ಸುಧಾ ಚಂದ್ರನ್ | |
---|---|
![]() | |
ಜನನ | ೨೭ ಸಪ್ಟೆಂಬರ್ ೧೯೬೫ ಭಾರತ |
ಶಿಕ್ಷಣ(s) | ಭರತನಾಟ್ಯ ನೃತ್ಯ ಕಲಾವಿದೆ, ನಟಿ |
Years active | ೧೯೮೪ – |
Spouse | ರವಿ ದಂಗ್ |
Parent | ಕೆ.ಡಿ.ಚಂದ್ರನ್ |
ಸುಧಾ ಚಂದ್ರನ್ ರವರು(೨೭ ಸಪ್ಟೆಂಬರ್ ೧೯೬೫) ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ. ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು. ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು. ಸುಧಾ ರವರು ಕಾಹಿನ್ ಕಿಸ್ಸಿ ರೋಜ್ ನಲ್ಲಿ ರಾಮೋಲಾ ಸಿಕಂದ್, ನಾಗಿನ್ ೧ ಮತ್ತು ನಾಗಿನ್ ೨ ನಲ್ಲಿ ಯಾಮಿನಿ ಸಿಂಗ್ ರಹೇಜಾ, ದೈವಂ ತಂದ ವೀಡು ನಲ್ಲಿ ಚಿತ್ರಾದೇವಿ ಹಮ್ ಪಾಂಚ್ ( ೨ ) ನಲ್ಲಿ ಆನಂದ ನ ಮೊದಲನೆಯ ಹೆಂಡತಿಯಾಗಿ, ಪರ್ದೇಸ್ ಮೆ ಹೆ ಮೇರಾ ದಿಲ್ ನಲ್ಲಿ ಹರ್ಜೀತ್ ಖುರಾನ, ಯೆ ಹೆ ಮೊಹೋಬತೆ ನಲ್ಲಿ ಸುಧಾ ಶ್ರೀವಾತ್ಸವ್ ಎಂಬ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.[೧]
ಸುಧಾ ಚಂದ್ರನ್ ರವರು ೨೭ ಸೆಪ್ಟೆಂಬರ್ ೧೯೬೫ ರಂದು ಮುಂಬೈ ನಲ್ಲಿ ತಮಿಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು.[೨] ನೆಟ್ವುವಿನ ಸಂದರ್ಶನವೊಂದರಲ್ಲಿ, ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಎಂದು ಹೇಳಿದ್ದರು, ಆದರೆ ಆಕೆಯ ಕುಟುಂಬವು ತಮಿಳುನಾಡಿನ ತಿರುಚಿರಪಳ್ಳಿಯ ವಯಾಲೂರ್ ನವರು. ಅವರ ತಂದೆ ಕೆ.ಡಿ.ಚಂದ್ರನ್, ಯುಎಸ್ಎ ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಜಿ ನಟ. ಸುಧಾ ಚಂದ್ರನ್ ತನ್ನ ಬಿ.ಎ.[೩] ಪದವಿಯನ್ನು ಮುಂಬೈನ ಮಿಥಿಬಾಯ್ ಕಾಲೇಜಿನಿಂದ ಹಾಗೂ ತನ್ನ ಎಂ.ಎ ಪದವಿಯನ್ನು ಅದೇ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.[೪]
ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ಮಧ್ಯ ರಾತ್ರಿ ಆಕೆ ತೆರಳುತ್ತಿದ್ದ ಬಸ್ ತೀರ್ವ ಅಪಘಾತಕ್ಕೆ ಸಿಲುಕಿತ್ತು. ಸುಧಾ ಅವರು ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದರಿಂದ ಅಪಘಾತಕ್ಕೆ ಬಲಿಯಾದರು. ಅಪಘಾತದ ಸಂದರ್ಭದಲ್ಲಿ ಸುಧಾ ಚಂದ್ರನ್ ರವರು ಕಾಲನ್ನು ಮುಂದಕ್ಕೆ ಚಾಚಿದ್ದರು ಇದರಿಂದಾಗಿ ಅವರ ಕಾಲು ಸೀಟಿನ ಮಧ್ಯಕ್ಕೆ ಸಿಲುಕಿತ್ತು. ಬಸ್ ನಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಾಯಗೊಂಡಿದ್ದರು. ಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು. ಬಲಗಾಲು ತೀರ ಗಾಯಗೊಂಡಿತ್ತು. ವೈದ್ಯರು ಆಕೆಗೆ ಪ್ರಥಮ ಚಿಕಿತ್ಸೆಯನ್ನು ನೀಡಿದರು. ಕೆಲ ದಿನಗಳ ನಂತರ ಆಕೆಯ ಕಾಲು ಗ್ಯಾಂಗ್ರೀನ್ ಆಗಿದೆ ಎಂದು ತಿಳಿಯಿತು. ಕೂಡಲೆ ಕಾಲುಗಳನ್ನು ತುಂಡು ಮಾಡುವುದು ಸೂಕ್ತ ಅಥವಾ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡಿದರು. ಸಲಹೆಯ ಮೇರಿಗೆ ಆಕೆಯ ಕಾಲು ತುಂಡು ಮಾಡಲಾಯಿತು. ಕಾಲಿನ ಬದಲಾಗಿ ಮರದ ಕಾಲನ್ನು ಜೋಡಿಸಲಾಯಿತು. ಮೊದಲಿನಲ್ಲಿ ಸುಧಾರವರು ಬೇಸತ್ತರು. ನಂತರ ಅಭ್ಯಾಸವಾಯಿತು. ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು. ದಿನ ಕಳೆದಂತೆ ಆತ್ಮವಿಶ್ವಾಸವು ಬೆಳೆಯಿತು. ಮುಂದಿನ ಓದಿನಲ್ಲಿ ಆಸಕ್ತಿವಹಿಸಿದರು. ಅವರ ತಂದೆ ಆಕೆಗೆ ಬೆಂಬಲವಾಗಿದ್ದರು. ವೀಲ್ ಚೇರನ್ನು ಉಪಯೋಗಿಸಲು ಸೂಚಿಸಿದರು. ಇವರು ಅದಕ್ಕೆ ನಿರಾಕರಿಸಿದರು. ಮರಗಾಲಿನಲ್ಲಿಯೇ ನಡೆಯಲು ಪ್ರಾರಂಭಿಸಿದರು. ೬ ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಓದುತ್ತಿರುವಾಗ ಡಾಕ್ಟರ್ ಸೆತ್ತಿ ಜೈಪುರ ಅವರ ಕೃತಕ ಕಾಲಿನ ಬಗ್ಗೆ ತಿಳಿದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು.[೫][೬]
ಸುಧಾ ರವರು ಮಿಥಿಬಾಯ್ ಕಾಲೇಜ್ ಮುಂಬೈನಲ್ಲಿ ಬಿ.ಎ ಮತ್ತು ಎಮ್.ಎ ಪದವಿಯನ್ನು ಪಡೆದರು.[೭]
