮಾರುವವರಿಗೆ ಹಿಂದಿರುಗಿಸಬಹುದು. ಆದರೆ ಅಂತಹ ಉತ್ಪನ್ನವನ್ನು ಮಾರುವ ಅಂಗಡಿಗಳು ಹಾಗೂ ಕೆಲವೊಮ್ಮೆ ತಯಾರಕರೂ ಸಹ ದುರಸ್ತಿ ಮಾಡುವ ವ್ಯವಸ್ಥೆ ಹೊಂದಿರುವುದಿಲ್ಲ. ಕಾರು ಮಾರಾಟಗಾರರು ತಾವು ವಾಹನ ದುರಸ್ತಿ ಘಟಕಗಳನ್ನು ಹೊಂದಿರುವುದೇ, ಜನರು ಹೊಸ ಕಾರುಗಳನ್ನು ಕೊಳ್ಳಲು ಮುಂದಾಗುತ್ತಿರಲು ಪ್ರಮುಖ ಕಾರಣ. ಕಂಪ್ಯೂಟರ್ ಮಾರಾಟಗಾರರು ಮತ್ತು ದಿನಬಳಕೆಯ ವಿದ್ಯುನ್ಮಾನ ಉತ್ಪನ್ನ ಮಾರಟಗಾರರು 1990ರ ದಶಕದ ಕಾಲಾವಧಿಯಲ್ಲಿ ಅಂತಹ ದುರಸ್ತಿ ಅಂಗಡಿಗಳನ್ನು ನಡೆಸುತ್ತಿದ್ದದ್ದುಂಟು. ಆದರೆ ಇವುಗಳಲ್ಲಿ ಬಹಳಷ್ಟು ಅಂಗಡಿಗಳು ಮಾಯವಾಗಿವೆ. ಪ್ರಯೋಗದಲ್ಲಿ, ಕೊಂಡು ಬಳಸಲಾದ ಉತ್ಪನ್ನವು ಒಂದು ತಿಂಗಳೊಳಗೇ ಕೆಟ್ಟಲ್ಲಿ, ಅದನ್ನು ಮಾರಿದ ಅಂಗಡಿಯ ಭರವಸೆಗಳಡಿ ಬದಲಾಯಿಸಿ ಬೇರೆಯದನ್ನು ಕೊಳ್ಳಬಹುದು. ಒಂದು ವೇಳೆ, ಉತ್ಪನ್ನವು ಅಂಗಡಿಯ ಭರವಸೆಯ ಅವಧಿಯ ನಂತರ ಮತ್ತು ಉತ್ಪಾದಕರ ಭರವಸೆಯ ಅವಧಿಗೆ ಮುಂಚೆಯೇ ಕೆಟ್ಟರೆ, ಉತ್ಪಾದಕರು ಆ ಉತ್ಪನ್ನವನ್ನು ಬದಲಾಯಿಸಿಕೊಡಬಹುದು. ಅಂಗಡಿಯ ಮತ್ತು ಉತ್ಪಾದಕರ ಖಾತರಿ ಕರಾರುಗಳು ಪರಸ್ಪರ ಪ್ರತ್ಯೇಕವಾಗಿರುತ್ತವೆ. ಹಿಂದೆ, ವಿದ್ಯುತ್ ರೇಜರ್ಗಳು ಅಥವಾ ವಿದ್ಯುತ್ ದೀಪಗಳು ಮತ್ತು ಬ್ರೆಡ್ ಸುಡುವ ಯಂತ್ರಗಳಿಗೂ ಸಹ ಖಾತರಿ ಕರಾರು ಸೇವೆ ಒದಗಿಸುವ ದುರಸ್ತಿ ಅಂಗಡಿಗಳಿದ್ದವು. ಆದರೆ 1980ರ ದಶಕದ ಕಾಲಾವಧಿಯಲ್ಲಿ, ಇವುಗಳಲ್ಲಿ ಹಲವು ಅಂಗಡಿಗಳು ಖಾತರಿ ಕರಾರು ಹೊತ್ತ ಉತ್ಪನ್ನಗಳನ್ನು ಬದಲಾಯಿಸಲೆಂದು ಮಾರಾಟಗಾರರಿಗೆ ರವಾನಿಸುವ ಘಟಕಗಳಾದವು. 1990ರ ಕಾಲಾವಧಿಯಲ್ಲಿ ಈ ಅಂಗಡಿಗಳಲ್ಲಿ ಬಹಳಷ್ಟು ಮಾಯವಾದವು. [ಸೂಕ್ತ ಉಲ್ಲೇಖನ ಬೇಕು]
ಕೆಲವು ಅಪವಾದಗಳಿವೆ: ತೊಷಿಬಾದಂತಹ ಕೆಲವು ಉತ್ಪಾದಕ ಉದ್ದಿಮೆಗಳು ಖಾತರಿ ಕರಾರಿನಡಿ ಉತ್ಪನ್ನಗಳನ್ನು ದುರಸ್ತಿ ಮಾಡುತ್ತವೆ. ಈ ತರಹದ ಖಾತರಿ ಕರಾರು ದುರಸ್ತಿಗಳನ್ನು ನಿಭಾಯಿಸುವುದನ್ನು ತೊಷಿಬಾ ಹೇಗೆ ಯುಪಿಎಸ್ ಎಂಬ ಉದ್ದಿಮೆಯೊಂದಿಗೆ ಸಹಯೋಗ ಏರ್ಪಡಿಸಿತು ಎಂಬುದನ್ನು ಥಾಮಸ್ ಫ್ರೈಡ್ಮನ್ ವಿವರಿಸಿದ್ದಾರೆ: ಒಬ್ಬ ಗ್ರಾಹಕರು ತೊಷಿಬಾ ಅಂತರಜಾಲತಾಣದ ಮೂಲಕ ತೊಷಿಬಾ ಕಂಪ್ಯೂಟರೊಂದನ್ನು ಖರೀದಿಸುವರು. ಸರಿಯಾಗಿ ಕೆಲಸ ಮಾಡದ ಈ ಕಂಪ್ಯೂಟರ್ನ್ನು ಯುಪಿಸ್ ಮೂಲಕ ತೊಷಿಬಾಗೆ ರವಾನಿಸುವರು. ವಾಸ್ತವವಾಗಿ, ಈ ಕಂಪ್ಯೂಟರ್ ತೊಷಿಬಾ ತಲುಪುವುದಿಲ್ಲ. ಬದಲಿಗೆ, ಯುಪಿಎಸ್ ತನ್ನದೇ ಆದ ತೊಷಿಬಾ ಕಂಪ್ಯೂಟರ್ ದುರಸ್ತಿ ಮಾಡುವ ಅಂಗಡಿಗಳನ್ನು ನಡೆಸುವುದು. ಗ್ರಾಹಕರ ಈ ಕಂಪ್ಯೂಟರ್ನ್ನು ತೆಗೆದುಕೊಂಡು, ಇದು ಈ ಯುಪಿಎಸ್ ನಿರ್ವಹಣೆಯ ದುರಸ್ತಿ ಅಂಗಡಿಗೆ ರವಾನಿಸುತ್ತದೆ. ಆ ಕಂಪ್ಯೂಟರ್ನ್ನು ದುರಸ್ತಿ ಮಾಡಿ, ಪರಿಶೀಲಿಸಿ, ಪರೀಕ್ಷಿಸಿ, ನಿಗದಿತ ಸಮಯಾವವಧಿಯೊಳಗೆ ಆ ಗ್ರಾಹಕರಿಗೆ ಹಿಂದಿರುಗಿಸಲಾಗುವುದು. ಒಟ್ಟಾರೆ, ಗ್ರಾಹಕರ ತಂತ್ರಾಂಶಗಳು ಮತ್ತು ದತ್ತಾಂಶ ಸಂಗ್ರಹಗಳನ್ನು ಹಾಳುಮಾಡದೆ ಸುರಕ್ಷಿತವಾಗಿರಿಸಲಾಗಿದೆ.[೧]
ಸೂಚ್ಯಾರ್ಥದ ಖಾತರಿ ಕರಾರು ಎಂದರೆ, ವ್ಯವಹಾರದ ರೀತಿಯಿಂದ ಉಂಟಾಗುವ ಕರಾರು ಆಗಿರುತ್ತದೆ. ಅಲ್ಲದೆ, ಮಾರುವವರ ಸುವ್ಯಕ್ತ ನಿರೂಪಣೆಗಿಂತಲೂ ಹೆಚ್ಚಾಗಿ, ಉತ್ಪನ್ನ ಕೊಳ್ಳುವವರು ಅಥವಾ ಸೇವೆ ಪಡೆಯುವವರು ಇದರ ಅಂತರಾರ್ಥ ಗ್ರಹಿಸುವುದರ ಮೇಲೆ ಉಂಟಾಗುವ ಕರಾರು ಸಹ ಆಗಿರುತ್ತದೆ.
ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದಲ್ಲಿ, ಅಥವಾ 'ಎಲ್ಲಾ ನ್ಯೂನತೆಗಳೊಂದಿಗೆ', ಅಥವಾ 'ಹೇಗಿದೆಯೋ ಹಾಗೆ' ಎಂಬ ಪದಪುಂಜದೊಂದಿಗೆ ಉತ್ಪನ್ನವು ಮಾರಾಟವಾಗಿರದಿದ್ದಲ್ಲಿ, ವ್ಯವಹಾರದ ಖಾತರಿ ಕರಾರು ಇಲ್ಲಿ ಸೂಚ್ಯಾರ್ಥದ್ದಾಗಿರುತ್ತದೆ. ಉತ್ಪನ್ನ ಅಥವಾ ವಸ್ತು ಮಾರಾಟವಾಗಲು ಯೋಗ್ಯವಾಗಿರಬೇಕಾದಲ್ಲಿ, ಉತ್ಪನ್ನವು ಸಾಮಾನ್ಯ ಕೊಳ್ಳುವವರ ನಿರೀಕ್ಷೆಗೆ ಸರಿಹೊಂದಬೇಕು. ಅರ್ಥಾತ್, ಮಾರುವವರು ತಿಳಿಸಿದ ಸ್ಥಿತಿಯಲ್ಲಿಯೇ ಈ ಉತ್ಪನ್ನವೂ ಸಹ ಇರಬೇಕು. ಉದಾಹರಣೆಗೆ, ಹಣ್ಣೊಂದರ ನೋಟ ಅಥವಾ ಪರಿಮಳ ಚೆನ್ನಾಗಿರಬಹುದು. ಆದರೆ ಒಳಭಾಗ ಕೊಳೆತುಹೋಗಿದ್ದಲ್ಲಿ, ಇದರ ಗುಣಮಟ್ಟವು ಪ್ರಶ್ನಾರ್ಹವಾಗುವುದು. ಹಾಗಾಗಿ, ವ್ಯಾಪಾರದಲ್ಲಿ ಉತ್ಕೃಷ್ಟ ಗುಣಮಟ್ಟದಲ್ಲಿರದ ಈ ಹಣ್ಣಿನ ವಿಚಾರದಲ್ಲಿ ಈ ನಿದರ್ಶನವು ವ್ಯವಹಾರದ ಸೂಚ್ಯಾರ್ಥ ಕರಾರನ್ನು ಉಲ್ಲಂಘಿಸಿದಂತಾಗುತ್ತದೆ. ಮ್ಯಾಸಚೂಸೆಟ್ಸ್ ಗ್ರಾಹಕ ರಕ್ಷಣಾ ಕಾನೂನಿನ ಪ್ರಕಾರ, ಗ್ರಾಹಕರು ಮತ್ತು ಇತರರಿಗೆ ಮಾರಲಾದ ಗೃಹಬಳಕೆಯ ಉತ್ಪನ್ನಗಳ ಮೇಲೆ ಖಾತರಿ ಕರಾರನ್ನು ತಳ್ಳಿಹಾಕುವುದು ನ್ಯಾಯಸಮ್ಮತವಲ್ಲ.
ಗ್ರಾಹಕರ ವಿಶಿಷ್ಟ ಕೋರಿಕೆಗೆ ಹಿಡಿಸುವಂತಹ ಉತ್ಪನ್ನವನ್ನು ಆಯ್ದುಕೊಡಲು ಮಾರಾಟಗಾರರನ್ನು ಅವಲಂಬಿಸಿದಲ್ಲಿ, ವಿಶಿಷ್ಟ ಉದ್ದೇಶಕ್ಕಾಗಿ ಅರ್ಹತಾ ಖಾತರಿ ಕರಾರು ಸೂಚ್ಯಾರ್ಥವಾಗುತ್ತದೆ. ಉದಾಹರಣೆಗೆ, ಗ್ರಾಹಕರೊಬ್ಬರು ಹಿಮದಲ್ಲಿ ಓಡಿಸಲು ಸುಲಭವಾಗಲೆಂದು ತಮ್ಮ ವಾಹನಕ್ಕೆ ಸೂಕ್ತ ಟೈರ್ಗಳನ್ನು ಅಳವಡಿಸಲು ವಾಹನ ದುರಸ್ತಿಗಾರರನನ್ನು ಕೋರಿದಾಗ, ದುರಸ್ತಿಗಾರರು ಆ ವಾಹನಕ್ಕೆ ಹಿಮದಲ್ಲಿ ಬಳಸಲು ಸೂಕ್ತವಲ್ಲದ ಟೈರ್ಗಳನ್ನು ಅಳವಡಿಸಿದಲ್ಲಿ, ಈ ಖಾತರಿ ಕರಾರಿನ ಉಲ್ಲಂಘನೆಯಾಗುವುದು. ಈ ಸೂಚ್ಯಾರ್ಥದ ಖಾತರಿ ಕರಾರನ್ನು ಹೆಸರಿನ ಮೂಲಕವೂ ಸುವ್ಯಕ್ತವಾಗಿ ತಳ್ಳಿಹಾಕಬಹುದು. ಇದರಿಂದಾಗಿ ಅಯೋಗ್ಯತಾ ಅಪಾಯವನ್ನು ಉತ್ಪನ್ನ ಕೊಂಡವರತ್ತಲೇ ತಿರುಗಿಸುತ್ತದೆ.
