ಅತ್ತಿಬೆಲೆ

Attibele
ಅತ್ತಿಬೆಲೆ
suburb
ರಾಷ್ಟೀಯ ಮುಖ್ಯ ರಸ್ತೆಯಲ್ಲಿ ಇರುವ ಟೋಲ್ ಚೆಕ್ ಪೋಸ್ಟ್ NH7
ರಾಷ್ಟೀಯ ಮುಖ್ಯ ರಸ್ತೆಯಲ್ಲಿ ಇರುವ ಟೋಲ್ ಚೆಕ್ ಪೋಸ್ಟ್ NH7
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ ಜಿಲ್ಲೆ
Population
 (2011)
 • Total೨೦,೫೩೨[]
ಅದಿಕೃತ ಭಾಷೆ
 • ಭಾಷೆಕನ್ನಡ
Time zoneUTC+5:30 (IST)
PIN
೫೬೨೧೦೭
Telephone code+೯೧-೮೦
Vehicle registrationಕರ್ನಾಟಕ - ೫೧
ಸಮೀಪದ ಪಟ್ಟಣಹೊಸೂರು
ಲೋಕಸಭೆ ಕ್ಷೇತ್ರಬೆಂಗಳೂರು ಗ್ರಾಮಾಂತರ
ವಿಧಾನ ಸಭೆ ಕ್ಷೇತ್ರಆನೇಕಲ್ಲು

ಅತ್ತಿಬೆಲೆ, ಒಂದು ಗಡಿ ಪಟ್ಟಣ ಪಂಚಾಯತಿ ಗ್ರಾಮ. ಇದು ಭಾರತಕರ್ನಾಟಕ ರಾಜ್ಯಬೆಂಗಳೂರು ನಗರ ಜಿಲ್ಲೆಆನೇಕಲ್ಲು ತಾಲೂಕಿನಲ್ಲಿದೆ. ಕರ್ನಾಟಕ-ತಮಿಳುನಾಡು ಚೆಕ್ ಪೋಸ್ಟ್ ಗಡಿ ಕಮಾನಿನ ಮೂಲಕ ಗುರುತಿಸಲಾಗುತ್ತದೆ, ಇದು ಇಲ್ಲಿ ಸ್ಥಾಪಿತವಾಗಿದೆ. ಇದು ಬೆಂಗಳೂರಿನಿಂದ ೩೨ ಕಿ.ಮಿ ಮತ್ತು ಹೊಸೂರಿನಿಂದ ೮ ಕಿ.ಮಿ. ಕನ್ನಡ, ಇಲ್ಲಿನ ಮುಖ್ಯ ಭಾಷೆ. ತೆಲುಗು ಕೆಲವೊಮ್ಮೆ ಬಳಸಲಾಗುತ್ತದೆ. ಇಲ್ಲಿ ಲಭ್ಯವಿರುವ ಲಿಪಿಗಳ ಪ್ರಕಾರ ಈ ಜಾಗವನ್ನು "ಓಡುಂಬಪುರಿ" ಎಂದು ಕರೆಯುತ್ತಿದ್ದರು ಎನ್ನಲಾಗಿದೆ.
ಈ ಪಟ್ಟಣಕ್ಕೆ ಬೆ.ಮ.ಸಾ.ಸಂನ ಬಸ್ಸಿನ ವ್ಯವಸ್ತೆ ಬಹಳ ಉತ್ತಮವಾಗಿದೆ. ಈಗ ಕರ್ನಾಟಕ ರಾಜ್ಯ ಗೃಹ ಮಂಡಳಿ ವತಿಯಿಂದ 'ಸೂರ್ಯ ನಗರ - ೩ನೆ ಹಂತ'ವನ್ನು ಅತ್ತಿಬೆಲೆ ಹೋಬಳಿಯಲ್ಲಿ ಮಾಡಲಿದ್ದಾರೆ.[][]

ಆರ್ಥಿಕತೆ

[ಬದಲಾಯಿಸಿ]

