ಪರುಪಳ್ಳಿ ಕಶ್ಯಪ್ | |
---|---|
— ಬ್ಯಾಡ್ಮಿಂಟನ್ ಆಟಗಾರ — | |
ವೈಯುಕ್ತಿಕ ಮಾಹಿತಿ | |
ಹುಟ್ಟು ಹೆಸರು | ಪರುಪಳ್ಳಿ ಕಶ್ಯಪ್ |
ಹುಟ್ಟು | ೮ ಸೆಪ್ಟೆಂಬರ್ ೧೯೮೬ |
ವಾಸಸ್ಥಾನ | ಹೈದರಾಬಾದ್,ಭಾರತ |
ಎತ್ತರ | 5 ft 8 in (1.73 m) |
ದೇಶ | ಭಾರತ |
ಆಡುವ ಕೈ | ಬಲಗೈ |
ಪುರುಷರ ಸಿಂಗಲ್ಸ್ | |
ಅತಿಹೆಚ್ಚಿನ ಸ್ಥಾನ | ೬ (೧೪ ಮಾರ್ಛ್ ೨೦೧೩) |
ಸದ್ಯದ ಸ್ಥಾನ | ೧೪ (೧೫ ಆಗಸ್ಟ್ ೨೦೧೩) |
BWF profile |
ಪರುಪಳ್ಳಿ ಕಶ್ಯಪ್(ಪಿ. ಕಶ್ಯಪ್) ಹುಟ್ಟಿದ್ದು ಸೆಪ್ಟೆಂಬರ್ ೮ ೧೯೮೬ ನೆಯ ಇಸವಿಯಲ್ಲಿ. ಈತ ಹೈದರಾಬಾದ್ ಮೂಲದ ಭಾರತದ ಬ್ಯಾಡ್ಮಿಂಟನ್ ಆಟಗಾರ. ಇವರು ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಆಟಗಾರನಾಗಿದ್ದು, ಆದಾಯವಿಲ್ಲದ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ.
ಪರುಪಳ್ಳಿ ಕಶ್ಯಪ್ ಮೊದಲು ಹೈದರಾಬಾದಿನಲ್ಲಿ ಎಸ್.ಎಂ. ಆರಿಫ್ ನಡೆಸುತ್ತಿದ್ದ ಬ್ಯಾಡ್ಮಿಂಟನ್ ತರಬೇತಿ ಕ್ಯಾಂಪ್ ಸೇರಿಕೊಂಡರು. ತಂದೆಯವರು ಆಗಾಗ್ಗೆ ವರ್ಗಾವಣೆಗೊಂಡು ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಬೆಂಗಳೂರಿನಲ್ಲಿಯೂ ಅವರ ಕುಟುಂಬ ನೆಲೆಸಿದ್ದಾಗ , ಪ್ರಕಾಶ್ ಪಡುಕೋಣೆ ಯವರು ಆರಂಭಿಸಿದ್ದ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿ ಹೆಚ್ಚಿನ ತರಬೇತಿ ಪಡೆದರು. . ೨೦೦೪ ರಲ್ಲಿ ಕಶ್ಯಪ್ ಮತ್ತೆ ಹೈದರಾಬಾದಿಗೆ ತೆರಳಿದರು. ತರಬೇತಿಯ ಸಮಯದಲ್ಲಿ ಮತ್ತು ಆಟದ ಸಮಯದಲ್ಲಿ ಅಸ್ವಸ್ಥತೆಯು ಅವರನ್ನು ಕಾಡಿತು. ಕೆಲವು ವೈದ್ಯಕೀಯ ಪರೀಕ್ಷೆಗಳ ನಂತರ ಕಶ್ಯಪ್ ಅವರಿಗೆ ಆಸ್ತಮಾ ಇರುವುದನ್ನು ಗುರುತಿಸಲಾಯಿತು [೧] . 2000-03 ರ ಸಮಯದಲ್ಲಿ ಬೆಂಗಳೂರಿನಲ್ಲಿ ಅವರು ವಾಸ್ತವ್ಯ ಹೂಡಿದರು. ಬೆಂಗಳೂರಿನ ಹವಾಮಾನಕ್ಕೆ ಒಗ್ಗಿಕೊಂಡು ರೋಗ ನಿವಾರಿಕೊಳ್ಳಲು ಯತ್ನಿಸಿಸಿದರು. ಆಸ್ತಮಾ ರೋಗವು ಅವರಿಗೆ ಆಘಾತವನ್ನುಂಟುಮಾಡಿತು ಮತ್ತು ತನ್ನ ಕ್ರೀಡಾ ವೃತ್ತಿಯೇ ಪೂರ್ಣಗೊಂಡಿತು ಎಂದೂ ಭಾವಿಸಿದರು. ಆದರೂ , ಅವರು ಸಮಸ್ಯೆಯನ್ನು ಜಯಿಸಲು ನಿಶ್ಚಿಯಿದರು. ಸೂಕ್ತ ಔಷಧಿಗಳನ್ನು ಬಳಸಲು ಆರಂಭಿಸಿದರು . ಅವರ ಪರಿಸ್ಥಿತಿ ನಿಧಾನವಾಗಿ ಸುಧಾರಿಸಲು ಶುರುವಾಯಿತು [೨] . ಸುಧಾರಣೆ ಕಾಣುತ್ತಿದ್ದ ಹಂತದಲ್ಲಿ ಅವರು ಪುಲ್ಲೇಲ ಗೋಪಿಚಂದ್ ಅವರ ಮಾರ್ಗದರ್ಶನವನ್ನು ಪಡೆದು ಗುಣಮುಖರಾದರು,ನಂತರ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಯಲ್ಲಿ ತಮ್ಮ ತರಬೇತಿಯನ್ನು ಮುಂದುವರಿಸಿದರು.