ಜೀವಾವಧಿಯ, ಪೂರ್ಣ ಬಾಳಿಕೆ ಖಾತರಿ ಕರಾರು ಎಂದರೆ, ಗ್ರಾಹಕರ ಜೀವಾವಧಿಯ ಬದಲಿಗೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಜೀವಾವಧಿಯ ಮೇಲೆ ನೀಡಲಾದ ಭರವಸೆಯಾಗಿರುತ್ತದೆ [೨]. ನೈಜ ಖಾತರಿ ಕರಾರು ದಾಖಲೆಗಳಲ್ಲಿ ಇದರ ಅರ್ಥವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕಿದೆ. ಉತ್ಪನ್ನವೊಂದರ ಬಳಕೆ ರದ್ದಾಗಿದ್ದಲ್ಲಿ ಅಥವಾ ಅಲಭ್ಯವಾದಲ್ಲಿ, ಖಾತರಿ ಕರಾರು ಇದಕ್ಕಿಂತಲೂ ಸ್ವಲ್ಪ ಹೆಚ್ಚು ಕಾಲ ಸಿಂಧುವಾಗಿರಬಹುದು. ಉದಾಹರಣೆಗೆ, ಸಿಸ್ಕೊದವರ ಒಂದು ಉತ್ಪನ್ನದ ತಯಾರಿಕೆ ಸ್ಥಗಿತಗೊಳಿಸಿದ್ದರೂ, ಇದರ ಜೀವಾವಧಿಯ ಖಾತರಿ ಕರಾರು ಐದು ವರ್ಷಗಳ ತನಕ ನಡೆಯುವುದು.[೩]
ಇಡೀ ಮಾರುಕಟ್ಟೆಯ (ಹೊಸ + ಬಳಸಿದ ಉತ್ಪನ್ನ) ಅಂಶವಾಗಿ ಬಳಸಿದ ಉತ್ಪನ್ನಗಳ ಪ್ರಮುಖತೆಯು, ಇಪ್ಪತ್ತೊಂದನೆಯ ಶತಮಾನದ ಆರಂಭದಿಂದಲೂ ಗಮನಾರ್ಹವಾಗಿ ಬೆಳೆಯುತ್ತಿದೆ. ಬಳಸಿದ ಉತ್ಪನ್ನಗಳ ಪೈಕಿ ಗ್ರಾಹಕರು ಹಿಂದೆ ಬಳಸಿದ ಉತ್ಪನ್ನಗಳು ಸೇರಿವೆ. ಉತ್ಪನ್ನಗಳು ಸುಸ್ಥಿತಿಯಲ್ಲಿದ್ದರೂ ಸಹ, ಬಳಕೆದಾರರು ಅದನ್ನು ಬದಲಾಯಿಸುವುದುಂಟು/ಮಾರುವುದುಂಟು. ಕಂಪ್ಯೂಟರ್ಗಳು ಮತ್ತು ಸಂಚಾರಿ ದೂರವಾಣಿಗಳಂತಹ ಉತ್ಪನ್ನಗಳ ಅವಧಿ ಕಡಿಮೆ, ಜೊತೆಗೆ ಪ್ರತಿದಿನವೂ ಈ ಉತ್ಪನ್ನಗಳಿಗಾಗಿ ಆಧುನೀಕರಿಸಲಾದ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಹೊಸ ಉತ್ಪನ್ನಗಳ ಮಾರಾಟವು ಸೀಮಿತ ವಹಿವಾಟಿಗೆ ಬದ್ಧವಾಗಿ, ಬಳಸಿದ ಉತ್ಪನ್ನಗಳ ಮಾರುಕಟ್ಟೆ ಪ್ರಚಲಿತವಾಗಲು ಕಾರಣವಾಗುತ್ತದೆ. ಉದಾಹರಣೆಗೆ, 1990ರಿಂದ 2005ರ ತನಕ, ಬಳಸಿದ್ದ ಕಾರುಗಳ ಸಂಖ್ಯೆಯು 4.7 ದಶಲಕ್ಷದಿಂದ 5.4 ದಶಲಕ್ಷಕ್ಕೆ ಹೆಚ್ಚಾಯಿತು. ಇದೇ ಅವಧಿಯಲ್ಲಿ ಮಾರಾಟವಾದ ಹೊಸ ಕಾರುಗಳ ಸಂಖ್ಯೆ 2.3 ದಶಲಕ್ಷದಿಂದ 2.07 ದಶಲಕ್ಷಕ್ಕೆ ಕಡಿಮೆಯಾಯಿತು.
ಭರವಸೆಯು ಮುರಿದಾಗ ಖಾತರಿ ಕರಾರು ಉಲ್ಲಂಘನೆಯಾಗುವುದು. ಕೊಂಡ ಉತ್ಪನ್ನವು ಇರಬೇಕಾದ ಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ, ಅಥವಾ ಮಾರುವ ಸಮಯ ಅದಕ್ಕೆ ಹಾನಿಯಾಗಿದ್ದು, ಈ ಹಾನಿಯು ಗೋಚರವಾಗದಿದ್ದರೂ ಖಾತರಿ ಕರಾರು ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಮಾರುವವರು ಭರವಸೆಯಂತೆ ಉತ್ಪನ್ನದ ಬೆಲೆಯ ಹಣವನ್ನು ವಾಪಸು ಮಾಡುವುದರ ಅಥವಾ ಬದಲಿ ಉತ್ಪನ್ನವನ್ನು ನೀಡುವ ಮೂಲಕ ಖಾತರಿ ಕರಾರನ್ನು ಪಾಲಿಸಬೇಕು. ಮಾರುವವರು ಖಾತರಿ ಕರಾರು ಪಾಲಿಸಲು ನಿರಾಕರಿಸಿದಲ್ಲಿ, ಮಿತಿಗಳ ಶಾಸನದಡಿ, ನ್ಯಾಯಾಲಯದಲ್ಲಿ ಖಾತರಿ ಕರಾರು ಉಲ್ಲಂಘನದ ದೂರು ಸಲ್ಲಿಸಬಹುದು. 'ವಿಸ್ತಾರಿತ ಖಾತರಿ ಕರಾರು' ಇದ್ದಲ್ಲಿ ಈ ಅವಧಿಯನ್ನು ಕಡೆಗಾಣಿಸಲಾಗುತ್ತದೆ. ಇದರಂತೆ, ವಿಸ್ತಾರಿತ ಅವಧಿಯಲ್ಲಿ ಕೆಟ್ಟುಹೋಗುವ ಉತ್ಪನ್ನಗಳ ದುರಸ್ತಿ ಅಥವಾ ಬದಲಿಸುವ ಹೆಚ್ಚುವರಿ ಸೇವೆಯನ್ನು ಮಾರುವವರು ಅಥವಾ ಉತ್ಪಾದಕರು ಗುತ್ತಿಗೆಯಡಿ ಒದಗಿಸುವರು. ಆದರೂ, ಮಾರಾಟದ ಸಮಯದಲ್ಲಿ ಉತ್ಪನ್ನದಲ್ಲಿ ದೋಷವಿದ್ದು, ತತ್ಸಂಬಂಧಿತ ಸೀಮಿತತೆಯ ಶಾಸನವು ಇನ್ನೂ ಸಿಂಧುವಾಗಿದ್ದಲ್ಲಿ, ಯಾವುದೇ ವಿಸ್ತರಿತ ಖಾತರಿ ಕರಾರಿನ ಅಸ್ತಿತ್ವವು ಆನುಷಂಗಿಕ: ದೋಷವಿರುವ ಉತ್ಪನ್ನ ಮಾರುವವರು ಪ್ರಾಥಮಿಕ ಖಾತರಿ ಕರಾರನ್ನು ಉಲ್ಲಂಘಿಸಿ, ಹೊಣೆಯಾಗುತ್ತಾರೆ.
ಯಾವುದೇ ಸಂಬಂಧವಿಲ್ಲದ ವಿಸ್ತಾರಿತ ಖಾತರಿ ಕರಾರು ಮೀರಿಹೋಯಿತು ಎಂಬ ನೆಪ ಹೇಳಿ ಪ್ರಾಥಮಿಕ ಖಾತರಿ ಕರಾರಿನ ಉಲ್ಲಂಘನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮಾರಾಟಗಾರರ ವಿರುದ್ಧ ನ್ಯಾಯಸಮ್ಮತವಲ್ಲದ ಮತ್ತು ಮೋಸದ ವ್ಯವಹಾರ (ಕಾನೂನು ರೀತ್ಯಾ ವಂಚನೆ) ಮೊಕ್ಕದಮೆಯಾಗಬಹುದು. ಕರಾರು ಪರಿಹಾರ ಕೊರಿಕೆಯ ಬಗ್ಗೆ ಸೀಮಿತತೆಯ ಶಾಸನವು, ವೈಯಕ್ತಿಕ ಅಪರಾಧದ ಪರಿಹಾರ ಬೇಡಿಕೆಗಿಂತಲೂ ಹೆಚ್ಚಿರಬಹುದು ಅಥವಾ ಕಡಿಮೆಯಿರಬಹುದು. ಕೆಲವು ಖಾತರಿ ಕರಾರು ಉಲ್ಲಂಘನಾ ಮೊಕದ್ದಮೆಗಳನ್ನು ತಡವಾಗಿ ಹಾಕಿ, ವಂಚನೆ ಅಥವಾ ಸಂಬಂಧಿತ ವೈಯಕ್ತಿ ಅಪರಾಧ ಎಂದು ಬಿಂಬಿಸಲಾಗಿದೆ.
