ಹಿಂದು ಸಂಪ್ರದಾಯದಲ್ಲಿ ಮೊದಲಿನಿಂದಲು ಈ ಕಲೆಯನ್ನು ಕಲೆತು ಎಷ್ಟೊ ಗುರುಕುಲ ಪದ್ಧತಿಯಲ್ಲಿ ಮಹಾ ಜ್ಞಾನದ ಮುಟೆ ಹೊತ್ತು ಬಾಳುತ್ತಿದ್ದರು. ತ್ರಾಟಕ ಸಣ್ಣ ವಸ್ತು, ಕಪ್ಪು ಬಿಂದು ಅಥವಾ ಮೇಣದ ಬತ್ತಿಯ ಜ್ವಾಲೆಯಂತಹ ಒಂದು ಒಂಟಿ ಬಿಂದುವನ್ನು ಎವೆಯಿಕ್ಕದೆ ನೋಡುವುದನ್ನು ಒಳಗೊಂಡ ಧ್ಯಾನದ ಒಂದು ವಿಧಾನ. ಇದು ಆಜ್ಞಾಚಕ್ರಕ್ಕೆ ಶಕ್ತಿ ತರುವುದು ಮತ್ತು ವಿವಿಧ ಅತೀಂದ್ರಿಯ ಸಾಮರ್ಥ್ಯಗಳನ್ನು ವೃದ್ಧಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ.[೧]
ನೋಟವನ್ನು ಸ್ಥಿರೀಕರಿಸುವುದರಿಂದ ಪ್ರಕ್ಷುಬ್ಧ ಮನಸ್ಸು ನಿಲುಗಡೆಗೆ ಬರುತ್ತದೆ. ಕಣ್ಣುರೆಪ್ಪೆಯ ಪ್ರತಿವರ್ತನದ ನಿಯಂತ್ರಣ ಪೀನಿಯಲ್ ಗ್ರಂಥಿಯನ್ನು ಪ್ರಚೋದಿಸುತ್ತದೆ ಎಂದು ಹೇಳಲಾಗಿದೆ. ಕೆಲವು ವಿದ್ವಾಂಸರು ಈ ಗ್ರಂಥಿಯನ್ನು ಮೂರನೇ ಕಣ್ಣಿನೊಂದಿಗೆ ಗುರುತಿಸುತ್ತಾರೆ. ತ್ರಾಟಕ ಏಕಾಗ್ರವಾಗಿರುವ ಸಾಮರ್ಥ್ಯವನ್ನು ವರ್ಧಿಸುತ್ತದೆ ಎಂದು ಹೇಳಲಾಗಿದೆ. ಅದು ಸ್ಮರಣಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಮನಸ್ಸನ್ನು ಅರಿವು, ಗಮನ ಮತ್ತು ಕೇಂದ್ರೀಕರಣದ ಸ್ಥಿತಿಯಲ್ಲಿ ತರಬಹುದು.
ಅಭ್ಯಾಸಿಯು ಗಮನವನ್ನು ಸಂಕೇತ ಅಥವಾ ಓಂನಂತಹ ಒಂದು ಯಂತ್ರ, ಕಪ್ಪು ಬಿಂದು, ಯಾವುದಾದರೂ ದೇವರ ಅಥವಾ ಗುರುವಿನ ಚಿತ್ರ, ಜ್ವಾಲೆ, ಕನ್ನಡಿ ಮೇಲೆ ನೆಡಬಹುದು ಮತ್ತು ಅದನ್ನು ಎವೆಯಿಕ್ಕದೆ ಸೋಡಬೇಕು. ಮೇಣದ ಬತ್ತಿ ಮೂರರಿಂದ ನಾಲ್ಕು ಅಡಿ ದೂರವಿರಬೇಕು, ಮತ್ತು ಜ್ವಾಲೆ ಕಣ್ಣಿನ ಮಟ್ಟಕ್ಕಿರಬೇಕು. ಸಡಿಲವಾಗಿರಿ ಆದರೆ ಬೆನ್ನು ನೇರವಾಗಿಡಿ ಮತ್ತು ಜಾಗೃತ ಹಾಗೂ ಜಾಗರೂಕರಾಗಿರಿ. ಕಣ್ಣಲ್ಲಿ ನೀರು ಬರಲು ಆರಂಭವಾಗುತ್ತದೆ. ಆಗ ಕಣ್ಣುಗಳನ್ನು ಮುಚ್ಚಿ ತರುಬಿಂಬದ ಮೇಲೆ ಗಮನಹರಿಸಬೇಕು ಎಂದು ಕೆಲವು ವಿದ್ವಾಂಸರು ಹೇಳಿದರೆ, ಇತರರು ೩೦-೪೦ ನಿಮಿಷ ಎವೆಯಿಕ್ಕದೆ ನೋಡುವುದನ್ನು ಪಟ್ಟುಹಿಡಿದು ಮಾಡಬೇಕು ಎಂದು ಹೇಳುತ್ತಾರೆ. ಕೀಪುಮಾ ಸಮರಕಲೆ ಗುರುಕುಲದಲ್ಲಿ ಈ ಕಲೆಗೆ ಅತಿಹೆಚ್ಚು ಮಹತ್ವವಿದ್ದು ಹಿಂದುದರ್ಮದ ಈ ಮಹಾ ಅತ್ಯದ್ಭುತ ಕಲೆಯನ್ನು ಕಲಿಸಲಾಗುತ್ತದೆ. ಈ ಕಲೆಯನ್ನು ಕಲಿತವರಲ್ಲಿ ಆಧ್ಯಾತ್ಮಿಕ ಚಮತ್ಕಾರಿಕ ಶಕ್ತಿಗಳನ್ನು ಕಾನಬಹುದು. ತ್ರಾಟಕ ಎಂಬುದು ಕೀಪುಮಾ ಸಮರಕಲೆಯ ಮುಕ್ತಿಕಲೆಯ ಮೂರನೆಯ ಮೆಟ್ಟಿಲು.