Akira | |
---|---|
![]() Theatrical release poster | |
ನಿರ್ದೇಶನ | A. R. Murugadoss |
ನಿರ್ಮಾಪಕ | Fox Star Studios A.R. Murugadoss |
ಲೇಖಕ | Additional Screenplay and Dialogues: Anurag Kashyap Dialogues: Karan Singh Rathore |
ಚಿತ್ರಕಥೆ | Santha Kumar A. R. Murugadoss |
ಕಥೆ | Santha Kumar |
ಆಧಾರ | Mouna Guru by Santha Kumar |
ಪಾತ್ರವರ್ಗ | |
ಸಂಗೀತ | Score: John Stewart Eduri Songs: Vishal–Shekhar[೧][೨] |
ಛಾಯಾಗ್ರಹಣ | R. D. Rajasekhar |
ಸಂಕಲನ | A. Sreekar Prasad |
ಸ್ಟುಡಿಯೋ | Fox Star Studios A.R. Murugadoss Productions |
ವಿತರಕರು | Fox Star Studios |
ಬಿಡುಗಡೆಯಾಗಿದ್ದು |
|
ಅವಧಿ | 136 minutes |
ದೇಶ | India |
ಭಾಷೆ | Hindi |
ಬಂಡವಾಳ | ₹36.0 million[೩] |
ಬಾಕ್ಸ್ ಆಫೀಸ್ | est. ₹150.63 million[೪] |
ಅಕಿರಾ 2016 ರಲ್ಲಿ ತೆರೆಕಂಡ ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, AR ಮುರುಗದಾಸ್ ಅವರ ಕತೆ, ಚಿತ್ರಕತೆ, ನಿರ್ದೇಶನ ಮತ್ತು ನಿರ್ಮಾಣವನ್ನು ಹೊಂದಿದೆ. ಇದು 2011 ರ ತಮಿಳು ಭಾಷೆಯ ಚಲನಚಿತ್ರ ಮೌನ ಗುರುವಿನ [೫] ರಿಮೇಕ್ ಆಗಿದೆ. ಇದರಲ್ಲಿ ಸೋನಾಕ್ಷಿ ಸಿನ್ಹಾ, ಕೊಂಕಣ ಸೇನ್ ಶರ್ಮಾ ಮತ್ತು ಅನುರಾಗ್ ಕಶ್ಯಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. [೬]
ಈ ಚಿತ್ರದ ಚಿತ್ರೀಕರಣ ಮಾರ್ಚ್ 2015 ರಲ್ಲಿ ಪ್ರಾರಂಭವಾಯಿತು ಮತ್ತು ಚಲನಚಿತ್ರವು 2 ಸೆಪ್ಟೆಂಬರ್ 2016 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು [೭] [೮] ವಿಶಾಲ್-ಶೇಖರ್ ಸಂಯೋಜಿಸಿದ ಹಾಡುಗಳನ್ನು 16 ಆಗಸ್ಟ್ 2016 ರಂದು ಬಿಡುಗಡೆ ಮಾಡಲಾಯಿತು. ಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಮತ್ತು ಪಾತ್ರವರ್ಗದ ಅಭಿನಯಕ್ಕಾಗಿ ಪ್ರಶಂಸೆಯನ್ನು ಪಡೆಯಿತು ಆದರೆ ಚಲನಚಿತ್ರದ ಸಾಹಿತ್ಯ ವಿಮರ್ಷಕರ ಟೀಕೆಗೆ ಗುರಿಯಾಯಿತು. [೯] [೧೦] [೧೧]
ಅಕಿರಾ: ದಿ ಗೇಮ್ ಎಂಬ ಶೀರ್ಷಿಕೆಯ ಟೈ-ಇನ್ ಆಕ್ಷನ್ ಮೊಬೈಲ್ ವಿಡಿಯೋ ಗೇಮ್ ಅನ್ನು ಸಹ ಚಿತ್ರದ ಜೊತೆಗೆ ಬಿಡುಗಡೆ ಮಾಡಲಾಯಿತು. ವೀಡಿಯೊ ಗೇಮ್ ಅನ್ನು ವ್ರೂವಿ ಅಭಿವೃದ್ಧಿಪಡಿಸಿದ್ದಾರೆ. [೧೨]
