ಹುಡುಗರು | |
---|---|
ನಿರ್ದೇಶನ | ಕೆ. ಮಾದೇಶ್ |
ನಿರ್ಮಾಪಕ | ಪಾರ್ವತಮ್ಮ ರಾಜ್ಕುಮಾರ್ |
ಲೇಖಕ | ಗುರುಪ್ರಸಾದ್ (ಸಂಭಾಷಣೆ) |
ಚಿತ್ರಕಥೆ | ಕೆ. ಮಾದೇಶ್ |
ಕಥೆ | Samuthirakani |
ಪಾತ್ರವರ್ಗ | |
ಸಂಗೀತ | ವಿ.ಹರಿಕೃಷ್ಣ |
ಛಾಯಾಗ್ರಹಣ | ಸತ್ಯ ಹೆಗಡೆ |
ಸಂಕಲನ | ದೀಪು ಎಸ್. ಕುಮಾರ್ |
ಸ್ಟುಡಿಯೋ | ಚಕ್ರೇಶ್ವರಿ ಕಂಬೈನ್ಸ್ |
ಬಿಡುಗಡೆಯಾಗಿದ್ದು | 2011 ರ ಮೇ 05 |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹ 9 ಕೋಟಿ [೧] |
ಹುಡುಗರು ಕೆ. ಮಾದೇಶ್ ನಿರ್ದೇಶನದ 2011 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಪುನೀತ್ ರಾಜ್ಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ ಮತ್ತು ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೨] [೩] 2010 ರ ಯಶಸ್ವಿ ತಮಿಳು ಚಲನಚಿತ್ರ ನಾಡೋಡಿಗಲ್ನ ರೀಮೇಕ್ ಆಗಿರುವ ಈ ಚಲನಚಿತ್ರವನ್ನು ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸಿದ್ದಾರೆ, ವಿ. ಹರಿಕೃಷ್ಣ ಸಂಗೀತವನ್ನು ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವು 5 ಮೇ 2011 ರಂದು ಬಿಡುಗಡೆಯಾಗಿ ಪುನೀತ್ ಅವರ ಹಿಂದಿನ ಚಿತ್ರ ಜಾಕಿಯಂತೆಯೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು.
ಈ ಚಿತ್ರವು ಕನ್ನಡದಲ್ಲಿ ಪುನೀತ್ ರಾಜ್ಕುಮಾರಿಗೆ ಅವರ್ ಫಿಲ್ಮ್ಫೇರ್ ಮತ್ತು SIIMA ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಗಳಿಸಿ ಕೊಟ್ಟಿತು.
ಈ ಚಲನಚಿತ್ರವು 5 ಮೇ 2011 ರಂದು ಕರ್ನಾಟಕದಾದ್ಯಂತ ಸುಮಾರು 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ . ಮೂಲ ತಮಿಳು ಚಿತ್ರದ "ಸಂಬೋ ಶಿವ" ಹಾಡನ್ನು ಉಳಿಸಿಕೊಳ್ಳಲಾಗಿದೆ.
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ನಾ ಬೋರ್ಡು ಇರದ ಬಸ್ (ಪಂಕಜ)" | ಯೋಗರಾಜ ಭಟ್ | ವಿ.ಹರಿಕೃಷ್ಣ, ಮಮತಾ ಶರ್ಮ, ನವೀನ್ ಮಾಧವ್ | |
2. | "ನೀರಲ್ಲಿ ಸಣ್ಣ ಅಲೆ" | ಜಯಂತ ಕಾಯ್ಕಿಣಿ | ಸೋನು ನಿಗಮ್, ಸುನೀತಾ ಉಪದ್ರಷ್ಟ | |
3. | "ಏನ್ ಚಂದನೇ ಹುಡುಗಿ" | ವಿ. ನಾಗೇಂದ್ರ ಪ್ರಸಾದ್ | ಸುಖವೀಂದರ್ ಸಿಂಗ್, ಕೈಲಾಶ್ ಖೇರ್, ವಿಜಯ್ ಪ್ರಕಾಶ್ , ಪ್ರಿಯಾ ಹಿಮೇಶ್ | |
4. | "ಶಂಭೋ ಶಿವ ಶಂಭೋ" | ವಿ. ನಾಗೇಂದ್ರ ಪ್ರಸಾದ್ | ಶಂಕರ್ ಮಹದೇವನ್ | |
5. | "ನೀರಲ್ಲಿ ಸಣ್ಣ ಅಲೆ" | ಜಯಂತ ಕಾಯ್ಕಿಣಿ | ಸುನೀತಾ ಉಪದ್ರಷ್ಟ |