ರೇಣು ದೇವಿ | |
| |
ಅಧಿಕಾರದ ಅವಧಿ ೧೬ ನವೆಂಬರ್ ೨೦೨೦ – ೦೯ ಆಗಷ್ಟ ೨೦೨೨ | |
ಪೂರ್ವಾಧಿಕಾರಿ | ಸುಶೀಲ್ ಕುಮಾರ್ ಮೊದಿ |
---|---|
ಉತ್ತರಾಧಿಕಾರಿ | ತೇಜಸಶ್ವಿ ಯಾದವ್ |
ಜನನ | ೦೧/೧೧/೧೯೫೯ ಬೆಟಿಯಾ ಬಿಹಾರ್ |
ರಾಜಕೀಯ ಪಕ್ಷ | ಭಾರತೀಯಾ ಜನತ ಪಕ್ಷದ |
ಜೀವನಸಂಗಾತಿ | ದುರ್ಗಾ ಪ್ರಸಾದ್ |
ರೇಣು ದೇವಿ (ಜನನ ೧ ನವೆಂಬರ್ ೧೯೫೮) ಒಬ್ಬ ಮಹಿಳಾ ಭಾರತೀಯ ರಾಜಕಾರಣಿಯಾಗಿದ್ದು, ಅವರು ೧೬ ನವೆಂಬರ್ ೨೦೨೦ ರಿಂದ ೯ ಆಗಸ್ಟ್ ೨೦೨೨ ರವರೆಗೆ ಬಿಹಾರದ ೭ ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ೨೦೨೦ ರಲ್ಲಿ ಬಿಹಾರದಿಂದ ಭಾರತದ ಐದನೇ ಮಹಿಳಾ ಉಪಮುಖ್ಯಮಂತ್ರಿಯಾದರು. [೧]ಅವರು ಭಾರತೀಯ ಜನತಾ ಪಕ್ಷದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ, ಅವರು ಪ್ರಸ್ತುತ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ. ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಕ್ಷದ ಉಪ ಶಾಸಕಾಂಗ ನಾಯಕಿಯಾಗಿದ್ದಾರೆ. [೨] [೩] [೪] [೫] [೬] [೭]
ರೇಣು ತಮ್ಮ ಹೆತ್ತವರ ಮೂವರು ಗಂಡು ಮತ್ತು ಐದು ಹೆಣ್ಣು ಮಕ್ಕಳಲ್ಲಿ ಹಿರಿಯರು. ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಸಮುದಾಯವಾದ ನೋನಿಯಾ ಜಾತಿಯಿಂದ ಬಂದವರು. [೮] ಅವರು ೧೯೭೭ ರಲ್ಲಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದಿಂದ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.[ಸಾಕ್ಷ್ಯಾಧಾರ ಬೇಕಾಗಿದೆ][ ಉಲ್ಲೇಖದ ಅಗತ್ಯವಿದೆ ]
ಅವರು ೧೯೭೩ ರಲ್ಲಿ ದುರ್ಗಾ ಪ್ರಸಾದ್ ಎಂಬ ಕೋಲ್ಕತ್ತಾ ಮೂಲದ ವಿಮಾ ಇನ್ಸ್‌ಪೆಕ್ಟರ್‌ರನ್ನು ವಿವಾಹವಾದರು. [೯] ಆದಾಗ್ಯೂ, ಮದುವೆಯಾದ ಏಳು ವರ್ಷಗಳೊಳಗೆ ಅವರ ಗಂಡನ ಹಠಾತ್ ಮರಣವು ತಮ್ಮ ತಾಯಿಯ ತವರು ಬೆಟ್ಟಯ್ಯಗೆ ಹಿಂದಿರುಗುವಂತೆ ಮಾಡಿತು ಮತ್ತು ಅದನ್ನು ತಮ್ಮ ಕರ್ಮಭೂಮಿಯಾಗಿ ಅವರು ಭಾವಿಸಿದರು. [೧೦] ಅವರು ತಮ್ಮ ಇಬ್ಬರು ಮಕ್ಕಳನ್ನು ಒಬ್ಬರೇ ಸಲಹುತ್ತಿದ್ದಾರೆ.
ರೇಣು ದೇವಿ ಅವರ ತಾಯಿ ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿದ್ದರು, ಅದು ಅವರ ಮೇಲೆ ಬಲವಾಗಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತದೆ. [೧೧] ರೇಣು ದೇವಿ ಅವರು ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ವಿಭಾಗವಾದ ದುರ್ಗಾ ವಾಹಿನಿಯ ಭಾಗವಾಗಿದ್ದರು. [೧೨]
೧೯೮೧ ರಲ್ಲಿ ಸಾಮಾಜಿಕ ಚಟುವಟಿಕೆಯ ಮೂಲಕ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ೧೯೮೮ ರಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಥವಾ ಬಿಜೆಪಿ ಮಹಿಳಾ ವಿಭಾಗಕ್ಕೆ ಸೇರಿದರು. ಮುಂದಿನ ವರ್ಷ ಆವರಿಗೆ ಚಂಪಾರಣ್ ಪ್ರಾಂತ್ಯದಲ್ಲಿ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ನೀಡಲಾಯಿತು. ಅವರು ೧೯೯೩ ಮತ್ತು ೧೯೯೬ ರಲ್ಲಿ ಎರಡು ಅವಧಿಗೆ ವಿಭಾಗದ ರಾಜ್ಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು [೧೩]
ಅವರು ೧೯೯೫ ರಲ್ಲಿ ನೌತನ್ ಅಸೆಂಬ್ಲಿ ಸ್ಥಾನದಿಂದ ತಮ್ಮ ಮೊದಲ ಚುನಾವಣೆಯಲ್ಲಿ ವಿಫಲರಾಗಿದ್ದರೂ, ಅವರು ನಾಲ್ಕು ಬಾರಿ ಪಶ್ಚಿಮ ಚಂಪಾರಣ್ ಜಿಲ್ಲೆಯ ಮತ್ತೊಂದು ವಿಭಾಗವಾದ ಬೆಟ್ಟಿಯಾ (೨೦೦೦-೨೦೧೫; ೨೦೨೦-ಇಂದಿನವರೆಗೆ) ಬಿಹಾರ ವಿಧಾನಸಭೆಗೆ ಚುನಾಯಿತರಾದರು. ಅವರು ೨೦೧೫ ರ ಚುನಾವಣೆಯಲ್ಲಿ ಮಹಾಘಟಬಂಧನ್ ಅಭ್ಯರ್ಥಿಯ ವಿರುದ್ಧ ಸೋತರು. ನಂತರ ಅದರಲ್ಲಿ ಅವರು ೨೦೨೦ ರಲ್ಲಿ ಮತ್ತೆ ಸ್ಥಾನವನ್ನು ಪಡೆದರು.
ಅವರು ೨೦೦೫ ಮತ್ತು ೨೦೦೯ ರ ನಡುವೆ ಬಿಹಾರ ರಾಜ್ಯ ಸರ್ಕಾರದಲ್ಲಿ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೧೪ ಮತ್ತು ೨೦೨೦ ರ ನಡುವೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು ಮತ್ತು ಅಮಿತ್ ಶಾ ಅವರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡರು. [೧೨] ಬಿಹಾರದ ಉಪಮುಖ್ಯಮಂತ್ರಿಯಾಗಿ ೨೦೨೦ ರಲ್ಲಿ ಅವರ ನೇಮಕಾತಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದೆ. [೧೪] [೧೫] [೧೬] [೧೭]