ಉದಾಹರಣೆಗೆ, ಗ್ರಾಹಕರೊಬ್ಬರು ವಸ್ತುವೊಂದನ್ನು ಕೊಂಡು, ಅದರ ರಕ್ಷಾಕವಚದಿಂದ (ಪ್ಯಾಕೆಜ್) ಹೊರತೆಗೆಯುವಾಗ ವಸ್ತುವಿನ ಕೆಲವು ಭಾಗಗಳು ಮುರಿದುಹೋಗಿದ್ದು ಅಥವಾ ಕಾಣೆಯಾಗಿರುವುದು ಕಂದುಬಂದಿತ್ತು. ಮಾರುವವರ 'ವಾಪಸಾತಿ ನೀತಿ' ಏನೇ ತಿಳಿಸಲಿ (ಬಳಸಿದ ಉತ್ಪನ್ನ ಅಥವಾ 'ಹೇಗಿದೆಯೋ ಹಾಗೆ' ಮಾರಾಟಗಳು), ವಿಸ್ತಾರಿತ ಖಾತರಿ ಕರಾರು ಮೀರಿಹೋದ ನಂತರವೂ ಈ ಸಮಸ್ಯೆ ಪತ್ತೆಯಾಗಿರದಿದ್ದರೂ, ಈ ಉತ್ಪನ್ನವು ದೋಷಪೂರಿತವಾಗಿದ್ದು, ಮಾರುವವರಿಗೆ ಹಿಂದಿರುಗಿಸಬಹುದು ಅಥವಾ ಬದಲಿ ಉತ್ಪನ್ನವನ್ನು ಪಡೆಯಬಹುದು. ಇದೇ ರೀತಿ, ಉತ್ಪನ್ನವು ಅವಧಿಗೆ ಮುಂಚಿತವಾಗಿಯೇ ವಿಫಲವಾದಲ್ಲಿ, ಅದು ಮಾರಾಟದ ಸಮಯದಲ್ಲೇ ದೋಷಪೂರಿತವಾಗಿದ್ದು, ಅದನ್ನು ಮಾರುವವರಿಗೆ ಹಿಂದಿರುಗಿಸ, ಹಣ ಮರುಪಡೆಯಬಹುದು ಅಥವಾ ಬದಲಿ ಉತ್ಪನ್ನವನ್ನು ಪಡೆಯಬಹುದು. ಮಾರುವವರು ಖಾತರಿ ಕರಾರನ್ನು ಪಾಲಿಸಲು ನಿರಾಕರಿಸಿದಲ್ಲಿ, ಕರಾರು ಹಣ ಬೇಡಿಕೆಯ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಬಹುದು.
This article contains instructions, advice, or how-to content. (August 2009) |
ಚಿಲ್ಲರೆ ವ್ಯಾಪಾರದಲ್ಲಿ, ಖಾತರಿ ಕರಾರು ಅಥವಾ ವಿಸ್ತಾರಿತ ಖಾತರಿ ಕರಾರು ಎಂದರೆ, ಸಾಧಾರಣ ಬಳಕೆಯ ಸ್ಥಿತಿಯಲ್ಲಿ ಉತ್ಪನ್ನದ ಕ್ಷಮತೆಯ ಭರವಸೆ. ವಸ್ತುವನ್ನು ಮಾರಿದ ದಿನಾಂಕದಿಂದ ಕೆಲವು ದಿನಗಳ ನಂತರ ಅದರಲ್ಲಿ ಉಂಟಾಗಬಹುದಾದ ದೋಷಗಳನ್ನು ವ್ಯಾಪ್ತಿಯಲ್ಲಿ ಹೊಂದಿರುವ ಕಾರಣ ಇದನ್ನು ವಿಸ್ತಾರಿತ ಕರಾರು ಎನ್ನಲಾಗಿದೆ. ಉತ್ಪನ್ನವನ್ನು ಕೊಂಡ ನಂತರ, ನಿಗದಿತ ಅವಧಿಯೊಳಗೆ ಅದರಲ್ಲಿ ದೋಷಗಳು ಗೋಚರಿಸಿಕೊಂಡಲ್ಲಿ, ಉತ್ಪಾದಕರು ಅಥವಾ ವಿತರಕರು ಆ ಉತ್ಪನ್ನವನ್ನು ಕೊಂಡವರಿಗೆ ಬದಲಿ ಉತ್ಪನ್ನ ನೀಡಬೇಕಾಗಿದೆ ಅಥವಾ ಅದನ್ನು ಸರಿಪಡಿಸಬೇಕು, ಅಥವಾ ಉತ್ಪನ್ನ ಮೌಲ್ಯದ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸಬೇಕಾಗಿದೆ. ಅಂತಹ ಖಾತರಿ ಕರಾರುಗಳು ಸಾಮಾನ್ಯವಾಗಿ 'ವಿಧಿಯ ಕೃತ್ಯಗಳು', ಉತ್ಪನ್ನದ ಮಾಲೀಕರು ಸರಿಯಾಗಿ ಬಳಸದಿರುವಿಕೆ, ದುರುದ್ದೇಶದಿಂದ ಹಾಳು ಮಾಡುವಿಕೆ, ವಾಣಿಜ್ಯ ಮಟ್ಟದ ಬಳಕೆ, ಅಥವಾ ಇದೇ ರೀತಿಯ ಸಹಜ ವೈಯಕ್ತಿಕ ಬಳಕೆಯ ಪರಿಧಿಯ ಆಚೆ ಸಂಬಂಧಿಸಿದ ಯಾವುದೇ ಘಟನೆಗಳನ್ನು ಒಳಗೊಳ್ಳುವುದಿಲ್ಲ. ಕಾಲಾನಂತರದಲ್ಲಿ ಸವೆದುಹೋಗುವ ಉತ್ಪನ್ನದ ಭಾಗಗಳು, ಸಾಮಾನ್ಯವಾಗಿ ಬಳಸಿ ಖರ್ಚಾಗಿ ಆಗಾಗ್ಗೆ ಬದಲಾಯಿಸಬೇಕಾದ ಪೂರೈಕೆಗಳು (ಉದಾಹರಣೆಗೆ, ವಾಹನದ ಟೈರ್ಗಳು ಮತ್ತು ವಾಹನದ ಘರ್ಷಣಾ ನಿರೋಧ ತೈಲ) ಇವೆಲ್ಲವೂ ಸಹ ಹಲವು ಖಾತರಿ ಕರಾರುಗಳ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಕೊಳ್ಳುವ ಬೆಲೆಯಲ್ಲಿ ವಿಸ್ತಾರಿತ ಖಾತರಿ ಕರಾರನ್ನು ಸೇರಿಸಬಹುದು, ಅಥವಾ ಹೆಚ್ಚುವರಿ ಶುಲ್ಕದೊಂದಿಗೆ ಐಚ್ಛಿಕವಾಗಿ ವಿಸ್ತರಿಸಬಹುದು. ವರ್ಷವಾರು ವಿಸ್ತರಣೆಗಳು ಸಹ ಹೊಂದಬಹುದು ಅಥವಾ 'ಉತ್ಪನ್ನದ ಜೀವಾವಧಿ'ಯಂತಹ ಅಸ್ಪಷ್ಟ ಉಕ್ತಿಗಳಲ್ಲಿಯೂ ಸಹ ಇಂತಹ ವಿಸ್ತಾರಿತ ಖಾತರಿ ಕರಾರರನ್ನು ಸೇರಿಸಬಹುದು.
