ಅಂತುಲೇನಿ ಕಥಾ | |
---|---|
ನಿರ್ದೇಶನ | ಕೆ.ಬಾಲಚಂದರ್ |
ನಿರ್ಮಾಪಕ | ರಾಮ ಆರಣ್ಣಗಲ್ |
ಲೇಖಕ | ಕೆ.ಬಾಲಚಂದರ್ ಎಂ.ಎಸ್.ಪೆರುಮಲ್ಲು ಆಚಾರ್ಯ ಆತ್ರೇಯ |
ಪಾತ್ರವರ್ಗ | ಜಯಪ್ರದಾ ಫಟಾಪಟ ಜಯಲಕ್ಷ್ಮಿ ರಜನೀಕಾಂತ್ ಶ್ರೀಪ್ರಿಯಾ |
ಸಂಗೀತ | ಎಂ.ಎಸ್.ವಿಶ್ವನಾಥನ್ |
ಛಾಯಾಗ್ರಹಣ | ಬಿ.ಎಸ್.ಲೋಕನಾಥ್ |
ಸ್ಟುಡಿಯೋ | ಅಂಡಾಳ್ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ತೆಲುಗು |
ಅಂತುಲೇನಿ ಕಥಾ (ಅನುವಾದ. Never Ending Story ನೆವರ್ ಎಂಡಿಂಗ್ ಸ್ಟೋರಿ) ೧೯೭೬ರಲ್ಲಿ ತೆರೆ ಕಂಡ ತೆಲುಗು ಭಾಷೆಯ ಚಲನಚಿತ್ರವಾಗಿದ್ದು ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದಾರೆ. ಇದರಲ್ಲಿ ಜಯಪ್ರದಾ ನಟಿಸಿದ್ದಾರೆ, ಜೊತೆಗೆ ಫತಾಫತ್ ಜಯಲಕ್ಷ್ಮಿ, ರಜನಿಕಾಂತ್ ಮತ್ತು ಶ್ರೀಪ್ರಿಯ ಪೋಷಕ ಪಾತ್ರಗಳಲ್ಲಿದ್ದಾರೆ. ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರವು ಬಾಲಚಂದರ್ ನಿರ್ದೇಶಿಸಿದ ೧೯೭೪ರ ತಮಿಳು ಚಿತ್ರ ಅವಲ್ ಒರು ತೋಡರ್ ಕಥೈ ರಿಮೇಕ್ ಆಗಿದೆ.[೧] ಈ ಚಿತ್ರವನ್ನು ನಂತರ ಬಂಗಾಳಿ ಭಾಷೆಯಲ್ಲಿ ಕವಿತಾ ಎಂದು ಮರುನಿರ್ಮಿಸಲಾಯಿತು. ಕಮಲ್ ಹಾಸನ್ ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು. ಈ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದರು .[೨] ಇದು ಜಯಪ್ರದಾ ಅವರ ಮೊದಲ ನಟನೆಯ ಪಾತ್ರವಾಗಿದ್ದು ಮೂಲ ಚಿತ್ರದಲ್ಲಿ ಸುಜಾತಾ ನಿರ್ವಹಿಸಿದ ಪಾತ್ರವನ್ನು ಇವರು ಇಲ್ಲಿ ಅಭಿನಯಿಸಿದ್ದಾರೆ. ಇದು ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಇದು ರಜನಿಕಾಂತ್ ಅವರ ಮೊದಲ ಪ್ರಮುಖ ಪಾತ್ರವೂ ಆಗಿತ್ತು. ಈ ಚಿತ್ರವನ್ನು ಕಪ್ಪು-ಬಿಳುಪು ಬಣ್ಣದಲ್ಲಿ ಚಿತ್ರೀಕರಿಸಲಾಗಿದೆ.
ಸರಿತಾ (ಜಯಪ್ರದಾ) ಬಡ ಕುಟುಂಬದಲ್ಲಿ ದುಡಿಯುವ ಮಹಿಳೆ. ತನ್ನ ವಿಧವೆಯಾದ ಸಹೋದರಿ, ಮತ್ತೊಬ್ಬ ಅವಿವಾಹಿತ ಸಹೋದರಿ, ಕುರುಡು ಕಿರಿಯ ಸಹೋದರ, ತಾಯಿ ಮತ್ತು ಕುಡುಕ ಸಹೋದರ ಮೂರ್ತಿ (ರಜನೀಕಾಂತ್) ಅವರೊಂದಿಗೆ ಆಕೆ ಬದುಕುತ್ತಿದ್ದಾಳೆ.ಈ ಕುಟುಂಬವನ್ನು ಬೆಂಬಲಿಸಲು ಅವಳು ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಆಕೆಯ ತಂದೆ ಕುಟುಂಬವನ್ನು ತೊರೆದು ತೀರ್ಥಯಾತ್ರೆಗೆ ಹೋಗುತ್ತಾನೆ. ಆಕೆಯ ಕುಡುಕ ಸಹೋದರನು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಿಗೆ ಅವನು ಅವಳಿಗೆ ಹೆಚ್ಚುವರಿ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ.
