ನರಸಿಂಹರಾಜಪುರ | |
---|---|
ತಾಲೂಕು | |
Nickname: ಎನ್.ಆರ್.ಪುರ | |
Coordinates: 13°37′N 75°31′E / 13.62°N 75.52°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು |
Named for | ಕಂಠೀರವ ನರಸಿಂಹ ರಾಜ ಒಡೆಯರ್ |
Government | |
• Body | ಕರ್ನಾಟಕ ರಾಜ್ಯ ಸರ್ಕಾರ |
Elevation | ೬೯೭ m (೨,೨೮೭ ft) |
Population (೨೦೦೧) | |
• Total | ೭೪೪೧ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (ಐಎಸ್ಟಿ) |
ಪಿನ್ಕೋಡ್ | ೫೭೭೧೩೪ |
Vehicle registration | ಕೆಎ-೧೮ |
Website | http://www.narasimharajapuratown.mrc.gov.in |
ನರಸಿಂಹರಾಜಪುರ ಅಥವಾ ಎನ್ಆರ್ಪುರ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಟ್ಟಣ ಮತ್ತು ತಾಲೂಕು ಕೇಂದ್ರವಾಗಿದೆ. ಇದು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನೆಲೆಗೊಂಡಿದೆ.[೧] ೨೦೦೧ ರ ಜನಗಣತಿಯ ಪ್ರಕಾರ ನರಸಿ೦ಹರಾಜಪುರದ ಒಟ್ಟು ಜನಸ೦ಖ್ಯೆ ೭೪೪೧. ಇದರಲ್ಲಿ ೫೦% ಗ೦ಡಸರು ಹಾಗು ೪೯% ಹೆ೦ಗಸರಿದ್ದಾರೆ.[೨]
ನರಸಿ೦ಹರಾಜಪುರಕ್ಕಿದ್ದ ಮೊದಲ ಹೆಸರು ಯೆಡೆಹಳ್ಳಿ ಎ೦ಬುದಾಗಿತ್ತು. ಮೈಸೂರು ಸ೦ಸ್ಥಾನದ ಒಡೆಯರಾಗಿದ್ದ ನರಸಿ೦ಹರಾಜ ಒಡೆಯರ್ ಅವರು ಸುಮಾರು ೧೯ ನೆಯ ಶತಮಾನದ ಅವಧಿಯಲ್ಲಿ ಯೆಡೆಹಳ್ಳಿಗೆ ಭೇಟಿ ನೀಡಿದ್ದರು. ತದನ೦ತರ ಯೆಡೆಹಳ್ಳಿ ಎ೦ಬ ಹೆಸರು ಬದಲಾಗಿ ನರಸಿ೦ಹರಾಜಪುರ ಎ೦ದಾಯಿತು. ಈಗ ನರಸಿ೦ಹರಾಜಪುರದ ಬದಲಾಗಿ ಎನ್.ಆರ್.ಪುರ ಎ೦ಬ ಹೆಸರು ಬಳಕೆಯಲ್ಲಿದೆ.[೩][೪] ಈ ತಾಲ್ಲೂಕನ್ನು ಗಂಗ, ಕದಂಬ, ಸಂತರ, ಹೊಯ್ಸಳ ಮತ್ತು ವಿಜಯನಗರ ಅರಸರು ಆಳಿದ್ದರು.
ನರಸಿಂಹರಾಜಪುರವು 13°37′N 75°32′E / 13.62°N 75.53°E ನಲ್ಲಿದೆ ಮತ್ತು ಸರಾಸರಿ ೬೯೭ ಮೀ (೨,೨೮೭ ಅಡಿ) ಎತ್ತರವನ್ನು ಹೊಂದಿದೆ.[೫][೪] ಇದು ತನ್ನ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ೮೬ ಕಿಮೀ, ಮೈಸೂರಿನಿಂದ ೨೫೦ ಕಿಮೀ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಿಂದ ೩೨೦ ಕಿಮೀ ದೂರದಲ್ಲಿದೆ. ಹತ್ತಿರದ ಪ್ರಮುಖ ನಗರ ಶಿವಮೊಗ್ಗದಿಂದ ೫೫ ಕಿ.ಮೀ ದೂರದಲ್ಲಿದೆ.
೨೦೦೧ ರ ಭಾರತೀಯ ಜನಗಣತಿಯ ಪ್ರಕಾರ,[೬] ನರಸಿಂಹರಾಜಪುರವು ೭,೪೪೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯ ೫೧% ಪುರುಷರು ಮತ್ತು ೪೯% ಮಹಿಳೆಯರು ಇದ್ದರು. ನರಸಿಂಹರಾಜಪುರವು ಸರಾಸರಿ ೯೧% ಸಾಕ್ಷರತೆಯನ್ನು ಹೊಂದಿದೆ, ಇದು ರಾಜ್ಯದ ಸರಾಸರಿ ೭೫.೩% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೯೩% ಮತ್ತು ಮಹಿಳಾ ಸಾಕ್ಷರತೆ ೮೮% ಆಗಿದೆ. ನರಸಿಂಹರಾಜಪುರದಲ್ಲಿ, ಜನಸಂಖ್ಯೆಯ ೧೨% ನಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದರು.
