ಈ ಮೈತೇಯಿ ಹೆಸರಿನಲ್ಲಿ, ಕುಟುಂಬದ ಹೆಸರು ಯುಮ್ನಮ್ ಆದರೂ ಇಲ್ಲಿ ಕೊಟ್ಟಿರುವ ಹೆಸರು ರೇಣು ಬಾಲಾ. "ಚಾನು" ಎಂಬುದು ಹೆಸರಿನ ಪ್ರತ್ಯಯವಾಗಿದೆ.
ಯುಮ್ನಮ್ ರೇಣು ಬಾಲಾ ಚಾನು (ಜನನ ೨ ಅಕ್ಟೋಬರ್ ೧೯೮೬) ಅವರು ಭಾರತ ಮೂಲದ ತೂಕ ಎತ್ತುವ ವ್ಯಾಯಾಮ ಪಟು (ವೇಟ್‌ಲಿಫ್ಟರ್). ಇವರು ಮಣಿಪುರದ ಇಂಫಾಲ್ ಬಳಿ ಇರುವ ಕ್ಯಾಮ್‌ಗೆಯ್ ಮಾಯಾಯ್ ಲೈಕೈ ಗ್ರಾಮದಿಂದ ಬಂದವರು. [೧]೨೦೦೬ ರಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ೫೮ ಕೆ.ಜಿ ವಿಭಾಗದಲ್ಲಿ [೨] ಚಿನ್ನದ ಪದಕ ಗಳಿಸಿದರು.
೨೦೦೦ ರಲ್ಲಿ ಇಂಫಾಲ್‌ನಲ್ಲಿ ನಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ 'ಟ್ಯಾಲೆಂಟ್ ಹಂಟ್' ಶಿಬಿರದಲ್ಲಿ ತರಬೇತಿಗೆ ಆಯ್ಕೆಯಾದಾಗ ರೇಣು ಬಾಲಾ ಅವರ ವೃತ್ತಿಜೀವನವು ಪ್ರಾರಂಭವಾಯಿತು. ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಅವರನ್ನು ಎಸ್‌ಎಐ ಗೆ ಸೇರಲು ಶಿಫಾರಸು ಮಾಡಲಾಯಿತು. ಅವರು ಹಂಸಾ ಶರ್ಮಾ ಮತ್ತು ಜಿಪಿ ಶರ್ಮಾ ಅವರ ಶಿಷ್ಯರಾಗಿ ಲಕ್ನೋದಲ್ಲಿ ತರಬೇತಿ ಪಡೆದರು. [೩]
ರೇಣುಬಾಲಾ ಅವರು ಮಣಿಪುರದಿಂದ ಬಂದವರಾದರೂ ಅಸ್ಸಾಂ ಅನ್ನು ಪ್ರತಿನಿಧಿಸುತ್ತಾರೆ.[೪] ಇವರು ಸೋನಿಯಾ ಚಾನು (ಮಹಿಳೆಯರ ೪೮ ಕೆ.ಜಿ ಯಲ್ಲಿ ಬೆಳ್ಳಿ ಪದಕ) ಮತ್ತು ಸಂಧಯಾ ರಾಣಿ ದೇವಿ (ಮಹಿಳೆಯರ ೪೮ ಕೆ.ಜಿ ಯಲ್ಲಿ ಕಂಚು) ನಂತರ ಪದಕ ಗೆದ್ದ ಮೂರನೆ ಮಹಿಳಾ ಆಟಗಾರ್ತಿಯಾಗಿದ್ದರು.[೫] ಅವರು ೨೦೦೭ ರ ಗುವಾಹಟಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಸ್ಸಾಂ ಅನ್ನು ಪ್ರತಿನಿಧಿಸಿದರು ಮತ್ತು ರಾಜ್ಯಕ್ಕೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಕೊಟ್ಟರು. [೬]
೨೦೧೦ ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ಸಹ ಯಶಸ್ವಿಯಾದರು. ಈಶಾನ್ಯ ಫ್ರಾಂಟಿಯರ್ ರೈಲ್ವೆ ಈ ಉದ್ಯೋಗಿ ಸ್ನ್ಯಾಚ್ ಶೈಲಿಯ ವೇಟ್ ಲಿಫ್ಟಿಂಗ್ ನಲ್ಲಿ ೯೦ ಕೆಜಿ ಭಾರ ಎತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿ, ತಮ್ಮ ಅಂತಿಮ ಪ್ರಯತ್ನದಲ್ಲಿ ೧೦೭ ಕೆ.ಜಿ ಯನ್ನು ಎತ್ತಿ ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಗೆದ್ದರು. ಅವರ ಒಟ್ಟಾರೆ ದಾಖಲೆಯು ೧೯೭ ಕೆ.ಜಿ (ಎರಡು ವಿಭಿನ್ನ ಶೈಲಿಗಳನ್ನು ಒಳಗೊಂಡಂತೆ) ಆಗಿತ್ತು.
೨೦೦೨ ರ ಕ್ರೀಡಾಕೂಟದಲ್ಲಿ ಕೆನಡಾದ ಮೇರಿಸ್ ಟರ್ಕೋಟ್ ಅವರ ಹಿಂದಿನ ದಾಖಲೆಯನ್ನು ಮುರಿದು ೮೮ ಕೆಜಿ ಎತ್ತಿದರು. ಮುಂದೆ ಅದನ್ನು ೯೦ ಕೆಜಿಗೆ ಎತ್ತಿ ತಮ್ಮ ದಾಖಲೆಯನ್ನು ಸುಧಾರಿಸಿಕೊಂಡರು.
ಇವರ ರಾಷ್ಟ್ರೀಯ ಸ್ನ್ಯಾಚ್ ಶೈಲಿಯ ದಾಖಲೆಯು ೯೩ ಮತ್ತು ಕ್ಲೀನ್ ಜರ್ಕ್ ಶೈಲಿಯ ೧೧೯. ಒಟ್ಟು ೨೦೯ ಆಗಿದೆ. ಅವರು ತಮ್ಮ ಚಿನ್ನದ ಪದಕವನ್ನು ಭಾರತದ ಜನರಿಗೆ ಮತ್ತು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ಗೆ ಅರ್ಪಿಸಿದರು. "ನನ್ನ ಗೆಲುವು ಫೆಡರೇಶನ್ ಅವರ ಇದುವರೆಗೆ ಅನುಭವಿಸಿದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಹೇಳಿದರು [೭]
೨೦೧೪ ರಲ್ಲಿ, ಅಸ್ಸಾಂ ವೇಟ್‌ಲಿಫ್ಟಿಂಗ್ ಅಸೋಸಿಯೇಷನ್ (AWA) ಮತ್ತು ಅಸ್ಸಾಂ ಒಲಿಂಪಿಕ್ ಅಸೋಸಿಯೇಷನ್ (AOA) ಜಂಟಿಯಾಗಿ ಅವರನ್ನು ಸನ್ಮಾನಿಸಿತು. [೮] ಅವರು ೨೦೧೪ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದರು.[೯]
೨೦೧೦ ರಲ್ಲಿ ಗುವಾಂಗ್ ಝೌ ಏಷ್ಯನ್ ಗೇಮ್ಸ್ ಮತ್ತು ೨೦೧೪ ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅನಾರೋಗ್ಯದಿಂದಾಗಿ ಅವರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. [೧೦]