ಪಾಲಿನ್ ಸ್ಟೈನರ್ | |
---|---|
Born | ಪಾಲಿನ್ ಅನಿತಾ ಸ್ಟೈನರ್ ೫ ಮಾರ್ಚ್ ೧೯೪೧ ಬರ್ಸ್ಲೆಮ್, ಸ್ಟೋಕ್-ಆನ್-ಟ್ರೆಂಟ್, ಇಂಗ್ಲೆಂಡ್ |
Education | ಸೇಂಟ್ ಆನ್ಸ್ ಕಾಲೇಜು, ಆಕ್ಸ್‌ಫರ್ಡ್ |
Occupation |
|
Years active | ೧೯೮೭ – ಪ್ರಸ್ತುತ |
Children | ೪ |
ಪಾಲಿನ್ ಅನಿತಾ ಸ್ಟೈನರ್ (ನೀ ರೋಜರ್ಸ್, ಜನನ ೫ ಮಾರ್ಚ್ ೧೯೪೧) ಒಬ್ಬ ಆಂಗ್ಲ ಕವಯಿತ್ರಿ. ಇವರು ಬರ್ಸ್ಲೆಮ್‌ನ, ಸ್ಟೋಕ್-ಆನ್-ಟ್ರೆಂಟ್‌ನಲ್ಲಿರುವ,ಸ್ಟಾಫರ್ಡ್‌ಶೈರ್ನಲ್ಲಿ ಜನಿಸಿದರು. ನಂತರ ಆಕ್ಸ್‌ಫರ್ಡ್‌ನ ಸೇಂಟ್ ಆನ್ಸ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಆ ನಗರವನ್ನು ತೊರೆದರು. ಅಲ್ಲಿ ಅವರು ಆಂಗ್ಲಭಾಷೆಯಲ್ಲಿ ಪದವಿ ಪಡೆದರು. ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಅವರು ಸೌತಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಪದವಿಯನ್ನು ಪೂರ್ಣಗೊಳಿಸಿದರು. [೧]
ಪಾಲಿನ್ ಸ್ಟೈನ್‌ರವರ ದೃಢವಾದ ನವ-ಪ್ರಣಯ ಕಾವ್ಯವು ಪವಿತ್ರ ಪುರಾಣ, ದಂತಕಥೆ, ಇತಿಹಾಸ-ಇನ್-ಲ್ಯಾಂಡ್‌ಸ್ಕೇಪ್ ಮತ್ತು ಮಾನವ ಭಾವನೆ ಕಾಲ್ಪನಿಕ ಮನಸ್ಸಿನ ಆಂತರಿಕ ಭೂದೃಶ್ಯಗಳನ್ನು ಪ್ರತಿಬಿಂಬಿಸುತ್ತದೆ. ಅವರ ವಿಷಯದ ಆಯ್ಕೆಯು ಬಹುಶಃ ಕೈಗಾರಿಕಾ ನಗರವಾದ ಸ್ಟೋಕ್-ಆನ್-ಟ್ರೆಂಟ್‌ನಲ್ಲಿ ಅವರು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಅವರ ಕೃತಿಗಳಲ್ಲಿರುವ ದೃಶ್ಯ ಚಿತ್ರಣಗಳು ಆಂಗ್ಲೋ ಸ್ಯಾಕ್ಸನ್ ಒಗಟುಗಳು ಮತ್ತು ಸಾಂಕೇತಿಕ ಕವಿತೆಗಳನ್ನು ಬರೆಯುವ ಗಾರ್ಸಿಯಾ ಲೋರ್ಕಾ ಅವರ ಕೃತಿಗಳನ್ನು ಹೋಲುತ್ತದೆ. ಅವರ ಕೆಲಸದಲ್ಲಿ ಟೆಡ್ ಹ್ಯೂಸ್ನ ಭಾವವನ್ನು ವಿಮರ್ಶಕರು ಪತ್ತೆ ಮಾಡಿದ್ದಾರೆ. [೨]