ಸುಧಾ ರವರು ಮಯೂರಿ ಎಂಬ ತೆಲುಗು ಚಲನಚಿತ್ರದಿಂದ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವನ್ನು ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ನಾಚೆ ಮಯೂರಿ ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು. ಈ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ ೧೯೮೬ ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷವಾದ ಜ್ಯೂರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ವರುಷ | ಚಲನಚಿತ್ರ | ಪಾತ್ರ | ಭಾಷೆ | ಟಿಪ್ಟಣಿ |
---|---|---|---|---|
೨೦೧೮ | ಸಾಮಿ ೨[೮] | ಇಲೈಯ ಪೆರುಮಲ್ (ಪೆರುಮಲ್ ಪಿಚ್ಚೈ)ನ ಹೆಂಡತಿ | ತಮಿಳು | |
೨೦೧೮ | ಕ್ರಿನ [೯] | ಹಿಂದಿ | ||
೨೦೧೭ | ತೇರಾ ಇಂತ್ಜಾರ್ [೧೦] | ಹಿಂದಿ | ||
೨೦೧೭ | ವಿಜ್ಹಿತಿರು[೧೧] | ವಿಜಯಲಕ್ಷ್ಮಿ | ತಮಿಳು | |
೨೦೧೬ | ಸಿಸ್ಟರ್ಸ್ | ಸುಧಾ | ಮರಾಠಿ | |
೨೦೧೬ | ಬಾಬುಜಿ ಎಕ್ ಟಿಕಟ್ ಬಂಬಯಿ[೧೨] | ಹಿಂದಿ | ||
೨೦೧೫ | ಗುರು ಸುಕ್ರನ್[೧೩] | ತಮಿಳು | ||
೨೦೧೩ | ಅಮೀರಿನ್ ಆಧಿ ಭಗವನ್[೧೪] | ಇಂದ್ರ ಸುಂದರಮೂರ್ತಿ | ತಮಿಳು | |
೨೦೧೩ | ಪರಮ್ವೀರ್ ಪರಶುರಾಮ್ | ಭೋಜ್ಪುರಿ | ||
೨೦೧೩ | ಕ್ಲಿಯೋಪತ್ರ[೧೫] | ಮಲೆಯಾಳಂ | ||
೨೦೧೧ | ವೆನ್ಘಯ್[೧೬] | ರಾಧಿಕಾ ಳ ತಾಯಿ | ತಮಿಳು | |
೨೦೧೦ | ಅಲೆಕ್ಸಾಂಡರ್ ದಿ ಗ್ರೇಟ್ [೧೭] | ಗಾಯತ್ರಿ ದೇವಿ | ಮಲೆಯಾಳಂ | |
೨೦೦೮ | ಸತ್ಯಂ | ಸತ್ಯಂ ನ ತಾಯಿ | ತಮಿಳು | |
೨೦೦೮ | ಪ್ರಣಾಲಿ[೧೮] | ಆಕಾ | ಹಿಂದಿ | |
೨೦೦೬ | ಶಾಧಿ ಕರ್ಕೆ ಫಸ್ ಗಯ ಯಾರ್[೧೯] | ಡಾಕ್ಟರ್ | ಹಿಂದಿ | |
೨೦೦೬ | ಮಾಲಾಮಾಲ್ ವೀಕ್ಲಿ[೨೦] | ಠಕುರಾಇನ್ | ಹಿಂದಿ | |
