ಶೂರಸೇನ | |
---|---|
ವೈಯಕ್ತಿಕ ಮಾಹಿತಿ | |
ಕುಟುಂಬ | ಪೋಷಕರು
|
ಗಂಡ/ಹೆಂಡತಿ | ಮರೀಷ |
ಮಕ್ಕಳು | ಮಕ್ಕಳು ೧೫ ಮಕ್ಕಳು:
|
ಸಂಬಂಧಿಕರು | ಸೋದರ ಸಂಬಂಧಿಗಳು
|
ಶೂರಸೇನ(ಸಂಸ್ಕೃತ:शूरसेन) ಹಿಂದೂ ಪುರಾಣಗಳಲ್ಲಿ ಕಾಣಿಸಿಕೊಂಡಿರುವ ಮಥುರಾದ ಯಾದವ ದೊರೆ. ಅವನು ಮರೀಷ ಎಂಬ ನಾಗ (ಸರ್ಪ)ದ ರೂಪದ ಮಹಿಳೆಯನ್ನು ವಿವಾಹವಾದನು.[೨] ಅವಳು ಅವನ ಎಲ್ಲ ಮಕ್ಕಳನ್ನು ಹೆತ್ತಳು ಮತ್ತು ವಾಸುಕಿಯು ಭೀಮನಿಗೆ ಸಹಾಯ ಮಾಡುವುದಕ್ಕೆ ಕಾರಣಳಾದಳು. ಅವನಿಂದಲೇ ಸುರಸೇನಾ ಸಾಮ್ರಾಜ್ಯ ಮತ್ತು ಯಾದವ ಪಂಥದ ಸುರಸೇನರು ಎಂದು ಹೆಸರಿಸಲ್ಪಡುವ ಪಂಗಡ ಪ್ರಚಲಿತವಾಯಿತು ಎಂದು ಹೇಳಲಾಗಿದೆ.[೩]
ಶೂರಸೇನನು ಸಮುದ್ರವಿಜಯ (ಅರಿಷ್ಟನೇಮಿಯ ತಂದೆ), ವಸುದೇವ(ವಸುದೇವ ಕೃಷ್ಣನ ತಂದೆ) ಮತ್ತು ಕುಂತಿ (ಕರ್ಣ ಮತ್ತು ಪಾಂಡವರ ತಾಯಿ)ಯ ತಂದೆ ಎಂದು ಮಹಾಭಾರತ ಮತ್ತು ಪುರಾಣಗಳಲ್ಲಿ ವ್ಯಾಪಾಕವಾಗಿ ಉಲ್ಲೇಖಿಸಲಾಗಿದೆ.[೪]