ಪ್ರಕಾಶ್ ಜಾವಡೇಕರ್,[೧] ಮರಾಠಿ : (प्रकाश जावडेकर) (ಜ : ಜನವರಿ, ೩೦, ೧೯೫೧) ರಾಜ್ಯಸಭೆಯ ಹಿಂದಿನ ಪಾರ್ಲಿಮೆಂಟ್ ಹಾಗೂ ಭಾರತೀಯ ಜನತಾ ಪಕ್ಷದ (BJP) ಮುಂದಾಳು. ಸದಸ್ಯ. ೨೦೦೮ ರಲ್ಲಿ ಮಹಾರಾಷ್ಟ್ರದ ರಾಜ್ಯ ಸಭೆಗೆ ಚುನಾಯಿತರಾಗಿ ಬಂದರು. ಬಿಜೆಪಿ ಪಕ್ಷದ ಮುಖಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಸರಕಾರದ ಸ್ಟೇಟ್ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. (ಅವರು ಸ್ವತಂತ್ರವಾಗಿ ನಿಭಾಯಿಸುತ್ತಿದ್ದಾರೆ) 'ಇನ್ಫರ್ಮೇಶನ್ ಮತ್ತು ಬ್ರಾಡ್ಕಾಸ್ಟಿಂಗ್ ಮಂತ್ರಿ', ಮತ್ತು 'ಪರಿಸರ ಹಾಗೂ ವನ ಸಂರಕ್ಷಣೆ ಖಾತೆ'ಯ ನಿರ್ವಣೆಯನ್ನೂ ನಿಭಾಯಿಸುತ್ತಿದ್ದಾರೆ. ಇದಲ್ಲದೆ ಅವರು 'ಮಿನಿಸ್ಟರ್ ಆಫ್ ಸ್ಟೇಟ್ ಫಾರ್ ಪಾರ್ಲಿಮೆಂಟರಿ ಅಫೇರ್ಸ್ ಶಾಖೆ'ಯೂ, ಅವರಪಾಲಿನಲ್ಲಿದೆ.[೨]
ಕೇಶವ್ 'ಸ್ವತಂತ್ರ್ಯ ಸೇನಾನಿ, ವೀರ್ ಸಾವಕರ್' ರ ಅನುಯಾಯಿ, ಆಪ್ತ ಮಿತ್ರರು ಹಾಗೂ ಹತ್ತಿರದಿಂದ ಬಲ್ಲವರಾಗಿದ್ದರು. 'ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ಥಾಪಿಸಿದ್ದ, ಮರಾಠಿ ದೈನಿಕ, 'ಕೇಸರಿ'ಯ ಜಂಟಿ ಸಂಪಾದಕರಾಗಿ ದುಡಿದರು. ಇದಕ್ಕೆ ಮೊದಲು, 'ತರುಣ್ ಭಾರತ್', 'ಕಾಳ್' ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಈಗಲೂ ತಮ್ಮ ಬಿಡುವಿನ ಸಮಯದಲ್ಲೂ, ಸಮಯ ದೊರೆತಾಗ ಯಾವುದಾದರೂ ಪತ್ರಿಕೆಯಲ್ಲಿ ತಮ್ಮ ಮನಸ್ಸನ್ನು ಬಿಚ್ಚಿ ಲೇಖನಗಳನ್ನು ಬರೆದಿದ್ದಾರೆ.
'ಪ್ರಕಾಶ್ ಜಾವಡೇಕರ್' ಪತ್ನಿ, 'ಪ್ರಾಚಿ ಜಾವಡೇಕರ್', 'ಪುಣೆಯ, ಇಂದಿರಾ ಇನ್ ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಮಾಜಿ-ನಿರ್ದೇಶಕಿ'. ಶಿಕ್ಷಣ ವಲಯದಲ್ಲಿ ಸಲಹೆಗಾತಿ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. 'ಡಾ.ಅಶುತೋಷ್ ಜಾವಡೇಕರ್'- ದಂತ ವೈದ್ಯರು, ಹಾಗೂ ಒಳ್ಳೆಯ ಕಲಾವಿದ. ಎರಡನೆಯ ಮಗ, 'ಅಪೂರ್ವ ಜಾವಡೇಕರ್', ಬಿ.ಕಾಂ, ಸಿ.ಎ; ಎಫ್.ಸಿ.ಎ; ಹಾಗೂ ಎಮ್.ಎ(ಎಕೊನೊಮಿಕ್ಸ್) ಪದವೀಧರ. ಡಿ.ಎಸ್.ಇ, ಎಮ್. ಎಸ್. ಸಿ (ಫೈನಾಂಶಿಯಲ್ ಇಂಜಿನಿಯರಿಂಗ್, ಲಂಡನ್ ಮತ್ತು ಬಾಸ್ಟನ್ ವಿಶ್ವವಿದ್ಯಾಲಯದಿಂದ ಎಕೊನೊಮಿಕ್ಸ್ ನಲ್ಲಿ ಪಿ.ಎಚ್.ಡಿ ಪದವಿಗಾಗಿ ಶ್ರಮಿಸುತ್ತಿದ್ದಾರೆ. ಪ್ರಕಾಶ್ ಜಾವಡೇಕರ್, ಸೋದರಿ, ಎಂ.ಎ, ಬಿ.ಎಡ್; ಪದವೀಧರೆ. ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸೋದರ, ಬಿ.ಕಾಂ ಪದವೀಧರ, 'ಸೆಂಟ್ರೆಲ್ ಬ್ಯಾಂಕ್' ನಲ್ಲಿ ಕೆಲಸ ಮಾಡುತ್ತಿದ್ದಾರೆ.
ತುರ್ತು ಪರಿಸ್ಥಿತಿಯ ಕಾಲದಲ್ಲಿ ಪ್ರಕಾಶ್ ಜಾವಡೇಕರ್, ಇನ್ನೂ ವಿದ್ಯಾರ್ಥಿಯಾಗಿದ್ದರು. ಆಗಲೇ ಜಾಗರೂಕ ಪ್ರಜೆಯಾಗಿ, ವಿದ್ಯಾರ್ಥಿಯಾಗಿಯೂ ABVP ಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು.ಪುಣೆನಗರದಲ್ಲಿ ಒಂದು ಆಂದೋಳನವನ್ನು ಆಯೋಜಿಸಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರನ್ನು ಆಗಿನ ಸರ್ಕಾರ ಬಂಧಿಸಿ ಕಾರಾಗೃಹಕ್ಕೆ ಸೇರಿಸಲಾಯಿತು. ಜೈಲಿನಲ್ಲಿದ್ದಾಗಲೇ ಅವರಿಗೆ ಹೃದಯದ ನೋವು ಹಾಗೂ ಸಮಸ್ಯೆಯಿಂದ ನರಳಿದರು. ಆಗಿನ ಸರಕಾರ ಅವರಿಗೆ ಚಿಕಿತ್ಸೆಗಾಗಿ ಜೈಲಿನಿಂದ ಆಸ್ಪತ್ರೆಗೆ ಕಳಿಸಲು ಒಪ್ಪಿರಲಿಲ್ಲ. ಜೈಲುವಾಸಿಗಳು ಮತ್ತು ಮಿತ್ರರು, ಸಹಪಾಠಿಗಳು ಅವರಿಗೆ ಆಸ್ಪತ್ರೆಯ ಚಿಕಿತ್ಸೆ ಒದಗಿಸಲು ಒಕ್ಕೊರಲನಿಂದ ಹೋರಾಡಿದ ನಂತರ ಅವರನ್ನು ತೆರವುಗೊಳಿಸಿಲಾಯಿತು. ತಕ್ಷಣವೇ ಅವರಿಗೆ ಹೃದಯದ ಚಿಕಿತ್ಸೆ ಮಾಡಿದಮೇಲೆ ಪರಿಸ್ಥಿತಿ ಸುಧಾರಿಸಿತು.
ಕೋಲ್ ಮೈನಿಂಗ್ ವಲಯದಲ್ಲಿ ಇದ್ದ ಹಲವಾರು ಅನೀತಿಗಳನ್ನು ವಿರೋಧಿಸಿ, ೩೧, ಮೇ, ೨೦೧೨ ರಲ್ಲಿ ತಮ್ಮ ದನಿ ಎತ್ತಿ ಹೋರಾಡಿದರು.[೪] ಆಗ, Central Vigilance Commission (CVC) ಸರಕಾರದ ವಿರುದ್ಧ ಒಂದು ತನಿಖೆಯನ್ನು ಪ್ರಾರಂಭಿಸಿತು. [೫]ಪ್ರಕಾಶ್ ಜಾವಡೇಕರ್ ಇದರ ಬಗ್ಗೆ, ಪ್ರೆಸ್ ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಹೀಗೆ : "We have made a formal complaint to CVC because there were so may glaring lacunae which needed to be probed. If the inquiry has been ordered, it's good."