೨೦೦೪ | ಸ್ಮೈಲ್ ಪ್ಲೀಸ್ [೨೧] | ತುಳಸಿ | ಹಿಂದಿ | |
೨೦೦೧ | ಏಕ್ ಲುಟೇರೆ | ಹಿಂದಿ | ||
೨೦೦೦ | ತೂನೆ ಮೇರ ದಿಲ್ ಲೆ ಲಿಯಾ | ರಾಣಿ | ಹಿಂದಿ | |
೧೯೯೯ | ಹಮ್ ಆಪ್ಕೆ ದಿಲ್ ಮೆ ರೆಹೆತೆ ಹೆ[೨೨] | ಮಂಜು | ಹಿಂದಿ | |
೧೯೯೯ | ಮಾ ಬಾಪ್ ನೆ ಭುಲ್ಸೊ ನಹೀಂ | ಶರ್ದಾ | ಗುಜರಾತಿ | |
೧೯೯೫ | ಮಿಲನ್[೨೩] | ಜಯ | ಹಿಂದಿ | |
೧೯೯೫ | ರಘುವೀರ್ | ಆರ್ತಿ ವರ್ಮ | ಹಿಂದಿ | |
೧೯೯೪ | ಅಂಜಾಮ್[೨೪] | ಶಿವಾನಿಯ ತಂಗಿ | ಹಿಂದಿ | |
೧೯೯೪ | ಡಾಲ್ದು ಚೊರಯು ಧೀರೆ ಧೀರೆ | ಹಿಂದಿ | ||
೧೯೯೪ | ಬಾಲಿ ಉಮರ್ ಕೊ ಸಲಾಮ್[೨೫] | ಹಿಂದಿ | ||
೧೯೯೩ | ಫೂಲನ್ ಹಸೀನಾ ರಮ್ಕಲಿ[೨೬] | ಫೂಲನ್ | ಹಿಂದಿ | |
೧೯೯೨ | ನಿಶ್ಚಯ್[೨೭] | ಜೂಲಿ | ಹಿಂದಿ | |
೧೯೯೨ | ನಿಶ್ಚಯ್ | ಹಿಂದಿ | ||
೧೯೯೨ | ಇಂತೆಹ ಪ್ಯಾರ್ ಕಿ | ತಾನಿಯಾಳ ವಿವಾಹದಲ್ಲಿ ನರ್ತಕಿಯಾಗಿ | ಹಿಂದಿ | |
೧೯೯೨ | ಕೇದ್ ಮೆ ಹೆ ಬುಲ್ ಬುಲ್ | ಜೂಲಿ | ಹಿಂದಿ | |
೧೯೯೨ | ಶೋಲ ಔರ್ ಶಬ್ನಮ್[೨೮] | ಕರಣ್ ನ ತಂಗಿ | ಹಿಂದಿ | |
೧೯೯೧ | ಇನ್ಸಾಫ್ ಕಿ ದೇವಿ[೨೯] | ಸೀತಾ ಎಸ್.ಪ್ರಕಾಶ್ | ಹಿಂದಿ | |
೧೯೯೧ | ಕುರ್ಬಾನ್ | ಪೃಥ್ವಿಯ ತಂಗಿ | ಹಿಂದಿ | |
೧೯೯೧ | ಜಾನ್ ಪೆಹೆಚಾನ್ | ಹೇಮಾ | ಹಿಂದಿ | |
೧೯೯೧ | ಜೀನೆ ಕಿ ಸಜಾ[೩೦] | ಶೀತಲ್ | ಹಿಂದಿ | |
೧೯೯೦ | ರಾಜ್ನರ್ತಕಿ[೩೧] | ಚಂದ್ರಿಮ | ಬಂಗಾಳಿ | |
೧೯೯೦ | ಥಾನೆದಾರ್[೩೨] | ಶ್ರೀಮತಿ.ಜಗದೀಶ್ ಚಂದ್ರ | ಹಿಂದಿ | |
೧೯೯೦ | ಪತಿ ಪರ್ಮೇಶ್ವರ್[೩೩] | ಹಿಂದಿ | ||
೧೯೮೮ | ಒಲವಿನ ಆಸರೆ[೩೪] | ಕನ್ನಡ | ||
೧೯೮೮ | ತಂಗ ಕಲಸಂ | ತಮಿಳು | ||
೧೯೮೭ | ಕಲಂ ಮರಿ ಕಥಾ ಮರಿ[೩೫] | ಆರಿಫ | ಮಲೆಯಾಳಂ | |
೧೯೮೭ | ಚಿನ್ನ ತಂಬಿ ಪೆರಿಯ ತಂಬಿ[೩೬] | ತಾಯಮ್ಮ | ತಮಿಳು | |
೧೯೮೭ | ಚಿನ್ನ ಪೂವೆ ಮೆಲ್ಲ ಪೆಸು | ಶಾಂತಿ | ತಮಿಳು | |