ಪಾಲಿನ್ ಸ್ಟೈನರವರಿಗೆ ೧೯೮೭ ರಲ್ಲಿ ಹಾಥಾರ್ನ್‌ಡೆನ್ ಫೆಲೋಶಿಪ್ ಪ್ರಶಸ್ತಿ ನೀಡಲಾಯಿತು. 'ದ ಹನಿಕೋಂಬ್' (೧೯೮೯) ಎಂಬ ಮೊದಲ ಸಂಪುಟದೊಂದಿಗೆ ಅವರು ಮೊಟ್ಟಮೊದಲು ಸಾರ್ವಜನಿಕ ಗಮನಕ್ಕೆ ಬಂದರು. ಅವರ ನಂತರದ ಸಂಪುಟಗಳು ಸೈಟಿಂಗ್ ದಿ ಸ್ಲೇವ್ ಶಿಪ್ (೧೯೯೨) ಮತ್ತು ದಿ ಐಸ್-ಪೈಲಟ್ ಸ್ಪೀಕ್ಸ್ (೧೯೯೪) ಅವರ ನಾಮನಿರ್ದೇಶನಕ್ಕೆ ಕಾರಣವಾಯಿತು. ಅವರ ನಾಲ್ಕನೇ ಸಂಗ್ರಹವಾದ ದಿ ವುಂಡ್-ಡ್ರೆಸರ್ಸ್ ಡ್ರೀಮ್ (೧೯೯೬) ಗಾಗಿ ವಿಟ್‌ಬ್ರೆಡ್ ಕವನ ಪ್ರಶಸ್ತಿಯಲ್ಲಿ ಕಿರುಪಟ್ಟಿ ಮಾಡಲಾಯಿತು.
ಅವರ ಕವನಗಳು ಹಲವಾರು ಬಹುಮಾನಗಳನ್ನು ಗೆದ್ದಿವೆ. ೨೦೦೩ ರಲ್ಲಿ ಬ್ಲೋಡಾಕ್ಸ್ ಬುಕ್ಸ್ ಅವರ ಕೃತಿಯ ಸಂಕಲನವನ್ನು ದಿ ಲೇಡಿ ಅಂಡ್ ದಿ ಹೇರ್: ನ್ಯೂ ಅಂಡ್ ಸೆಲೆಕ್ಟೆಡ್ ಪೊಯಮ್ಸ್ ಪ್ರಕಟಿಸಿತು.
ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಎಸ್ಸೆಕ್ಸ್‌ಗೆ ತೆರಳಿದ ಅವರು ತಮ್ಮ ನಾಲ್ಕು ಮಕ್ಕಳನ್ನು ಬೆಳೆಸಿದರು. ಅವರು ಆರ್ಕ್ನಿ ದ್ವೀಪದ ರೂಸೆಯಲ್ಲಿ ಹಲವಾರು ವರ್ಷಗಳನ್ನು ಕಳೆದರು. ಅದರಿಂದ ಹೊಸ ಪುಸ್ತಕ ಸಂಗ್ರಹವಾದ ಪ್ಯಾರಾಲ್ ಐಲ್ಯಾಂಡ್ (೧೯೯೯) ಬಂದಿತು. ೨೦೧೭ ರ ಕೊನೆಯಲ್ಲಿ ಎಸೆಕ್ಸ್‌ಗೆ ಹಿಂದಿರುಗುವ ಮೊದಲು ಅವರು ಹ್ಯಾಡ್ಲೀ, ಸಫೊಲ್ಕ್‌ನಲ್ಲಿ ವಾಸಿಸುತ್ತಿದ್ದರು.[೩]
ಅವರು ಸಹಚರರು ಮತ್ತು ಸಹೋದ್ಯೋಗಿಗಳು, ಗ್ರಾಮೀಣವಾದಿಗಳೊಂದಿಗೆ ಸೇರಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆದರೆ ಈಗ ಅದನ್ನು ಪ್ರಮುಖ ಕವನ ಪುಸ್ತಕ ಪ್ರಕಾಶಕ ಬ್ಲೋಡಾಕ್ಸ್ ಬುಕ್ಸ್ ಪ್ರಕಟಿಸಿದೆ. ಅವರ ಇತ್ತೀಚಿನ ಕೃತಿಗಳು ಸ್ಲೀಪಿಂಗ್ ಅಂಡರ್ ದಿ ಜುನಿಪರ್ ಟ್ರೀ (೨೦೧೭) ಮತ್ತು ದಿ ಸೈಲೆನ್ಸ್ ಆಫ್ ಸೌಂಡ್ ಮಿರರ್ಸ್ (೨೦೨೧).