ತೃತೀಯ-ಪಕ್ಷದ ಖಾತರಿ ಕರಾರು ನೀಡುವವರು ಬಹಳಷ್ಟು ಉತ್ಪನ್ನಗಳಿಗೆ ಐಚ್ಛಿಕ ವಿಸ್ತಾರಿತ ಖಾತರಿ ಕರಾರು ಒಪ್ಪಂದಗಳನ್ನು ಪ್ರಸ್ತುತಪಡಿಸುವರು. ಇದು ಆ ಉತ್ಪನ್ನಕ್ಕೆ ವಿಮೆಯ ಕರಾರು ಎಂದು ಪರಿಗಣಿಸಲಾಗಿದೆ. ಮೂರನೆಯ ಪಕ್ಷದ ಖಾತರಿ ಕರಾರುಗಳನ್ನು ಸಣ್ಣ ಪ್ರಮಾಣದ, ಸ್ವ-ವಿಮಾ ಸಂಸ್ಥೆಗಳ ಶ್ರೇಣಿ, ಅಥವಾ, ಬೆಸ್ಟ್ ಬಯ್ ಮತ್ತು ಸರ್ಕ್ಯೂಟ್ ಸಿಟಿಯಂತಹ ದೊಡ್ಡ ಪ್ರಮಾಣದ, ಪ್ರಸಿದ್ಧ ಮಳಿಗೆಗಳ ಸಮೂಹಗಳ ಮೂಲಕ ಮಾರಲಾಗುತ್ತದೆ. ಇತರೆ ವಿಮಾ ರೀತಿಗಳಂತೆ, ಉತ್ಪನ್ನಗಳು ತಮ್ಮ ಕ್ಷಮತೆಗಳನ್ನು ಉಳಿಸಿಕೊಳ್ಳುತ್ತವೆಯೆಂದೂ, ಖಾತರಿ ಕರಾರನ್ನು ಮರೆಯಲಾಗುವುದೆಂದೂ ಅಥವಾ ಯಾವುದೇ ಪರಿಹಾರ ಹಣ ಬೇಡಿಕೆಯನ್ನು ಅತ್ಯಲ್ಪ ವೆಚ್ಚದಲ್ಲಿ ನಿಭಾಯಿಸಬಹುದು ಎಂದು ಉದ್ದಿಮೆಗಳು ಆಶಯ ವ್ಯಕ್ತಪಡಿಸುತ್ತವೆ. ಜೆಟಿಎಫ್ ಬ್ಯುಸಿನೆಸ್ ಸಿಸ್ಟಮ್ಸ್ನಂತಹ ಕೆಲವು ತೃತೀಯ ಪಕ್ಷಗಳ ಉದ್ದಿಮೆಗಳು ತಮ್ಮದೇ ಬೆಂಬಲ/ಸಮರ್ಥನೆ ನೀಡುವವು. ಇಂತಹ ಉದ್ದಿಮೆಗಳು ದೋಷಪುರಿತ ಭಾಗವನ್ನು ಉತ್ಪನ್ನದಿಂದ ತೆಗೆದು, ಇದನ್ನು ಬದಲಾಯಿಸಲು ಉತ್ಪಾದಕ ಉದ್ದಿಮೆಗೆ ಕಳುಹಿಸುತ್ತವೆ.
ವಿಸ್ತಾರಿತ ಖಾತರಿ ಕರಾರುಗಳು ಸಾಮಾನ್ಯವಾಗಿ ಉತ್ಪಾದಕರ ಮೂಲಕ ನೀಡಲಾಗುವುದಿಲ್ಲ. ಬದಲಿಗೆ ಇದನ್ನು ಸ್ವತಂತ್ರ ನಿರ್ವಹಣಾಗಾರರ ಮೂಲಕ ವಿತರಿಸಲಾಗುವುದು. ಕೆಲವು ಪರಿಸ್ಥಿತಿಗಳಲ್ಲಿ, ಉತ್ಪನ್ನ ತಯಾರಿಸುವ ಉದ್ದಿಮೆಯು, ಅದನ್ನು ಕೊಳ್ಳಲಾದ ಅಥವಾ ದುರಸ್ತಿ ಮಾಡಿಸಲಾದ ನಗರದಿಂದ ಅನ್ಯ ನಗರದಲ್ಲಿದ್ದಲ್ಲಿ, ಗ್ರಾಹಕರಿಗೆ ಅನುಕೂಲಕರವಾಗಬಹುದು. ಉದಾಹರಣೆಗೆ, ಕಾರ್ ಮಾರಾಟಗಾರರ ಮೂಲಕ ವಾಹನ ಖಾತರಿ ಕರಾರನ್ನು ನೀಡಿದ್ದಲ್ಲಿ, ಇದು ಆಗಾಗ್ಗೆ ಕನಿಷ್ಠ ಬೆಲೆಯಲ್ಲಿ ಪ್ರಸ್ತುತಗೊಳಿಸುವ ಮಾರಾಟಗಾರರಿಂದ ಸಾಮಾನ್ಯವಾಗಿ ಉಪಗುತ್ತಿಗೆಯ ಖಾತರಿ ಕರಾರು ಆಗಿರುತ್ತದೆ. ಇದರಂತೆ, ವಾಹನದ ದುರಸ್ತಿಗಳನ್ನು ಕಡಿಮೆ ದರದಲ್ಲಿ ಮಾಡಿಸಲಾಗುತ್ತದೆ. ಇದರಿಂದಾಗಿ ವಾಹನ ಸೇವಾ ಹಾಗೂ ವಾಹನ ಬಿಡಿ ಭಾಗಗಳ ಗುಣಮಟ್ಟದಲ್ಲಿ ಇಳಿತವಾಗುವುದು. ಹಲವು ಬಾರಿ, ದುರಸ್ತಿಯ ಸಮಯ, ಇಂತಹ ರೀತಿಯ ಖಾತರಿ ಕರಾರುಗಳಿಗೆ ಅನಿರೀಕ್ಷಿತ ಜೇಬುಖರ್ಚುಗಳುಂಟಾಗುತ್ತವೆ, ಉದಾಹರಣೆಗೆ: -ಖಾತರಿ ಕರಾರು ನಿಬಂಧನೆಗಳ ಹೊರಗೆ ಅನಿರೀಕ್ಷಿತ ಸೇವಾ ಸೌಲಭ್ಯ -ವ್ಯಾಪ್ತಿಯೊಳಗೆ ಬರದ ಭಾಗಗಳು ಮತ್ತು ಶ್ರಮ ದರಗಳು -ಮಾರಾಟಗಾರ/ಖಾತರಿ ಕರಾರು ಹಣ ಕೋರಿಕೆ ಕಾರ್ಯಾಲಯಗಳ ಮೂಲಕ ಹಣ ಮರುಪಾವತಿ ವ್ಯವಸ್ಥೆಯಿದ್ದರೂ, ಬಾಕಿ ಶುಲ್ಕದ ಪಾವತಿ. ಕೆಲವು ದುರಸ್ತಿ ತಂತ್ರಜ್ಞರು ಮತ್ತು ಮಾರಾಟಗಾರರ ಸೇವಾ ಕೇಂದ್ರಗಳು, ಮಾರಾಟಗಾರರ ಖಾತರಿ ಕರಾರು ಅವಧಿ ಮುಗಿದುಹೋಗುವ ವರೆಗೂ, ಅಗತ್ಯ ದುರಸ್ತಿ ಕೆಲಸವನ್ನು ಮುಂದೂಡಬಹುದು. ಇದರಿಂದಾಗಿ ದುರಸ್ತಿಯ ವೆಚ್ಚವನ್ನು ತಮ್ಮ ಕಡೆಯಿಂದ ಭರಿಸುವುದಕ್ಕೆ ಬದ್ಧತೆಯಿಂದ ತಪ್ಪಿಸಿಕೊಳ್ಳಬಹುದು ಅಥವಾ ಸಾಮಾನ್ಯ ಅಥವಾ ಹೆಚ್ಚಿನ ಅಂಗಡಿಯ ದರ ಅನ್ವಯಿಸುತ್ತದೆ ಎಂಬುದೂ ಈ ಮಾರಾಟಗಾರರ ಲೆಕ್ಕಾಚಾರವಾಗಿರುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ವರ್ಷಕ್ಕೆ ಸುಮಾರು 4800 ಡಾಲರ್ಗಳಷ್ಟು ಒಟ್ಟು ಆಸ್ತಿಪಾಸ್ತಿ ಮೌಲ್ಯ (ಸಾಮಾನ್ಯ ವಿದ್ಯುನ್ಮಾನ ಉಪಕರಣಗಳು, ಐಷಾರಾಮಿ ವಿದ್ಯುನ್ಮಾನಗಳು, ಪುರಾತನ ವಸ್ತುಗಳು ಮತ್ತು ಸಂಗ್ರಹಯೋಗ್ಯಗಳು, ಪೀಠೋಪಕರಣಗಳು, ವಾಹನ, ಮನೆ, ಇತ್ಯಾದಿ) ಹೊಂದಿರುವ ಹಲವು ಗ್ರಾಹಕರು, ಅಥವಾ ವರ್ಷಕ್ಕೆ 122,000 ಡಾಲರ್ಗಳಿಗಿಂತಲೂ ಕಡಿಮೆ ಒಟ್ಟು ದೇಶೀಯ ಆದಾಯ ಹೊಂದಿರುವ ಗ್ರಾಹಕರು ಸಂಯುಕ್ತತೆಗೆ ಬದ್ಧ ಹಾಗೂ ವಿಮೆ ಮಾಡಿಸಲಾದ ಕರಾರು ಹೊಂದಿರುವಾಗ ತಮ್ಮ ಉತ್ಪನ್ನ, ಮನೆ ಅಥವಾ ವಾಹನದ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸುವ 86%ರಷ್ಟು ಸಾಧ್ಯತೆಯಿದ್ದು, ತಮ್ಮ ಉಳಿತಾಯಗಳನ್ನು ಮುಪ್ಪಟ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ~drp.report2007
ವಿಮೆ ಮಾಡಿಸಲಾದ ಸೇವಾ ಕರಾರಿನ *ನೈಜ ಲಿಖಿತ ರೂಪವು ನಿಮ್ಮ ವಿಸ್ತಾರಿತ ವಾಹನ ಖಾತರಿ ಕರಾರಿನ ಗುಣಮಟ್ಟವನ್ನು ನಿರ್ಣಯಿಸುವ ಬಹಳ ಮುಖ್ಯ ಕಾರಣವಾಗಿದೆ. ಸಂಪೂರ್ಣವಾಗಿ ವಿಮೆ ಹೊಂದಿದ ವಾಹನ ಖಾತರಿ ಕರಾರು, ಸಗಟು ಅಥವಾ ತತ್ಸಮ ದರದಲ್ಲಿ ಕಂಡುಬಂದಲ್ಲಿ, ಯಾವುದೇ ಬೆಲೆಯ ವ್ಯತ್ಯಾಸವಿದ್ದರೂ ಅದಕ್ಕೆ ಅರ್ಹವೆನಿಸಿದೆ. ನೈಜ ಲಿಖಿತ ರೂಪ ವು ನಿಮ್ಮ ಪರವಾಗಿ ಬರೆಯಲಾದ ಒಂದು ಕರಾರು. ಈ ಪತ್ರದಲ್ಲಿ ನಿಮ್ಮ ಹೆಸರು ಹೊಂದಿರಲೇಬೇಕು , ನೀವು ಕೊಂಡ ಉತ್ಪನ್ನದ ಐಡಿ ಸಂಖ್ಯೆ (ಪಿನ್) ಅಥವಾ ವಾಹನದ ಗುರುತಿನ ಸಂಖ್ಯೆ (ವಿಐಎನ್) ಹೊಂದಿರಲೇಬೇಕು . ಇದು ನಿಮ್ಮ ನೈಜ ಲಿಖಿತ ರೂಪ. ಯಾವುದೇ ಕರಾರುಗಳನ್ನು ಪರಿಗಣಿಸಿದಾಗ, ಯಾವಾಗಲೂ ಸಹ ವಿವಿಧ ನಿಬಂಧನೆ-ನಿಯಮಾವಳಿಗಳಿರುತ್ತವೆ. ಆದ್ದರಿಂದ, ಈ ಸೇವಾ ಕರಾರು ಒದಗಿಸುವ ಉದ್ದಿಮೆಗಳೊಂದಿಗೆ ಮಾತ್ರ ವ್ಯವಹರಿಸುವಿರೆಂದು ಖಚಿತಪಡಿಸಿಕೊಳ್ಳಿ (ಇದಕ್ಕೆ ಸಕ್ರಿಯ ಅರ್ಜಿಯ ಅಗತ್ಯವಿದೆ). ಈ ರೀತಿಯ ಖಾತರಿ ಕರಾರು ಉದ್ದಿಮೆಯು ಇತರೆ ಬಹಳಷ್ಟು ಉಪ-ಗುತ್ತಿಗೆಯ, ಆಂತರಿಕ, ಚಿಲ್ಲರೆ ವ್ಯಾಪಾರದ ಹಾಗೂ ತೃತೀಯ ಪಕ್ಷೀಯ ಖಾತರಿ ಕರಾರು ಸಂಸ್ಥೆಗಳಿಗಿಂತಲೂ ಗಮನಾರ್ಹವಾಗಿ ಭಿನ್ನವಾಗಿದೆ, ಏಕೆಂದರೆ, ಇದು ಹೆಚ್ಚಿನ ಅಂಗಡಿ ದರವನ್ನೂ ಒಳಗೊಂಡು, ಮಾರಾಟಗಾರರೊಂದಿಗೆ ಸಂಬಂಧವಿಲ್ಲದ ದೇಶದಾದ್ಯಂತ ಅನ್ಯ ದುರಸ್ತಿ ತಜ್ಞರನ್ನು ಸಂಪರ್ಕಿಸಲು ಅವಕಾಶವಿದೆ. ವಿಮೆ ಮಾಡಿಸಿರುವ ಖಾತರಿ ಕರಾರುಗಳು ಆಗಾಗ್ಗೆ ದುರಸ್ತಿ, ಶ್ರಮ ದರಗಳು ಮತ್ತು ಬಳಸಲಾದ ಬಿಡಿ ಭಾಗಗಳಿಗಿಗಾಗಿ, ವಾಹನಗಳು ದುರಸ್ತಿಯಾಗುವ ಮುಂಚೆಯೇ ಹಣ ಪಾವತಿ ಮಾಡುತ್ತವೆ (ಮುಂಗಡ ಪಾವತಿ). ಇದರಿಂದಾಗಿ ವಾಹನ ಮಾಲಿಕರು ಪಾವತಿಸಬೇಕಾದ ಹಣದ ಮೊತ್ತ ಕಡಿಮೆ. ದುರಸ್ತಿಯಾದ ವಾಹನ ಅಥವಾ ಉತ್ಪನ್ನವನ್ನು ಕಾರ್ಯಾಗಾರದಿಂದ ತೆಗೆದುಕೊಳ್ಳುವಾಗ ಈ ಅಲ್ಪಮೊತ್ತವನ್ನು ಪಾವತಿಸುವರು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಮಾರುವವರ ಮತ್ತು ಕೊಳ್ಳುವವರ ಹಕ್ಕುಗಳು