ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ

ಅನಿವಾಸಿ ಭಾರತೀಯನು (ಎನ್ ಆರ್ ಐ) ಭಾರತೀಯ ರಹದಾರಿ ಪತ್ರವನ್ನು ಹೊಂದಿರುವ ಮತ್ತು ಕೆಲಸ, ವಾಸ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಬೇರೆ ದೇಶಕ್ಕೆ ಆರು ತಿಂಗಳು ಅಥವಾ ಹೆಚ್ಚು ವಲಸೆಹೋಗಿರುವ ಒಬ್ಬ ಭಾರತೀಯ ನಾಗರಿಕ.

ಭಾರತೀಯ ಮೂಲದ ವ್ಯಕ್ತಿಯು ಭಾರತದಲ್ಲಿ ಹುಟ್ಟಿದ ಅಥವಾ ಆತನ ಪೂರ್ವಿಕರು ಭಾರತದಲ್ಲಿ ಹುಟ್ಟಿದ ಆದರೆ ಭಾರತದ ನಾಗರಿಕರಾಗಿರದ ಮತ್ತು ಬೇರೆ ದೇಶದ ನಾಗರಿಕರಾಗಿರುವ ಭಾರತೀಯ ಮೂಲ ಅಥವಾ ಸಂತತಿಯ (ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ಕೆಲವು ಇತರ ದೇಶಗಳಲ್ಲದೆ) ವ್ಯಕ್ತಿ. ಭಾರತೀಯ ಮೂಲದ ವ್ಯಕ್ತಿಯು ಭಾರತದ ನಾಗರಿಕನಾಗಿದ್ದಿರಬಹುದು ಮತ್ತು ನಂತರ ಬೇರೆ ದೇಶದ ನಾಗರಿಕತ್ವವನ್ನು ಸ್ವೀಕರಿಸಿರಬಹುದು.

ಸಾಮಾನ್ಯವಾಗಿ ತೆರಿಗೆ ದರಗಳು ಅನಿವಾಸಿ ಭಾರತೀಯರಿಗು ಮತ್ತು ಭಾರತೀಯ ಮೂಲದ ವ್ಯಕ್ತಿಗಳಿಗು ಭಿನ್ನವಾಗಿರುತ್ತವೆ. ಆದಾಯ ತೆರಿಗೆಯ ಪ್ರಕಾರ, ಯಾವುದೇ ವ್ಯಕ್ತಿ ಭಾರತೀಯ ಮೂಲದವನಾಗಲು ಕನಿಷ್ಟ ೧೮೨ ಅಥವ ೩೬೫ ದಿನಗಳು ಭಾರತದಲ್ಲಿ ವಾಸಿಸಬೇಕು, ಇಲ್ಲವಾದಲ್ಲಿ ಅವನನ್ನು ಅನಿವಾಸಿ ಭಾರತೀಯ ಎಂದು ಪರಿಗಣಿಸಲಾಗುತ್ತದೆ. ಸರ್ಕಾರ ಇಂತಹ ಅನಿವಾಸಿ ಭಾರತೀಯರ ಮೂಲ ಮತ್ತು ಹಿಂದಿನ ತಲೆಮಾರಿನವರ ಮೂಲವನ್ನು ಪರೀಕ್ಷಿಸಿ ಅವರಿಗೆ ಪಿ.ಐ.ಒ (Person of Indian Origin- ಭಾರತ ಮೂಲದ ವ್ಯಕ್ತಿ) ಎಂಬ ಗುರುತಿನ ಚೀಟಿ ನೀಡುತ್ತದೆ. ಈ ಚೀಟಿ ಇದ್ದಲ್ಲಿ ವೀಸಾ ಇಲ್ಲದೆ ಭಾರತವನ್ನು ಪ್ರವೇಶಿಸಬಹುದಾಗಿದೆ. ಭಾರತೀಯರು ಇತರ ದೇಶಗಳಿಗೆ ಹೋಗಲು ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದುದೆಂದರೆ ಭಾರತೀಯ ಪ್ರತಿಭೆ ಭಾರತಕ್ಕಿಂತ ಹೊರ ದೇಶಗಳಲ್ಲಿ ಹೆಚ್ಚಾಗಿ ಗುರುತಿಸಲ್ಪಡುತ್ತಿದೆ. ಈ ರೀತಿ ಕೆಲಸದ ಕಾರಣಕ್ಕೆಂದು ಹೋಗಿ ಅಲ್ಲಿನ ಸಂಪಾದನೆ ಹಾಗು ಐಷಾರಾಮಿ ಬದುಕಿಗೆ ಹೊಂದಿಕೊಂಡು ಅನೇಕ ಭಾರತೀಯರು ಅಲ್ಲಿಯೇ ನೆಲೆಗೊಳ್ಳುತ್ತಿದ್ದಾರೆ. ಸಂಪಾದನೆ ಒಂದು ಕಡೆಯಾದರೆ, ಭಾರತೀಯರನ್ನು ವಿದೇಶಿ ವಧು/ವರ ಅಥವಾ ವಿದೇಶಿಗರನ್ನು ಭಾರತೀಯರು ವಿವಾಹವಾದಲ್ಲಿ ಅವರೂ ಸಹ ಅನಿವಾಸಿ ಭಾರತೀಯರಾಗುವರು. ಭಾರತೀಯರು ಮುಖ್ಯವಾಗಿ ವಲಸೆ ಹೋಗುತ್ತಿರುವ ಹಾಗು ಹೋಗಿರುವ ದೇಶಗಳೆಂದರೆ ಅಮೇರಿಕ, ಯುನೈಟೆಡ್ ಕಿಂಗ್‍ಡಮ್, ಆಗ್ನೇಯ ಆಫ್ರಿಕಾ, ಆಗ್ನೇಯ ಏಷ್ಯಾ, ಮಡಗಾಸ್ಕರ್, ನೆದರ್ಲ್ಯಾಂಡ್ಸ್ ಮತ್ತು ಸುರಿನಾಮ್, ಸಿಂಗಾಪುರ್, ಪಶ್ಚಿಮ ಏಷ್ಯಾ, ಇಸ್ರೇಲ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಇತ್ಯಾದಿ.

ಪ್ರಪಂಚದ ಮೂಲೆ ಮೂಲೆಯಲ್ಲಿ ಭಾರತೀಯರು

[ಬದಲಾಯಿಸಿ]

ಅಮೇರಿಕ ಸಂಯುಕ್ತ ಸಂಸ್ಥಾನ

ಅತಿ ಹೆಚ್ಚು ಭಾರತದ ಜನಸಂಖ್ಯೆ ಕಂಡುಬರುವ ದೇಶವೆಂದರೆ ಅಮೇರಿಕ. ಭಾರತೀಯರು ವಿದೇಶಗಳಿಗೆ ವಲಸೆ ಹೋಗುವುದು ೧೯ ಹಾಗು ೨೦ನೇ ಶತಮಾನದಲ್ಲಿ ಪ್ರಾರಂಭವಾಯಿತು, ಅದರಲ್ಲಿ ಸಿಕ್ಕರು ಮೊದಲಿಗರು ಎಂದು ಕಂಡು ಬಂದಿದ್ದು ಅವರು ಸಿಯಾಟಲ್ ಹಾಗು ಸ್ಯಾನ್ ಫ್ರಾನ್ಸಿಸ್ಕೋ ಭಾಗಗಳಲ್ಲಿ ನೆಲೆಗೊಂಡರು.ಪ್ರಸಿದ್ದ ಅಮೇರಿಕ-ಭಾರತೀಯ ಮೂಲದ ವ್ಯಕ್ತಿ ಕಲ್ಪನ ಚಾವ್ಲಾ.