ನರಸಿ೦ಹರಾಜಪುರ ತಾಲೂಕಿನ ಸಿ೦ಹನಗದ್ದೆಯಲ್ಲಿರುವ ಶ್ರೀ ಜ್ವಾಲಾಮಾಲಿನಿ ದೇವಸ್ಥಾನವು ಜೈನ ಧರ್ಮದವರಿಗೆ ಒಂದು ಪುಣ್ಯ ಕ್ಷೇತ್ರವಾಗಿದೆ.[೭] ಇದು ಕರ್ನಾಟಕದಲ್ಲಿರುವ ಪ್ರಮುಖ ಜೈನ ಬಸದಿಗಳೊಲ್ಲೊ೦ದಾಗಿದೆ. ಈ ಬಸದಿಯಲ್ಲಿರುವ ಶ್ರೀ ಜ್ವಾಲಾಮಾಲಿನಿ ದೇವಿಯ ಕಪ್ಪು ವರ್ಣದ ವಿಗ್ರಹವು ಸುಮಾರು ೫೦೦ ರಿಂದ ೬೦೦ ವರ್ಷ ಹಳೆಯದಾಗಿದೆ. ಈ ದೇವಸ್ಥಾನವು ಶ್ರೀ ಜ್ವಾಲಾಮಾಲಿನಿ ದೇವಿಯ ಅತಿಶಯಗಳಿಗೆ ಹೆಸರುವಾಸಿಯಾಗಿದೆ. ಶ್ರೀ ಜ್ವಲಾಮಾಲಿನಿ ದೇವಿಯು ೮ ನೇಯ ತೀರ್ಥ೦ಕರನಾದ, ಶ್ರೀ ಭಗವಾನ್ ಚ೦ದ್ರಪ್ರಭುರವರ ಯಕ್ಷಿಣಿಯಾಗಿದ್ದರೆ೦ದು ಇತಿಹಾಸದಲ್ಲಿದೆ.[೮]
ಸುಮಾರು ೬೦೦ ವರ್ಷಗಳ ಹಿ೦ದೆ ಗೆರ್ಸೊಪ್ಪಸೊಡುವ ಸಾಮ್ರಾಜ್ಯದ ರಾಜ್ಯಧಾನಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೊನ್ನಾವರದಿ೦ದ ೨೭ ಕಿ.ಮೀ ದೂರದಲ್ಲಿತ್ತು. ಆಗ ಅಲ್ಲಿನ ರಾಣಿಯಾಗಿದ್ದ ಚೆನ್ನಭೈರಾ ದೇವಿಯು ಸುಮಾರು ೭೦೦ ದೇವಸ್ಥಾನಗಳನ್ನು ರಾಜ್ಯದಾದ್ಯ೦ತ ಕಟ್ಟಿಸಿದ್ದಳು. ಪೋರ್ಚುಗೀಸರು ರಾಣಿಯನ್ನು ಸೋಲಿಸಿ ರಾಜ್ಯವನ್ನು ತಮ್ಮ ವಶಕ್ಕೆ ಮಾಡಿಕೊ೦ಡಾಗ ಈ ದೇವಸ್ಥಾನಗಳನ್ನು ಕೆಡವಿ ಹಾಕಿದ್ದರು. ಈಗ ಕೇವಲ ಈ ದೇವಸ್ಥಾನಗಳ ಪಳೆಯುಳಿಕೆಗಳು ಮಾತ್ರ ಉಳಿದಿವೆ. ಸಿ೦ಹನಗದ್ದೆಯಲ್ಲಿರುವ ಈ ಕ್ಷೇತ್ರದಲ್ಲಿ ಇ೦ತಹ ೬ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಇದನ್ನು ೧೯೯೪ ರಲ್ಲಿ ಪುನರ್ನಿರ್ಮಿಸಲಾಗಿತ್ತು. ಹಳೆಯ ಪಳೆಯುಳಿಕೆಗಳಲ್ಲದೆ ಹೊಸದಾಗಿ, ಹೊಸ ಶೈಲಿಯಲ್ಲಿ ನಿರ್ಮಿಸಿರುವ ದೇವಸ್ಥಾನಗಳನ್ನು ಈಗ ಇಲ್ಲಿ ಕಾಣಬಹುದು.
ಭದ್ರಾ ಜಲಾಶಯದ ಹಿನ್ನೀರಿನ ಮಧ್ಯದಲ್ಲಿರುವ ಭವಾನಿ ಶಂಕರ ದೇವಾಲಯವು ನರಸಿಂಹರಾಜಪುರದಿಂದ ೧೫ ಕಿಮೀ ದೂರದಲ್ಲಿದೆ.