ಜಾನ್ ಬೆಗ್(೧೮೭೮-೧೯೨೬)ಪ್ರಸಿದ್ಧ ವಾಸ್ತುಶಿಲ್ಪಿ.
ಜಾನ್ ಬೆಗ್ರವರು ಸ್ಕಾಟ್ಲ್ಯಾಂಡ್ನ ಬ್ಲೇರ್ ಆಥೋಲ್ನಲ್ಲಿ ಜನಿಸಿದರು.
ಜಾನ್ ಬೆಗ್ರವರು ಭಾರತಕ್ಕೆ ೧೯೦೧ ರಲ್ಲಿ, 'ಕನ್ಸಲ್ಟಿಂಗ್ ಆರ್ಕಿಟೆಕ್ಟ್,' ಆಗಿ ಬಂದರು. ೧೯೦೬ ರಲ್ಲಿ, ಭಾರತ ಸರ್ಕಾರಕ್ಕೆ 'ಕನ್ಸಲ್ಟಿಂಗ್ ಆರ್ಕಿಟೆಕ್ಟ್' ಆಗಿ ನೇಮಿಸಲ್ಪಟ್ಟರು. ಮುಂಬಯಿ ನಗರದ ಹಲವಾರು ಕಟ್ಟಡಗಳನ್ನು "ಇಂಡೋ-ಸಾರ್ಸೆನಿಕ್" ಶೈಲಿಯಲ್ಲಿ, ನಿರ್ಮಿಸಲು ಅವರ ಜೊತೆಯಾದವರು, 'ಜಾರ್ಜ್ ವಿಟೆಟ್' ರವರು. " ಜನರಲ್ ಪೋಸ್ಟ್ ಆಫೀಸ್ " ಕಟ್ಟಡ, 'ಬೆಗ್' ರವರ ಅತ್ಯಂತ ಪ್ರಿಯವಾದ ಕಟ್ಟಡಗಳಲ್ಲೊಂದು. ಅದನ್ನು ಬಿಜಾಪುರದ ಗೋಲ್ ಗುಂಬಝ್ ಶೈಲಿಯಲ್ಲಿ ನಿರ್ಮಿಸಿ ಅವರು ಹೆಸರುಮಾಡಿದರು. ಮುಂದೆ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್ [೧] ನಿರ್ಮಿಸುವ ಸಮಯದಲ್ಲಿ ಅವರ ಯುವ-ಮಿತ್ರ 'ವಿಟೆಟ್' ರವರನ್ನು ಬಿಜಾಪುರಕ್ಕೆ, 'ಗೋಲ್ ಗುಂಬಝ್,' ನ ಬಗ್ಗೆ ವಿಶೇಷಮಾಹಿತಿ ಸಂಗ್ರಹಿಸಲು, ಕಳಿಸಲು ಸರ್ಕಾರಕ್ಕೆ ಶಿಫಾರಿಸು ಮಾಡಿದ್ದರು. ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ (ಈಗ ಇದರ ಹೆಸರನ್ನು " ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ" ವೆಂದು ಬದಲಾಯಿಸಲಾಗಿದೆ.) ದ ವಿಶೇಷ ಗೋಲಾಕೃತಿಯ ಗೋಪುರ ಎಲ್ಲರ ಮೆಚ್ಚುಗೆಯನ್ನು ಗಳಿಸಿತು.
ಜಾನ್ ಬೆಗ್ರವರು ೧೯೨೬ ರಲ್ಲಿ, ಮುಂಬಯಿನಗರನಲ್ಲಿ ಮೃತರಾದರು.[೨]