(ಆವರಣದಲ್ಲಿ ಹಿಂದಿನ ಚುನಾವಣೆಯ ಹೋಲಿಕೆ ವ್ಯೆತ್ಯಾಸ ಕೊಟ್ಟಿದೆ)
.
ಬಿಹಾರ
ಜುಲೈ 2015 ರಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ 24 ಸ್ಥಾನಗಳ ಪೈಕಿ (ಬಿಜೆಪಿ ಬೆಂಬಲದೊಂದಿಗೆ 1 ಸ್ವತಂತ್ರ ಸೇರಿದಂತೆ) 13 ಸ್ಥಾನಗಳನ್ನು ಗೆದ್ದುಕೊಂಡಿತು. ಜೆಡಿಯು, ಆರ್ಜೆಡಿ 10 ಸ್ಥಾನಗಳ ಮಾತ್ರ ಗೆದ್ದುಕೊಂಡಿತು. 1 ಸ್ಥಾನ ಸ್ವತಂತ್ರ ಅಭ್ಯರ್ಥಿ ಗೆದ್ದದು ಒಳಗೊಂಡು. ಜುಲೈ 2015 13 ರಂದು ಲಾಲೂ ಯಾದವ್, ಕೇಂದ್ರ ಸರ್ಕಾರವು ಸಾಮಾಜಿಕ ಆರ್ಥಿಕ ಸೂಚಿ ಜಾತಿ ಜನಗಣತಿ 2011. ಬಿಡುಗಡೆಗೆ ಆಗ್ರಹಿಸಿ ಮೆರವಣಿಗೆ ಮಾಡಿದರು. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬಿಡುಗಡೆಗೆ ಮುನ್ನವೇ ಅದರ (2011) ರ ಜಾತಿ ದತ್ತಾಂಶದ ಸಮಗ್ರ ವರ್ಗೀಕರಣಕ್ಕೆ ಒತ್ತಾಯಿಸಿದರು, ಮತ್ತು ಲಾಲು ನಿತೀಶ್ ಅವರ ಮೇಲೆ ಜಾತಿ ದತ್ತಾಂಶಗಳು ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.[೧]
63 ವರ್ಷದ ನಿತೀಶ್ ಕುಮಾರ್ ಮೇ17, 2014ರಂದು ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹಿನ್ನೆಡೆ ಕಂಡಿದ್ದರಿಂದ ರಾಜೀನಾಮೆ ನೀಡಿ ಜೀತನ್ ರಾಮ್ ಮಾಂಝಿ ಅವರಿಗೆ ಮುಖ್ಯಮಂತ್ರಿಯಾಗಿ ಮಾಡಿದ್ದರು. ಜೀತನ್ ರಾಮ್ ಮಾಂಝಿ ಮೇ 20, 2014 ರಂದು ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಯಾಗಿದ್ದರು. ಪಕ್ಷದ ಸೂಚನ್ಯನ್ನು ತಿರಸ್ಕರಿಸಿದ್ದರಿಂದ ಅವರನ್ನು JD(U) ಪಕ್ಷದಿಂದ ಹೊರಹಾಕಲಾಗಿದೆ.
ಜೀತನ್ ರಾಮ್ ಮಾಂಝಿ ರಾಜೀನಾಮೆ ಮಧ್ಯಾಹ್ನ ದಿಢೀರನೆ ಏರ್ಪಡಿಸಲಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ಮಾಂಝಿ ಅವರು, ಮೂರನೇ ಎರಡಂಶ ಸಚಿವರ, ಎಂದರೆ 29 ಮಂದಿ ಸಚಿವರಲ್ಲಿ 22 ಮಂದಿ ಸಚಿವರ, ವಿರೋಧ ಇರುವ ಹೊರತಾಗಿಯೂ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಶಿಫಾರಸನ್ನು ಮಾಡುವ ನಿರ್ಧಾರ ಕೈಗೊಂಡರು.(ಫೆ.07,2015,ಉದಯವಾಣಿ)
ಬಿಹಾರ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಅವರು 20/02//2015ಶುಕ್ರವಾರ ವಿಧಾನ¬ಸಭೆಯಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಮಾಂಝಿ ಅವರಿಗೆ ಬೆಂಬಲ ನೀಡುವ ಕುರಿತು ನಿಲುವು ಸ್ಪಷ್ಟ¬ಪಡಿಸಲು ಮೀನ ಮೇಷ ಎಣಿಸು¬ತ್ತಿದ್ದ ಬಿಜೆಪಿಯು ಗುರುವಾರ ರಾತ್ರಿ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಆದರೆ, ಬೆಳಿಗ್ಗೆ ಗವರ್ನರ್ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿಯಾದ ಮಾಂಝಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.[೨]
ಎನ್.ಡಿ.ಎ. ತನ್ನ ಮುಖ್ಯ ಮಂತ್ರಿ ಅಭ್ಯಥಿಯನ್ನು ಘೋಷಿಸಲಿಲ್ಲ, ಬದಲಿಗೆ ಮೋದಿಯವರ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸಿತು.
ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚಾರ ಚಲನೆಯನ್ನು ಕಂಡುಹಿಡಿಯುವುದಕ್ಕೆ ಜಿಪಿಎಸ್ ಅಳವಡಿಸಿ 243 ಬೊಲೆರೊ ವಾಹನದ ರಥಗಲನ್ನು ಚುನಾವಣೆಯಲ್ಲಿ ಜಿಪಿಎಸ್ ಮೇಲ್ವಿಚಾರಣೆ ಯಲ್ಲಿ ಮತ್ತು ವೀಡಿಯೊ ವ್ಯಾನುಗಳನ್ನು ಬಳಸಲಾಗಿತ್ತು. ಬಿಜೆಪಿ ಸಹ ನಿಗಾದಲ್ಲಿ ಪ್ರಧಾನ ಪಾಟ್ನಾ ಹೊಂದಿಸಿ ಎಲ್ಲಾ 243 ಕ್ಷೇತ್ರಗಳಲ್ಲಿ 40,000 ಹಳ್ಳಿಗಳ ಭೇಟಿ ಯೋಜಿಸಿದ ವಾಹನಗಳು ಇದ್ದವು. ಪ್ರಚಾರ ಪ್ರಧಾನಿ ನರೇಂದ್ರ ಮೋದಿ ಮುಜಾಫರ್ಪುರದಲ್ಲಿ 25 ಜುಲೈ, ನಂದು ಪಾಟ್ನಾದ ಶಾಶ್ವತ ಐಐಟಿ ಕ್ಯಾಂಪಸ್ ಉದ್ಘಾಟಿಸಲ್ಪಟ್ಟಿತು. ಆಲ್ಲಿಂದ ಪ್ರಚಾರ ಪ್ರಾರಂಭಿಸಿತ್ತು. ಬಿಜೆಪಿಯ ಚುನಾವಣೆ ಪ್ರಚಾರವು ಮೂರು ಲಕ್ಷ ಸ್ವಯಂಸೇವಕರನ್ನು ಒಳಗೊಂಡಿತ್ತು. ಮೋದಿ 9 ಆಗಸ್ಟ್ ಮತ್ತು ಗಯಾ ಇವರ ಎರಡನೇ ಚುನಾವಣಾ ರ್ಯಾಲಿ; ಮೂರನೇ ರ್ಯಾಲಿಯನ್ನು ಅರ್ಹಾ ಮತ್ತು ಅಗಸ್ಟ್ 18 ರಂದು ಸಹರ್ಸಾದಲ್ಲಿ ನಡೆಸಿದರು. ಮೋದಿ ಬಿಹಾರಕ್ಕೆ ರೂ 1.25 ಲಕ್ಷ ಕೋಟಿ ಪ್ಯಾಕೇಜ್ ಘೋಶಿಸಿದರು. ಅವರು ಸೆಪ್ಟೆಂಬರ್ 1 ಕ್ಕೆ ಭಾಗಲ್ಪುರ ನಾಲ್ಕನೇ ಸಭೆಯೊಂದರಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಜೊತೆಗೂಡಿ ಬಿಜೆಪಿ ಪ್ರಚಾರದ ಆಂದೋಲನವನ್ನು ಆರಂಭಿಸಿದರು ಮೋದಿ 25 ಅಕ್ಟೋಬರ್ ನಂತರ. ಹಲವಾರು ಕ್ಷೇತ್ರಗಳಲ್ಲಿಪ್ರಚಾರ ನಡೆಸಿದರು.