೨೦೦೫ ರಲ್ಲಿ ಕಶ್ಯಪ್, ಆಂಧ್ರಪ್ರದೇಶ ದಲ್ಲಿ ನೆಡೆದ ರಾಷ್ಟ್ರೀಯ ಜೂನಿಯರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು [೩] . 2006 ನಂತರ , ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಇದೇ ವರ್ಷದಲ್ಲಿ ನೆಡೆದ ಹಾಂಗ್ ಕಾಂಗ್ ಓಪನ್ ನಲ್ಲಿ ಅವರು ಪೂರ್ವ ಕ್ವಾರ್ಟರ್ಫೈನಲ್ಸ್ ನಂತರ ವಿಶ್ವದ 19 ನೆಯ ಶ್ರೇಯಾಂಕದ Przemysław Wacha ಅವರನ್ನು ಎದುರಿಸಿ ಗೆದ್ದರೂ , ಮುಂದಿನ ಸುತ್ತಿನಲ್ಲಿ ಸೋತರು[೪] . ಕೆಲವು ತಿಂಗಳ ನಂತರ , ಅವರು Bitburger ಓಪನ ಸೀರಿಸ್ ನಲ್ಲಿ Wacha ಅವರನ್ನು ಸೋಲಿಸಿ ಸೆಮಿಫೈನಲ್ಸ್ ತಲುಪಿದರು . 2006 ರಲ್ಲಿ , ತನ್ನ ವಿಶ್ವ ಶ್ರೇಯಾಂಕವನ್ನು ೧೦೦ ರ ಒಳಗೆ ಅಂದರೆ, 64 ಕ್ಕೆ ಹೆಚ್ಚಿಸಿ ಕೊಂಡರು. ಕೋಚ್ ಗೋಪಿಚಂದ್ ಕಶ್ಯಪ್ ರ ಗೆಲುವಿಗೆ ಸಂತೋಷ ವ್ಯಕ್ತಪಡಿಸಿ ಉನ್ನತ ಶ್ರೇಣಿಯಲ್ಲಿರುವ ಆಟಗಾರರ ವಿರುದ್ಧ ಪ್ರಮುಖ ಪಂದ್ಯಗಳನ್ನು ಗೆಲ್ಲುವ ಉತ್ತಮ ಸೂಚನೆ ಇದು ಎಂದು ಭಾವಿಸಿದರು . ಅದೇ ವರ್ಷದಲ್ಲಿ , ಕಶ್ಯಪ್ ರನ್ನು 2006 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು . 33 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿಅಂದಿನ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್ ರನ್ನು ಸೋಲಿಸಿ ಆಂಧ್ರ ಪ್ರದೇಶಕ್ಕೆ ಒಂದು ಚಿನ್ನದ ಪದಕ ಗೆದ್ದು ತಂದರು. 2006-07 ರ ನಡುವೆ , ಕಶ್ಯಪ್ ಕೆಲವು ರಾಷ್ಟ್ರೀಯ ಪಂದ್ಯಾವಳಿಗಳನ್ನು ಗೆದ್ದುಕೊಂಡರು.
