ಜೂನ್ ೨, ೧೯೮೯ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಲಲಿತಾ ಬಾಬರ್ ಅವರು ಭಾರತದ ಲಾಂಗ್ ಡಿಸ್ಟೆನ್ಸ್ ಓಟಗಾರ್ತಿ. ೩೦೦೦ ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಹೆಚ್ಚು ಭಾಗವಹಿಸುವ ಇವರು ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಇವರು ಇದೇ ಸ್ಪರ್ಧೆಯಲ್ಲಿ ಏಷ್ಯನ್ ಚಾಂಪಿಯನ್ ಕೂಡ ಹೌದು.' ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ(FICC) ಮತ್ತು ಭಾರತೀಯ ಯುವಜನ ,ಕ್ರೀಡಾ ಇಲಾಖೆಯವರು ನೀಡಿದ ಭಾರತೀಯ ಕ್ರೀಡಾ ಪ್ರಶಸ್ತಿಗಳಲ್ಲಿ ೨೦೧೫ರ ಸಾಲಿನ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ,
ಬಾಬರ್ ಅವರು ತಮ್ಮ ಎಳೆ ವಯಸ್ಸಿನಲ್ಲಿಯೇ ಓಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪುಣೆಯಲ್ಲಿ ನಡೆದ ಇಪ್ಪತ್ತು ವರ್ಷದೊಳಗಿನವರ ಓಟದ ಸ್ಪರ್ಧೆಯಲ್ಲಿ ಗೆದ್ದ ಚಿನ್ನದ ಪದಕ ಇವರ ಮೊದಲ ಪದಕ. [೧]
೨೦೧೪ರಲ್ಲಿ ಸತತ ಮೂರನೇ ಬಾರಿಗೆ ಮುಂಬಯಿ ಮ್ಯಾರಥಾನನ್ನು ಗೆದ್ದ [೨] ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲೂ ದೇ ಶವನ್ನು ಪ್ರತಿನಿಧಿಸಿದ್ದಾರೆ. ಮ್ಯಾರಥಾನಿನಲ್ಲಿನ ಜಯದ ನಂತರ ೩೦೦೦ ಮೀಟರ್ ಓಟದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡ ಅವರು ೨೦೧೪ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಏಷಿಯನ್ ಕ್ರೀಡಾಕೈಟದಲ್ಲಿ ೯:೩೫:೩೬ ರ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು. ಈ ಪ್ರಯತ್ನದಲ್ಲಿ ಸುಧಾ ಸಿಂಗ್ [೩] ಅವರ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಆದರೆ ಆ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದ ಬಹ್ರೇನಿನ ರೂಥ್ ಜೆಬೆಟ್ ಅವರು ಸ್ಪರ್ಧೆಯಿಂದ ಅನರ್ಹರಾದ ಕಾರಣ ಲಲಿತಾ ಬಾಬರ್ ಅವರಿಗೆ ಬೆಳ್ಳಿಯ ಪದಕ ದೊರಕುವಂತಾಯಿತು [೪]
೨೦೧೫ ರ ಏಷಿಯನ್ ಚಾಂಪಿಯನ್ ಶಿಪ್ನಲ್ಲಿ ೯:೩೪:೧೩ ರ ವೈಯುಕ್ತಿಕ ಸಾಧನೆಯೊಂದಿಗೆ ಬಂಗಾರದ ಪದಕ ಪಡೆಯುವುದರೊಂದಿಗೆ ಹೊಸ ಭಾರತೀಯ ದಾಖಲೆಯನ್ನೂ ಸ್ಥಾಪಿಸಿದರು. ಈ ಸಾಧನೆಯೊಂದಿಗೆ ಅವರು ೨೦೧೬ರ ಒಲಿಂಪಿಕ್ಸಿಗೆ ಅರ್ಹತೆಯನ್ನು ಗಳಿಸಿದರು.[೫] ೨೦೧೫ರ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ತಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡ ಅವರು ೯:೨೭:೮೬ ರ ರಾಷ್ಟ್ರೀಯ ದಾಖಲೆಯೊಂದಿಗೆ ಒಲಂಪಿಕ್ಸಿನ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯ ಮಹಿಳೆಯಾದರು
ಏಪ್ರಿಲ್ ೨೦೧೬ರಲ್ಲಿ ದೆಹಲಿಯಲ್ಲಿ ನಡೆದ ಫೆಡರೇಷನ್ ಕಪ್ಪಿನಲ್ಲಿ ೯:೨೭:೦೯ ರ ಸಮಯದೊಂದಿಗೆ ತಮ್ಮ ರಾಷ್ಟ್ರೀಯ ದಾಖಲೆಯನ್ನು ಇನ್ನೂ ಉತ್ತಮಪಡಿಸಿಕೊಂಡರು. ರಿಯೋ ಒಲಂಪಿಕ್ಸಿನಲ್ಲಿ ೯:೧೯:೭೬ರ ವೈಯುಕ್ತಿಕ ಉತ್ತಮ ಪ್ರದರ್ಶನದೊಂದಿಗೆ ಫೈನಲ್ಲಿಗೆ ತಲುಪಿದರು. ಕಳೆದ ೩೨ ಒಲಂಪಿಕ್ಸುಗಳಲ್ಲಿ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಫೈನಲ್ಲಿಗೆ ತಲುಪಿದ ಮೊದಲ ಭಾರತೀಯ ಸ್ಪರ್ಧಿಯಾದ ಇವರು ೯:೨೨:೭೪ ರ ಸಮಯದೊಂದಿಗೆ ೧೦ನೇ ಸ್ಥಾನಿಯಾಗಿ ತಮ್ಮ ಮೊದಲ ಒಲಿಂಪಿಕ್ ಪದಕದ ಕನಸಿಂದ ವಂಚಿತರಾದರು
ವರ್ಷದ ಕ್ರೀಡಾಪಟು-೨೦೧೫. ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ(FICC) ಮತ್ತು ಭಾರತೀಯ ಯುವಜನ ,ಕ್ರೀಡಾ ಇಲಾಖೆಯವರು ನೀಡಿದ ಭಾರತೀಯ ಕ್ರೀಡಾ ಪ್ರಶಸ್ತಿ[೬][೭]
ಉಲ್ಲೇಖಗಳು
{{cite web}}
: Italic or bold markup not allowed in: |publisher=
(help)
{{cite web}}
: Italic or bold markup not allowed in: |publisher=
(help)