ಮತ್ತು ಪರಿಹಾರಗಳ ವ್ಯಾಪ್ತಿಯು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುವುದರಿಂದ, ಸಮಾನ ವಾಣಿಜ್ಯ ನಿಯಮಾವಳಿಗಳ ಕಲಂ 2ರ ವ್ಯಾಪ್ತಿಗೆ ಒಳಪಡುತ್ತದೆ. ಯುಸಿಸಿ ಸುವ್ಯಕ್ತ ಮತ್ತು ಸೂಚ್ಯಾರ್ಥದ - ಎರಡೂ ತರಹದ ಖಾತರಿ ಕರಾರುಗಳನ್ನೂ ವ್ಯಾಪಿಸುತ್ತದೆ. ಕೆಲವು ರೀತಿಯ ಖಾತರಿ ಕರಾರುಗಳ ಬಗ್ಗೆ ಮಾರಾಟಗಾರರು ಎಷ್ಟರ ಮಟ್ಟಿಗೆ ಹೊಣೆಗಾರಿಕೆಯ ಮಿತಿಯನ್ನು ನಿರ್ಣಯಿಸುವರು ಎಂಬುದನ್ನು ಸಹ ವ್ಯಾಪಿಸುತ್ತದೆ. ಉದಾಹರಣೆಗೆ, ವ್ಯಾಪಾರದ ಖಾತರಿ ಕರಾರು ಅಥವಾ ನಿರ್ದಿಷ್ಟ ಉದ್ದೇಶಕ್ಕಾಗಿ ಅರ್ಹತೆ ಅಥವಾ, ಹೇಗಿದೆಯೋ ಹಾಗೆ ಮಾರಾಟವಾದ ಉತ್ಪನ್ನಗಳ ವಿಚಾರದಲ್ಲಿ ಎಲ್ಲಾ ಖಾತರಿ ಕರಾರುಗಳನ್ನು ಹೊಣೆ ಮಿತಿ ಅನ್ವಯಿಸಬಹುದು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಕಾನೂನುಗಳ ನಿಬಂಧನೆಗಳಿಗೆ ಒಳಪಡುವಂತೆ, ಖಾತರಿ ಕರಾರುಗಳನ್ನು ನೀಡಲಾಗುತ್ತದೆ. ಇತರೆ ದೇಶಗಳಲ್ಲಿ, ಖಾತರಿ ಕರಾರುಗಳು ವಿಶಿಷ್ಟ ಶಾಸನಗಳಿಗೆ ಒಳಪಡುತ್ತವೆ. ಉದಾಹರಣೆಗೆ, ದೇಶದ ಕಾನೂನಿನಡಿ, ಮಾರುವವರು ತಾವು ಮಾರುವ ಉತ್ಪನ್ನಗಳ ಮೇಲೆ ಹನ್ನೆರಡು ತಿಂಗಳುಗಳ ಭರವಸೆ ನೀಡಿ, ಉತ್ಪನ್ನವು ವಿಫಲವಾದಲ್ಲಿ, ಇತರೆ ವಿಶಿಷ್ಟ ಹಕ್ಕುಗಳು ಅಥವಾ ಪರಿಹಾರ ನೀಡಬಹುದಾಗಿದೆ. ಆದರೂ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲೂ ಸಹ ಕೆಲವು ವಿಶಿಷ್ಟ ಕಾನೂನುಗಳಿವೆ, ಕೊಳ್ಳುವವರಿಗೆ ಖಾತರಿ ಕರಾರುಗಳು ಅಥವಾ ಖಾತರಿ ಕರಾರಿನಂತಹ ಭರವಸೆ ನೀಡುತ್ತವೆ. ಉದಾಹರಣೆಗೆ, ಹಲವು ರಾಜ್ಯಗಳಲ್ಲಿ ಹೊಸ ಗೃಹ ನಿರ್ಮಾಣಕ್ಕೆ ಶಾಸನಬದ್ಧ ಖಾತರಿ ಕರಾರುಗಳಿವೆ. ಹಲವು ರಾಜ್ಯಗಳಲ್ಲಿ, ಪದೇ ಪದೇ ಕೆಡುವ ಮೊಟಾರ್ ವಾಹನಗಳನ್ನು ವ್ಯಾಪಿಸುವ Lemon lawಗಳಿವೆ.
ಸಂಕೀರ್ಣ ವಾಣಿಜ್ಯ ವ್ಯವಹಾರಗಳಲ್ಲಿ, ಕೊಳ್ಳುವವರು ಮತ್ತು ಮಾರುವರು ಪರಸ್ಪರ ವಿಶಿಷ್ಟ ನಿರೂಪಣೆಗಳು ಮತ್ತು ಖಾತರಿ ಕರಾರು ಮಾಡಬಹುದು. ಸಾಮಾನ್ಯ ಭಾಷೆಯಲ್ಲಿ, ಇವನ್ನು 'ನಿರೂಪಣೆಗಳು ಮತ್ತು ಖಾತರಿ ಕರಾರುಗಳು' ಎನ್ನಲಾಗಿದೆ. ಒಂದು ಪಕ್ಷವು ಇನ್ನೊಂದಕ್ಕೆ ನೀಡುವ ನಿರ್ದಿಷ್ಟ ಭರವಸೆಗಳಿವು, ಇನ್ನೊಂದು ಪಕ್ಷವು ಮೊದಲನೆಯ ಪಕ್ಷವು ನೀಡುವ ಭರವಸೆಯನ್ನು ಅವಲಂಬಿಸುವುದು. ಈ ಸಂದರ್ಭದಲ್ಲಿ, ನಿರೂಪಣೆಯೆಂದರೆ, ವಿಶಿಷ್ಟ ಮಾಹಿತಿಗಳ ಘೋಷಣೆ, ಇವನ್ನು ನಿಜವೋ ಅಲ್ಲವೋ ಎಂದು ಪರಿಶೀಲಿಸಬಹುದಾಗಿದೆ. ಉದಾಹರಣೆಗೆ, 'ಡೆಲಾವೆರ್ ರಾಜ್ಯದ ಕಾನೂನುಗಳಡಿ ಸಂಘಟಿಸಲಾದ ಮತ್ತು ಸಿಂಧುವಾಗಿರುವ ಸಂಸ್ಥೆಯೆಂದು ಮಾರಾಟಗಾರರು ನಿರೂಪಿಸುತ್ತಾರೆ' ಎಂಬ ಹೇಳಿಕೆ. ಇಲ್ಲಿ, ಖಾತರಿ ಕರಾರು ಎಂಬುದು ಬಹುಶಃ ಭರವಸೆಯೆಂದಾಗುವುದು. ಉದಾಹರಣೆಗೆ, 'ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳು ಗೌಪ್ಯತಾ ಕರಾರುಗಳಿಗೆ ಬದ್ಧರಾಗಿರುತ್ತಾರೆ. ಗೌಪ್ಯತೆಯ ಉಲ್ಲಂಘನೆಯಾದಲ್ಲಿ ಪೂರೈಕೆದಾರರು ಪರಿಹಾರ ಕೋರಲು ಅವಕಾಶವಿದೆ.' ಆಗಾಗ್ಗೆ, ನಿರೂಪಣೆಗಳು