ಕಲ್ಪನ ಚಾವ್ಲಾ

ಯುನೈಟೆಡ್ ಕಿಂಗ್‍ಡಮ್

ಈಗ ಯುನೈಟೆಡ್ ಕಿಂಗ್‍ಡಮ್‍ನ ಭಾರತೀಯ ಸಮುದಾಯ ಮೂರನೇ ಪೀಳಿಗೆಯಲ್ಲಿದೆ. ಮೊದಲಿಗೆ ಯುನೈಟೆಡ್ ಕಿಂಗ್‍ಡಮ್ ಭಾರತೀಯರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಹಾಗು ಸಮಾಜ ಅವರನ್ನು ಗೌರವದಿಂದ ಕಾಣಲಿಲ್ಲ. ಆದರೆ ಇಂದು, ವ್ಯಾಪಾರ, ಕಾನೂನು ಹಾಗು ವೈದ್ಯಕೀಯ ಕ್ಷೇತ್ರಗಳಲ್ಲಿ ಭಾರತೀಯರದ್ದೆ ಮೇಲುಗೈ. ಪ್ರಸಿದ್ದ ಬ್ರಿಟಿಷ್-ಭಾರತೀಯರು ಮಧುರ್ ಜಾಫ್ರಿ.

ಮಧು‍ರ್ ಜಫ಼್ರೆಯ್

ಆಗ್ನೇಯ ಆಫ್ರಿಕಾ ಆಗ್ನೇಯ ಆಫ್ರಿಕಾ ಭಾರತೀಯರು ಸುಮಾರು ಒಂದು ಶತಮಾನದ ಹಿಂದೆ ವಲಸೆ ಹೋಗಲು ಪ್ರಾರಂಭಿಸಿದರು, ಅದರಲ್ಲಿ ಹೆಚ್ಚಿನವರು ಗುಜರಾತ್ ಹಾಗು ಪಂಜಾಬ್ ಮೂಲದವರಾಗಿದ್ದರು. ಇಂದು ಸುಮಾರು ೩೦ ಲಕ್ಷ ಭಾರತೀಯರು ಆಗ್ನೇಯ ಆಫ್ರಿಕಾದಲ್ಲಿ ವಾಸಿಸುತ್ತಿದ್ದಾರೆ. ಪ್ರಸಿದ್ದ ಆಗ್ನೇಯ ಆಫ್ರಿಕಾ-ಭಾರತೀಯರು ನವನೆಥಮ್ ಪಿಳ್ಳೈ.

ನವನೇಥ‍ಮ್ ಪಿಳ್ಳೈ

ಸಿಂಗಾಪುರ್

ಸಿಂಗಾಪುರದ ಭಾರತೀಯರು ವರ್ಗ ಶ್ರೇಣೀಕರಣದ ಗಮನಾರ್ಹವಾಗಿದ್ದಾರೆ ಹಾಗು ಅತಿ ಹೆಚ್ಚು ವಿಶ್ವವಿದ್ಯಾಲಯಗಳ ಪದವಿ ಪಡೆಯುವುದರಲ್ಲಿ ಸಫಲರಾಗಿದ್ದಾರೆ.ಮೊದಲಿಗೆ ಸಿಂಗಾಪುರದಲ್ಲಿ ಭಾರತೀಯ ಜನಸಂಖ್ಯೆ ಹೆಚ್ಚಾಗಿ ಯುವ ಕಾರ್ಮಿಕರು ಹಾಗು ಸೈನಿಕರಿಂದ ಕೂಡಿತ್ತು.ಭಾರತೀಯ ಭಾಷೆಗಳಲ್ಲಿ ತಮಿಳು ಇಲ್ಲಿನ ಪ್ರದೇಶಗಳಲ್ಲಿ ಪ್ರಾಧಾನ್ಯವಾಗಿ ಕಂಡುಬರುತ್ತದೆ. ವಿ ಸುಂದ್ರಮೂರ್ತಿ,ಪ್ರಸಿದ್ದ ಸಿಂಗಾಪುರ್-ಭಾರತೀಯರಾಗಿದ್ದಾರೆ.

