ಅಚಲ ಸಚ್ ದೇವ್ Achala Sachdev | |
---|---|
Born | ಪೆಶಾವರ್, ಬ್ರಿಟಿಷ್ ಭಾರತ (ಈಗ ಪಾಕಿಸ್ತಾನದಲ್ಲಿದೆ) | ೩ ಮೇ ೧೯೨೦
Died | 30 April 2012 ಪುಣೆ, ಭಾರತ | (aged 91)
Years active | 1938–2012 |
ಅಚಲ ಸಚ್ ದೇವ್, (ಅಚ್ಲಾ ಸಚ್ದೇವ್)(೩ ಮೇ, ೧೯೨೦-೩೦ ಏಪ್ರಿಲ್ ೨೦೧೨) ಭಾರತ ಪಾಕೀಸ್ಥಾನ ವಿಭಾಜನೆಯಾಗುವ ಮೊದಲು ಲಾಹೋರ್ ಆಕಾಶವಾಣಿ ನಿಲಯದಲ್ಲಿ ನಂತರ 'ದೆಹಲಿ ಆಕಾಶವಾಣಿ' ಭಾರತೀಯ ಚಿತ್ರರಂಗದ ಒಬ್ಬ ಉತ್ತಮ ಅಭಿನೇತ್ರಿ, ಬಾಲನಟಿಯಾಗಿ, ಪದಾರ್ಪಣೆ ಮಾಡಿದ ಅಚಲಾ ಸಚದೇವ್, ಮುಂದೆ ಹೆಂಡತಿ, ತಾಯಿ, ಅಜ್ಜಿಯಪಾತ್ರಗಳಲ್ಲಿ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ನಂತರ, ಬಲರಾಜ್ ಸಹಾನಿ ಮತ್ತು ಗೆಳತಿಯರು ಅವರನ್ನು ’ಝೊಹ್ರಾ ಝಬೀನ್’ ಎಂದೇ ಸಂಬೋಧಿಸುತ್ತಿದ್ದರು. ಯಶ್ ಚೋಪ್ರಾ ರ ಚೊಚ್ಚಲ ಚಿತ್ರದಲ್ಲಿ, ಕಾಣಿಸಿಕೊಂಡಿದ್ದರು. ಹೃತಿಕ್ ರೋಶನ್, ಮತ್ತು ಇಶ ದೇವಲ್ ನಟಿಸಿದ 'ನಾ ತುಮ್ ಜಾನೊ ನ ಹಮ್' ಎಂಬ ಚಿತ್ರ ಕೊನೆಯದು. 'ಅಚಲ ಸಚದೇವ್ ಇನ್ ಸ್ಟಿ ಟ್ಯೂಟ್ ಆಫ್ ಎಡುಕೇಶನ್' ಸ್ಥಾಪಿಸಿ, ಅಲ್ಲಿ ಗುಡ್ಡಗಾಡಿನ ಜನರಿಗೆ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಉಪಚಾರಮಾಡುವ ಪ್ರಕ್ರಿಯೆಯನ್ನು ಧೃಡಪಡಿಸಿದರು.[೧]
'ಅಚಲಾ ಸಚ್ ದೇವ್,' ೧೯೨೦, ರಲ್ಲಿ ಪೆಶಾವರ್ ನಲ್ಲಿ ಜನಿಸಿದರು. (೧೯೩೮), ರಲ್ಲಿ ಮೊದಲ ಚಿತ್ರ ಫಾಶನಬಲ್ ವೈಫ್ ೧೩೦ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಎರಡನೆಯ ಪತಿ, ಕ್ಲಿಫರ್ಡ್ ಡಗ್ಲಾಸ್ ರನ್ನು ಮದುವೆಯಾದಮೇಲೆ ಪುಣೆಯಲ್ಲಿ ನೆಲೆಸಿದರು. 