ವಯಕ್ತಿಕ ಮಾಹಿತಿ | |
---|---|
ಹುಟ್ಟು | ೦೮,ಮೇ ಸಿಡ್ನಿ, ಆಸ್ಟ್ರೇಲಿಯಾ |
ಅಂತಾರಾಷ್ಟ್ರೀಯ ಮಾಹಿತಿ | |
ರಾಷ್ಟೀಯ ತಂಡ |
|
ಪ್ಯಾಟ್ರಿಕ್ ಜೇಮ್ಸ್ ಕಮ್ಮಿನ್ಸ್,ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್. ಇವರು ಬಲಗೈ ಬ್ಯಾಟ್ಸ್ ಮೆನ್. ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡಕ್ಕೆ ಆಡುತ್ತಾರೆ. ೨೦೧೭ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಆಡಿದ್ದರು, ನಂತರ ಐಪಿಎಲ್ ನಲ್ಲಿ ಪಾಲ್ಗೊಳ್ಳಲಿಲ್ಲ.[೧][೨]
ಕಮ್ಮಿನ್ಸ್ ರವರು ಮೇ ೦೮, ೧೯೯೩ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯ ವೆಸ್ಟ್ಮೀಡ್ನಲ್ಲಿ ಜನಿಸಿದರು. ಕಮ್ಮಿನ್ಸ್ ರವರು ಬ್ಲ್ಯೂ ಮೌಂಟೇನ್ಸ್ ನ ಮೌಂಟ್ ರಿವೇರ್ ನಲ್ಲಿ ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ಜೊತೆ ಬೆಳೆದರು. ಸೇಂಟ್ ಪೌಲ್ಸ್ ಗ್ರಾಮಾರ್ ಶಾಲೆಯಲ್ಲಿ ಇವರ ವಿದ್ಯಾಭ್ಯಾಸ ಮುಗಿಯಿತು. ಯೂನಿವರ್ಸಿಟಿ ಆಫ್ ಸಿಡ್ನಿಯಲ್ಲಿ ಇವರು ಬ್ಯುಸಿನೆಸ್ ನಲ್ಲಿ ಪದವಿ ಪಡೆದರು. ಬಾಲ್ಯದಲ್ಲಿ ಇವರು ಬ್ರೆಟ್ ಲೀ ರವರನ್ನ ತಮ್ಮ ಆದರ್ಶವನ್ನಾಗಿಸಿದ್ದರು. ನಂತರ ಅವರ ಜೊತೆಯಲ್ಲೇ ಕೆಲ ದೇಶೀ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳ್ಳನ್ನು ಆಡಿದರು.[೩][೪]
ಕಮ್ಮಿನ್ಸ್ ರವರು ಮಾರ್ಚ್ ೦೩, ೨೦೧೧ರಂದು ಹೋಬರ್ಟ್ ನಲ್ಲಿ ತಾಸ್ಮೇನಿಯ ಹಾಗೂ ನ್ಯೂ ಸೌತ್ ವೇಲ್ಸ್ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[೫]
ಅಕ್ಟೋಬರ್ ೧೩, ೨೦೧೧ರಂದು ಕೇಪ್ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುಧ್ಧ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.[೬] ಅಕ್ಟೋಬರ್ ೧೯, ೨೦೧೧ರಂದು ಸೆಂಚೂರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುಧ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.[೭] ನವೆಂಬರ್ ೧೭, ೨೦೧೧ರಂದು ಜೋಹನಸ್ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುಧ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.[೮]