ದೀಪಾ ಸನ್ನಿಧಿ | |
---|---|
Born | ರಹಸ್ಯ ಚಿಕ್ಕಮಗಳೂರು, ಕರ್ನಾಟಕ, ಭಾರತ |
Nationality | ಭಾರತೀಯ |
Occupation | ಚಲನಚಿತ್ರ ನಟಿ |
ದೀಪಾ ಸನ್ನಿಧಿ ಹುಟ್ಟುಹೆಸರು ರಹಸ್ಯ, ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುವ ಭಾರತೀಯ ನಟಿ. 2011ರ ಸಾರಥಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು [೧]
ರಹಸ್ಯ ರವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನ್ನಡ-ಮಾತನಾಡುವ ಕುಟುಂಬದಲ್ಲಿ ಹುಟ್ಟಿದರು. ಇವರ ತಂದೆ ಶಶಿಧರ್ ಕಾಫಿ ತೋಟದ ಮಾಲೀಕರು ಮತ್ತು ತಾಯಿ ನಂದ ಗೃಹಿಣಿ. ಬೆಂಗಳೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ಮಂಗಳೂರಿನ ಸೇಂಟ್ ಅಲೋಶಿಯಾಸ್ ಕಾಲೇಜಿನ ವಿದ್ಯಾರ್ಥಿ. [೨]
ದೀಪ ಸನ್ನಿಧಿಯವರು ತಮ್ಮ ಮೊದಲ ವರ್ಷದ ವಾಸ್ತುಶಿಲ್ಪ ಇಂಜಿನಿಯರಿಂಗ್ ಓದುತ್ತಿದ್ದಾಗ ಸಾರಥಿ ಚಿತ್ರದಲ್ಲಿ ನಟಿಸಲು ಅವಕಾಶ ಪಡೆದರು, ಚಿತ್ರರಂಗದಲ್ಲಿ ವೃತ್ತಿ ಮುಂದುವರಿಸಲು ಕಾಲೇಜು ಮತ್ತು ವಿದ್ಯಾಭ್ಯಾಸವನ್ನು ತ್ಯಜಿಸಿದರು.ಮಾಡೆಲಿಂಗ್ನಲ್ಲಿ ಸ್ವಲ್ಪ ಮುಂಚಿನ ಅನುಭವ ಹೊಂದಿರುವ ಇವರು ಆಭರಣ ವಿನ್ಯಾಸದಲ್ಲಿ ಒಂದು ವರ್ಷದ ಕೋರ್ಸ್ ಮುಗಿಸಿದ್ದಾರೆ. [೩] ನಟನಾ ವೃತ್ತಿಜೀವನದ ಅವಧಿಯಲ್ಲಿ, ದೀಪಾರವರು ಏಕಕಾಲಕ್ಕೆ ದೂರ ಶಿಕ್ಷಣದ ಮೂಲಕ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. [೪]
ಸಾರಥಿ ಚಿತ್ರತಂಡ ನಡೆಸಿದ ಆಡಿಶನ್ ನಲ್ಲಿ ಭಾಗವಹಿಸಿದ ಇವರು ಎರಡು ಸುತ್ತಿನ ಆಯ್ಕೆ ಪರೀಕ್ಷೆಗಳಿಗೆ ಒಳಪಟ್ಟ ನಂತರ ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶ ಪಡೆದರು. [೫] ಸಾರಥಿ ಚಿತ್ರದಲ್ಲಿ ನಟಿಸುತ್ತಿದ್ದು ವೇಳೆ, ತಮ್ಮ ಎರಡನೇ ಚಿತ್ರ ಯೋಗರಾಜ್ ಭಟ್ ನಿರ್ದೇಶನದ ಪರಮಾತ್ಮ ಚಿತ್ರವನ್ನು ಒಪ್ಪಿಕೊಂಡರು,[೬] ಈ ಚಿತ್ರವು ಸಾರಥಿ ಚಿತ್ರದ ಬಿಡುಗಡೆಯಾದ ಒಂದು ವಾರದ ನಂತರ ಬಿಡುಗಡೆಯಾಯಿತು. ಪರಮಾತ್ಮ ಚಿತ್ರವೂ ಸಹ ಒಂದು ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತು.[೭] ದೀಪಾರವರು 2011ರ ಬೆಂಗಳೂರು ಟೈಮ್ಸ್ ಫಿಲಂ ಅವಾರ್ಡ್ಸ್ ನಲ್ಲಿ, ಸಾರಥಿ ಮತ್ತು ಪರಮಾತ್ಮ ಚಿತ್ರಗಳಿಗಾಗಿ ಭರವಸೆಯ ಹೊಸ ನಟಿಯಾಗಿ ಆಯ್ಕೆಯಾದರು.[೮] ಪ್ರೀತಮ್ ಗುಬ್ಬಿ ನಿರ್ದೇಶನದ ಜಾನು 2012ರಲ್ಲಿ ಬಿಡುಗಡೆಯಾದ ಇವರ ಏಕೈಕ ಚಿತ್ರ. ರೆಡಿಫ್ ತಮ್ಮ ವಿಮರ್ಶೆಗಳಲ್ಲಿ ಇದು ''ಸಂಪೂರ್ಣ ದೀಪಾ ಸನ್ನಿಧಿ ಅವರ ಚಿತ್ರ" ಎಂದು ಕರೆಯಿತು.[೯]
2014ರಲ್ಲಿ, ಎಂದೆಂದೂ ನಿನಗಾಗಿ ಚಿತ್ರದಲ್ಲಿ ಸೌಮ್ಯ ಪಾತ್ರದಲ್ಲಿ ಕಾಣಿಸಿಕೊಂಡರು. [೧೦] ಇವರು ಈ ಪಾತ್ರವು ಸವಾಲಿನ ಪಾತ್ರವಾಗಿತ್ತು ಮತ್ತು ಅದನ್ನು ಇಷ್ಟಪಟ್ಟು ಮಾಡಿರುವುದಾಗಿ ಹೇಳಿದ್ದರು.[೧೧] 2015 ರಲ್ಲಿ,ಕನ್ನಡದ ಲೂಸಿಯಾ ಚಿತ್ರದ ರಿಮೇಕ್ ಏನಕ್ಕುಲ್ ಒರುವನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಕನ್ನಡದಲ್ಲಿ ಶೃತಿ ಹರಿಹರನ್ ಮಾಡಿದ ಪಾತ್ರವನ್ನು ಇವರು ತಮಿಳಿನಲ್ಲಿ ಮಾಡಿದರು. [೧೨] ತಮ್ಮ ತಮಿಳಿನ ಮೊದಲ ಚಿತ್ರಕ್ಕೂ ಮುಂಚೆಯೇ ಅವರು ತಮ್ಮ ಮುಂದಿನ ತಮಿಳು ಚಿತ್ರ ವಿಷ್ಣುವರ್ಧನ್ ಅವರ ಯಟ್ಚನ್ ಗೆ ಸಹಿ ಹಾಕಿದರು. [೧೩]
ವರ್ಷ | ಶೀರ್ಷಿಕೆ | ಪಾತ್ರ | ಭಾಷೆ | ಟಿಪ್ಪಣಿ |
---|---|---|---|---|
2011 | ಸಾರಥಿ | ರುಕ್ಮಿಣಿ | ಕನ್ನಡ | ಗೆದ್ದರು, ಅತ್ಯುತ್ತಮ ಉದಯೋನ್ಮುಖ ನಟಿ, ಸುವರ್ಣ ಪ್ರಶಸ್ತಿ ಗೆದ್ದರು, ಭರವಸೆಯ ನಟಿಗಾಗಿ ಬೆಂಗಳೂರು ಟೈಮ್ಸ್ ಚಲನಚಿತ್ರ ಪ್ರಶಸ್ತಿ |
ಪರಮಾತ್ಮ | ದೀಪಾ | ನಾಮನಿರ್ದೇಶನ - ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ - ಕನ್ನಡ | ||
2012 | ಜಾನು | ರುಕ್ಮಿಣಿ / ಜಾನು | ||
2013 | ಸಕ್ಕರೆ | ನೇಹಾ | ||
2014 | ಎಂದೆಂದು ನಿನಗಾಗಿ | ಸೌಮ್ಯಾ | ||
2015 | ಎನಕ್ಕುಲ್ ಒರುವನ್ | ದಿವ್ಯಾ | ತಮಿಳು | ನಾಮನಿರ್ದೇಶನ, ಸೈಮಾ ಅತ್ಯುತ್ತಮ ಉದಯೋನ್ಮುಖ ನಟಿ |
ಯಟ್ಚನ್ | ಶ್ವೇತಾ | |||
2017 | ಚೌಕ | ಗೌರಿ | ಕನ್ನಡ | |
ಚಕ್ರವರ್ತಿ | ಶಾಂತಿ | [೧೪] |