ಅಕ್ಟೋಬರ್ 26 ರಿಂದ ಬಕ್ಸರ್’ನ ಒಂದು ರ್ಯಾಲಿಯಲ್ಲಿ, ಮೋದಿ ದಲಿತರ ಪರಿಶಿಷ್ಟ ಒಬಿಸಿ ಮೀಸಲಾತಿ ರಕ್ಷಿಸಲು ಪ್ರತಿಜ್ಞೆ ಮಾಡಿದರು. ಅವರು ಮಹಾಘಟಬಂಧನದ ಮೇಲೆ ಒಂದು ಉಪ ಕೋಟಾ ತರುವ ಪಿತೂರಿ ಮಾಡಿದೆಯೆಂದು ಹೇಳಿದರು. ಭಾರತದ ಸರ್ವೋಚ್ಛ ನ್ಯಾಯಾಲಯ ಧರ್ಮದ ಆಧಾರದ ಮೀಸಲಾತಿ 50% ಹೆಚ್ಚು ಇರಬಾರದೆಂದು ಎಂದು ಹೇಳಿದೆ. ಅಕ್ಟೋಬರ್’ 26 ರಂದು ಬೆಟ್ಟಯ್ಯ,ದಲ್ಲಿ ಮತ್ತೆ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್’ಅವರು ಎಸ್ಸಿ, ಎಸ್ಟಿ ಮತ್ತು ಒಬಿಸಿ ಪಾಲು ದುರ್ಬಲಗೊಳಿಸುವ ಆರೋಪ ಮಾಡಿದರು ಈ ಪ್ರಯತ್ನದಲ್ಲಿ ದಲಿತರು ಮತ್ತು ಇತರ ಒಬಿಸಿ ಮೀಸಲಾತಿಯಿಂದ ತೆಗೆದುಕೊಂಡು ಇತರ ಅಲ್ಪಸಂಖ್ಯಾತರಿಗೆ ನೀಡಲು ಯೋಚನೆ ಮಾಡಿದ್ದಾರೆ ಎಂಬ ಅಭಿಪ್ರಾಯದೊಂದಿಗೆ ಅವರಿಗೆ ಭರವಸೆ ನೀಡಲಾಗಿದೆ ಎಂದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮೋದಿಯನ್ನು ಸಮರ್ಥನೆ ಮಾಡಿದರು.[೩][೪][೫]
ಜುಲೈ 2015 ರಂದು 31 ಭಾರತೀಯ ಚುನಾವಣಾ ಆಯೋಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 2015ರ ಅಂತಿಮ ಮತದಾರರ ಪಟ್ಟಿ ಮತ್ತು ಜಾತಿವಾರು ಪಟ್ಟಿ ಪ್ರಕಟಿಸಿತು. ಭಾರತ 2011 ರ ಜನಗಣತಿಯ ಪ್ರಕಾರ ಒಟ್ಟಾರೆ 10,38,04,637 ಜನಸಂಖ್ಯೆಯನ್ನು ಹೊಂದಿದೆ.[೬]
ಕೇಂದ್ರ ಚುನಾವಣಾ ಆಯೋಗವು 9 ಸೆಪ್ಟಂಬರ್ 2015 ರಂದು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿತು. ಚುನಾವಣಾ ಆಯುಕ್ತ ನಸೀಂ ಜೈದಿ ಅವರು ನೀಡಿದ ವಿವರ ಮುಂದಿದೆ. 243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ 2015 ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿತ್ತು.[೭]
ಚುನಾವಣೆಯ ಘೋಷಣೆ ಐದು ಹಂತದ ವೇಳಾ ಪಟ್ಟಿ
೩:
ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಘೋಷಿಸಿಘೋಷಿಸಿದ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ..
ಮೊದಲ ಹಂತ- ಸೆ. 23 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 12 ಮೊದಲ ಹಂತದ ಮತದಾನ.
ಎರಡನೇ ಹಂತ – ಸೆ.28 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 16 ಎರಡನೇ ಹಂತದ ಮತದಾನ
ಮೂರನೇ ಹಂತ – ಅಕ್ಟೋಬರ್ 8 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 28 ಮತದಾನ.
ನಾಲ್ಕನೇ ಹಂತ – ಅಕ್ಟೋಬರ್ 14 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ನವೆಂಬರ್ 1 ನಾಲ್ಕನೇ ಹಂತಕ್ಕೆ ಮತದಾನ.