ಅಕಿರಾ ಶರ್ಮಾ ಎಂಬ ಚಿಕ್ಕ ಹುಡುಗಿ ಪುರುಷರ ಗುಂಪೊಂದು ಮಹಿಳೆಯ ಮುಖದ ಮೇಲೆ ಆಸಿಡ್ ಎಸೆಯುವುದನ್ನು ನೋಡುತ್ತಾಳೆ. ಅಪರಾಧಿಗಳಲ್ಲಿ ಒಬ್ಬನನ್ನು ಹಿಡಿಯಲು ಅವಳು ಪೊಲೀಸರಿಗೆ ಸಹಾಯ ಮಾಡುತ್ತಾಳೆ. ಹಾಗಾಗಿ ಆ ಆರೋಪಿಗಳು ಆಕೆಗೆ ಕಿರುಕುಳ ಕೊಡುತ್ತಾರೆ. ಇದರಿಂದ ಆಕೆಯ ಮುಖಕ್ಕೆ ಗಾಯವಾಗುತ್ತದೆ. ನಂತರ ಆಕೆಯ ತಂದೆ ಅವಳನ್ನು ಆತ್ಮರಕ್ಷಣೆಯ ತರಗತಿಗೆ ಸೇರಿಸುತ್ತಾರೆ. ಒಂದೆರಡು ದಿನಗಳ ನಂತರ ಅವಳು ಮೊದಲು ತಪ್ಪಿಸಿಕೊಂಡ ಅದೇ ಪುರುಷರನ್ನು ನೋಡುತ್ತಾಳೆ ಮತ್ತು ಅವರನ್ನು ಹಿಡಿಯಲು ಪ್ರಯತ್ನಿಸುತ್ತಾಳೆ. ಅವರಲ್ಲಿ ಒಬ್ಬರು ಅವಳ ಮೇಲೆ ಆಸಿಡ್ ಎಸೆಯಲು ಪ್ರಯತ್ನಿಸುತ್ತಾರೆ. ಆದರೆ ಆ ಜಗಳದಲ್ಲಿ ಎಸೆಯಲು ಹೋದವನ ಮುಖದ ಮೇಲೆಯೇ ಬೀಳುತ್ತದೆ.ಈ ದಾಳಿಯನ್ನು ಅಕಿರಾಳೇ ಮಾಡಿದ್ದಾಳೆ ಎಂದು ತಿಳಿದು ಅಕಿರಾನನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುತ್ತದೆ.
8 ವರ್ಷಗಳ ನಂತರ ಅಕಿರಾ ಬಿಡುಗಡೆಯಾಗುತ್ತಾಳೆ. ಸಮಾಜದಲ್ಲಿನ ಅನ್ಯಾಯದ ವಿರುದ್ಧ ಬಂಡೇಳುವ ಕಠಿಣ ಮಹಿಳೆಯಾಗಿ ಬೆಳೆಯುತ್ತಾಳೆ. ಅವಳು ಕಾಲೇಜಿಗೆ ಹೋಗಲು ಪ್ರಾರಂಭಿಸಿದಾಗ, ಅವಳ ತಾಯಿ ಮತ್ತು ಅವಳನ್ನು ಕರೆದುಕೊಂಡು ಹೋಗಲು ಅವಳ ಸಹೋದರ ಬರುತ್ತಾನೆ. ಆದ್ದರಿಂದ ಅವಳು ಜೋಧಪುರದಿಂದ ಮುಂಬೈಗೆ ಸ್ಥಳಾಂತರಗೊಳ್ಳುತ್ತಾಳೆ. ಕಾಲೇಜಿಗೆ ಸೇರಿದ ಆಕೆ ಹಾಸ್ಟೆಲ್‌ನಲ್ಲಿ ವಾಸಿಸಲು ಪ್ರಾರಂಭಿಸುತ್ತಾಳೆ. ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳಲು ಅವಳು ಕಷ್ಟಪಡುತ್ತಾಳೆ. ಕಾಲೇಜಿನಲ್ಲಿ ಸುಮಾರು ಎಲೆಕ್ಟ್ರಾನಿಕ್ಸ್ ವಸ್ತುಗಳ ಕಳ್ಳತನವಾಗುತ್ತಿರುತ್ತದೆ. ಭ್ರಷ್ಟ ಮತ್ತು ಪಾನಮತ್ತ ಪೊಲೀಸ್ ಅಧಿಕಾರಿ, ಎಸಿಪಿ ರಾಣೆ ಅವರು ಹಿರಿಯ ಕಾಲೇಜು ಪ್ರಾಧ್ಯಾಪಕರನ್ನು ತಮ್ಮ ಕಾರಿನಿಂದ ಗುದ್ದಿ ನಂತರ ಕ್ಷಮೆ ಕೇಳುವ ಬದಲು ಅವರನ್ನೇ ಥಳಿಸಿದಾಗ ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯನ್ನು ನಡೆಸುತ್ತಾರೆ. ಆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತವೆ. ಆದರೂ ಅಕಿರಾ ತಮ್ಮ ಮನವಿಯನ್ನು ಆಯುಕ್ತರಿಗೆ ಹಸ್ತಾಂತರಿಸಲು ತಾಳ್ಮೆಯಿಂದ ಕಾಯುತ್ತಾರೆ.
