ಖುರ್ಜಾ | |
---|---|
ನಗರ | |
Coordinates: 28°15′8″N 77°51′6.41″E / 28.25222°N 77.8517806°E | |
ದೇಶ | ![]() |
ರಾಜ್ಯ | ಉತ್ತರ ಪ್ರದೇಶ |
ಜಿಲ್ಲೆ | ಬುಲಂದ್‌ಶಹರ್ |
Founded by | ಮುಘಲ್ ಸಾಮ್ರಾಜ್ಯದ ಖೇಶ್‍ಗಿ ರಾಜವಂಶ |
Government | |
• ಎಂಎಲ್ಎ | ಮೀನಾಕ್ಷಿ ಸಿಂಗ್ (ಬಿಜೆಪಿ) |
• ಎಂಪಿ | ಡಾ. ಮಹೇಶ್ ಶರ್ಮಾ (ಬಿಜೆಪಿ) |
Population (2011) | |
• Total | ೧,೪೨,೬೩೬ |
ಭಾಷೆಗಳು | |
• ಅಧಿಕೃತ | ಹಿಂದಿ |
Time zone | UTC+5:30 (IST) |
ಪಿನ್ | 203131 |
ದೂರವಾಣಿ ಸಂಕೇತ | (+91)5738 |
Vehicle registration | UP-13 |
ಖುರ್ಜಾ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಒಂದು ಪಟ್ಟಣ. ದೆಹಲಿಯ ಆಗ್ನೇಯಕ್ಕೆ (45) ಮೈ. ದೂರದಲ್ಲಿದೆ. ಜನಸಂಖ್ಯೆ 142,636 (2011). ಇದು ಅನೇಕ ರಾಷ್ಟ್ರೀಯ ಹೆದ್ದಾರಿಗಳ ಕೂಡುದಾಣ; ಪ್ರಮುಖ ವ್ಯಾಪಾರಕೇಂದ್ರ. ಇದರ ಸುತ್ತಣ ಪ್ರದೇಶದ ಮುಖ್ಯ ಉತ್ಪನ್ನಗಳಾದ ಗೋದಿ, ಬಾರ್ಲಿ, ಜೋಳ, ಹತ್ತಿ, ಕಬ್ಬು ಇವು ಇಲ್ಲಿ ಮುಖ್ಯವಾಗಿ ವ್ಯಾಪಾರವಾಗುತ್ತವೆ. ಇಲ್ಲಿ ಅನೇಕ ಹತ್ತಿ ಗಿರಿಣಿಗಳುಂಟು. ಕಲಾತ್ಮಕ ಮಣ್ಣಿನ ಪಾತ್ರೆಗಳ ತಯಾರಿಕೆಗೂ ಖುರ್ಜಾ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಸುಂದರ ಜೈನ ದೇವಾಲಯ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತದೆ.
ಖುರ್ಜಾ ನಮ್ಮ ದೇಶದಲ್ಲಿ ಬಳಸಲಾದ ಪಿಂಗಾಣಿ ಸಾಮಾನುಗಳ ದೊಡ್ಡ ಭಾಗವನ್ನು ಪೂರೈಸುತ್ತದೆ. ಹಾಗಾಗಿ ಇದನ್ನು ಕೆಲವೊಮ್ಮೆ ಪಿಂಗಾಣಿ ನಗರ ಎಂದು ಕರೆಯಲಾಗುತ್ತದೆ. ಈ ನಗರವು "ಖುರ್ಚನ್" ಎಂದು ಕರೆಯಲಾಗುವ ಒಂದು ವಿಶೇಷ ಸಿಹಿತಿನಿಸಿಗೆ ಕೂಡ ಪ್ರಸಿದ್ಧವಾಗಿದೆ.[೧]