ರೇಣುಕಾ ಸಿಂಗ್ ಸರುತ | |
---|---|
ಬುಡಕಟ್ಟು ವ್ಯವಹಾರಗಳಿಗೆ ರಾಜ್ಯ ಸಚಿವರು
| |
ಹಾಲಿ | |
ಅಧಿಕಾರ ಸ್ವೀಕಾರ ೩೦ ಮೇ ೨೦೧೯ | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಜಸ್ವಂತಸಿನ್ಹ ಸುಮನ್ಭಾಯ್ ಭಭೋರ್ |
ಸಂಸತ್ ಸದಸ್ಯ, ಲೋಕಸಭೆ
| |
ಹಾಲಿ | |
ಅಧಿಕಾರ ಸ್ವೀಕಾರ ೨೩ ಮೇ ೨೦೧೯ | |
ಪೂರ್ವಾಧಿಕಾರಿ | ಕಮಲ್ಭನ್ ಸಿಂಗ್ ಮರಾಬಿ |
ಮತಕ್ಷೇತ್ರ | ಸರ್ಗುಜಾ |
ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣಕ್ಕಾಗಿ,
ಛತ್ತೀಸ್‌ಗಢ ಸರ್ಕಾರ | |
ಅಧಿಕಾರ ಅವಧಿ ೭ ಡಿಸೆಂಬರ್ ೨೦೦೩ – ೧೮ ಜೂನ್ ೨೦೦೫ | |
ಉತ್ತರಾಧಿಕಾರಿ | ಲತಾ ಉಸೆಂಡಿ |
ಛತ್ತೀಸ್‌ಗಢ ವಿಧಾನಸಭೆಯ ಸದಸ್ಯ
| |
ಅಧಿಕಾರ ಅವಧಿ ೭ ಡಿಸೆಂಬರ್ ೨೦೦೩ – ೮ ಡಿಸೆಂಬರ್ ೨೦೧೩ | |
ಪೂರ್ವಾಧಿಕಾರಿ | ತುಳೇಶ್ವರ್ ಸಿಂಗ್ |
ಉತ್ತರಾಧಿಕಾರಿ | ಖೇಲ್ಸಾಯಿ ಸಿಂಗ್ |
ಮತಕ್ಷೇತ್ರ | ಪ್ರೇಮನಗರ |
ವೈಯಕ್ತಿಕ ಮಾಹಿತಿ | |
ಜನನ | ಪೋಡಿ, ಕೋರಿಯಾ ಜಿಲ್ಲೆ, ಮಧ್ಯಪ್ರದೇಶ, ಭಾರತ (ಈಗಿನ ಛತ್ತೀಸ್‌ಗಢ, ಭಾರತ) | ೫ ಜನವರಿ ೧೯೬೪
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ನರೇಂದ್ರ ಸಿಂಗ್ |
ಮಕ್ಕಳು | ೨ ಗಂಡು ಮತ್ತು ೨ ಹೆಣ್ಣು |
ವಾಸಸ್ಥಾನ | ರಾಮಾನುಜನಗರ, ಸರ್ಗುಜಾ, ಛತ್ತೀಸ್‌ಗಢ, ಭಾರತ |
ಉದ್ಯೋಗ | ರಾಜಕಾರಣಿ, ಕೃಷಿ |
ರೇಣುಕಾ ಸಿಂಗ್ ಸರುತಾ (ಜನನ ೫ ಜನವರಿ ೧೯೬೪) ಛತ್ತೀಸ್‌ಗಢದ ಭಾರತೀಯ ರಾಜಕಾರಣಿ. ಅವರು ೩೦ ಮೇ ೨೦೧೯ ರಿಂದ ಭಾರತದ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. [೧] ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದರು. [೨]
ರೇಣುಕಾ ಅವರು ೨೦೦೩ ರಲ್ಲಿ ಛತ್ತೀಸ್‌ಗಢ ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದರು. ನಂತರ ಛತ್ತೀಸ್‌ಗಢ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾದರು. ೨೦೦೮ ರಲ್ಲಿ ಮತ್ತೊಮ್ಮೆ ಮರು ಆಯ್ಕೆಯಾದರು. [೩] ೨೦೧೩ ರ ವಿಧಾನಸಭೆ ಚುನಾವಣೆಯಲ್ಲಿ ಅವರು ಹಿರಿಯ ಕಾಂಗ್ರೆಸ್ ನಾಯಕ ಖೇಲ್ಸಾಯಿ ಸಿಂಗ್ ವಿರುದ್ಧ ಸೋತಿದ್ದರು. ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಮತ್ತೊಮ್ಮೆ ಖೇಲ್ಸಾಯಿ ಸಿಂಗ್ ವಿರುದ್ಧ ಸ್ಪರ್ಧಿಸಿದರು. ಮತ್ತು ೧,೫೭,೮೭೩ ಮತಗಳ ಅಂತರದಿಂದ ಗೆದ್ದರು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕೇಂದ್ರ ಸಚಿವರಾದರು. [೪] [೫]