ಹಿಂದಿನ ಹೆಸರು |
|
---|---|
ಧ್ಯೇಯ | 誠樸 (ಫಾಕ್-ಫಾ-ಸು: ಶಿನ್-ಫೋಕ್, ಪೆಹ್-ಓ-ಜೀ: ಸೆಂಗ್-ಫೋಕ್)[೧] |
Motto in English | ಪ್ರಾಮಾಣಿಕತೆ ಮತ್ತು ಸರಳತೆ[೨] |
ಪ್ರಕಾರ | ಪಬ್ಲಿಕ್ |
ಸ್ಥಾಪನೆ | ೧೯೦೨[೩] |
ಅಧ್ಯಕ್ಷರು | ಜಿಂಗ್-ಯಾಂಗ್ ಜೌ |
ಶೈಕ್ಷಣಿಕ ಸಿಬ್ಬಂಧಿ | ೭೪೬ (ಪೂರ್ಣ ಸಮಯ) |
ಪದವಿ ಶಿಕ್ಷಣ | ೫,೭೪೩ |
ಸ್ನಾತಕೋತ್ತರ ಶಿಕ್ಷಣ | ೬,೦೩೭ |
ಸ್ಥಳ | ಝೋಂಗ್ಲಿ, ತಾವೊವಾನ್ ನಗರ, ತೈವಾನ್ |
ಆವರಣ | ಉಪನಗರ |
ಮಾನ್ಯತೆಗಳು | ತೈವಾನ್ ವಿಶ್ವವಿದ್ಯಾಲಯ ವ್ಯವಸ್ಥೆ ಯುಎಐಟಿಇಡಿ |
ಜಾಲತಾಣ | www.ncu.edu.tw |
ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯ (ಎನ್ಸಿಯು) ಇದು ತೈವಾನ್ ಮೂಲದ ರಿಪಬ್ಲಿಕ್ ಆಫ್ ಚೀನಾದ ದೀರ್ಘಕಾಲೀನ ಸಂಪ್ರದಾಯಗಳನ್ನು ಹೊಂದಿರುವ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಇದನ್ನು ೧೯೦೨ ರಲ್ಲಿ, ಸ್ಥಾಪಿಸಲಾಯಿತು ಮತ್ತು ೧೯೧೫ ರಲ್ಲಿ ಮರುನಾಮಕರಣ ಮಾಡಲಾಯಿತು. ಈ ಶಾಲೆಯು ಮೊದಲು ತೈವಾನ್ಗೆ ಸ್ಥಳಾಂತರಗೊಂಡಾಗ ಆರಂಭದಲ್ಲಿ ಮಿಯಾವೊಲಿಯಲ್ಲಿತ್ತು. ಆದರೆ, ೧೯೬೨ ರಲ್ಲಿ, ಝೊಂಗ್ಲಿಗೆ ಸ್ಥಳಾಂತರಗೊಂಡಿತು ಮತ್ತು ಸಮಗ್ರ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಗೊಂಡಿತು. ಇದು ಕೈಗಾರಿಕಾ ಅರ್ಥಶಾಸ್ತ್ರ[೪] ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಂಶೋಧಿಸಿದ ತೈವಾನ್ನ ಮೊದಲ ವಿಶ್ವವಿದ್ಯಾಲಯವಾಗಿದೆ (ತೈವಾನ್ ನ ಗ್ರಾಹಕ ವಿಶ್ವಾಸ ಸೂಚ್ಯಂಕವನ್ನು ಎನ್ಸಿಯು ಮಾಸಿಕವಾಗಿ ಬಿಡುಗಡೆ ಮಾಡುತ್ತದೆ).[೫] ಎನ್ಸಿಯು ಎಎಸಿಎಸ್ಬಿ ಸದಸ್ಯ ರಾಷ್ಟ್ರವಾಗಿದೆ.[೬] ಶಿಕ್ಷಣ ಸಚಿವಾಲಯವು ಆಯ್ಕೆ ಮಾಡಿದ ಸಂಶೋಧನೆಯಲ್ಲಿ ಎನ್ಸಿಯು ಆರು ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. [೭][೮]
ಎನ್ಸಿಯು ಈಗ ಕಾಲೇಜ್ ಆಫ್ ಲಿಬರಲ್ ಆರ್ಟ್ಸ್, ಕಾಲೇಜ್ ಆಫ್ ಸೈನ್ಸ್, ಕಾಲೇಜ್ ಆಫ್ ಎಂಜಿನಿಯರಿಂಗ್, ಕಾಲೇಜ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಕಾಲೇಜ್ ಆಫ್ ಬಯೋಮೆಡಿಕಲ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಕಾಲೇಜ್ ಆಫ್ ಅರ್ಥ್ ಸೈನ್ಸಸ್, ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಾಲೇಜ್ ಆಫ್ ಹಕ್ಕಾ ಸ್ಟಡೀಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಂಟು ಕಾಲೇಜುಗಳನ್ನು ಹೊಂದಿದೆ.