ಆಕೆಗೆ ಒಬ್ಬ ದೀರ್ಘಕಾಲದ ಗೆಳೆಯನಿದ್ದಾನೆ. ಮತ್ತು ಆತ ಆಕೆಯನ್ನು ಮದುವೆಯಾಗಲು ಬಯಸುತ್ತಾನೆ. ಆದರೆ ಆಕೆ ತನ್ನ ಕುಟುಂಬದ ಬಗೆಗಿನ ಬದ್ಧತೆಯಿಂದಾಗಿ ಹಾಗೆ ಮಾಡುವುದಿಲ್ಲ. ಅವನ ಕಣ್ಣುಗಳು ಈಗ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಸರಿತಾಳ ವಿಧವೆಯಾದ ಕಿರಿಯ ಸಹೋದರಿಯ (ಶ್ರೀಪ್ರಿಯ) ಕಡೆಗೆ ತಿರುಗುತ್ತವೆ. ಸರಿತಾ ತನ್ನ ಪ್ರಿಯಕರನ ಪ್ರೇಮ ಪತ್ರವನ್ನು ತನ್ನ ಸಹೋದರಿಗೆ ಓದಿದ ನಂತರ ಅವರನ್ನು ಮದುವೆಯಾಗಲು ವ್ಯವಸ್ಥೆ ಮಾಡುತ್ತಾಳೆ, ಹೀಗೆ ಅವನೊಂದಿಗೆ ಜೀವನವನ್ನು ನಡೆಸುವ ಅವಕಾಶವನ್ನು ತ್ಯಜಿಸುತ್ತಾಳೆ. ತನ್ನ ಸಹೋದರ ತನ್ನ ಕುಟುಂಬವನ್ನು ನೋಡಿಕೊಳ್ಳುವಷ್ಟು ಜವಾಬ್ದಾರನಾಗಿದ್ದಾನೆಂದು ಅರಿತುಕೊಂಡಾಗ ಆಕೆ ಅಂತಿಮವಾಗಿ ತನ್ನ ಮೇಲಧಿಕಾರಿಯ (ಕಮಲ್ ಹಾಸನ್) ಮದುವೆಯ ಪ್ರಸ್ತಾಪವನ್ನು ಸ್ವೀಕರಿಸುತ್ತಾಳೆ. ಅವಳು ತನ್ನ ತೊಂದರೆಗೀಡಾದ ಸ್ನೇಹಿತೆ (ಫತಾಫಟ್ ಜಯಲಕ್ಷ್ಮಿ ನಟಿಸಿರುವ ಪಾತ್ರ) ಜೀವನದಲ್ಲಿ ನೆಲೆಗೊಳ್ಳಲು ಸಹಾಯ ಮಾಡುತ್ತಾಳೆ. ಆಕೆ ಕಠಿಣ ಪರಿಶ್ರಮದ ತನ್ನ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸುತ್ತಾಳೆ. ಆದರೆ ವಿಶಿಷ್ಟವಾದ ಬಾಲಚಂದರ್ ಶೈಲಿಯ ಕ್ಲೈಮ್ಯಾಕ್ಸಿನಲ್ಲಿ ಅದು ಸಾಧ್ಯವಾಗಲಿಲ್ಲ.
ಕಮಲ್ ಹಾಸನ್ ಮತ್ತು ರಜನಿಕಾಂತ್ ಇಬ್ಬರೂ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.[೩]
ಎಲ್ಲಾ ಹಾಡುಗಳನ್ನು ಆಚಾರ್ಯ ಆತ್ರೇಯ ಬರೆದಿದ್ದಾರೆ ಮತ್ತು ಸಂಗೀತವನ್ನು ಎಂ. ಎಸ್. ವಿಶ್ವನಾಥನ್ ಸಂಯೋಜಿಸಿದ್ದಾರೆ.[೪]
೨೦೦೧ರಲ್ಲಿ, ಜಯಪ್ರದಾ ಸ್ವತಃ ಈ ಚಿತ್ರವು ತಮ್ಮ ವೈಯಕ್ತಿಕ ಜೀವನದಲ್ಲಿ ಬೀರಿದ ಪ್ರಭಾವವನ್ನು ಒಪ್ಪಿಕೊಂಡರು. ಏಕೆಂದರೆ ಅವರು ಮುಖ್ಯ ಪಾತ್ರದೊಂದಿಗೆ ಹೆಚ್ಚು ಸಂಬಂಧ ಹೊಂದಿದ್ದರು.[೫]
ಫಿಲ್ಮ್ಫೇರ್ ಅವಾರ್ಡ್ಸ್ ಸೌತ್
{{cite web}}
: CS1 maint: unrecognized language (link)