ಮತ್ತು ಖಾತರಿ ಕರಾರುಗಳು ನಿಖರವಾಗಿರದಿದ್ದಲ್ಲಿ ಅಥವಾ ಪಾಲಿಸದಿದ್ದಲ್ಲಿ, ವಿಶಿಷ್ಟ ಪರಿಹಾರಗಳು ಅಥವಾ ಪರಿಣಾಮಗಳನ್ನು ಸೂಚಿಸಲಾಗಿದೆ. ಉದಾಹರಣೆಗೆ, ಮಾರಲಾಗುತ್ತಿರುವ ಉತ್ಪನ್ನದ ಮೇಲೆ ಮಾರುವವರ ಸಂಪೂರ್ಣ ಹಕ್ಕು ಮತ್ತು ಅಧಿಕಾರಗಳಿವೆ, ಮಾರಾಟಗಾರರು ವ್ಯವಹಾರದಲ್ಲಿ ಮುಂದುವರೆಯಲು ಯಾವುದೇ ಕಾನೂನಿನ ಅಡ್ಡಿಯಿಲ್ಲ ಎಂಬುದನ್ನು ಮಾರಾಟಗಾರರು ನಿರೂಪಿಸಬಹುದು. ಒಂದು ವೇಳೆ ಮಾರಾಟಗಾರರು ಸಂಪೂರ್ಣ ಹಕ್ಕು ಹೊಂದಿರದಿದ್ದಲ್ಲಿ, ಅಥವಾ ಮಾರಾಟವನ್ನು ನಿರ್ಬಂಧಿಸುವ ಇನ್ಯಾವುದೋ ಕರಾರಿಗೆ ಬದ್ಧರಾಗಿದ್ದು, ಕೊಳ್ಳುವವರ ಸ್ವಾಮ್ಯಕ್ಕೆ ತೊಂದರೆಯಾದಲ್ಲಿ, ಕರಾರಿನಡಿ ಕೊಳ್ಳುವವರು ಮಾರುವವರಿಂದ ಪರಿಹಾರ ಕೇಳಿ ಪಡೆಯಬಹುದು. ಈ ವ್ಯವಹಾರಗಳಿಗೆ ಸಂಬಂಧಿತ ಎಲ್ಲರೂ ಸಾಮಾನ್ಯವಾಗಿ ಇಂತಹ ವಿಚಾರಗಳ ಬಗ್ಗೆ ಖಾತರಿ ಕರಾರುಗಳು ಮತ್ತು ನಿರೂಪಣೆಗಳನ್ನು ಕೋರುವರು. ನಿರೂಪಣೆ ಮತ್ತು ಖಾತರಿ ಕರಾರು ಮಾಡುವ ಪರಿಣಾಮವಾಗಿ, ಸಂಬಂಧಿತರೆಲ್ಲರೂ ಸಹ ಸಾಮಾನ್ಯವಾಗಿ ತಾವು ಮಾಡುವ ಕರಾರುಗಳಿಗೆ ಮಿತಿ ನಿರ್ಣಯಿಸಲು ಯತ್ನಿಸುತ್ತಾರೆ. ಕರಾರಿನ ನಿಬಂಧನೆಗಳ ಬಗ್ಗೆ ಇವೆರಡೂ ಅಭಿಪ್ರಾಯಗಳ ನಡುವಿನ ಘರ್ಷಣೆಯು, ವ್ಯವಹರಿಸುವ ಪಕ್ಷಗಳ ನಡುವಿನ ಮಾತುಕತೆಗಳ ಮಾರ್ಗವನ್ನು ಸುಗಮಗೊಳಿಸಲು ನೆರವಾಗುತ್ತದೆ.
ಕಾರು ಖಾತರಿ ಕರಾರಿನ ಅವಧಿ ಕನಿಷ್ಠ ಒಂದು ವರ್ಷದಿಂದ ಹಿಡಿದು, ಸರ್ವೇಸಾಮಾನ್ಯವಾದ ಮೂರು ವರ್ಷಗಳು ಹಾಗು ವಿಸ್ತಾರಿತವಾದ ಐದು ವರ್ಷ ಅವಧಿಯ ತನಕ ವ್ಯಾಪಿಸುತ್ತದೆ. ಕೆಲವು ಕಾರು ತಯಾರಕರು ಸುಮಾರು ಹತ್ತು ವರ್ಷಗಳ ಕಾಲ ಕರಾರು ನೀಡುವುದಂಟು. ತಯಾರಕರ ಮತ್ತು ದುರಸ್ತಿ ಖಾತರಿ ಕರಾರುಗಳನ್ನು ಆಧರಿಸಿ, ಕ್ರೇಟ್ ಇಂಜಿನ್ ತಯಾರಕರು ಸಹ ಖಾತರಿ ನೀಡುವರು.
ಕೆಲವು ಸಂಸ್ಥೆಗಳು ವಿಸ್ತಾರಿತ ಖಾತರಿ ಕರಾರುಗಳು ಅಥವಾ ಹನ್ನೆರಡು ವರ್ಷಗಳಷ್ಟು ಹಳೆಯ ಕಾರುಗಳಿಗೆ ಬಳಸಿದ ಕಾರು ಖಾತರಿ ಕರಾರು ಗಳನ್ನು ನೀಡುತ್ತವೆ. ಇದಕ್ಕೆ ವಿಸ್ತಾರಿತ ಖಾತರಿ ಕರಾರು ಎನ್ನಲಾಗುತ್ತದೆ. ಉತ್ಪಾದಕರ ಹೊರತುಪಡಿಸಿದ ಖಾತರಿ ಕರಾರುಗಳನ್ನು ತಾಂತ್ರಿಕವಾಗಿ ಮೋಟಾರು ವಾಹನ ಸೇವಾ ಕರಾರು ಅಥವಾ ಸೇವಾ ಕರಾರು ಎನ್ನಲಾಗುತ್ತದೆ.
ಮನೆ ಮತ್ತು ಉತ್ಪನ್ನ ದುರಸ್ತಿಯ ವೆಚ್ಚ ತೀವ್ರ ಹೆಚ್ಚಾದಲ್ಲಿ ಗೃಹ ಖಾತರಿ ಕರಾರು ರಕ್ಷಿಸುತ್ತದೆ. ಇದು ಮನೆಗಳು, ಪಟ್ಟಣದ ಮನೆಗಳು, ಸಹಸ್ವಾಮ್ಯಭವನಗಳು ಹಾಗೂ ಹೊಸದಾಗಿ ನಿರ್ಮಿತವಾದ ಮನೆಗಳಿಗೆ ಖಾತರಿ ಕರಾರು ವ್ಯಾಪ್ತಿ ಒದಗಿಸುತ್ತದೆ. ಕರಾರು ವ್ಯಾಪ್ತಿಯಲ್ಲಿರುವ ಉತ್ಪನ್ನ ಅಥವಾ ಹವಾನಿಯಂತ್ರಕ ಅಥವಾ ಕುಲುಮೆಯಂತಹ ಯಾಂತ್ರಿಕ ವ್ಯವಸ್ಥೆಗಳಲ್ಲಿ ದೋಷವುಂಟಾದಲ್ಲಿ, ಉಪಕರಣ ದುರಸ್ತಿ ತಂತ್ರಜ್ಞರು ಇದನ್ನು ಸರಿಪಡಿಸುವರು ಅಥವಾ ಬದಲಾಯಿಸುವರು. ಮನೆಯ ಒಡೆಯರು ಈ ಸೇವೆಗೆ ಶುಲ್ಕ ನೀಡುವರು. ಗೃಹ ಖಾತರಿ ಕರಾರು ಸಂಸ್ಥೆಯು ಶುಲ್ಕದ ಬಾಕಿ ಮೊತ್ತವನ್ನು ನೀಡುವುದು.
{{cite news}}
: Missing or empty |title=
(help)