ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪತ್ರೊಡೆ ಮಾಲ್ವಣಿ/ಮಹಾರಾಷ್ಟ್ರ ಮತ್ತು ಪಶ್ಚಿಮ ಭಾರತದ ಗುಜರಾತಿ ಪಾಕಪದ್ಧತಿಯಲ್ಲಿನ ಒಂದು ಸಸ್ಯಾಹಾರಿ ಖಾದ್ಯ. ಅದನ್ನು ಅಕ್ಕಿ ಹಿಟ್ಟು ಮತ್ತು ಸಂಬಾರ ಪದಾರ್ಥಗಳು, ಹುಣಸೆ, ಹಾಗೂ ಬೆಲ್ಲದಂತಹ ಪರಿಮಳಕಾರಕಗಳಿಂದ ತುಂಬಲಾದ ಕೆಸವಿನ ಎಲೆಗಳಿಂದ ತಯಾರಿಸಲಾಗುತ್ತದೆ. “ಪತ್ರೊಡೆ” “ಪತ್ರ” ಮತ್ತು “ವಡೆ” ಎರಡು ಶಬ್ದಗಳನ್ನು ಒಳಗೊಂಡ ಒಂದು ಮಿಶ್ರ ಶಬ್ದ. "ಪತ್ರ" ಎಂದರೆ ಎಲೆ, ಮತ್ತು “ವಡೆ” ಎಂದರೆ ಒಂದು ಡಂಪ್ಲಿಂಗ್ (ಹೂರಣ ತುಂಬಿದ ಕಣಕದ ಖಾದ್ಯ).
ಇದನ್ನು ಕೆಸವಿನ ಎಲೆಗಳು, ಅಕ್ಕಿ ಹಿಟ್ಟು ಮತ್ತು ಮಸಾಲೆಗಳು, ಹುಣಸೆಹಣ್ಣು ಮತ್ತು ಬೆಲ್ಲ ನಂತಹ ಸುವಾಸನೆಗಳಿಂದ ತುಂಬಿದ ವಸ್ತುಗಳಿಂದ ತಯಾರಿಸಲಾಗುತ್ತದೆ.[೧][೨]
ಜುಲೈ 2021 ರಲ್ಲಿ, ಇದನ್ನು ‘ಆಯುಷ್ ಮೆಡಿಸಿನ್ ಪ್ರಕಾರದ ಸಾಂಪ್ರದಾಯಿಕ ಆಹಾರ ಖಾದ್ಯಗಳಲ್ಲಿ’ ಒಂದಾಗಿ ಕೇಂದ್ರ ಆಯುಷ್ ಸಚಿವಾಲಯ ಗುರುತಿಸಿದೆ.[೩] ಕೆಸುವಿನ ಎಲೆಗಳಲ್ಲಿ ಕಬ್ಬಿಣ ಸಮೃದ್ಧವಾಗಿದ್ದು, ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಧಿವಾತದಂತಹ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಇದೆ ಎಂದು ಸಚಿವಾಲಯ ತಿಳಿಸಿದೆ.[೪] ಸಚಿವಾಲಯ ಇಂತಹ 26 ಸಾಂಪ್ರದಾಯಿಕ ಖಾದ್ಯಗಳಿಗೆ ಸಾಂಪ್ರದಾಯಿಕ ಆಹಾರ ಖಾದ್ಯ ಸ್ಥಾನವನ್ನು ನೀಡಿದ್ದಾರೆ. ಇದು ಆಯುಷ್ ಇಲಾಖೆಯ ವೆಬ್ಸೈಟ್ನಲ್ಲೂ ಇ-ನಮೂನೆಯಲ್ಲಿ ಲಭ್ಯವಿದೆ. ಫೋಟೊಗಳು, ವಿವರಣೆ, ಬೇಕಾದ ಪದಾರ್ಥಗಳು, ತಯಾರಿ ವಿಧಾನ, ಆರೋಗ್ಯಕ್ಕೆ ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ.[೫]