ರಕ್ಷಿತ್ ಶೆಟ್ಟಿ | |
---|---|
Born | |
Nationality | ಭಾರತೀಯ |
Alma mater | NMAM ತಾಂತ್ರಿಕ ವಿದ್ಯಾಲಯ |
Occupation(s) | ಚಿತ್ರನಟ, ಚಿತ್ರನಿರ್ಮಾಪಕ |
Years active | ೨೦೦೯ರಿಂದ |
Title | ಸಿಂಪಲ್ ಸ್ಟಾರ್ |
ರಕ್ಷಿತ್ ಶೆಟ್ಟಿ ಒಬ್ಬ ಕನ್ನಡ ಚಲನಚಿತ್ರ ನಟ. ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ(NMAMIT)ದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದ ನಂತರ, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.[೧][೨]
ರಕ್ಷಿತ್ ಶೆಟ್ಟಿಯವರು ಜೂನ್ ೬, ೧೯೮೩ ರಂದು ಉಡುಪಿಯಲ್ಲಿ ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಊರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ತಮ್ಮ ಶಾಲಾ ದಿನಗಳಲ್ಲಿ ಅವರು ತುಳುನಾಡು ಪ್ರದೇಶದ ಜಾನಪದ ನೃತ್ಯವಾದ ಪಿಲಿ ನಲಿಕೆ ನೃತ್ಯಗಾರರಾಗಿದ್ದರು. ಇದು ಅವರ ೨೦೧೪ ರ ಚಿತ್ರ ಉಳಿದವರು ಕಂಡಂತೆ ಚಿತ್ರದಲ್ಲಿನ ನೃತ್ಯಗಾರರಿಗೆ ಪ್ರಮುಖ ಪಾತ್ರವನ್ನು ಒದಗಿಸಿತು.[೩][೪][೫]
ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ನಮ್ ಏರಿಯಾಲ್ ಒಂದಿನ. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು.
ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ಉಳಿದವರು ಕಂಡಂತೆ ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.[೬] ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು.[೭] ನಂತರ ಅವರು ವಾಸ್ತು ಪ್ರಕಾರ (೨೦೧೫) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸುಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ ಕಿರಿಕ್ ಪಾರ್ಟಿಆಗಿದೆ.[೮]
ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ. ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಸೃಷ್ಟಿಸಿದೆ.[೯][೧೦]
ವರ್ಷ | ಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
2010 | ನಮ್ ಏರಿಯಾಲ್ ಒಂದಿನ | ಅರವಿಂದ | |
2012 | ತುಘಲಕ್ | ರಾಘು | |
2013 | ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ | ಕುಶಾಲ್ "ಜೆರೀನ್" | |
2014 | ಉಳಿದವರು ಕಂಡಂತೆ | ರಿಚರ್ಡ್ "ರಿಚಿ" ಆಂಟನಿ | ನಿರ್ದೇಶಕ, ಚಿತ್ರಕಥೆಗಾರ |
2014 | ಬಹುಪರಾಕ್ | ರಿಚಿ | ಅತಿಥಿಪಾತ್ರ |
2015 | ವಾಸ್ತು ಪ್ರಕಾರ | ಕುಬೇರ | |
2015 | ಜಾತ್ರೆ | ಸ್ವತಃ | ಅತಿಥಿಪಾತ್ರ |
2016 | ರಿಕ್ಕಿ | ರಾಧಾಕೃಷ್ಣ "ರಿಕ್ಕಿ" | |
2016 | ಗೋಧಿ ಬಣ್ಣ ಸಾಧಾರಣ ಮೈಕಟ್ಟು | ಶಿವ ವಿ ರಾವ್ | |
2016 | ಜಿಗರ್ಥಂಡಾ | ಸ್ವತಃ | ಅತಿಥಿಪಾತ್ರ |
2016 | ಕಿರಿಕ್ ಪಾರ್ಟಿ | ಕರ್ಣ | ಸಹ ನಿರ್ಮಾಪಕ, ಬರಹಗಾರ |
2019 | ಅವನೇ ಶ್ರೀಮನ್‌ನಾರಾಯಣ | ನಾರಾಯಣ | ಸಹ ಚಿತ್ರಕಥೆಗಾರ[೧೧] |
2022 | 777 ಚಾರ್ಲೀ | ಧರ್ಮ | ಸಹ ನಿರ್ಮಾಪಕ |
2023 | ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ | ಮನು | |
2023 | ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ | ಮನು | |
2024 | ರಿಚರ್ಡ್ ಅಂತೋನಿ† | ರಿಚ್ಚಿ | |
2024 | ಪುಣ್ಯಕೋಟಿ† | ಸ್ವತಃ | ಸಹ ನಿರ್ದೇಶಕ |
ಇನ್ನೂ ಬಿಡುಗಡೆಯಾಗದ ಚಿತ್ರ |
ವರ್ಷ[lower-alpha ೧] | ವರ್ಗ | ಪ್ರಶಸ್ತಿ | ಚಿತ್ರ | ಫಲಿತಾಂಶ |
---|---|---|---|---|
೨೦೧೫ | ಅತ್ಯುತ್ತಮ ನಿರ್ದೇಶಕ | ಫಿಲಂಫೇರ್ ಪ್ರಶಸ್ತಿ (ದಕ್ಷಿಣ) | ಉಳಿದವರು ಕಂಡಂತೆ | ಗೆದ್ದಿದ್ದಾರೆ[೧೨] |
೨೦೧೫ | ಅತ್ಯುತ್ತಮ ನಟ | ಫಿಲಂಫೇರ್ ಪ್ರಶಸ್ತಿ (ದಕ್ಷಿಣ) | ಉಳಿದವರು ಕಂಡಂತೆ | ನಾಮನಿರ್ದೇಶಿತ[೧೨] |
೨೦೧೫ | ಅತ್ಯುತ್ತಮ ಸಾಹಿತಿ | ಫಿಲಂಫೇರ್ ಪ್ರಶಸ್ತಿ (ದಕ್ಷಿಣ) | ಉಳಿದವರು ಕಂಡಂತೆ | ನಾಮನಿರ್ದೇಶಿತ[೧೨] |
೨೦೧೫ | ಅತ್ಯುತ್ತಮ ಚೊಚ್ಚಲ ನಿರ್ದೇಶಕ | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ | ಉಳಿದವರು ಕಂಡಂತೆ | ಗೆದ್ದಿದ್ದಾರೆ[೭] |
೨೦೧೭ | ಅತ್ಯುತ್ತಮ ಪೋಷಕ ನಟ | ಐಐಫಆ ಉತ್ಸವಮ್ | ಗೋದಿ ಬಣ್ಣ ಸಾಧಾರಣ ಮೈಕಟ್ಟು | ಗೆದ್ದಿದ್ದಾರೆ |
<ref>
tag; no text was provided for refs named db
{{cite web}}
: CS1 maint: url-status (link)