೨೦೦೯ ರ ಡಚ್ ಓಪನ್ನಲ್ಲಿ , ಕಶ್ಯಪ್ ಉಪಾಂತವನ್ನು ತಲುಪಿದರು ಮತ್ತು 2009 ರ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆದರು . ಅದೇ ವರ್ಷದಲ್ಲಿ , ಅವರು ಥೈಲ್ಯಾಂಡ್ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್ , ಸ್ಪ್ಯಾನಿಶ್ ಓಪನ್ ಮತ್ತು ಟೌಲೌಸ್ ಓಪನ್ ನಲ್ಲಿ ರನ್ನರ್ ಅಪ್ ಆದರು . 2009 ರ ಸಿಂಗಪುರ್ ಸೂಪರ್ ಸೀರೀಸ್ ನಲ್ಲಿ , ಕಶ್ಯಪ್ ಉಪಾಂತವನ್ನು ತಲುಪಿದರು . 2010 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ಭಾರತೀಯ ಓಪನ್ ಗ್ರ್ಯಾಂಡ್ ಪ್ರಿಕ್ಸ್ , 2010 ನಲ್ಲಿ ಸೆಮಿಫೈನಲ್ ತಲುಪಿದರು . 2011 ರಲ್ಲಿ ರೋಹ್ಟಕ್ ನಲ್ಲಿ ನಡೆದ 75 ನೇ ಸೀನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ಸ್ಪರ್ಧೆಯ ಫೈನಲ್ನಲ್ಲಿ ಅರವಿಂದ್ ಭಟ್ ವಿರುದ್ಧ ಸೋತು ರನ್ನರ್ ಅಪ್ ಆದರು [೫]. 2012 ರಲ್ಲಿ ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಹಂತವನ್ನು ತಲುಪಿದರು. ಸೆಮಿಫೈನಲ್ಸ್ ತೆರಳುವ ಹಂತದಲ್ಲಿ ಅವರು ವಿಶ್ವದ ನಂ 3 ಶ್ರೇಯಾಂಕದ ಚೆನ್ ಲಾಂಗ್ ಮತ್ತು ವಿಶ್ವದ ನಂ 16ನೆಯ ಶ್ರೇಯಾಂಕದ ಹ್ಯಾನ್ಸ್ ಕ್ರಿಸ್ಟಿಯನ್ ಅವರು ಸೋಲಿಸಿ ನಿರಾಶೆಗೊಳ್ಳುವಂತೆ ಮಾಡಿದರು[೬]. 2012 ರಲ್ಲಿ ನೆಡೆದ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕಶ್ಯಪ್ ಅವರು ಕ್ವಾರ್ಟರ್ ಪೈನಲ್ ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಲೀ ಚೊಂಗ್ ವೆಯಿ ವಿರುಧ್ಧ ಸೋತರು. ಒಲಿಂಪಿಕ್ಸ್ನಲ್ಲಿ ಈ ಹಂತವನ್ನು ತಲುಪಿ ಅಗ್ರ ಶ್ರೇಣಿಯ ಆಟಗಾರನನ್ನು ಎದುರಿಸಿದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿರು[೭] . ಈ ಸಾಧನೆ ಮೂಲಕ ಕಶ್ಯಪ್ 19 ನೆಯ ಶ್ರೇಯಾಂಕಕ್ಕೆ ಜಿಗಿದರು .2012 ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಭಾರತ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಚಿನ್ನ ಗೆಲ್ಲುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಶ್ರೇಣಿಯಾದ 14 ನೆಯ ರ್‍ಯಾಂಕ್ ಅನ್ನು ತಲುಪಿದರು. 2013 ರಲ್ಲಿ ಕೊರಿಯಾದಲ್ಲಿ ಸಿಕ್ಕ ಯಶಸ್ಸಿನಿಂದ ಅವರು 9 ನೆಯ ರ್‍ಯಾಂಕ್ ಪಡೆದರು. ಸ್ವಿಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ನಂತರ, ಬಿಡಬ್ಲ್ಯೂಎಫ್ ಒದಗಿಸಿದ ಶ್ರೇಯಾಂಕದಂತೆ 7 ನೆಯ ಶ್ರೇಯಾಂಕ ಪಡೆದರು. ೨೦೧೩ ರ ಇಂಡಿಯನ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ಇಂಡೋನೇಷ್ಯಾದ ತೌಫಿಕ್ ಹಿದಾಯತ್ ವಿರುದ್ಧ ಸೆಣೆಸಿದರು [೮]. ತಮ್ಮ ಮೊದಲ ಸುತ್ತಿನ ಪಂದ್ಯದ ನಂತರ ವೃತ್ತಿಜೀವನದ ಅತ್ಯುತ್ತಮ ಶ್ರೇಣಿಯಾದ ೬ ನೆಯ ಶ್ರೇಯಾಂಕಕ್ಕೆ ಗೆ ಜಿಗಿದರು[೯] .
{{cite news}}
: Italic or bold markup not allowed in: |publisher=
(help)