ಅನುಜ ಅರುಣ್ ಪಾಟಿಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಅಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.[೧]
ಅನುಜ ಪಾಟಿಲ್ ರವರು ಜೂನ್ ೨೨, ೧೯೯೨ ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು.[೨]
ದೇಶಿ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಆಫ್ ಬ್ರೇಕ್ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಉಮನ್ ಆಗಿ ತಂಡಕ್ಕೆ ಆಸರೆಯಾಗಿದ್ದಾರೆ. ತಮ್ಮ ಆಲ್‌ರೌಂಡ್ ಆಟದ ಮುಖಾಂತರ ಇವರು ಭಾರತೀಯ ಟಿ-೨೦ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸುತಿದ್ದಾರೆ.[೩]
ಸೆಪ್ಟಂಬರ್ ೨೯, ೨೦೧೨ರಲ್ಲಿ ಶ್ರೀಲಂಕಾದ ಗಾಲೇಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಐಸಿಸಿ ಟಿ-೨೦ ವಿಶ್ವಕಪ್ ೨೦೧೨ರ ೦೮ನೇ ಗ್ರೂಪ್ ