ಅನಿತಾ ಪೌಲ್ದುರೈ ಅವರು ೨೨ ಜೂನ್ ೧೯೮೫ ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಇವರು ಒಬ್ಬ ಶ್ರೇಷ್ಠ ಬ್ಯಾಸ್ಕೆಟ್ಬಾಲ್ ಆಟಗಾರ್ತಿಯಾಗಿದ್ದು, ಭಾರತೀಯ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ನಾಯಕಿಯಾಗಿದ್ದಾರೆ. ಭಾರತೀಯ ಮಹಿಳಾ ತಂಡಕ್ಕೆ ೨೦೦೦ ರಿಂದ ೨೦೧೭ ರವರೆಗೆ ೧೮ ವರ್ಷಗಳ ಕಾಲ ತಂಡದ ನೇತೃತ್ವ ವಹಿಸಿದ್ದಾರೆ. ಒಂಬತ್ತು ಏಷ್ಯನ್ ಬ್ಯಾಸ್ಕೆಟ್ ಬಾಲ್ ಕಾನ್ಫೆಡರೇಷನ್ (ಎಬಿಸಿ) ಚಾಂಪಿಯನ್ ಶೀಪ್ ಆಡಿದ ಮೊದಲ ಭಾರತೀಯ ಮಹಿಳೆ ಅನಿತಾ ಪೌಲ್ದುರೈ. ಅನಿತಾ ರಾಷ್ಟ್ರೀಯ ಚಾಂಪಿಯನ್ ಶೀಪ್ ನಲ್ಲಿ ೩೦ ಪದಕಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ.[೧]
ಸ್ಥಾನ | ಶೂಟಿಂಗ್ ಗಾರ್ಡ್ |
ಉದಾಹರಣೆ | ಅಂತರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ |
ಎತ್ತರ | ೫ ಅಡಿ ೭ ಇಂಚು |
ರಾಷ್ಟ್ರೀಯತೆ | ಭಾರತೀಯ |
ಜನನ | ೨೨ ಜೂನ್ ೧೯೮೫. ಚೆನ್ನೈ, ತಮಿಳುನಾಡು,ಭಾರತ. |
ಚೆನ್ನೈ ನಿವಾಸಿಯಾದ ಅನಿತಾ ಪೌಲ್ದುರೈ ಅವರು ತಮ್ಮ ೧೧ನೇ ವಯಸ್ಸಿನಲ್ಲಿ ಬ್ಯಾಸ್ಕೆಟ್ ಬಾಲ್ ಆಡಲು ಪ್ರಾರಂಭಿಸಿದರು ಆದರೆ ಆರಂಭದಲ್ಲಿ ಅವರು ಕ್ರೀಡೆಯ ಅಭಿಮಾನಿಯಲ್ಲ ಎಂದು ಒಪ್ಪಿಕೊಂಡರು. ನಾನು ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಅನ್ನು ಹೆಚ್ಚು ಇಷ್ಟಪಡುತ್ತಿದ್ದೆ ಎಂದು ಅವರು ಹೇಳಿದರು. ಆದರೆ ನಾನು ಶಾಲೆಯಲ್ಲಿದ್ದಾಗ ಬಾಸ್ಕೆಟ್ ಬಾಲ್ ತರಭೇತುದಾರ ನನ್ನನ್ನು ಈ ಆಟವಾಡಲು ಹೇಳತ್ತಿದ್ದರು. ನಾನು ಹೆಚ್ಚು ಆಡಿದ್ದೇನೆ, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಅವರು ಹೇಳಿದರು.
ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಕಾಂ, ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂಬಿಎ(ಎಚ್ ಆರ್ ಎಂ) ನಲ್ಲಿ ಪದವಿ ಪಡೆದರು. ಅವರು ದಕ್ಷಿಣ ರೈಲ್ವೆಗೆ ೨೦೦೩ ರಲ್ಲಿ ಸೇರಿದರು. ಈಗ ಮುಖ್ಯ ಕಲ್ಯಾಣ ನಿರೀಕ್ಷಕರು ಹಾಗೂ ಕ್ರೀಡೆಗಾಗಿ ಕೆಲಸ ಮಾಡುತ್ತಿದ್ದಾರೆ.
ಅನಿತಾ ೧೯ನೇ ವಯಸ್ಸಿನಲ್ಲಿ ನಮ್ಮ ಹಿರಿಯ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದರು. ಆಗಷ್ಟ್ ೨೦೧೨ ರಲ್ಲಿ ಅವರು ಥೈಲ್ಯಾಂಡ್ನಲ್ಲಿ ಅಂತರಾಷ್ಟ್ರೀಯ ಮಹಿಳಾ ವೃತ್ತಿಪರ ಲೀಗ್ ಆಡಲು ಆಯ್ಕೆಯಾದರು.
ಏಷ್ಯನ್ ಚಾಂಪಿಯನ್, ಕಾಮನ್ ವೆಲ್ತ್ ಗೇಮ್ಸ್ ೨೦೦೬ ಮತ್ತು ೨೦೧೦ ನಂತಹ ದೊಡ್ಡ ಲೀಗ್ ಗಳು ಸೇರಿದಂತೆ ಅನಿತಾ ಅವರು ಹಲವಾರು ಅಂತರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡಿದ್ದಾರೆ.
ಸುದೀರ್ಘ ಮತ್ತು ಯಶಸ್ವಿ ಆಟದ ವೃತ್ತಿಜೀವನಕ್ಕೆ ಸೂರ್ಯ ಮುಳುಗುತ್ತಿದ್ದಂತೆ, ಅನಿತಾ ಪೌಲ್ದುರೈ ತರಭೇತುದಾರಳಾಗಿ ತನ್ನ ಮೊದಲ ಹೆಜ್ಜೆ ಇಟ್ಟಿದ್ದಾಳೆ. ಮುಂಬರುವ ಎಫ್ ಬಿ ಎ-೧೬ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶೀಪ್ ಗಾಗಿ ಭಾರತದ ೧೬ ವರ್ಷದೊಳಗಿನ ಬಾಲಕಿಯರ ತಂಡದ ಸಹಾಯಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.