ಐದನೇ ಹಂತ – ಅಕ್ಟೋಬರ್ 15 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ನವೆಂಬರ್ 5 ಮತದಾನ
ಬಿಹಾರದಲ್ಲಿ ನಿತೀಶ್ ಕುಮಾರ್ ಮಹಾಘಟಬಂಧನ:ಅಥವಾ ಭಾರಿ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿತರಾದರು. ಕುಮಾರ್’ರವರು ಜುಲೈ 2015, 2 ರಿಂದ ಹರ್ ಘರ್ ದಸ್ತಕ್ (ಮನೆಮನೆಗೆ ಹೋಗಿ ಬಾಗಿಲು ತಟ್ಟುವುದು) ಚುನಾವಣಾ ಸಮರ ಪ್ರಾರಂಭಿಸಿದರು. ಮಹಾಘಟಬಂಧನ ಮೈತ್ರಿಯಲ್ಲಿ ಒಪ್ಪಂದದ ಪ್ರಕಾರ ಜೆಡಿ (ಯು), ಆರ್ಜೆಡಿ ಮತ್ತು ಭಾ. ರಾಷ್ಟ್ರೀಯ ಕಾಂಗ್ರೆಸ್’ ಸೇರಿದ್ದವು. ;ಒಟ್ಟು ಇರುವ 243 ಸ್ಥಾನಗಳಲ್ಲಿ ಜೆಡಿ (ಯು)101 ಸ್ಥಾನ ಮತ್ತು ಆರ್ಜೆಡಿ 101 ಸ್ಥಾನಗಳು ಸ್ಪರ್ಧಿಸಿದ್ದವು, ಮತ್ತು ಭಾ. ರಾಷ್ಟ್ರೀಯ ಕಾಂಗ್ರೆಸ್’) 41 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಿತ್ತು
ಮಹಾಘಟಬಂಧನ ದ ಮೈತ್ರಿಯ ಚುನಾವಣಾ ಯೋಜನಾಕಾರ ಪ್ರಶಾಂತ್ ಕಿಶೋರ್ ಆಗಿದ್ದರು. ಜನತಾದಳ ಯುನೈಟೆಡ್. ವಿವಿಧ ನಗರಗಳಲ್ಲಿ ‘ಬಾಗೀದಾರ್’ ಮಂಚ್’ ರಥ’ ಎಂಬ 400 ಆಡಿಯೋ ವಿಷುಯಲ್ ವ್ಯಾನುಗಳನ್ನು ಪ್ರಚಾರಕ್ಕೆ ಉಪಯೋಗಿಸಿತು. ಬಿ ನಿತೀಶ್ ಕುಮಾರ್ ವಲಸಿಗರನ್ನು ವೊಲಿಸಲು ಸಂಪರ್ಕ ದೆಹಲಿ ಮತ್ತು ಮುಂಬಯಿ ಸೇರಿದಂತೆ ಅನೇಕ ಕಡೆ 'ಬಿಹಾರ ಸಮ್ಮಾನ್ ಸಮ್ಮೇಳನ'ವನ್ನು ನಡೆಸಿದರು. ಈ ಚುನಾವಣೆಯ ಅಂಗವಾಗಿ ಚುನಾವಣೆಗೆ ಘೋಷಣೆಗೆ ಮೊದಲು ಪ್ರಧಾನಿ ಮೋದಿಯವರು ಬಿಹಾರ ರೂ 1.25 ಲಕ್ಷ ಕೋಟಿ ಪ್ಯಾಕೇಜ್’ನ್ನು ಚುನಾವಣಾ ರ್ಯಾಲಿಯಲ್ಲಿ ಘೋಷಿಸಿದರು. ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನಡಿ ಚುನಾವಣೆ ಎದುರಿಸುವುದಾಗಿ ಬಿಜೆಪಿ ಹೇಳಿದೆ.[೮]
ಎನ್ಡಿಎ ಮೈತ್ರಿಕೂಟದ ಸ್ಥಾನ ಹೊಂದಾಣಿಕೆ ಬಿಕ್ಕಟ್ಟು ಬಗೆ ಹರಿದು, ಬಿಜೆಪಿ 160 ಸ್ಥಾನಗಳಲ್ಲಿ ಸ್ಪರ್ಧಿಸಿತು. ಒಟ್ಟು 243 ಸ್ಥಾನಗಳ ಪೈಕಿ ಬಿಜೆಪಿ 160 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು,, ಉಳಿದ 83 