ಪದವಿಪೂರ್ವ ಜನಸಂಖ್ಯೆಯನ್ನು ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿಯ ಅಸೋಸಿಯೇಟೆಡ್ ಸ್ಟೂಡೆಂಟ್ಸ್, ೧೯೯೧ ರಲ್ಲಿ ಸ್ಥಾಪಿಸಲಾಯಿತು.
೧೯೦೨ ರಲ್ಲಿ, ಸಂಜಿಯಾಂಗ್ ನಾರ್ಮಲ್ ಸ್ಕೂಲ್ ಎಂದು ಸ್ಥಾಪಿತವಾದ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಹಲವಾರು ಹೆಸರು ಬದಲಾವಣೆಗಳಿಗೆ ಒಳಗಾಯಿತು. ಉದಾಹರಣೆಗೆ, ನಾನ್ಜಿಂಗ್ ಹೈಯರ್ ನಾರ್ಮಲ್ ಸ್ಕೂಲ್, ನ್ಯಾಷನಲ್ ಸೌತೀಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಪ್ರಸ್ತುತ, ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ. ಆದರೆ, ೧೯೪೯ ರಲ್ಲಿ, ಚೀನಾದ ಕಮ್ಯುನಿಸ್ಟ್ ಪಕ್ಷವು ಮುಖ್ಯ ಭೂಭಾಗದ ಮೇಲೆ ನಿಯಂತ್ರಣ ಸಾಧಿಸಿದ ನಂತರ, ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯವನ್ನು ೧೯೬೨ ರಂದು, ತೈವಾನ್ನಲ್ಲಿ ಮಿಯಾವೊಲಿ ಕೌಂಟಿಯಲ್ಲಿ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಆಗಿ ಮರುಸ್ಥಾಪಿಸಲಾಯಿತು. ಕಮ್ಯುನಿಸ್ಟ್ ನಿಯಂತ್ರಣದಲ್ಲಿದ್ದ ವಿಶ್ವವಿದ್ಯಾಲಯದ ಮೂಲ ಸ್ಥಳವು ಅಂದಿನಿಂದ ನಾನ್ಜಿಂಗ್ ವಿಶ್ವವಿದ್ಯಾಲಯದ ಕ್ಯಾಂಪಸ್ನ ಭಾಗವಾಗಿದೆ. ೧೯೬೮ ರಲ್ಲಿ, ಎನ್ಸಿಯು ತೈವಾನ್ನ ಟಾವೊಯುವಾನ್ ಕೌಂಟಿಯ (ಈಗ ಝೊಂಗ್ಲಿ ಜಿಲ್ಲೆ, ಟಾವೊಯುವಾನ್ ನಗರ) ಝೊಂಗ್ಲಿಯ ಶುವಾಂಗ್ಲಿಯನ್ಪೊ ಜಿಲ್ಲೆಯಲ್ಲಿರುವ ತನ್ನ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಗೊಂಡಿತು ಮತ್ತು ಇದನ್ನು ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ೧೯೭೯ ರಲ್ಲಿ, ಇದನ್ನು ಅಧಿಕೃತವಾಗಿ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಎಂಬ ಹೆಸರಿನಲ್ಲಿ ಮರುಸ್ಥಾಪಿಸಲಾಯಿತು. ೨೦೦೩ ರಲ್ಲಿ, ಎನ್ಸಿಯು ಮತ್ತು ಇತರ ಮೂರು ರಾಷ್ಟ್ರೀಯ ವಿಶ್ವವಿದ್ಯಾಲಯಗಳು ತೈವಾನ್ ಸಹಕಾರ ಸಹಭಾಗಿತ್ವದ ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಸ್ಥಾಪಿಸಿದವು. ಈಗ ಎನ್ಸಿಯು ಸಂಶೋಧನೆ ಆಧಾರಿತ ರಾಷ್ಟ್ರೀಯ ಸಮಗ್ರ ವಿಶ್ವವಿದ್ಯಾಲಯವಾಗಿದೆ.[೯]
