ಅಜ್ಮೇರ್ ಸಿಂಗ್ | |
---|---|
Born | ಫ಼ೆಬ್ರವರಿ ೧,೧೯೪೦ ಕುಪ್ ಕಲಾನ್ ಗ್ರಾಮ, ಸಂಗ್ರೂರ್ ಜಿಲ್ಲೆ |
Died | ಜನವರಿ ೨೬, ೨೦೧೦ ಚಾಂಡಿಗಢ್ |
Resting place | ಪಂಜಾಬ್ |
Nationality | ಭಾರತೀಯ |
Occupation(s) | ಓಟಗಾರ, ಶೈಕ್ಶಣಿಕ |
Spouse | ಸರ್ದರ್ನಿ ಜಸ್ವನ್ತ್ ಕೌರ್ |
Awards | ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅರ್ಜುನ ಪ್ರಶಸ್ತಿ |
Website | https://en.wikipedia.org/wiki/Ajmer_Singh |
ಒಲಂಪಿಕ್ ಪದಕ ಪಟ್ಟಿ | ||
ಪುರುಷರ ಅಥ್ಲೆಟಿಕ್ಸ್ | ||
---|---|---|
Representing ![]() | ||
೧೯೬೬ ರ ಏಷ್ಯನ್ ಗೇಮ್ಸ್ | ||
![]() |
೧೯೬೬ ಬ್ಯಾಂಕಾಕ್ | ೪೦೦ ಮೀ |
![]() |
೧೯೬೬ ಬ್ಯಾಂಕಾಕ್ | ೨೦೦ ಮೀ |
ಅಜ್ಮೇರ್ ಸಿಂಗ್ (೧ ಫೆಬ್ರವರಿ ೧೯೪೦ - ೨೬ ಜನವರಿ ೨೦೧೦) ೧೯೬೪ ರ ಬೇಸಿಗೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಿದ ಭಾರತೀಯ ಓಟಗಾರರಾಗಿದ್ದರು, ಬ್ಯಾಂಕಾಕ್ನಲ್ಲಿ ನಡೆದ ೧೯೬೬ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ವಿಜೇತರಾಗಿದ್ದರು, ನಂತರ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.[೧]
ಅವರು ೧೯೪೨ ರಲ್ಲಿ ಪಂಜಾಬ್‍ನ ಸಂಗ್ರೂರ್ ಜಿಲ್ಲೆಯ ಕುಪ್ ಕಲಾನ್ ಗ್ರಾಮದಲ್ಲಿ ಕಾರ್ಟರ್ ಸಿಂಗ್ ಔಲಾಕ್ ಮತ್ತು ಬಚಾನ್ ಕೌರ್ ಔಲಾಖ್ನ ಜಾಟ್ ಸಿಖ್ ರೈತ ಕುಟುಂಬದಲ್ಲಿ ಜನಿಸಿದರು.[೨] ಅವರು ಮಲೇರ್‌ಕೋಟ್ಲಾ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ನಂತರ ಭೌತಿಕ ಶಿಕ್ಷಣದ ಪದವಿ(ಬಿ.ಪಿ.ಇ) ಲಕ್ಷ್ಮೀಬಾಯಿ ನ್ಯಾಷನಲ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್, ಗ್ವಾಲಿಯರ್‌ನಲ್ಲಿ ಮಾಡಿದರು. ಇದರ ನಂತರ ಪಂಜಾಬ್ ವಿಶ್ವವಿದ್ಯಾಲಯದಿಂದ ಎಮ್.ಎ ಮತ್ತು ಅಂತಿಮವಾಗಿ, ಅವರು ಪಂಜಾಬ್ ವಿಶ್ವವಿದ್ಯಾನಿಲಯ ಚಂಡೀಗಢದಲ್ಲಿ ತಮ್ಮ ಪಿಎಚ್‌ಡಿ ಮಾಡಿದರು.[೧]ಅಜ್ಮೀರ್ ಸಿಂಗ್ ಅವರು ದೈಹಿಕ ಶಿಕ್ಷಣದಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದಿರುವ ಏಕೈಕ ಭಾರತೀಯ ವ್ಯಕ್ತಿಯಾಗಿದ್ದಾರೆ. ಇದಕ್ಕಾಗಿ ಅವರಿಗೆ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
೧೯೬೪ ರ ಟೋಕಿಯೋ ಒಲಿಂಪಕ್ಸ್ ನಲ್ಲಿ ಭಾಗವಹಿಸಿದರು ಮತ್ತು ಬ್ಯಾಂಕಾಕ್ನಲ್ಲಿ ನಡೆದ ೧೯೬೬ ರ ಏಷ್ಯನ್ ಕ್ರೀಡಾಕೂಟದಲ್ಲಿ, ಇವರು ೪೦೦ ಮೀಟರ್ ಓಟದಲ್ಲಿ ಚಿನ್ನವನ್ನು ಮತ್ತು ೨೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿದರು.[೩] ಫೆಡರಲ್ ಸರ್ಕಾರಕ್ಕೆ ವಿಶೇಷ ಶಿಕ್ಷಣ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರರ. ಅವರು ಲಕ್ಷ್ಮೀಬಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್, ಗ್ವಾಲಿಯರ್ ಮತ್ತು ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢನಲ್ಲಿ ಮೌಲಾನಾ ಅಬುಲ್ ಕಲಾಂ ಅಧ್ಯಕ್ಷರೊಂದಿಗೆ ಕ್ರೀಡಾ ನಿರ್ದೇಶಕರಾಗಿಯೂ ಇದ್ದರು.[೩][೪]
ಅವರು ೨೬ ಜನವರಿ ೨೦೧೦ ರ ಬೆಳಿಗ್ಗೆ, ತಮ್ಮ ೭೦ ನೇ ವಯಸ್ಸಿನಲ್ಲಿ ಚಂಡೀಗಢದಲ್ಲಿ ನಿಧನರಾದರು.[೫] ಮತ್ತು ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.[೧]ಅವರಿಗೆ ೧೯೬೬ ರಲ್ಲಿ ಭಾರತ ಸರ್ಕಾರದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ, ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.[೬]
ಸಾಯುವ ಎರಡು ವರ್ಷಗಳ ಮೊದಲು, ಅಜ್ಮೇರ್ ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗೆ ವೈದ್ಯಕೀಯ ಸಂಶೋಧನೆಗಾಗಿ ತನ್ನ ದೇಹವನ್ನು ದಾನ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೆ, ಅಜ್ಮೀರ್ ಅವರ ನೆನಪಿಗಾಗಿ ಯಾವುದೇ ಸ್ಮಾರಕಗಳನ್ನು ನಿರ್ಮಿಸಬಾರದು ಎಂದು ಘೋಷಿಸಿದ್ದರು. ಅವರ ಎರಡೂ ಆಸೆಗಳನ್ನು ಅವರ ಕುಟುಂಬ ಪೂರೈಸಿದೆ.
{{cite web}}
: CS1 maint: bot: original URL status unknown (link)