ಅನಿತಾ ರೆಡ್ಡಿ | |
---|---|
ಜನನ | Anita Hassanandani ೧೪ ಎಪ್ರಿಲ್ ೧೯೮೧(age 38)[೧] |
ರಾಷ್ಟ್ರೀಯತೆ | ಭಾರತ |
ವೃತ್ತಿ(ಗಳು) | ರೂಪದಋಷಿ, ನಟಿ |
ಸಕ್ರಿಯ ವರ್ಷಗಳು | ೨೦೦೧ ರಿಂದ |
ಎತ್ತರ | ೧೭೦ cm [೨] |
ಸಂಗಾತಿ |
ರೊಹಿತ್ ರೆಡ್ಡಿ (m. ೨೦೧೩) |
ಅನಿತಾ ಹಸನಂದಾನಿ ರೆಡ್ಡಿ ಬಹುಭಾಷಾ ಚಲನಚಿತ್ರಗಳು ಮತ್ತು ಧಾರವಾಹಿಗಳಲ್ಲಿ ಅಭಿನಯಿಸಿದ ಭಾರತೀಯ ನಟಿ.[೪] ಅವರು ೧೪ ಏಪ್ರಿಲ್ ೧೯೮೧ರಂದು ಜನಿಸಿದರು.[೫] ಅವರು ಕಬಿ ಸೌತನ್ ಕಬಿ ಸಾಹೇಲಿ (೨೦೦೧) ಎಂಬ ಧಾರಾವಾಹಿ ಇಂದ ನಟಿಸಲು ಪ್ರಾರಂಭಿಸಿದರು. ಅವರ ಸಿನಿಮಾ ಅಭಿನಯವನ್ನು ತಮಿಳು ಚಲನಚಿತ್ರ ವರುಶುಮೆಲ್ಲಮ್ ವಸಂತಮ್ ಮೂಲಕ ಪ್ರಾರಂಭಿಸಿದರು. ಅವರ ಬಾಲಿವುಡ್ ಅಭಿನಯವನ್ನು ಸುಭಾಷ್ ಘಾಯಿಯವರು ನಿರ್ದೇಶಿಸಿದ ತಾಲ್ (೧೯೯೯) ಚಲನಚಿತ್ರದಿಂದ ಪ್ರಾರಂಭಿಸಿದರು ಮತ್ತು 2003 ರಲ್ಲಿ ಕುಚ್ ತೊ ಹೈ ಚಲನಚಿತ್ರದಲ್ಲಿ ನಟಿಸಿದರು. ಅವರ ಜನಪ್ರಿಯತೆ ಕಿರುತೆರೆ ಸರಣಿಯ ಕಾವ್ಯಾಂಜಲಿ (೨೦೦೫) ಧಾರಾವಾಹಿಯ ಅಂಜಲಿ ಎಂಬ ಹೆಸರಿನ ಮೂಲಕ ಮನೆಮಾತಾದರು.[೬] ಯೆ ಹೈ ಮೊಹಬ್ಬತೇಯ್ ಧಾರವಾಹಿಯಲ್ಲಿ ಶಾಗುನ್ ಅರೋರಾ ಎಂಬ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ನಾಗಿನ್ ಧಾರವಾಹಿಯ ಮೂರನೇ ಋತುವಿನಲ್ಲಿ ಅವರು ವಿಷ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.[೭]
ಅನಿತಾ ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.[೮] ಎವರ್ಯುತ್, ಸನ್ಸಿಲ್ಕ್, ಬೊರೊಪ್ಲಸ್ ಮತ್ತು ಇತರ ಬ್ರಾಂಡ್ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡ ನಂತರ, ಅವರು ಹಗಲಿನ ಧಾರವಾಹಿಯಾದ ಕಬಿ ಸೌತನ್ ಕಬಿ ಸಾಹೇಲಿಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಅವರು ತಮಿಳು ಚಲನಚಿತ್ರ ಸಮುರಾಯ್ 2002 ರಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು ನಟನೆಗೆ ಪಾದರ್ಪಣೆ ಮಾಡಿದರು. ಅವರು 2003 ರ ಹಿಂದಿ ಥ್ರಿಲ್ಲರ್ ಚಲನಚಿತ್ರ ಕುಚ್ ತೊ ಹೈ ಮೂಲಕ ಚೊಚ್ಚಲ ಪ್ರವೇಶ ಮಾಡಿದರು. ನಂತರ ಅವರು ಕೃಷ್ಣ ಕಾಟೇಜ್, ಕೊಯಿ ಆಪ್ ಸ ನಂತಹ ಚಲನಚಿತ್ರಗಳಲ್ಲಿ ನಟಿಸಿದರು.[೯] ಅವರು ಕವ್ಯಾನ್ಜಾಲಿ ಧಾರವಾಹಿಯಲ್ಲಿ ಉದ್ಯಮಿ ಕುಟುಂಬಕ್ಕೆ ಮದುವೆಯಾದ ಮಧ್ಯಮ ವರ್ಗದ ಹುಡುಗಿಯ ಪಾತ್ರಧಾರಿ ಅಂಜಲಿ ಆಗಿ ಕಿರುತೆರೆಯಲ್ಲಿ ನಟಿಸಿದರು. ಅವರು ಬಾಲಿವುಡ್ ಚಲನಚಿತ್ರ ಮತ್ತು ಧಾರವಾಹಿಗಳಲ್ಲದೆ, ದಕ್ಷಿಣ ಭಾರತದ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ನೇನು ಪೆಲ್ಲಿಕಿ ರೆಡಿ, ತೊಟ್ಟಿ ಗ್ಯಾಂಗ್ ಮತ್ತು ನುವು ನೇನು ಪ್ರಮುಖ. ಅವರು ತೆಲುಗು ಚಿತ್ರವಾದ ನೆನ್ನುನ್ನನು ಎಂಬ ಹಾಡಿನಲ್ಲಿ ಕಾಣಿಸಿಕೊಂಡರು. ಜಲಕ್ ದಿಖ್ಲಾಜಾ ಎಂಬ ರಿಯಾಲಿಟಿ ಶೋನಲ್ಲಿ 8 ನೇ ಋತುವಿನಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದರು.
ಅನಿತಾ ಹಸನಂದಾನಿ ರೆಡ್ಡಿಯವರು 14 ಅಕ್ಟೋಬರ್ 2013 ರಂದು ಗೋವಾದಲ್ಲಿ ಕಾರ್ಪೊರೇಟ್ ವೃತ್ತಿಪರ ರೋಹಿತ್ ರೆಡ್ಡಿ ಅವರನ್ನು ವಿವಾಹವಾದರು.[೧೦]