ಒಂದೆರಡು ದಿನಗಳ ನಂತರ ರಾಣೆ ಕಾರು ಅಪಘಾತಕ್ಕೊಳಗಾದ ವ್ಯಕ್ತಿಗೆ ಸಹಾಯ ಮಾಡಲು ಹೋಗುತ್ತಾನೆ . ಆದರೆ ಅವನ ಟ್ರಂಕ್‌ನಲ್ಲಿ ಲೂಟಿ ಹೊಡೆದ ವಸ್ತುಗಳನ್ನು ಕಂಡಾಗ ಅಪಘಾತಕ್ಕೊಳಗಾದ ವ್ಯಕ್ತಿಯನ್ನೇ ದರೋಡೆ ಮಾಡಿ ಕೊಲ್ಲುತ್ತಾನೆ. ಅವನ ಗೆಳತಿ ಮಾಯಾ, ಅಕಿರಾನ ಅದೇ ಕಾಲೇಜಿನಲ್ಲಿ ಓದುತ್ತಿರುತ್ತಾಳೆ. ಅವಳು ಕೊಲೆಯ ಸಾಕ್ಷ್ಯ ನಾಶಮಾಡುವ ಬಗೆಗಿನ ಇನ್ಸಪೆಕ್ಟರ್ ರಾಣೆ ಅವರ ಸಂಭಾಷಣೆಯನ್ನು ರಹಸ್ಯವಾಗಿ ದಾಖಲಿಸುತ್ತಾಳೆ. ಆ ರೆಕಾರ್ಡಿಂಗ್ ಮಾಡಿದ ಕ್ಯಾಮರಾ ಇರುವ ಆಕೆಯ ಬ್ಯಾಗ್ ಕಳ್ಳತನವಾಗುತ್ತದೆ. ಆ ಬ್ಯಾಗ್ ಪಡೆದ ಯಾರೋ ರಾಣೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಮಾಯಾಳೇ ಈ ಕೆಲಸ ಮಾಡುತ್ತಿದ್ದಾಳೆ ಎಂದು ಅನುಮಾನಿಸುವ ರಾಣೆ ಅವಳನ್ನು ಬರ್ಬರವಾಗಿ ಕೊಂದು ಹಾಕುತ್ತಾನೆ. ಅವರ ಒತ್ತಾಯದ ಹೊರತಾಗಿಯೂ, ಮಾಯಾ ಅವರ ಹತ್ಯೆಯನ್ನು ಶಂಕಿಸುವ ಎಸ್ಪಿ ರಬಿಯಾ ಅವರು ಪ್ರಕರಣವನ್ನು ನಿರ್ವಹಿಸುತ್ತಾರೆ.
