ವೀರೇಂದ್ರ ಪಾಟೀಲ್ | |
---|---|
ಕರ್ನಾಟಕದ ಏಳನೆಯ ಮುಖ್ಯಮಂತ್ರಿ
| |
ಅಧಿಕಾರ ಅವಧಿ 29 May 1968 – 18 March 1971 | |
ರಾಜ್ಯಪಾಲ | ಧರ್ಮ ವೀರ |
ಪೂರ್ವಾಧಿಕಾರಿ | ಎಸ್.ನಿಜಲಿಂಗಪ್ಪ |
ಉತ್ತರಾಧಿಕಾರಿ | ಡಿ.ದೇವರಾಜ ಆರಸ್ |
ಅಧಿಕಾರ ಅವಧಿ 30 November 1989 – 10 October 1990 | |
ರಾಜ್ಯಪಾಲ | ಪಿ.ವೆಂಕಟಸುಬ್ಬಯ್ಯ ಭಾನು ಪ್ರತಾಮ್ ಸಿಂಗ್ |
ಪೂರ್ವಾಧಿಕಾರಿ | ಎಸ್.ಆರ್.ಬೊಮ್ಮಾಯಿ |
ಉತ್ತರಾಧಿಕಾರಿ | ಎಸ್.ಬಂಗಾರಪ್ಪ |
ಅಧಿಕಾರ ಅವಧಿ 1984 – 1989 | |
ಪೂರ್ವಾಧಿಕಾರಿ | ಎನ್.ಧರಮ್ ಸಿಂಗ್ |
ಉತ್ತರಾಧಿಕಾರಿ | ಬಿ.ಜಿ.ಜವಳಿ |
ವೈಯಕ್ತಿಕ ಮಾಹಿತಿ | |
ಜನನ | 1924 ಚಿಂಚೋಳಿ, ಗುಲ್ಬರ್ಗ |
ಮರಣ | ಮಾರ್ಚ್ 14, 1997 |
ರಾಜಕೀಯ ಪಕ್ಷ | INC |
ಮಕ್ಕಳು | ಕೈಲಾಶನಾಥ್ ಪಾಟೀಲ್[೧] |
ಧರ್ಮ | ಹಿಂದು |
ವೀರೇಂದ್ರ ಪಾಟೀಲ್ (1924-1997) ಹಿರಿಯ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.ಅವರು (1968-1971) ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.18 ವರ್ಷಗಳ ನಂತರ ಎರಡನೇ ಬಾರಿಗೆ (1989-1990) ರವರೆಗೆ ಮುಖ್ಯಮಂತ್ರಿಯಾಗಿದ್ದರು.
ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಫೆಬ್ರವರಿ 28, 1924 ರಲ್ಲಿ ಜನಿಸಿದರು.ಗುಲ್ಬರ್ಗ ಸರ್ಕಾರಿ ಪ್ರೌಢಶಾಲೆ,ವಿವೇಕ್-ವರ್ಧಿನೀ ಸ್ಕೂಲ್ ಹೈದರಾಬಾದ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್ ಬಿ ಶಿಕ್ಷಣ ಪಡೆದಿದ್ದಾರೆ.[೨]
ಅವರು 1957 ರಲ್ಲಿ ಎಸ್ ನಿಜಲಿಂಗಪ್ಪ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದರು ಚಿಂಚೋಳಿ[೩] ವಿಧಾನ ಸಭಾ ಕ್ಷೇತ್ರದಿಂದ ೩ ಸಲ ಆಯ್ಕೆಯಾಗಿದ್ದರು,ಒಂದೊಂದು ಬಾರಿ ಗುಲ್ಬರ್ಗಾ ಮತ್ತು ಬಾಗಲಕೋಟೆ ಸಂಸದರಾಗಿ ಆಯ್ಕೆಯಾಗಿದ್ದರು.[೪]