೧೯೮೭ | ಥಯೆ ನೀಯೆ ತುನೈ | ತಮಿಳು | ||
೧೯೮೬ | ನಾಚೆ ಮಯೂರಿ[೩೭] | ಮಯೂರಿ | ಹಿಂದಿ | |
೧೯೮೬ | ವಸಂತ ರಾಗಂ[೩೮] | ತಮಿಳು | ||
೧೯೮೬ | ಧರ್ಮಂ[೩೯] | ತಮಿಳು | ||
೧೯೮೬ | ನಂಬಿನಾರ್ ಕೇಡುವಾತಿಲೈ[೪೦] | ತಮಿಳು | ||
೧೯೮೬ | ಸರ್ವಂ ಸಕ್ತಿಮಯಂ[೪೧] | ಸಿವಕಾಮಿ | ತಮಿಳು | |
೧೯೮೬ | ಮಲರುಂ ಕಿಲಿಯುಂ[೪೨] | ರೇಖ | ಮಲೆಯಾಳಂ | |
೧೯೮೪ | ಮಯೂರಿ[೪೩] | ಮಯೂರಿ | ತೆಲುಗು |
ವರ್ಷ | ಕಾರ್ಯಕ್ರಮ | ಚಾನೆಲ್ | ಭಾಷೆ |
---|---|---|---|
೨೦೧೯ | ತಕರ್ಪನ್ ಕಾಮಿಡಿ | ಮಜ್ಹಾವಿಲ್ ಮನೋರಮಾ | ಮಲಯಾಳಂ |
೨೦೧೮ | ಡಾನ್ಸ್ ಜೋಡಿ ಡಾನ್ಸ್ ಜೂನಿಯರ್ಸ್ | ಝೀ ತಮಿಳ್ | ತಮಿಳು |
೨೦೧೮/೨೦೧೯ | ಕಾಮಿಡಿ ಸ್ಟಾರ್ಸ್ ಸೀಸನ್ ೨ | ಏಷಿಯನೆಟ್ | ಮಲಯಾಳಂ |
೨೦೧೭-೨೦೧೮ | ಝೀ ಡಾನ್ಸ್ ಲೀಗ್[೫೦] | ಝೀ ತಮಿಳ್ | ತಮಿಳು |
೨೦೧೭ | ಡಾನ್ಸಿಂಗ್ ಖಿಲಾಡೀಸ್[೫೧] | ಝೀ ತಮಿಳ್ | |
ಮಲಯಾಳಿ ವೀತಮ್ಮ | ಫ್ಲವರ್ಸ್ ಟಿವಿ | ಮಲಯಾಳಂ | |
೨೦೧೬-೨೦೧೭ | ಡಾನ್ಸ್ ಜೋಡಿ ಡಾನ್ಸ್[೫೨] | ಝೀ ತಮಿಳ್ | ತಮಿಳು |
೨೦೧೩ | ಉಗ್ರಂ ಉಜ್ವಲಂ[೫೩] | ಮಜ್ಹಾವಿಲ್ ಮನೋರಮಾ | ಮಲಯಾಳಂ |
ಲಿಟಲ್ ಸ್ಟಾರ್ಸ್ | ಏಷಿಯನೆಟ್ | ||
೨೦೧೨ | ಮರಾಠಿ ತರಾಕಾ | ಝೀ ಮರಾಠಿ | ಮರಾಠಿ |
೨೦೦೯ | ಸೂಪರ್ ಡಾನ್ಸರ್ ಜೂನಿಯರ್ ೨[೫೪] | ಅಮೃತಾ ಟಿವಿ | ಮಲಯಾಳಂ |
೨೦೦೮ | ಕ್ರೇಜಿ ಕಿಯಾ ರೇ[೫೫] | ಡಿಡಿ ನ್ಯಾಷನಲ್ | ಹಿಂದಿ |
ಸೂಪರ್ ಡಾನ್ಸರ್[೫೬] | ಅಮೃತಾ ಟಿವಿ | ಮಲಯಾಳಂ | |
೨೦೦೭ | ಸೂಪರ್ ಡಾನ್ಸರ್ ಜೂನಿಯರ್[೫೪] | ಅಮೃತಾ ಟಿವಿ |
{{cite web}}
: CS1 maint: numeric names: authors list (link)
{{cite web}}
: CS1 maint: url-status (link)
{{cite web}}
: CS1 maint: url-status (link)
{{cite web}}
: CS1 maint: url-status (link)