ಅನಂತ್ ಕುಮಾರ್ ಹೆಗಡೆಯವರು ಭಾರತೀಯ ರಾಜಕಾರಣಿ ಮತ್ತು ಉತ್ತರ ಕನ್ನಡ ಕ್ಷೇತ್ರದ ಸಂಸತ್ ಸದಸ್ಯರು. ಭಾರತೀಯ ಜನತಾ ಪಾರ್ಟಿಯ ಸದಸ್ಯರು ಮತ್ತು ಮಾಜಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವರಾಗಿದ್ದರು.
ಅನಂತ್ ಕುಮಾರ್ ಹೆಗಡೆಯವರು ೧೯೬೮ರ ಮೇ ೨೦ರಂದು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ಹೆಗಡೆ ಮತ್ತು ತಾಯಿ ಲಲಿತಾ.
ಇವರು ತಮ್ಮ ಪದವಿಯನ್ನು ಶಿರಸಿಯ ಎಂಎಂ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೆಜಿನಲ್ಲಿ ಪಡೆದರು. ಇವರ ಕಾಲೇಜು ದಿನಗಳಲ್ಲಿ, ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದರು.[೧]
ಅನಂತ್ ಕುಮಾರ್ ಹೆಗಡೆಯವರು ೧೯೯೮ರಲ್ಲಿ ಶ್ರೀರೂಪ ಹೆಗಡೆವರನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬಳು ಪುತ್ರಿ ಮತ್ತು ಒಬ್ಬ ಪುತ್ರನಿದ್ದಾನೆ.
೧೯೯೬ರಲ್ಲಿ ನೆಡೆದ ೧೧ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರು. ನಂತರ ಐದು ಬಾರಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾಗಿ ಚುನಾಯಿತರಾದರು. ೨೦೧೬ರ ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್‌ನಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿದ್ದರು.[೨]
ಅನಂತ್ ಕುಮಾರ್ ಹೆಗಡೆಯವರು ಕದಂಬ ಸಂಸ್ಥೆಗಳ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಗಳು ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಕ್ಷೇತ್ರದ ಕಾರ್ಯದಲ್ಲಿ ಭಾಗಿಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತದೆ.