ಭಾರತದಲ್ಲಿನ ಜಾತಿ ವ್ಯವಸ್ಥೆಯು ಜಾತಿಯ ಹೊರಗೆ ವಿವಾಹವನ್ನು ನಿಷೇಧಿಸುತ್ತದೆ.[೧] ಆದರೂ, ಹೆಚ್ಚುತ್ತಿರುವ ಶಿಕ್ಷಣ, ಉದ್ಯೋಗ, ಮಧ್ಯಮ ವರ್ಗದ ಆರ್ಥಿಕ ಹಿನ್ನೆಲೆ, ಮತ್ತು ನಗರೀಕರಣದ ಕಾರಣದಿಂದ, ಅಂತರ್ಜಾತೀಯ ವಿವಾಹಗಳು ಕ್ರಮೇಣವಾಗಿ ಸಮ್ಮತಿಯನ್ನು ಪಡೆದುಕೊಳ್ಳುತ್ತಿವೆ. ೨೦೧೪ರಲ್ಲಿನ ಒಂದು ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡ ೫ ರಷ್ಟು ವಿವಾಹಗಳು ಅಂತರ್ಜಾತಿ ವಿವಾಹಗಳಾಗಿವೆ.
ಭಾರತದಲ್ಲಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಸಿ. ಎನ್. ಅಣ್ಣಾದೊರೈಯಂತಹ ರಾಜಕಾರಣಿಗಳು ಮತ್ತು ಪೆರಿಯಾರ್ ರಾಮಸ್ವಾಮಿ, ರಘುಪತಿ ವೆಂಕಟರತ್ನಮ್ ನಾಯ್ಡು ಹಾಗೂ ಮಂಥೇನಾ ವೆಂಕಟ ರಾಜುರಂತಹ ಸಾಮಾಜಿಕ ಕಾರ್ಯಕರ್ತರು ಅಂತರ್ಜಾತೀಯ ವಿವಾಹಗಳನ್ನು ಸಾರ್ವಜನಿಕವಾಗಿ ಪ್ರೋತ್ಸಾಹಿಸಿ ಬೆಂಬಲಿಸಿದರು. ಉತ್ತರ ಪ್ರದೇಶ ರಾಜ್ಯದಲ್ಲಿ, ಸರ್ಕಾರವು ಅಂತರ್ಜಾತೀಯ ದಂಪತಿಗಳಿಗೆ ನಗದು ಬಹುಮಾನವನ್ನು ನೀಡುತ್ತದೆ. ಅಂತರ್ಜಾತೀಯ ವಿವಾಹಗಳು ರಾಷ್ಟ್ರದ ಹಿತದಲ್ಲಿವೆ ಮತ್ತು ರಾಷ್ಟ್ರವನ್ನು ಒಗ್ಗೂಡಿಸುವ ಅಂಶವಾಗಿವೆ ಮತ್ತು ಭಾರತದಲ್ಲಿ ಅಂತರ್ಜಾತೀಯ ಅಥವಾ ಅಂತರಧರ್ಮೀಯ ವಿವಾಹಗಳಿಗೆ ಯಾವುದೇ ತಡೆಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೂ ಘೋಷಿಸಿದೆ.
ದಲಿತ ಹುಡುಗಿಯನ್ನು ಮದುವೆಯಾಗಿರುವ, ಗೌಡ ಜಾತಿಯ ಹುಡುಗ ನಂತರ ಇಬ್ಬರೂ ಯಾವ ಜಾತಿಯಲ್ಲಿ ಮುಂದುವರಿಯಬೇಕು. ಮತ್ತು ಇಬ್ಬರು ಸರ್ಕಾರಿ ಕೆಲಸಗಳಿಗೆ ಯಾವ ಜಾತಿ ಪ್ರಮಾಣಪತ್ರವನ್ನು ಒದಗಿಸಬೇಕು ಮತ್ತು ಮಕ್ಕಳಿಗೆ ಯಾವ ಜಾತಿಯಲ್ಲಿ ನೋಂದಾಯಿಸಬೇಕು ಎಂಬ ಸಮಸ್ಯೆ ಇರುವುದು. ದಯವಿಟ್ಟು ಸ್ವಾಮಿ ಇದಕ್ಕೆ ಉತ್ತರ ಕಳಿಸಿ.