ಥೆನ್‍ಜ಼ಾಲ್ ಭಾರತದ ಮಿಝೋರಂ ರಾಜ್ಯದ ಸೆರ್ಛಿಪ್ ಜಿಲ್ಲೆಯಲ್ಲಿರುವ ಒಂದು ಸೆನ್ಸ ಪಟ್ಟಣವಾಗಿದೆ. ಇದು ಸಾಂಪ್ರದಾಯಿಕ ಮಿಜ಼ೊ ಕೈಮಗ್ಗ ಕೈಗಾರಿಕೆಗೆ ಪ್ರಮುಖ ಕೇಂದ್ರವಾಗಿದೆ.[೧] ಥೆನ್‍ಜ಼ಾಲ್ ಮಿಝೊರಮ್‍ನ ರಾಜಧಾನಿ ಐಝ್ವಾಲ್‍ನಿಂದ ೯೦ ಕಿ.ಮಿ. ದೂರದಲ್ಲಿದೆ.
ಈ ಪ್ರದೇಶದಲ್ಲಿನ ಪ್ರವಾಸಿ ತಾಣಗಳಲ್ಲಿ ಈ ಕೆಳಗಿನವು ಸೇರಿವೆ:
ವಾಂತಾಂಗ್ ಜಲಪಾತ - ಇದು ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ.[೨]
ಬೆಂಗ್‍ಖುವಾಯ್ಯಾ ಥ್ಲಾನ್ - ಥೆನ್‍ಜ಼ಾಲ್‍ನ ಸ್ಥಾಪಕನಾದ ಬೆಂಗ್‍ಖುವಾಯ್ಯಾ ೧೮೭೧ರಲ್ಲಿ ಮೇರಿ ವಿಂಚೆಸ್ಟರ್‌ನ್ನು ಅಪಹರಿಸಿದನು. ಇದರಿಂದ ಬ್ರಿಟೀಷರು ಮಿಝೋರಂಗೆ ಆಗಮಿಸಿದರು.[೩]
ವೈಬಿಯಾಕ್ - ಈ ಸ್ಥಳದಿಂದ ಅವರು ಮೇರಿ ವಿಂಚೆಸ್ಟರ್‌ನ್ನು ವಾಪಸು ಕರೆದೊಯ್ದರು.[೪]
ಟುವಾಲ್ವುಂಗಿ ಥ್ಲಾನ್ - ಫೂಲ್‍ಪುಯಿ ಗ್ರಾಮದಲ್ಲಿ ಎರಡು ಗೋರಿಗಳಿವೆ. ಪ್ರಸಿದ್ಧ ಸುಂದರಿ ಥೆನ್‍ಜ಼ಾಲ್‍ನ ಟುವಾಲ್ವುಂಗಿಯನ್ನು ಫೂಲ್‍ಪುಯಿಯ ಮುಖಂಡ ಜ಼ಾಲ್‍ಪಾಲಾ ಮದುವೆಯಾದನು. ಇವರು ಒಬ್ಬರನ್ನೊಬ್ಬರು ಬಹಳ ಪ್ರೇಮಿಸುತ್ತಿದ್ದರು. ಇಲ್ಲಿ ಇವರಿಬ್ಬರ ಗೋರಿಗಳಿವೆ.
ಚಾಂಗ್‍ಚಿಲ್ಹಿ ಪುಕ್ - ಒಬ್ಬ ಸ್ತ್ರೀ ಮತ್ತು ಒಂದು ಹಾವಿನ ನಡುವಿನ ಪ್ರೇಮ ಕಥೆಗೆ ಸಂಬಂಧಿಸಿದ ಒಂದು ಗುಹೆ.[೫][೬][೭]
ಟ್ಯೂರಿಹ್ಯೌ ಜಲಪಾತ - ವಾಂತಾಂಗ್ ಜಲಪಾತದ ಮೇಲ್ಪ್ರದೇಶದಲ್ಲಿ, ಥೆನ್‍ಜ಼ಾಲ್ ಹತ್ತಿರವಿರುವ ಒಂದು ಸುಂದರ ಜಲಪಾತ.[೮]
ಥೆನ್‍ಜ಼ಾಲ್ ಜಿಂಕೆ ಉದ್ಯಾನ - ಇದು ನೈಸರ್ಗಿಕ ಪರಿಸರದಲ್ಲಿ ೧೭ ಜಿಂಕೆಗಳನ್ನು ಹೊಂದಿದೆ.[೯]