'ಕ್ಲಿಫರ್ಡ್,' ’ಪುಣೆಯ ಭೊಸಾರಿ ಇಂಡಸ್ಟ್ರಿಯಲ್ ಎಸ್ಟೇಟ್’ ನಲ್ಲಿ ಮಾರಿಸ್ ಎಲ್ಕ್ಟ್ರಾನಿಕ್ಸ್, ಎಂಬ ಕಂಪೆನಿಯನ್ನು ನಡೆಸುತ್ತಿದ್ದರು. ನಂತರ ಅದನ್ನು ಪಿರಾಮಲ್ ಗ್ರೂಪ್ ಗೆ ಮಾರಿದರು [೧] ಮೊದಲ ಮದುವೆಯಲ್ಲಿ ಒಬ್ಬ ಮಗ ಜ್ಯೋತಿನ್ ಈಗ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ. ಇಬ್ಬರು ಮೊಮ್ಮಕ್ಕಳು, ಮತ್ತು ಒಬ್ಬ ಮರಿಮಗನನ್ನು ಪಡೆದಿದ್ದಾರೆ. ತಮ್ಮ ಪುಣೆಯ ಫ್ಲಾಟ್ ಮನೆಯನ್ನು ಜನಸೇವಾ ಫೌಂಡೇಶನ್ ಗೆ ದಾನವಾಗಿ ನೀಡಿದರು. ೧೯೬೫ ರಲ್ಲಿ ಬಲರಾಜ್ ಸಹಾನಿಯವರ ಪತ್ನಿಯ ಪಾತ್ರದಲ್ಲಿ ವಕ್ತ್ ಎಂಬ ಚಿತ್ರದಲ್ಲಿ ಮಾಡಿದ ಅಭಿನಯ ಅತ್ಯಂತ ಯಶಸ್ವಿಯಾಗಿ ಹೆಸರುಬಂತು. 'ದಿಲ್ವಾಲೆ ದುಲ್ಹನಿಯ ಲೆ ಜಾಯೆಂಗೆ' (೧೯೯೫). ಚಿತ್ರದಲ್ಲಿ, 'ಕಾಜೊಲ್' ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡರು. 'ಯಶ್ ರಾಜ್' ಚಿತ್ರಗಳಲ್ಲಿ ನಟಿಸಿದ್ದರು.
ಸೆಪ್ಟೆಂಬರ್, ೨೦೧೧, ರಂದು 'ಅಚಲಾ' ತಮ್ಮ ಮನೆಯ ಅಡುಗೆಮನೆಯಲ್ಲಿ ಎಡವಿ, ಜಾರಿ ಬಿದ್ದರು. ಕಾಲಿನಮೂಳೆ ಮುರಿಯಿತು. ಮೆದುಳಿನಲ್ಲಿ ಆಘಾತವಾಯಿತು. 'ಲಕ್ವಾ' ಹೊಡೆದು ದೃಷ್ಟಿಮಾಂದ್ಯವಾಯಿತು. ನಂತರ, 'ಅಚಲಾ ಸಚದೇವ್' ರನ್ನು 'ಪುಣೆಯ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್' ನಲ್ಲಿ ಮತ್ತು 'ವೆಂಟಿಲೇಟರ್' ನಲ್ಲಿ/ಐಸಿಯು' ವಿನಲ್ಲಿ ಇಟ್ಟಿದ್ದರು. 'ನಂತರ, ಅವರನ್ನು 'ಖಾಸಗಿ ರೂಮ್' ಗೆ ವರ್ಗಾಯಿಸಲಾಯಿತು. ತಾವೇ ಸ್ಥಾಪಿಸಿದ 'ಜನಸೇವಾ ಸಂಘ'ದಿಂದ ರಾತ್ರಿ ತಮ್ಮ ಬಳಿಯಿರಲು ಸಹಾಯಕರನ್ನು ಎರವಲು ಪಡೆದರು. 'ಪುಣೆ ಕ್ಲಬ್' ನ ಬಳಿಯ ಮನೆಯಲ್ಲಿ ೧೦ ವರ್ಷಗಳಿಂದ. ಒಬ್ಬಂಟಿಗರಾಗಿ 'ಅಸ್ತಮಾ'ದಿಂದ ನರಳುತ್ತಿದ್ದ 'ಝೊಹ್ರಾ ಜಬೀನ್' ಉಸಿರಾಟದ ತೊಂದರೆಯಿಂದ ಏಪ್ರಿಲ್ ೩೦, ೨೦೧೨ ರಂದು, ಪುಣೆಯ ಲಾಕಾಡಿ ಪೂಲ್ ಆಸ್ಪತ್ರೆ ಯಲ್ಲಿ ನಿಧನರಾದರು.