ಸ್ಥಾನಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿತು. ರಾಮ್‌ವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷಕ್ಕೆ 40 ಸ್ಥಾನಗಳು, ಉಪೇಂದ್ರ ಕುಶ್ವಾ ನೇತೃತ್ವದ ಆರ್‌ಎಲ್‌ಎಸ್‌ಪಿಗೆ 23 ಸ್ಥಾನಗಳು ಹಾಗೂ ಮಾಜಿ ಮುಖ್ಯಮಂತ್ರಿ ಮಾಂಝಿ ನೇತೃತ್ವದ ಎಚ್‌ಎಎಂ ಪಕ್ಷಕ್ಕೆ 20 ಸ್ಥಾನಗಳನ್ನು ಬಿಟ್ಟು ಕೊಡಲಾಯಿತು.[೯]
ಬಿಹಾರದ ರಾಜಕೀಯ ಬಿಕ್ಕಟ್ಟು ನಂತರ ದಿ. 8 ಮೇ 2015 ರಂದು ಜನತಾ ದಳ (ಸಂಯುಕ್ತ )ವನ್ನು 18 (ಎಂ.ಎಲ್.ಎ.) ಇತರ ಸದಸ್ಯರೊಂದಿಗೆ ತೊರೆದ ಬಿಹಾರದ ಮಾಜಿ ಮುಖ್ಯಮಂತ್ರಿ, ಜಿತನ್’ ರಾಮ್ ಮಾಂಜಿ, ಹೊಸ ಪಕ್ಷ ಕಟ್ಟಿದರು. ಅದು 'ಹಿಂದೂಸ್ತಾನಿ ಆವಾಂ ಮೋರ್ಚಾ' (ಅರ್ಥ: ಭಾರತೀಯ ಪೀಪಲ್ಸ್ ಫ್ರಂಟ್, ಸಂಕ್ಷೇಪಿಸಿ :HAM-) ಎಂಬುದು ಆ ಪಕ್ಷದ ಹೆಸರು. ನಂತರದ ಹಿಂದೂಸ್ತಾನಿ ಆವಾಂ ಮೋರ್ಚಾ (ಜಾತ್ಯತೀತ) (ಹೆಚ್’ಎ.ಎಮ್- ಎಸ್) ಎಂದು ಬದಲಾಯಿತು. ಜುಲೈ 2015 ರಲ್ಲಿ, ಚುನಾವಣಾ ಆಯೋಗ ಅದನ್ನು ಒಂದು ರಾಜಕೀಯ ಪಕ್ಷವಾಗಿ ಮನ್ನಣೆ ನೀಡಿತು. ಪಕ್ಷದ ಚುನಾವಣಾ ಚಿಹ್ನೆ ಒಂದು ‘ದೂರವಾಣಿ’
ಎಲ್ಲಾ ಸಂಖ್ಯಾಶಾಸ್ತ್ರಜ್ಞರೂ ಈ ಚುನಾವಣೆಯಲ್ಲಿ ಜನರ/ ಓಟುದಾರರ ಮನಸ್ಸನ್ನು ಸರಿಯಾಗಿತಿಳಿಯಲು ವಿಫಲಾದರು.
ಸಿ.ಬಿ.ಎನ್' ಸುದ್ದಿ ಸಂಸ್ಥೆ ಮಾತ್ರಾ ಮಹಾಮೈತ್ರಿಗೆ 137 ಸ್ಥಾನದವರೆಗೆ ಊಹಿಸಿತು. ಉಳಿದವರೆಲ್ಲಾ ೧೨೦- ೧೨೫ ರ ಮುಂದೆ ಹೋಗಲಿಲ್ಲ.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ 20-11-2015 ರಂದು, ಅಸ್ತಿತ್ವಕ್ಕೆ ಬಂದ ಮೂರು ಪಕ್ಷಗಳ ಸರ್ಕಾರ ರಚನೆಯಾಯಿತು.ಜೆಡಿಯು ಮುಖಂಡರಾಗಿರುವ ನಿತೀಶ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದು ಸೇರಿ ಐದನೇ ಸಲ ಮುಖ್ಯಮಂತ್ರಿಯಾದರು. 28 ಸಚಿವರ ಹೊಸ ಸಂಪುಟದಲ್ಲಿ ಆರ್‌ಜೆಡಿ (80 ಸದಸ್ಯರು) ಮತ್ತು ಜೆಡಿಯು (71ಸದಸ್ಯರು) ಪಕ್ಷದ ತಲಾ 12 ಹಾಗೂ ಕಾಂಗ್ರೆಸ್‌ನ ನಾಲ್ವರು ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಇಬ್ಬರು ಮಹಿಳೆಯರು.