ಈ ಮಧ್ಯೆ ಎಲೆಕ್ಟ್ರಾನಿಕ್ ಕಳ್ಳರು ಕದ್ದ ಎಲ್ಲಾ ವಸ್ತುಗಳನ್ನು ಅನಾಮಧೇಯವಾಗಿ ಹಿಂದಿರುಗಿಸಿದರೆ ಅವರನ್ನು ಕ್ಷಮಿಸುವುದಾಗಿ ಕಾಲೇಜು ಘೋಷಿಸುತ್ತದೆ. ಅಕಿರಾಗೆ ತನ್ನ ವಸತಿ ನಿಲಯದ ಮುಂದೆ ಕ್ಯಾಮೆರಾ ಸೇರಿದಂತೆ ಕದ್ದ ವಸ್ತುಗಳ ತುಂಬಿದ ಚೀಲ ಸಿಗುತ್ತದೆ. ರಾಣೆಯ ಸಹಚರರು ಕ್ಯಾಮರಾ ತೆಗೆದುಕೊಳ್ಳೋ ಅಕಿರಾನನ್ನು ಹಿಡಿಯುತ್ತಾರೆ ಮತ್ತು ಅವಳನ್ನು ಮತ್ತು ಇತರ ಇಬ್ಬರು ಸಾಕ್ಷಿಗಳನ್ನು ಕೊಲ್ಲಲು ನಿರ್ಧರಿಸುತ್ತಾರೆ. ಇತರ ಇಬ್ಬರು ಸಾಕ್ಷಿಗಳನ್ನು ಕೊಂದು ತಮ್ಮ ಗನ್ ಅನ್ನು ಮರುಲೋಡ್ ಮಾಡುವ ಸಂದರ್ಭದಲ್ಲಿ ಅಕಿರಾ ತಪ್ಪಿಸಿಕೊಳ್ಳುತ್ತಾಳೆ.
ರಾಣೆ ಮತ್ತು ಅವನ ಸಹಚರರು ಅಕಿರಾಳನ್ನು ಮಾನಸಿಕವಾಗಿ ಅಸ್ಥಿರ ಎಂದು ಘೋಷಿಸುತ್ತಾರೆ. ಆಕೆಯ ಹಿಂಸಾತ್ಮಕ ಭೂತಕಾಲ ಮತ್ತು ಅವಳ ಬಂಡಾಯದ ನಡವಳಿಕೆಯನ್ನು ಗಮನಿಸಿ ಅವಳ ಕುಟುಂಬ ಸದಸ್ಯರು ಮತ್ತು ಅವಳ ಸ್ನೇಹಿತರೂ ಕೂಡ ಅದೇ ಸತ್ಯ ಎಂದು ಕೊಳ್ಳುತ್ತಾರೆ . ಅವಳನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಮತ್ತು ಭ್ರಷ್ಟ ವೈದ್ಯರ ಸಹಾಯದಿಂದ ಅವರು ಅವಳಿಗೆ ಹುಚ್ಚು ಹಿಡಿಸಲು ವಿದ್ಯುತ್ ಆಘಾತವನ್ನು ನೀಡುತ್ತಾರೆ. ಆದರೆ ಅಷ್ಟರಲ್ಲಿ ಮತ್ತೊಬ್ಬ ಮಾನಸಿಕ ಅಸ್ವಸ್ಥ ರೋಗಿಯ ಸಹಾಯದಿಂದ ವೈದ್ಯರು ಮತ್ತು ಸಿಬ್ಬಂದಿಯನ್ನು ಬರ್ಬರವಾಗಿ ಕೊಂದು ಅಕಿರಾ ಪರಾರಿಯಾಗುತ್ತಾಳೆ. ರಾಣೆಯ ಸಹಚರರಲ್ಲಿ ಒಬ್ಬನನ್ನು ಅಪಹರಿಸಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಬ್ಲ್ಯಾಕ್ ಮೇಲ್ ಮಾಡುತ್ತಾಳೆ. ಅಷ್ಟರಲ್ಲಿ ರಾಣೆ ಅಕಿರಾಳ ಅಡಗುತಾಣವನ್ನು ಪತ್ತೆಹಚ್ಚಿ ಅದರ ಮೇಲೆ ದಾಳಿ ಮಾಡುತ್ತಾನೆ. ಆದರೆ ರಾಣೆಯ ಬಂಧನ-ವಾರೆಂಟ್‌ನೊಂದಿಗೆ ಆಗಮಿಸುವ ಇನ್ಸಪೆಕ್ಟರ್ ರಬಿಯಾ ರಾಣೆಯ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಾರೆ. ರಾಣೆಯ ಕೃತ್ಯಗಳ ಬಗ್ಗೆ ರಬಿಯಾ ಎಲ್ಲರಿಗೂ ಹೇಳಬೇಕು ಎನ್ನುವಷ್ಟರಲ್ಲಿ ಕಮಿಷನರ್ ಅವರನ್ನು ತಡೆಯುತ್ತಾರೆ. ಏಕೆಂದರೆ ಕಾರ್ ಅಪಘಾತದಲ್ಲಿ ಬಲಿಯಾದ ವ್ಯಕ್ತಿ ಪ್ರಮುಖ ರಾಜಕಾರಣಿಯ ಸಹೋದರರಾಗಿರುತ್ತಾರೆ. ಅವರ ಹತ್ಯೆಯನ್ನು ಪೋಲಿಸ್ ಆಫಿಸರ್ ರಾಣೆ ಮಾಡಿದ್ದು ಎಂಬ ಸುದ್ದಿ ಗೊತ್ತಾದರೆ ಅದು ಎಲ್ಲೆಡೆ ಗಲಭೆಗೆ ಕಾರಣವಾಗುತ್ತದೆ. ರಾಣೆಗೆ ಅವರ ಅಧಿಕಾರ ವಾಪಾಸ್ ಕೊಡುವ ಕಮಿಷನರ್ ಅಕಿರಾಳನ್ನು ಮಾನಸಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ಆದೇಶಿಸುತ್ತಾರೆ. ಅಪರಾಧಿ ಯಾರು ಎಂದು ಗೊತ್ತಾದರೂ ಏನೂ ಮಾಡಲಾಗದ ಬೇಸರ ರಬಿಯಾಗೆ ಕಾಡುತ್ತದೆ. ಬೇಸರದಿಂದ ಹೊರಹೋಗುವ ಅವಳು ಸದ್ದಿಲ್ಲದೆ ವಶಪಡಿಸಿಕೊಂಡ ಎಲ್ಲಾ ಶಸ್ತ್ರಾಸ್ತ್ರಗಳನ್ನೂ ಜೊತೆಗೆ ಒಯ್ಯುತ್ತಾಳೆ. ಅಕಿರಾ ರಾಣೆ ಮತ್ತು ಅವನ ಸಹಚರರನ್ನು ಮುಷ್ಠಿ ಯುದ್ಧದಲ್ಲಿ ಸುಲಭವಾಗಿ ಕೊಲ್ಲುತ್ತಾಳೆ . ಕೊಂದ ನಂತರ ಕಮಿಷನರ್ ಆದೇಶದಂತೆ ಮಾನಸಿಕ ಆಶ್ರಯಕ್ಕೆ ಹಿಂತಿರುಗುತ್ತಾನೆ. ಮಾನಸಿಕ್ರ ರೋಗಿಗಳ ಆಶ್ರಮದಲ್ಲಿ ಸಂಪೂರ್ಣ ವಿವೇಕದಿಂದಿರುವ ಅಕಿರಾಳನ್ನು ಮೂರು ತಿಂಗಳ ನಂತರ ಬಿಡುಗಡೆ ಮಾಡುತ್ತಾರೆ. ಅವಳು ಜೋಧ್‌ಪುರದಲ್ಲಿ ತನ್ನ ದಿವಂಗತ ತಂದೆಯ ಮಾಡುತ್ತಿದ್ದ ಕಿವುಡ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಗಳನ್ನು ಮುಂದುವರಿಸುತ್ತಾ ಶಾಂತಯುತವಾಗಿ ಬದುಕುತ್ತಾಳೆ
ವಿಮರ್ಶೆ ಸಂಗ್ರಾಹಕ ವೆಬ್‌ಸೈಟ್ ರಾಟನ್ ಟೊಮ್ಯಾಟೋಸ್‌ನಲ್ಲಿ, ಚಲನಚಿತ್ರವು 9 ವಿಮರ್ಶೆಗಳ ಆಧಾರದ ಮೇಲೆ 33% ರಷ್ಟು ರೇಟಿಂಗ್ ಅನ್ನು ಹೊಂದಿದೆ, ಇದರ ಸರಾಸರಿ ರೇಟಿಂಗ್ 5.60/10. [೯]
