Sapthami Gowda | |
---|---|
Born | [೧] | ೮ ಜೂನ್ ೧೯೯೬
Nationality | ಭಾರತೀಯ |
Education | ಬಿ.ಇ ಸಿವಿಲ್ ಇಂಜಿನಿಯರಿಂಗ್ |
Occupation | ನಟಿ |
Known for | ಕಾಂತಾರ |
ಸಪ್ತಮಿ ಗೌಡ ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಭಾರತೀಯ ನಟಿ ಆಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ 2020ರ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಅವರು ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಲನಚಿತ್ರದಲ್ಲಿ ಲೀಲಾ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ[೨] .
ಸಪ್ತಮಿ ಗೌಡ ಅವರು ತಮ್ಮ ನಟನಾ ವೃತ್ತಿಜೀವನವನ್ನು ದುನಿಯಾ ಸೂರಿ ನಿರ್ದೇಶನದ 2020ರ ಕನ್ನಡ ಚಲನಚಿತ್ರ ಪಾಪ್ಕಾರ್ನ್ ಮಂಕಿ ಟೈಗರ್ ನಲ್ಲಿ ಧನಂಜಯ ಅವರೊಂದಿಗೆ ನಟಿಸುವ ಮೂಲಕ ಪ್ರಾರಂಭಿಸಿದರು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳು ದೊರಕಿತು. ಆದಾಗ್ಯೂ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. [೩] ಅವರು ಬ್ಲಾಕ್ಬಸ್ಟರ್ ಚಿತ್ರ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರನ್ನು ಬೆಳಕಿಗೆ ತಂದಿತು ಮತ್ತು ಹಳ್ಳಿಯ ಹುಡುಗಿಯ ಪಾತ್ರವನ್ನು ನಿರೂಪಿಸಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾದರು.
ಕಾಂತಾರಾದ ಯಶಸ್ಸಿನ ಆಧಾರದ ಮೇಲೆ, ಅವರು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 2023 ರ ಚಲನಚಿತ್ರ ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಶೀಘ್ರದಲ್ಲೇ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ಚಿತ್ರದಲ್ಲಿ ಯುವ ರಾಜ್ಕುಮಾರ್ (ರಾಘವೇಂದ್ರ ರಾಜ್ಕುಮಾರ್ ಅವರ ಮಗ) ಮತ್ತು ಎಸ್. ಕೃಷ್ಣ ನಿರ್ದೇಶನದ 'ಕಾಳಿ' ಅಭಿಷೇಕ್ ಅಂಬರೀಶ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ[೪][೫].
ಹದಿಹರೆಯದ ಬಾಲಕಿಯರಿಗೆ ಮುಟ್ಟಿನ ಕಪ್ಗಳನ್ನು ವಿತರಿಸಲು ಅನುವು ಮಾಡಿಕೊಡುವ ಕರ್ನಾಟಕ ಸರ್ಕಾರ "ನನ್ನ ಮೈತ್ರಿ" ಯೋಜನೆಯ ರಾಯಭಾರಿಯಾಗಿ ಅವರನ್ನು ನೇಮಿಸಲಾಗಿದೆ[೬] . ಸಮರ್ಥನಂ ಟ್ರಸ್ಟ್ ಆಯೋಜಿಸಿರುವ ಬ್ಲೈಂಡ್ ಕ್ರಿಕೆಟ್ 2022 ರ 3 ನೇ ಟಿ-20 ವಿಶ್ವಕಪ್ ಆವೃತ್ತಿಯ ಬ್ರಾಂಡ್ ಅಂಬಾಸಿಡರ್ ಆಗಿಯೂ ಅವರನ್ನು ನೇಮಿಸಲಾಯಿತು[೭]. ಇದು ವಿಭಿನ್ನ ಸಾಮರ್ಥ್ಯದವರನ್ನು ಸಬಲೀಕರಣಗೊಳಿಸಲು ಕೆಲಸ ಮಾಡುವ ಲಾಭರಹಿತ ಸಂಸ್ಥೆಯಾಗಿದೆ.
† | ಚಲನಚಿತ್ರ ಇನ್ನೂ ಬಿಡುಗಡೆ ಆಗಲಿಲ್ಲ ಎಂದು ಸೂಚಿಸುತ್ತದೆ. |
ವರ್ಷ. | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು | |
---|---|---|---|---|
2020 | ಪಾಪ್ಕಾರ್ನ್ ಮಂಕಿ ಟೈಗರ್ | ಗಿರಿಜಾ | [೮] | |
2022 | ಕಾಂತಾರ | ಲೀಲಾ | [೯] | |
2023 | ದಿ ವ್ಯಾಕ್ಸೀನ್ ವಾರ್ | ಡಾ. ಶ್ರೀಲಕ್ಷ್ಮಿ ಮೋಹನ್ದಾಸ್ | ಹಿಂದಿ ಚಲನಚಿತ್ರ | [೧೦][೧೧] |
2024 | ಯುವ | ಸಿರಿ | [೧೨] |
ಪ್ವರ್ಷ. | ಪ್ರಶಸ್ತಿ ಪ್ರದಾನ | ವರ್ಗ | ಚಲನಚಿತ್ರ | ಫಲಿತಾಂಶ | |
---|---|---|---|---|---|
2020 | ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ನಟಿ ಚೊಚ್ಚಲ ಚಿತ್ರ- ಕನ್ನಡ ಭಾಷೆ | ಪಾಪ್ಕಾರ್ನ್ ಮಂಕಿ ಟೈಗರ್ | ಗೆಲುವು | [೧೩] |
2023 | ಅತ್ಯುತ್ತಮ ನಟಿ- ಕನ್ನಡ ಭಾಷೆ | ಕಾಂತಾರ | Nominated | [೧೪] | |
ಅತ್ಯುತ್ತಮ ನಟಿ-ವಿಮರ್ಶಕರ ಪಟ್ಟಿ- ಕನ್ನಡ ಭಾಷೆ | ಗೆಲುವು |