ದಿಪಾಲಿ ಬಾರ್ಥಕುರ್ (೩೦ ಜನವರಿ ೧೯೪೧ - ೨೧ ಡಿಸೆಂಬರ್ ೨೦೧೮) ಅಸ್ಸಾಂನ ಭಾರತೀಯ ಗಾಯಕಿ. ಆಕೆಯ ಹಾಡುಗಳನ್ನು ಮುಖ್ಯವಾಗಿ ಅಸ್ಸಾಮಿ ಭಾಷೆಯಲ್ಲಿ ಇವೆ. [೧] ಅವರು ೧೯೯೮ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಇವರು ಪಡೆದರು. [೨]
ಬಾರ್ಥಕುರ್ ಅವರು ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೫೮ ರಲ್ಲಿ ಅವರು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ, ಅವರು ಆಲ್ ಇಂಡಿಯಾ ರೇಡಿಯೋ, ಗುವಾಹಟಿಯಲ್ಲಿ [೪] "ಮೋರ್ ಬೋಪೈ ಲಹೋರಿ" ಹಾಡನ್ನು ಹಾಡಿದರು. ಲಚಿತ್ ಬೋರ್ಫುಕನ್ (೧೯೪೯) ಚಿತ್ರಕ್ಕಾಗಿ "ಜೌಬೋನ್ ಅಮೋನಿ ಕೋರೆ ಚೆನೈದೋನ್" ಹಾಡನ್ನು ಹಾಡಿದ್ದಾರೆ. [೬]
ಬಾರ್ಥಕುರ್ ೧೯೬೯ ರಲ್ಲಿ ತನ್ನ ಕೊನೆಯ ಹಾಡು "ಲುಯಿಟೊ ನೆಜಾಬಿ ಬೋಯಿ" [೪] ಎಂಬುದನ್ನು ಹಾಡಿದರು. ಅದರ ನಂತರ ಅವರು ತೀವ್ರವಾದ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದು, ಅದು ಅವರ ಗಾಯನಕ್ಕೆ ಅಡ್ಡಿಯಾಯಿತು ಮತ್ತು ಗಾಲಿಕುರ್ಚಿಯನ್ನು ಬಳಸುವಂತೆ ಮಾಡಿತು. ೧೯೭೬ ರಲ್ಲಿ ಅವರು ಅಸ್ಸಾಂನ ಪ್ರಸಿದ್ಧ ಭಾರತೀಯ ಕಲಾವಿದ ಮತ್ತು ವರ್ಣಚಿತ್ರಕಾರ ಮತ್ತು ಹೆಸರಾಂತ ಅಸ್ಸಾಮಿ ಬರಹಗಾರ ಬಿನಂದ ಚಂದ್ರ ಬರುವಾ ಅವರ ಪುತ್ರ ನೀಲ್ ಪವನ್ ಬರುವಾ ಅವರನ್ನು ವಿವಾಹವಾದರು. [೧][೭] ಬಾರ್ಥಕುರ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುವಾಹಟಿಯ ನೆಮ್‌ಕೇರ್ ಆಸ್ಪತ್ರೆಯಲ್ಲಿ ೨೧ ಡಿಸೆಂಬರ್ ೨೦೧೮ ರಂದು ನಿಧನರಾದರು[೮] ಆಕೆಯನ್ನು "ನೈಟಿಂಗೇಲ್ ಆಫ್ ಅಸ್ಸಾಂ" ಎಂದು ಕರೆಯಲಾಗುತ್ತಿತ್ತು. [೯]
↑"Padma Awards"(PDF). Ministry of Home Affairs, Government of India. 2015. Archived from the original(PDF) on 15 November 2014. Retrieved 21 July 2015.