ವಿಮರ್ಷಕ ಅನುಪಮಾ ಚೋಪ್ರಾ 2.5/5 ಚಿತ್ರ ನೀಡಿ, ಸಿನ್ಹಾ, ಕಶ್ಯಪ್ ಮತ್ತು ಶರ್ಮಾ ಅಭಿನಯವನ್ನು ಹೊಗಳಿದರು. ಆದರೆ ದ್ವಿತೀಯಾರ್ಧವನ್ನು ಟೀಕಿಸಿದರು. "ಅನುರಾಗ್ [ಕಶ್ಯಪ್] ರಾಣೆಗೆ ಬೆದರಿಕೆ ಮತ್ತು sleazeನ ಸರಿಯಾದ ಸ್ಪರ್ಶವನ್ನು ನೀಡುತ್ತಾರೆ" ಎಂದು ಅವರು ಬರೆದಿದ್ದಾರೆ. ಆದಾಗ್ಯೂ, ದ್ವಿತೀಯಾರ್ಧವು "ಈ ಚಿತ್ರದಲ್ಲಿ ಎಷ್ಟು ಕೆಟ್ಟದಾಗಿದೆಯೆಂದರೆ ಎಂದರೆ ಅದು ಚೆನ್ನಾಗಿದ್ದ ಮೊದಲಾರ್ಧದ ಸೌಂದರ್ಯವನ್ನು ಸಂಪೂರ್ಣವಾಗಿ ಮರೆಯುವಂತೆ ಮಾಡುತ್ತದೆ." [೧೦]
ಮತ್ತೊಬ್ಬ ವಿಮರ್ಷಕ ಅಣ್ಣಾ ಎಂಎಂ ವೆಟ್ಟಿಕಾಡ್ ಪಾತ್ರಗಳ ನಟನೆಯನ್ನು ಶ್ಲಾಘಿಸಿದರು. ಆದರೆ ಪಾತ್ರಗಳ ಬೆಳವಣಿಗೆಯನ್ನು ಟೀಕಿಸಿದರು. ಸಿನ್ಹಾ ಅವರ ಪಾತ್ರಕ್ಕಾಗಿ ಅವರು ಬರೆದಿದ್ದಾರೆ, "ಇಡೀ ಕಥೆಯಲ್ಲಿ ಅಕಿರಾ ಅತ್ಯಂತ ಕಳಪೆ ಪಾತ್ರವಾಗಿದೆ ... ಯಾವುದೇ ಪುರುಷನಂತೆ ಕೌಶಲ್ಯದಿಂದ ಮತ್ತು ಬಲವಾಗಿ ಹೋರಾಡಬಲ್ಲ ಮಹಿಳೆ. ಆದರೆ ಅವಳನ್ನು ಅಷ್ಟಕ್ಕೇ ಸೀಮಿತಗೊಳಿಸಲಾಗಿದೆ. ಅವಳ ಮನಸ್ಸಿನ ಚಾಕಚಕ್ಯತೆ, ಅವಳ ಪ್ರೇರಣೆಗಳು ಮತ್ತು ಅವಳ ಭಾವನೆಗಳು ಹೇಗಿವೆ ಎಂಬುದು ಚಿತ್ರದಲ್ಲಿ ನಿಗೂಢವಾಗಿ ಉಳಿಯುತ್ತವೆ." ಆದಾಗ್ಯೂ, ಅವರು ರಾಣೆಯ ಕಶ್ಯಪ್ ಅವರ ಚಿತ್ರಣವನ್ನು ಶ್ಲಾಘಿಸಿದರು, ಇದನ್ನು "ಅತ್ಯುತ್ತಮ-ಬರೆಹದ ಪಾತ್ರ" ಎಂದು ಕರೆದರು. ಮಾದಕ ವಸ್ತುಗಳ ದಾಸನಾಗಿದ್ದರೂ ಸ್ವಂತದ ಬಗ್ಗೆ ಎಂದೂ ಚಿಂತಿಸುವ ಪಾತ್ರ ಇದು ಎಂದು ಕರೆದಿದ್ದಾರೆ" [೧೩]
ರಾಯಿಟರ್ಸ್‌ಗಾಗಿ ಬರೆಯುತ್ತಾ ವಿಮರ್ಷಕಿ ಶಿಲ್ಪಾ ಜಮಖಂಡಿಕರ್ ನಟನೆಯನ್ನು ಶ್ಲಾಘಿಸಿದರು ಆದರೆ ಬರವಣಿಗೆಯನ್ನು "ಹಲವು ಅರ್ಧ-ಬೇಯಿಸಿದ ಉಪ-ಕಥಾವಸ್ತುಗಳ" ಮ್ಯಾಶಪ್ ಎಂದು ಟೀಕಿಸಿದ್ದಾರೆ. ಇದು 80 ರ ದಶಕದ ಪೋಲಿಸ್ ಚಲನಚಿತ್ರಗಳನು ಹೋಲುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. "[ಅಕಿರಾ] ಹಳತಾದ ಚಿಕಿತ್ಸೆಯಿಂದ ಬಳಲುತ್ತಿರುವ ಸಮಯೋಚಿತ ವಿಷಯವನ್ನು ಹೊಂದಿರುವ ಚಲನಚಿತ್ರಕ್ಕೆ ಉತ್ತಮ ಉದಾಹರಣೆಯಾಗಿದೆ" ಎಂದು ಅವರು ನಂಬುತ್ತಾರೆ. ಆದಾಗ್ಯೂ, ಅವರು ಕಹ್ಯಾಪ್‌ನ ಪಾತ್ರವಾದ ರಾಣೆಯನ್ನು ಶ್ಲಾಘಿಸಿದರು, "[ಅವನು] ನಾವು ನೋಡಿರುವ ಪ್ರತಿ 80 ರ ದಶಕದ ಕೆಟ್ಟ ಪೋಲೀಸ್ ಪಾತ್ರವನ್ನು ಅವನಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಆ ಪಾತ್ರ ಇಲ್ಲದಿದ್ದರೆ "ಅಕಿರಾ" ಚಲನಚಿತ್ರವಾಗಿ ಸಂಪೂರ್ಣ ವಿಫಲವಾಗುತ್ತಿತ್ತು." [೧೧]
ಈ ಚಲನಚಿತ್ರವು ಭಾರತದಲ್ಲಿ ತನ್ನ ಆರಂಭಿಕ ದಿನದಂದು ₹೫೬ ದಶಲಕ್ಷ (ಯುಎಸ್$]೧.೨೪ ದಶಲಕ್ಷ) ಸಂಗ್ರಹಿಸಿತು. ಮೊದಲ ವಾರಾಂತ್ಯದ ಅಂತ್ಯದ ವೇಳೆಗೆ, ಅಕಿರಾ ₹೧೭೦ ದಶಲಕ್ಷ (ಯುಎಸ್$]೩.೭೭ ದಶಲಕ್ಷ) ಗಳಿಸಿತು ಮತ್ತು ಅದರ ಮೊದಲ ವಾರದ ಸಂಗ್ರಹವು ಸರಿಸುಮಾರು ₹೨೨೩ ದಶಲಕ್ಷ (ಯುಎಸ್$]೪.೯೫ ದಶಲಕ್ಷ) ಗಳಿಸಿತು. [೪]
ಅಕಿರಾ ಉತ್ತರ ಅಮೆರಿಕಾದಿಂದ ( ಅಮೆರಿಕ ಮತ್ತು ಕೆನಡಾ ) ₹14.2 ದಶಲಕ್ಷ (ಯುಎಸ್$೩,೧೫,೨೪೦) , ಯುಎಇಯಿಂದ ₹28.2 ದಶಲಕ್ಷ (ಯುಎಸ್$೬,೨೬,೦೪೦) , ಯುಕೆಯಿಂದ ₹6.1 ದಶಲಕ್ಷ (ಯುಎಸ್$೧,೩೫,೪೨೦) ಸಂಗ್ರಹಿಸಿದರು. ಈ ಚಲನಚಿತ್ರವು ಪಾಕಿಸ್ತಾನದಿಂದ ₹7.8 ದಶಲಕ್ಷ (ಯುಎಸ್$೧,೭೩,೧೬೦) ಸಂಗ್ರಹಿಸಿತು. [೪]
<ref>
tag; name "BO" defined multiple times with different content
<ref>
tag; name ":0" defined multiple times with different content
<ref>
tag; name ":1" defined multiple times with different content
<ref>
tag; name ":2" defined multiple times with different content