ತಹರಿ (ತೆಹರಿ) ಅವಧಿ ಪಾಕಪದ್ಧತಿಯಲ್ಲಿ ಹಳದಿ ಬಣ್ಣದ ಅಕ್ಕಿ ಖಾದ್ಯವಾಗಿದೆ. ರುಚಿ ಮತ್ತು ಬಣ್ಣಕ್ಕಾಗಿ ಸಾದಾ ಅನ್ನಕ್ಕೆ ಸಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ. ತಹರಿಯ ಒಂದು ರೂಪದಲ್ಲಿ, ಅನ್ನಕ್ಕೆ ಆಲೂಗಡ್ಡೆಗಳನ್ನು ಸೇರಿಸಲಾಗುತ್ತದೆ.[೧] ಈ ಖಾದ್ಯವು ಹೈದರಾಬಾದ್ ಮತ್ತು ನಾಂದೇಡ್‍ನಲ್ಲಿ ಅತ್ಯಂತ ಜನಪ್ರಿಯವಾಗಿದೆ.
ತಹರಿ ಬಿರಿಯಾನಿಯ ಸಸ್ಯಾಹಾರಿ ರೂಪಕ್ಕೆ ನೀಡಲಾದ ಹೆಸರಾಗಿದೆ. ಇದನ್ನು ವಿವಿಧ ಬಗೆಯ ಮಾಂಸಗಳು ಮತ್ತು ಹಸಿರು ಬಟಾಣಿಗಳಿಂದಲೂ ತಯಾರಿಸಬಹುದು.
ಎರಡನೇ ಮಹಾಯುದ್ಧದ ವೇಳೆ ಮಾಂಸದ ಬೆಲೆಗಳು ಗಣನೀಯವಾಗಿ ಏರಿದಾಗ ಬಿರಿಯಾನಿಯಲ್ಲಿ ಜನಪ್ರಿಯ ಬದಲಿ ಪದಾರ್ಥವಾದಾಗ ತೆಹರಿ ಹೆಚ್ಚು ಜನಪ್ರಿಯವಾಯಿತು.[೨]
ಬಿರಿಯಾನಿಯನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನದಲ್ಲಿ ಅಕ್ಕಿಯನ್ನು ಮಾಂಸಕ್ಕೆ ಸೇರಿಸಲಾಗುತ್ತದೆ. ಆದರೆ ತೆಹರಿಯನ್ನು ತಯಾರಿಸುವಾಗ ಅನ್ನಕ್ಕೆ ಆಲೂಗಡ್ಡೆಗಳನ್ನು ಸೇರಿಸಲಾಗುತ್ತದೆ.