ಮಹಾಮೈತ್ರಿ ಸರ್ಕಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಇಬ್ಬರು ಮಕ್ಕಳಿಗೂ ಸ್ಥಾನ ದೊರೆತಿದೆ. ಇವರಿಬ್ಬರೂ ಮೊದಲ ಸಲ ಶಾಸಕರಾಗಿದ್ದರೂ, ಕಿರಿಯ ಪುತ್ರ ತೇಜಸ್ವಿ ಯಾದವ್‌ಗೆ ಉಪ ಮುಖ್ಯಮಂತ್ರಿ ಹುದ್ದೆಯ ಜತೆಗೆ ಲೋಕೋಪಯೋಗಿ ಖಾತೆ, ಹಿರಿಯ ಪುತ್ರ ತೇಜ್‌ಪ್ರತಾಪ್ ಯಾದವ್‌ಗೆ ಆರೋಗ್ಯ ಖಾತೆ ನೀಡಲಾಗಿದೆ.
ಜೆಡಿಯು ಬಿಹಾರ ಘಟಕದ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಕೂಡ ಸಚಿವರಾಗಿದ್ದಾರೆ.
ನಿತೀಶ್ ಕುಮಾರ್ ಇಂದು ಪಾಟ್ನಾದಲಿ ನವೆಂಬರ್20, 2015ರಂದು,ಬಿಹಾರ ಮುಖ್ಯಮಂತ್ರಿಯಾಗಿ
ಮೆಗಾ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಎರಡು ಮಕ್ಕಳು ತೇಜಸ್ವಿ, ತೇಜ್ ಪ್ರತಾಪ್ ಸೇರಿದಂತೆ 28 ಸಚಿವರು ಪ್ರಮಾಣವಚನ ಸ್ವೀಕರಿಸಿದರು, ನಿತೀಶ್ ಜೆಡಿ (ಯು)ನಿಂದ 12 ಸದಸ್ಯರನ್ನು ಅಲ್ಲದೆ ಆರ್ಜೆಡಿಯಿಂದ 12 ಸದಸ್ಯರನ್ನು ಮತ್ತು ಕಾಂಗ್ರೆಸ್ನಿಂದ ನಾಲ್ಕುಸದಸ್ಯರನ್ನು ತೆಗೆದುಕೊಂಡಿದ್ದಾರೆ. ಗವರ್ನರ್ ರಾಮ್ ನಾಥ್ ಕೋವಿಂದ್ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ನಿತೀಶ್ ಸಂಪುಟದಲ್ಲಿ ಮಂತ್ರಿಗಳ ಪಟ್ಟಿ
ಮಂತ್ರಿಗಳು ---ಖಾತೆಗಳು
ನಿತೀಶ್ ಕುಮಾರ್: ಮನೆ, ಸಾಮಾನ್ಯ ಆಡಳಿತ, ಮಾಹಿತಿ & ಸಾರ್ವಜನಿಕ ಸಂವಹನ
ಆರ್ಜೆಡಿ ಮಂತ್ರಿಗಳು:
1.ತೇಜಸ್ವಿ ಯಾದವ್ (ರಘೋಪುರ್ ರಿಂದ ಲಭಿಸಿತು) - ರಸ್ತೆ ನಿರ್ಮಾಣ, ಕಟ್ಟಡ ಕನ್ಸ್ಟ್ರಕ್ಷನ್ಸ್ & ಹಿಂದುಳಿದ ವರ್ಗಗಳ ಅಭಿವೃದ್ಧಿ
2. ತೇಜ್ ಪ್ರತಾಪ್ (ಮಾಹುವಾ, ದಿಂದ ಆಯ್ಕೆ) - ಆರೋಗ್ಯ, ಅರಣ್ಯ ಮತ್ತು ಪರಿಸರ, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯದ
3. ವಿಜಯ ಪ್ರಕಾಶ (ಜಮುಯಿ ರಿಂದ ಲಭಿಸಿತು) - ಕಾರ್ಮಿಕ ಸಂಪನ್ಮೂಲ
4. ಅನಿತಾ ದೇವಿ (ನೋಖ ರಿಂದ ಲಭಿಸಿತು) - ಪ್ರವಾಸೋದ್ಯಮ
5ಜ್ಮುಮೇಶ್ವರ್ ಚೌಧರಿ (ಗಾರ್ಕಾ ದಿಂದ) - ಮೈನಿಂಗ್
