ಸಂಚಾರಿ ವಿಜಯ್, ಶ್ವೇತಾ ದೇಸಾಯಿ, ಅರವಿಂದ ಕುಪ್ಲಿಕರ್, ಮಧು ಶ್ರೀ, ಮಾಸ್ಟರ್ ಶೋಹಿಬ್, ಎಂ. ಸಿ ಆನಂದ್, ಚೇತನ್, ಶೇಶನ್ ಎಂ. ಪಿ
ಸಂಗೀತ
ಚರಣ್ ರಾಜ್
ಛಾಯಾಗ್ರಹಣ
ಆನಂದ್ ಸುಂದರೇಶ
ಸಂಕಲನ
ಅವಿನಾಶ್ ಯು. ಶೆಟ್ಟಿ
ಸ್ಟುಡಿಯೋ
ಓಂ ಸ್ಟುಡಿಯೋ
ಅವಧಿ
೧ಘಂಟೆ ೫೨ ನಿಮಿಷ ೪೪ ಸೆಂಕೆಂಡುಗಳು
ದೇಶ
ಭಾರತ
ಭಾಷೆ
ಕನ್ನಡ
ಹರಿವುಮಂಸೋರೆ (ಮಂಜುನಾಥ್ ಎಸ್.) ಬರೆದು ನಿರ್ದೇಶಿಸಿದ ಮೊದಲ ಚಿತ್ರ.[೧][೨]ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ [೩][೪] ಅವರ ಅಂತಃಕರಣ ಅಂಕಣದಲ್ಲಿನ ನೈಜ ಘಟನೆಯೊಂದನ್ನು ಮತ್ತು ಮನುಷ್ಯ ಸಂಬಂಧಗಳು ಕಾಲದ ಹರಿವಿನಲ್ಲಿ ಹೇಗೆ ವಿಕ್ಷಿಪ್ತಗೊಳ್ಳುತ್ತವೆ ಎಂಬುದನ್ನು ಎರಡು ಕಥನಗಳ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ. [೫][೬]
ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಚಿಕಿತ್ಸೆ ಕೊಡಿಸಲು ಜೀವನೋಪಾಯಕ್ಕೆ ಇದ್ದ ಹೊಲವನ್ನೇ ಮಾರಿ ನಗರಕ್ಕೆ ಬರುವ ಬಡ ರೈತ, ಆತನನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿ ಒಂದೆಡೆಯಾದರೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆಯನ್ನು ನಿರ್ಲಕ್ಷಿಸಿ ತನ್ನ ವೃತ್ತಿಗೇ ಆದ್ಯತೆ ನೀಡುವ ಪತ್ರಕರ್ತ ಇನ್ನೊಂದೆಡೆ. ಈ ಎರಡೂ ವಿಭಿನ್ನ ಮನಸ್ಥಿತಿಗಳು ಸಂಧಿಸುವ ಸನ್ನಿವೇಶದಲ್ಲಿ ದುರಂತವಿದ್ದರೂ, ಬದಲಾಗುವ ದೃಷ್ಟಿಕೋನದ ಸಕಾರಾತ್ಮಕ ಚಿತ್ರಣವೂ ಇದೆ.