ಅನಿತಾ ರತ್ನಂ | |
---|---|
![]() ೨೦೧೨, ಕಲೋನ್ ನಲ್ಲಿ ಅನಿತಾ ರತ್ನಂ | |
ಜನನ | ಮಧುರೈ, ತಮಿಳು ನಾಡು | 21 May 1954
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಕಲಾಕ್ಷೇತ್ರ |
ವೃತ್ತಿ | ನೃತ್ಯಗಾರ್ತಿ, ನೃತ್ಯ ಸಂಯೋಜಕಿ |
ಇದಕ್ಕೆ ಹೆಸರುವಾಸಿ | ನಿರ್ದೇಶಕಿ, ಅರಂಗಮ್ ಸಂವಾದಾತ್ಮಕ, ಚೆನ್ನೈ |
ಜಾಲತಾಣ | www.anitaratnam.com |
ಅನಿತಾ ರತ್ನಂ ರವರು ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಾರ್ತಿ ಹಾಗೂ ನೃತ್ಯ ಸಂಯೋಜಕಿ.ಭರತನಾಟ್ಯ, ಮೋಹಿನಿಯಟ್ಟಂ, ತೈ ಚಿ ಚುಆನ್ ಮತ್ತು ಕಳರಿ ಪಯಟ್ಟು ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ಅವರು "ನಿಯೋ ಭರತ ನಾಟ್ಯಂ" ಎಂಬ ಹೆಸರಿನ ನೃತ್ಯ ಶೈಲಿಯನ್ನು ರಚಿಸಿದ್ದಾರೆ.[೧]ಅನಿತಾ ರವರು ೧೯೯೨ ರಲ್ಲಿ ಚೆನ್ನೈನಲ್ಲಿ ಸ್ಥಾಪಿಸಲಾದ ಅರಂಗಮ್ ಟ್ರಸ್ಟ್ ನ ಸ್ಥಾಪಕ-ನಿರ್ದೇಶಕಿ.[೨]ಹಾಗೆಯೇ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆಯುವ ಭಾರತದ ಸಮಕಾಲೀನ ನೃತ್ಯ ಉತ್ಸವ 'ದಿ ಅದರ್ ಫೆಸ್ಟಿವಲ್' ನ ಸಹ-ಸ್ಥಾಪಕಿ ಹಾಗೂ ಪ್ರವರ್ತಕಿ.ಅಲ್ಲದೇ ಅವರು ೧೯೯೩ ರಲ್ಲಿ ಅರಂಗಮ್ ಡ್ಯಾನ್ಸ್ ಥಿಯೇಟರ್ ಎಂಬ ಪ್ರದರ್ಶನ ಕಂಪನಿಯನ್ನೂ ಸ್ಥಾಪಿಸಿದ್ದಾರೆ.ನೃತ್ಯ ಸಂಯೋಜಕಿಯಾಗಿ, ವಿದ್ವಾಂಸೆಯಾಗಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತೆಯಾಗಿ ಅನಿತಾರವರು ಹಲವು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅನಿತಾ ರತ್ನಂ ರವರು ಆರಂಭದಲ್ಲಿ ಭರತನಾಟ್ಯ ಗುರು, ಅಡ್ಯಾರ್ ಕೆ.ಲಕ್ಷ್ಮಣ್ ರವರಿಂದ ನೃತ್ಯ ತರಬೇತಿಯನ್ನು ಪಡೆದರು.ನಂತರ ಉನ್ನತ ತರಬೇತಿಗಾಗಿ, ರುಕ್ಮಿಣಿ ದೇವಿ ಅರುಂಡಾಲೆ ಅವರ 'ಕಲಾಕ್ಷೇತ್ರ' ಎಂಬ ನೃತ್ಯ ಅಕಾಡೆಮಿಗೆ ಸೇರಿ, ನೃತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಕೊಂಡರು.ಅವರು ಭರತನಾಟ್ಯ ಹಾಗೂ ಕೇರಳದ ಶಾಸ್ತ್ರೀಯ ನೃತ್ಯಗಳಾದ ಕಥಕ್ಕಳಿ ಮತ್ತು ಮೋಹಿನಿಯಟ್ಟಂ ನಲ್ಲಿಯೂ ತರಬೇತಿ ಪಡೆದಿದ್ದಾರೆ.[೩]
ಅನಿತಾ ರತ್ನಂ ರವರು ನ್ಯೂ ಓರ್ಲಿಯನ್ಸ್ ವಿಶ್ವವಿದ್ಯಾನಿಲಯದಿಂದ, ಥಿಯೇಟರ್ ಮತ್ತು ಟೆಲಿವಿಷನ್ ನಲ್ಲಿ ಎಂ.ಎ ಮಾಡಿದ್ದಾರೆ.ನಂತರ ಹತ್ತು ವರ್ಷಗಳ ಕಾಲ ಯುನೈಟೆಡ್ ಸ್ಟೇಟ್ಸ್ ನಲ್ಲಿ ದೂರದರ್ಶನ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ.[೪]೨೦೦೭ ರಲ್ಲಿ ಕೆನಡಾ ಮೂಲದ ನೃತ್ಯಗಾರ-ನೃತ್ಯ ಸಂಯೋಜಕರಾದ ಹರಿ ಕೃಷ್ಣನ್ ಅವರ ಸಹಯೋಗದೊಂದಿಗೆ, ನ್ಯೂಯಾರ್ಕ್ ನ ಜಾಯ್ಸ್ ಸೊಹೊ ದಲ್ಲಿ "ಸೆವೆನ್ ಗ್ರೇಸಸ್" ಎಂಬ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದಾರೆ.ಅನಿತಾರವರು ಕಂಡುಕೊಂಡೈನ್ ಕಂಡುಕೊಂಡೈನ್(೨೦೦೦) ಮತ್ತು ಬಾಯ್ಸ್(೨೦೦೩) ನಂತಹ ಕೆಲವು ತಮಿಳು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.[೫]ಅವರು ಭಾರತೀಯ ನೃತ್ಯದ ವಿಶ್ವಕೋಶವಾದ 'ನರ್ತಕಿ'ಯ ಸಂಪಾದಕರು ಹಾಗೂ ಪ್ರಕಾಶಕರು.ಅಲ್ಲದೇ ಅವರು ಭಾರತ ಮತ್ತು ಗ್ರೀಸ್ ನಲ್ಲಿನ ನಾಟಕ ಸಂಪ್ರದಾಯದ ಕುರಿತು 'ನಾಟ್ಯ ಬ್ರಾಹ್ಮಣ್' ಎಂಬ ಪುಸ್ತಕವನ್ನೂ ಬರೆದಿದ್ದಾರೆ.
ಅನಿತಾ ರತ್ನಂ ರವರು ದೇಶ ವಿದೇಶಗಳಲ್ಲಿ, ಪ್ರದರ್ಶನ ಕಲೆಯಲ್ಲಿನ ಕೆಲಸಕ್ಕಾಗಿ ಹಲವಾರು ಪ್ರಶಸ್ತಿಗಳು ಹಾಗೂ ಬಿರುದುಗಳನ್ನು ಪಡೆದುಕೊಂಡಿದ್ದಾರೆ:[೨]