ಅಗಾಥಾ ಕೆ. ಸಂಗ್ಮಾ | |
೨೦೦೯ ರಲ್ಲಿ ಸಂಗ್ಮಾ | |
ಪ್ರಸಕ್ತ | |
ಅಧಿಕಾರ ಪ್ರಾರಂಭ ೧೭ ಜೂನ್ ೨೦೧೯ | |
ಪೂರ್ವಾಧಿಕಾರಿ | ಕಾನ್ರಾಡ್ ಸಂಗ್ಮಾ |
---|---|
ಅಧಿಕಾರದ ಅವಧಿ ಮೇ ೨೦೦೯ – ಮೇ ೨೦೧೪ | |
ಉತ್ತರಾಧಿಕಾರಿ | ಪಿ. ಎ. ಸಂಗ್ಮಾ |
ಅಧಿಕಾರದ ಅವಧಿ ಮೇ ೨೦೦೮ – ಮೇ ೨೦೦೯ | |
ಪೂರ್ವಾಧಿಕಾರಿ | ಪಿ. ಎ. ಸಂಗ್ಮಾ |
ಉತ್ತರಾಧಿಕಾರಿ | ಸ್ಥಾನಿಕರು |
ಅಧಿಕಾರದ ಅವಧಿ ಮೇ ೨೦೦೯ – ಅಕ್ಟೋಬರ್ ೨೦೧೨ | |
ಉತ್ತರಾಧಿಕಾರಿ | ಸೂರ್ಯಕಾಂತಾ ಪಾಟೀಲ್ |
ಜನನ | ನವ ದೆಹಲಿ, ಭಾರತ | ೨೪ ಜುಲೈ ೧೯೮೦
ಪ್ರತಿನಿಧಿತ ಕ್ಷೇತ್ರ | ತುರಾ |
ರಾಜಕೀಯ ಪಕ್ಷ | ನ್ಯಾಷನಲ್ ಪೀಪಲ್ಸ್ ಪಾರ್ಟಿ |
ಜೀವನಸಂಗಾತಿ | ಡಾ. ಪ್ಯಾಟ್ರಿಕ್ ರೊಂಗ್ಮಾ ಮಾರಾಕ್ (೨೧ ನವೆಂಬರ್ ೨೦೧೯ ರಿಂದ) |
ವೃತ್ತಿ | ವಕೀಲೆ, ರಾಜಕಾರಣಿ |
ಅಗಾಥಾ ಕೊಂಗಲ್ ಸಂಗ್ಮಾ (ಜನನ ೨೪ ಜುಲೈ ೧೯೮೦) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಮೇಘಾಲಯದ ತುರಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂದಸ್ಯರಾಗಿ ೨೯ ನೇ ವಯಸ್ಸಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ನೇಮಕಗೊಂಡ ಭಾರತದ ಸಂಸತ್ತಿನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಅಸ್ಸಾಂನ ರೇಣುಕಾ ದೇವಿ ಬರ್ಕಟಕಿ ನಂತರ ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ನೇಮಕಗೊಂಡ ಈಶಾನ್ಯ ಭಾರತದ ಎರಡನೇ ಮಹಿಳೆ ಸಂಗ್ಮಾ. ಇವರು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಸದಸ್ಯೆ.
ಅಗಾಥಾ ಸಂಗ್ಮಾ ಅವರು ಲೋಕಸಭೆಯ ಮಾಜಿ ಸ್ಪೀಕರ್ ಪಿಎ ಸಂಗ್ಮಾ ಮತ್ತು ಸೊರದಿನಿ ಕೆ. ಸಂಗ್ಮಾ ಅವರ ಮಗಳಾಗಿ ನವದೆಹಲಿಯಲ್ಲಿ ಜನಿಸಿದರು. ಇವರು ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್‌ನಲ್ಲಿ ಬೆಳೆದರು. ಇವರ ಸಹೋದರ ಕಾನ್ರಾಡ್ ಸಂಗ್ಮಾ ಮೇಘಾಲಯ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. [೧] ಅಗಾಥಾ ೨೧ ನವೆಂಬರ್ ೨೦೧೯ ರಂದು ಡಾ. ಪ್ಯಾಟ್ರಿಕ್ ರೊಂಗ್ಮಾ ಮರಕ್ ಅವರನ್ನು ವಿವಾಹವಾದರು.[೨] [೩]
ಇವರು ಪುಣೆ ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದರು. ನಂತರ ದೆಹಲಿ ಹೈಕೋರ್ಟ್‌ನಲ್ಲಿ ಸೇರಿದರು. ಇವರು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪರಿಸರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. [೪]
ಸಂಗ್ಮಾ ಅವರು ಮೇ ೨೦೦೮ ರಲ್ಲಿ ನಡೆದ ಉಪಚುನಾವಣೆಯಲ್ಲಿ ೧೪ ನೇ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅವರ ತಂದೆ ಪಿಎ ಸಂಗ್ಮಾ ಅವರು ರಾಜ್ಯ ರಾಜಕೀಯಕ್ಕೆ ಪ್ರವೇಶಿಸಲು ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ೧೫ ನೇ ಲೋಕಸಭೆಗೆ ಮರು ಆಯ್ಕೆಯಾದರು. [೫] ೨೯ ನೇ ವಯಸ್ಸಿನಲ್ಲಿ, ಸಂಗ್ಮಾ ಅವರು ಇಲ್ಲಿಯವರೆಗೆ ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ನೇಮಕಗೊಂಡ ಅತ್ಯಂತ ಕಿರಿಯ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿದ್ದಾರೆ . [೬]
ಸಂಗ್ಮಾ ಅವರು ಗ್ರಾಮೀಣಾಬಿವೃದ್ದಿ ಖಾತೆ ರಾಜ್ಯಸಚಿವರಾಗಿದ್ದಾರೆ . ಅಕ್ಟೋಬರ್ ೨೦೧೨ ರಲ್ಲಿ ಕ್ಯಾಬಿನೆಟ್ ಪುನರ್ ರಚನೆಯ ಸಮಯದಲ್ಲಿ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದರು.
ಅವರು ೨೦೧೮ ರ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಾರೆ ಎಂದು ನವೆಂಬರ್ ೨೦೧೭ ರಲ್ಲಿ ವರದಿಯಾಗಿದೆ. [೭] ಅವರು ದಕ್ಷಿಣ ತುರಾ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ೬,೪೯೯ ಮತಗಳನ್ನು ಗಳಿಸಿದರು. [೮] ಆದರೆ ತಮ್ಮ ಸಹೋದರನಿಗೆ ತಮ್ಮ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ದಾರಿ ಮಾಡಿಕೊಡುವ ಪ್ರಯತ್ನದಲ್ಲಿ ಅವರು ಸದನದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. [೯]
... Agatha K. Sangma, the youngest India's Parliamentarian from Meghalaya ... Date of Birth 24.07.1980 ...
... P A Sangma, will be the youngest minister in the Manmohan Singh cabinet ...