ವಿಶ್ವವಿದ್ಯಾಲಯದ ಟಾವೊಯುವಾನ್ ಸಿಟಿ ಕ್ಯಾಂಪಸ್ ದ್ವೀಪದ ಉತ್ತರ ಭಾಗದಲ್ಲಿದೆ. ಇದು ರಾಜಧಾನಿ ತೈಪೆಯಿಂದ ಸುಮಾರು ೪೫ ನಿಮಿಷಗಳ ದೂರದಲ್ಲಿದೆ. ದೊಡ್ಡದಾದ, ಹಸಿರು ಬೆಟ್ಟದ ಮೇಲಿನ ಕ್ಯಾಂಪಸ್, ಜನನಿಬಿಡ ಡೌನ್ಟೌನ್ ಝೊಂಗ್ಲಿಯಿಂದ ಸ್ವಲ್ಪ ದೂರದಲ್ಲಿದೆ. ಎನ್ಸಿಯು ಕ್ಯಾಂಪಸ್ ತೈವಾನ್ ಟಾವೊಯುವಾನ್ ಇನ್ಟರ್ನ್ಯಾಷನಲ್ ಏರ್ಪೋರ್ಟ್ (ಟಿಪಿಇ) ನಿಂದ ಕೇವಲ ೩೦ ನಿಮಿಷಗಳ ದೂರದಲ್ಲಿದೆ. ಇದು ಅಂತರರಾಷ್ಟ್ರೀಯ ಪ್ರಯಾಣಕ್ಕೆ ತುಂಬಾ ಅನುಕೂಲಕರವಾಗಿದೆ.
ಎನ್ಸಿಯು ಲುಲಿನ್ ವೀಕ್ಷಣಾಲಯವು ತೈವಾನ್ನ ದಕ್ಷಿಣ ಭಾಗದಲ್ಲಿರುವ ಯುಶಾನ್ ರಾಷ್ಟ್ರೀಯ ಉದ್ಯಾನವನದ ಬಳಿ ಇದೆ.
ಎನ್ಸಿಯು ಎಂಟು ಕಾಲೇಜುಗಳನ್ನು ಒಳಗೊಂಡಿದೆ: ಅರ್ಥ್ ಸೈನ್ಸ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್, ಹಕ್ಕಾ ಸ್ಟಡೀಸ್, ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ, ಲಿಬರಲ್ ಆರ್ಟ್ಸ್, ಸೈನ್ಸ್ ಮತ್ತು ಮ್ಯಾನೇಜ್ಮೆಂಟ್. ಪ್ರತಿ ಕಾಲೇಜು ಬಾಹ್ಯಾಕಾಶ ಮತ್ತು ದೂರ ಸಂವೇದಿ ಸಂಶೋಧನಾ ಕೇಂದ್ರ, ಅಪಾಯ ತಗ್ಗಿಸುವಿಕೆ ಮತ್ತು ತಡೆಗಟ್ಟುವಿಕೆ, ತೈವಾನ್ ಆರ್ಥಿಕ ಅಭಿವೃದ್ಧಿ, ಜೈವಿಕ ತಂತ್ರಜ್ಞಾನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ಮತ್ತು ಹಲವಾರು ಬೊಟಿಕ್ ಶೈಲಿಯ ಮಾನವಿಕ ಕೇಂದ್ರಗಳಂತಹ ಹಲವಾರು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಒಟ್ಟಾರೆಯಾಗಿ, ಎಂಟು ಕಾಲೇಜುಗಳು ೧೯ ಪದವಿಪೂರ್ವ ವಿಭಾಗಗಳು, ೪೮ ಪದವಿ ಸಂಸ್ಥೆಗಳು ಮತ್ತು ೩೮ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ.
ತೈವಾನ್ನ ಪ್ರಮುಖ ಶೈಕ್ಷಣಿಕ ಸಂಶೋಧನಾ ಸಂಸ್ಥೆಯಾದ ಅಕಾಡೆಮಿಯಾ ಸಿನಿಕಾದ ಅರ್ಥ್ ಸಿಸ್ಟಮ್ ಸೈನ್ಸ್ನಲ್ಲಿ ತೈವಾನ್ ಇಂಟರ್ನ್ಯಾಷನಲ್ ಗ್ರಾಜುಯೇಟ್ ಪ್ರೋಗ್ರಾಂನಲ್ಲಿ ಎನ್ಸಿಯು ಭಾಗವಹಿಸುತ್ತದೆ.
{{cite book}}
: CS1 maint: location missing publisher (link)