6.ಚಂದ್ರಶೇಖರ್- ವಿಪತ್ತು ನಿರ್ವಹಣಾ
7.ಆಡಿ. ಅಬ್ದುಲ್ ಗಫೂರ್ (ಮಹಿಶಿ ದಿಂದ) - ಅಲ್ಪಸಂಖ್ಯಾತ ಅಭಿವೃದ್ಧಿ
8.ಶಿವ ಚಂದ್ರ ರಾಮ
9. ರಾಮವಿಚಾರ್ ರೈ (ಬಂದರುಗಳು ಅತಿ ರಿಂದ ಲಭಿಸಿತು) - ಕೃಷಿ
10. ಚಂದ್ರಿಕಾ ರೈ (ಪರ್ಸಾ ದಿಂದ) - ಸಾರಿಗೆ
11. ಅಲೋಕ್ ಕುಮಾರ್ ಮೆಹ್ತಾ (ಉಜಯ್ ಪುರ ದಿಂದ ಜಯಗಳಿಸಿದರು)
12. ಅಬ್ದುಲ್ ಬರಿ ಸಿದ್ದಿಕಿ (ಅಲಿನಗರ್‍ದಿಂದ ಜಯಗಳಿಸಿದರು) - ಹಣಕಾಸು ಸಚಿವಾಲಯ
ಜೆಡಿಯು
1. ಕಪಿಲ್ ದೇವ್ ಕಾಮತ್ - ಪಂಚಾಯತಿ ರಾಜ್
2. ಮದನ್ ಸಾಹ್ನಿ (ಗೌರ ಬುರಾಮ್ ದಿಂದ) - ಆಹಾರ ಮತ್ತು ನಾಗರಿಕ ಪೂರೈಕೆ
ಆರ್ಜೆಡಿ ಸಚಿವರು : ತೇಜಸ್ವಿ ಯಾದವ್ ತೇಜ್ ಪ್ರತಾಪ್ ಯಾದವ್, ಅಬ್ದುಲ್ ಬರಿ ಸಿದ್ಧಿಕಿ, ಅಲೋಕ್ ಕುಮಾರ್ ಮೆಹ್ತಾ, ಚಂದ್ರಿಕಾ ರೈ, ರಾಮ್ ವಿಚಾರ್ ರೈ, ಶಿವ ರಾಮ ಚಂದ್ರ, ಅಬ್ದುಲ್ ಗಫೂರ್, ಚಂದ್ರಶೇಖರ್ ಮುನೇಶ್ವರ ಚೌಧರಿ, ಅನಿತಾ ದೇವಿ ಮತ್ತು ವಿಜಯ ಪ್ರಕಾಶ.
ಜೆಡಿ (ಯು) ನಿಂದ: ಬಿಜೇಂದ್ರ ಪ್ರಸಾದ್ ಯಾದವ್, ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಶ್ರವಣ ಕುಮಾರ್, ಜೇ ಕುಮಾರ್ ಸಿಂಗ್ ಕೃಷ್ಣಂದನ್ ಪ್ರಸಾದ್ ವರ್ಮಾ, ಮಹೇಶ್ವರ ಹಝಾರಿ, ಶೈಲೇಶ್ ಕುಮಾರ್, ಮಂಜು ವರ್ಮಾ ಸಂತೋಷ್ ಕುಮಾರ್ ನಿರಾಲಾ, ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್, ಮದನ್ ಸಾಹ್ನಿ, ಮತ್ತೂ ಕಪಿಲ್ ದೇವ್ ಕಾಮತ್, + ನಿತೀಶ್ ಕುಮಾರ್
ಅವರ ಕ್ಯಾಬಿನೆಟ್‘ನಲ್ಲಿ, ಬಿಹಾರದ ಲಾಲು ಪ್ರಸಾದ್’ಅವರ ಎರಡು ಮಕ್ಕಳು- ಅವರು ಇಪ್ಪತ್ತರ ದಶಕದವರು-ಕಿರಿಯ ಸದಸ್ಯರು,. 28 ಸದಸ್ಯರ ಸಂಪುಟದ ವಯಸ್ಸು ಸರಾಸರಿ 52 ಇತರ 26 ಮಂತ್ರಿಗಳವಯಸ್ಸು 40ಕ್ಕೆ ಕಡಿಮೆ ಇಲ್ಲ ನಿತೀಶ್ ಕುಮಾರ್ ಮುಖ್ಯಮಂತ್ರಿ -64; ಮಂತ್ರಿಗಳಲ್ಲಿ ನಾಲ್ವರು,, ಜೆಡಿ (ಯು) ಮತ್ತು ಮೂರು ಆರ್ಜೆಡಿ- 60; ಎಲ್ಲಾ ನಾಲ್ಕು ಕಾಂಗ್ರೆಸ್ ಸಚಿವರು 40 ರಿಂದ 60 ಹಾಗೆಯೇ.