೧೯೯೦ರವರೆಗೆ ಒಂದು ಸಣ್ಣ ಹಳ್ಳಿಯಾಗಿದ್ದ ಅತ್ತಿಬೆಲೆ ರಾಷ್ಟೀಯ ಹೆದ್ದಾರಿ ೭ ನಂತರ ಪಟ್ಟಣ ರೂಪಾಂತರಗೊಂಡಿದೆ. "ಸುವರ್ಣ ಚತುಷ್ಪಥ" ಯೋಜನೆಯ ಅಡಿಯಲ್ಲಿ ರಾಷ್ಟೀಯ ಹೆದ್ದಾರಿ ೭ಅನ್ನು ವಿಸ್ತರಿಸಲಾಯಿತು. ೧೯೪೨ರಲ್ಲೇ ಒಂದು ರಂಗಮಂದಿರ (ಗೌರಿಶಂಕರ) ಹೊಂದಿದ್ದ ಸ್ಥಳ ಅತ್ತಿಬೆಲೆ. ಅತ್ತಿಬೆಲೆ ಹೆಚ್ಚಿನ ಉತ್ಪಾದನಾ ಮತ್ತು ವಸ್ತ್ರೋದ್ಯಮ ಕೈಗಾರಿಕೆಗಳ ನೆಲೆಯಾಗಿದೆ. ಟಿವಿಎಸ್ ಮೋಟರ್ಸ್ ಮತ್ತು ಅಶೋಕ್ ಲೇಲ್ಯಾಂಡ್ ನಂತ ದೈತ್ಯ ಆಟೋಮೊಬೈಲ್ ಕಂಪನಿಗಳು ಈ ಪಟ್ಟಣಕ್ಕೆ ಬಹಳ ಹತ್ತಿರವಿದೆ. ಅತ್ತಿಬೆಲೆ ಕೈಗಾರಿಕಾ ಪ್ರದೇಶ ಬಹಳಷ್ಟು ಕಂಪನಿಗಳ ನೆಲೆಯಾಗಿದೆ. ಅತ್ತಿಬೆಲೆ ಕೈಗಾರಿಕಾ ಕೇಂದ್ರವಾಗಿದೆ ಮತ್ತು ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಯಡವನಹಳ್ಳಿ, ಇಚ್ಚಂಗೂರು , ಬಳಗಾರನಹಳ್ಳಿ, ಅರೆನೂರು ಮತ್ತು ನೆರಳೂರು ಮತ್ತು ಸಮೀಪದ ಇತರೆ ಹಳ್ಳಿಗಳಲ್ಲಿ ಒಳಗೊಂಡಿದೆ.

ಹಬ್ಬ ಆಚರಣೆಗಳು

[ಬದಲಾಯಿಸಿ]

ಅತ್ತಿಬೆಲೆ ಕೆಲವು ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಬಹಳಷ್ಟು ದೇವಸ್ಥಾನಗಳು ಪ್ರಸಿದ್ಧವಾಗಿದೆ. ಗ್ರಾಮದ ದೇವತೆ ಪಟಾಲಮ್ಮ ದೇವಾಲಯ ಬಹಳ ಮುಖ್ಯವಾದುದು. ಇಲ್ಲಿನ ಶಿವ ದೇವಾಲಯ ಮತ್ತು ವೆಂಕಟೇಶ್ವರ ದೇವಸ್ಥಾನ ಅತ್ಯಂತ ಹಳೆಯ ದೇವಾಲಯಗಳಾಗಿವೆ, ಇದನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಯಿತು. ಕರಗ, ಕನ್ನಡ ರಾಜ್ಯೋತ್ಸವ, ಶಿವನ ದೇವಸ್ಥಾನದ ರಥೋತ್ಸವ ಬಹಳ ಚೆನ್ನಾಗಿ ನಡೆಯುತ್ತದೆ, ವೆಂಕಟೇಶ್ವರ ದೇವಸ್ಥಾನದ ದೀಪೋತ್ಸವ, ಯುಗಾದಿ, ಸಂಕ್ರಾಂತಿ/ಪೊಂಗಲ್, ವೈಕುಂಟ ಏಕಾದಶಿ, ಊರ ಹಬ್ಬ ವೈಭವದಿಂದ ಆಚರಿಸುತ್ತಾರೆ. ಕರಗ ಹಬ್ಬದ ದಿನ ಎಲ್ಲಾ ದೇವರಗಳ ಪಲ್ಲಕಿ ಉತ್ಸಾಹಗಳು ನಡೆಯುತ್ತದೆ.

ಬಸ್ ಮಾರ್ಗಗಳು

[ಬದಲಾಯಿಸಿ]

೩೬೦ರ ಸರಣಿ - ಮೆಜೆಸ್ಟಿಕ್ ಮತ್ತು ಕೃ. ರಾ ಮಾರ್ಕೆಟ್ನಿಂದ ೬೦೦ಎಫ್ - ಬನಶಂಕರಿಯಿಂದ ೩೨೮ - ಹೊಸಕೋಟೆಯಿಂದ ಹೊಸೂರು-ಬೆಂಗಳೂರು ಮಾರ್ಗದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಹಾಗೂ, ಇತ್ತೀಚಿಗೆ ಜಿಗಣಿ, ಆನೇಕಲ್, ಸರ್ಜಾಪುರ ಕಡೆಗಳಿಗೆ ಕೂಡ ಬಸ್ ಸಂಪರ್ಕ ಕಲ್ಪಿಸಲಾಗಿದೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. "ಅತ್ತೀಬೆಲೆ ಜನಸಂಖ್ಯೆ".
  2. "[ಸೂರ್ಯ ನಗರ - ೩ನೆ ಹಂತ".
  3. "ಆನೇಕಲ್ ತಾಲೂಕ". Archived from the original on 2016-11-20. Retrieved 2016-11-15.