ವಿ.ಸುಂದರಮೂರ್ತಿ

ನೆದರ್ಲ್ಯಾಂಡ್ಸ್ ಮತ್ತು ಸುರಿನಾಮ್ ೧.೨ ಲಕ್ಷ ಭಾರತೀಯರನ್ನು ನಾವು ನೆದರ್ಲ್ಯಾಂಡ್‍ನಲ್ಲಿ ಕಾಣಬಹುದಾಗಿದೆ.ಇವರಲ್ಲಿ ಅನೇಕರನ್ನು ಡಚ್ಚರು ತಮ್ಮ ವ್ಯವಸಾಯದ ಕೆಲಸಕ್ಕೆಂದು ಕರೆತಂದವರಾಗಿದ್ದಾರೆ. ಹೇಗ್‍ನಲ್ಲಿ ನಿರ್ಮಿಸಲಾಗುತ್ತಿರುನ ಯುರೋಪ್‍ನ ಅತಿ ದೊಡ್ಡ ದೇವಸ್ತಾನ ಭಾರತದ ಮೂರು ಶೈಲಿಗಳಾದ ಇಸ್ಕಾನ್ ದೇವಾಲಯ, ಆರ್ಯ ಸಮಾಜ ಹಾಗು ಸಿಖ್ ದೇವಾಲಯದ ಮಿಶ್ರಣವಾಗಿದೆ.

ಇತರ ಪ್ರಸಿದ್ದ ಅನಿವಾಸಿ ಭಾರತೀಯರು

[ಬದಲಾಯಿಸಿ]

ಇತರ ಪ್ರಸಿದ್ದ ಅನಿವಾಸಿ ಭಾರತೀಯರು ಎಂದರೆ, ಲಿಲ್ಲಿ ಸಿಂಗ್, ಹರ್ಜಿತ್ ಸಜ್ಜನ್, ರುದ್ರನಾಥ ಕಪಿಲ್‍ದ್ಯೊ, ವಹೀದ್ ಆಲಿ, ಶ್ರೀ ಪ್ರಕಾಶ್ ಲೋಹಿಯಾ, ಮನೋಜ್ ಪಂಜಾಬಿ, ಐಶ್ವರ್ಯ ನಿಧಿ ಇತ್ಯಾದಿ. ಈ ಎಲ್ಲಾ ಭಾರತೀಯರೂ ತಮ್ಮದೇ ಕ್ಷೇತ್ರಗಳಲ್ಲಿ ಮಹಾನ್ ಸಾಧನೆಯನ್ನು ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಪ್ರಪಂಚದ ಎದುರು ಎತ್ತಿ ಹಿಡಿದಿದ್ದಾರೆ. ವಲಸೆ ಹೊಗುವುದರಿಂದ ಉಪಯೋಗವು ಇದೆ ಹಾಗು ದುರುಪಯೋಗವೂ ಇದೆ. ಉಪಯೋಗವೆಂದರೆ ಎರಡೂ ದೇಶಗಳ ಸಂಸ್ಕೃತಿ ಹಾಗು ಸಂಪ್ರದಾಯಗಳು ವಿನಿಮಯವಾಗುತ್ತದೆ ಆದರೆ ಒಂದು ಸಂಸ್ಕೃತಿಯನ್ನು ಮರೆತು ಮತ್ತೊಂದರ ಹಿಂದೆ ಹೋಗುವುದು ಯೋಗ್ಯವಲ್ಲ. ಎರಡೂ ದೇಶಗಳ ಸಂಸ್ಕೃತಿ ಹಾಗು ಸಂಪ್ರದಾಯಗಳನ್ನು ಕಲಿತು ತಿಳಿಯದವರಿಗೆ ತಿಳಿಸುವುದು ಯೋಗ್ಯ.

ಈ ರೀತಿ ಭಾರತೀಯರು ಯಾವುದೇ ದೇಶದಲ್ಲಿ ಅಥವಾ ಈ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು, ತಮ್ಮ ಹಿರಿಮೆಯನ್ನು ಇಡೀ ಪ್ರಪಂಚಕ್ಕೆ ಸಾರಿ ಹೇಳುತ್ತಾರೆ. [] []

ಉಲ್ಲೇಖಗಳು

[ಬದಲಾಯಿಸಿ]
  1. http://www.varthabharati.in/article/vishesha-varadigalu/56524
  2. gichfindia.com/kannada/loans/tax-benefits/