![]() | |||||||||||||||||||||||||||||||||||||||||||||||||||||||||||
ವೈಯುಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | ||||||||||||||||||||||||||||||||||||||||||||||||||||||||||
ಜನನ | ೩೦ ಸೆಪ್ಟೆಂಬರ್ ೨೦೦೧ | ||||||||||||||||||||||||||||||||||||||||||||||||||||||||||
ಉದ್ಯೋಗ | Shooter | ||||||||||||||||||||||||||||||||||||||||||||||||||||||||||
Sport | |||||||||||||||||||||||||||||||||||||||||||||||||||||||||||
ದೇಶ | ಭಾರತ | ||||||||||||||||||||||||||||||||||||||||||||||||||||||||||
ಕ್ರೀಡೆ | Shooting | ||||||||||||||||||||||||||||||||||||||||||||||||||||||||||
ಸ್ಪರ್ಧೆಗಳು(ಗಳು) | 10 meter air pistol | ||||||||||||||||||||||||||||||||||||||||||||||||||||||||||
ಪದಕ ದಾಖಲೆ
|
ಸರಬ್ಜೋತ್ ಸಿಂಗ್ (೩೦ ಸೆಪ್ಟೆಂಬರ್ ೨೦೦೧) ಭಾರತೀಯ ಕ್ರೀಡಾ ಶೂಟರ್ ಮತ್ತು ಒಲಿಂಪಿಯನ್ ಪದಕ ವಿಜೇತರಾಗಿದ್ದಾರೆ. ಅವರು ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿ ಪ್ಯಾರಿಸ್‍ನಲ್ಲಿ ನಡೆದ ೨೦೨೪ ರ ಬೇಸಿಗೆ ಒಲಿಂಪಿಕ್ಸ್‍ನಲ್ಲಿ ಮನು ಭಾಕರ್ ಅವರೊಂದಿಗೆ ೧೦ ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಇದು ಆ ಒಲಿಂಪಿಕ್ಸ್ನಲ್ಲಿ ಭಾರತದ ಎರಡನೇ ಪದಕವಾಗಿದೆ.
ಸರಬ್ಜೋತ್ ಹರಿಯಾಣದ ಬರಾರಾ ಬ್ಲಾಕ್ನ, ಅಂಬಾಲಾದ ಧೀನ್ ಗ್ರಾಮದವರು. ಆತ ರೈತ ಜತಿಂದರ್ ಸಿಂಗ್ ಮತ್ತು ಗೃಹಿಣಿ ಹರ್ದೀಪ್ ಕೌರ್ ಅವರ ಮಗ. ಅವರು ಚಂಡೀಗಢದ ಸೆಕ್ಟರ್ ೧೦ರ ಡಿ. ಎ. ವಿ. ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ಸೆಂಟ್ರಲ್ ಫೀನಿಕ್ಸ್ ಕ್ಲಬ್‍ನ ಕೋಚ್ ಅಭಿಷೇಕ್ ರಾಣಾರೊಂದಿಗೆ ಅಂಬಾಲಾ ಕಂಟೋನ್ಮೆಂಟ್ ನ ಎ. ಆರ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಾರೆ.[೧]
ಸಿಂಗ್ ಅವರು ೨೦೨೨ರ ಚೀನಾ ಹ್ಯಾಂಗ್ಝೌ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಶೂಟಿಂಗ್ ತಂಡದ ಭಾಗವಾಗಿದ್ದರು. ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರನ್ನೊಳಗೊಂಡ ಭಾರತದ ೧೦ ಮೀಟರ್ ಏರ್ ಪಿಸ್ತೂಲ್ ತಂಡವು ೨೦೨೨ರ ಏಷ್ಯನ್ ಕ್ರೀಡಾಕೂಟದಲ್ಲಿ ಚೀನಾವನ್ನು ಸೋಲಿಸಿ ಚಿನ್ನ ಗೆದ್ದುಕೊಂಡಿತು. ಏಷ್ಯನ್ ಗೇಮ್ಸ್ ಶೂಟಿಂಗ್ ಸ್ಪರ್ಧೆಗಳಲ್ಲಿ ದಿವ್ಯಾ ಟಿ. ಎಸ್. ಜೊತೆ ಮಿಶ್ರ ೧೦ ಮೀಟರ್ ಏರ್ ಪಿಸ್ತೂಲ್‍ನಲ್ಲಿ ಸರಬ್ಜೋತ್ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದರು.[೨]
ಇದಕ್ಕೂ ಮೊದಲು ೨೦೨೧ರಲ್ಲಿ, ಅವರು ವಿಶ್ವ ಚಾಂಪಿಯನ್ಶಿಪ್‍ನ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರು. ೨೦೧೯ರಲ್ಲಿ, ಅವರು ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್‍ನಲ್ಲಿ ಚಿನ್ನ ಗೆದ್ದರು.
<ref>
tag; no text was provided for refs named :0