28 ಮಂತ್ರಿಗಳು, 19 ಮೊದಲ ಸಲದವರು., ಶಾಲಾ ಶ್ರೇಣಿ ವಿವಿಧ ಹಂತಗಳಲ್ಲಿ ಲಾಲು ಮಕ್ಕಳ ಸೇರಿದಂತೆ ಹನ್ನೆರಡು, ಶಾಲಾ ಮಟ್ಟದ ಅಧ್ಯಯನ - - ಏಳು ಸ್ನಾತಕೋತ್ತರ ಪದವೀಧರರು, ಇವುಗಳಲ್ಲಿ ಲಾಲು ಪಕ್ಷದವರು ನಾಲ್ಕು, ಮುಖ್ಯಮಂತ್ರಿ ನಿತೀಶ್ ಕುಮಾರ್’ಅವರು ವಿದ್ಯುತ್ ಎಂಜಿನಿಯರಿಂಗ್ ಪದವಿಧರರು.[೧೪]
ನಿತೀಶ್ ಕುಮಾರ್ ರವರ ಬಿಹಾರದ ತಂಡ 28-: 7 ಮಾಸ್ಟರ್ಸ್ ಪದವಿ, 9 ಪದವೀಧರರು, 12 ಮಂತ್ರಿಗಳು ಶಾಲೆಗೆ ಹೋದವರು.
ನಿತೀಶ್ ರಾಜಿನಾಮೆ ಮತ್ತು ಪುನಃ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
ನಿತೀಶ್, ಆರ್,ಜೆ,ಡಿ, ತೊರೆದು ರಾಜೀನಾಮೆ ನೀಡಿ, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು, ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ದಿ.27 Jul, 2017 ಗುರುವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ, ರಾಜೀನಾಮೆ ನೀಡಿದ 24 ಗಂಟೆಗಳ ಒಳಗಾಗಿ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂತಾಗಿದೆ. ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದರು. ಬಿಹಾರದ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ನಿತೀಶ್ ಅವರು ಕಳೆದ 12 ವರ್ಷಗಳಲ್ಲಿ 6 ಬಾರಿ ಬಿಹಾರದ ಮುಖ್ಯಮಂತ್ರಿಯಾದಂತಾಗಿದೆ.
ಬುಧವಾರ ಹಠಾತ್ ನಿರ್ಧಾರ ಕೈಗೊಂಡು ಆರ್‌ಜೆಡಿ, ಕಾಂಗ್ರೆಸ್ ಜತೆಗಿನ ಮೈತ್ರಿಕೂಟದಿಂದ ಹೊರಬಂದಿದ್ದ ನಿತೀಶ್ ಅವರು ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿದ್ದರು. ಆರ್‌ಜೆಡಿ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಂದಾಗಿ ನಿತೀಶ್ ಈ ನಿರ್ಧಾರ ಕೈಗೊಂಡಿದ್ದರು. 2014ರ ಲೋಕಸಭೆ ಚುನಾವಣೆ ಸಂದರ್ಭ ನಿತೀಶ್ ಅವರು ಎನ್‌ಡಿಎ ಜತೆ ಮೈತ್ರಿ ಮುರಿದುಕೊಂಡಿದ್ದರು.[೧೫]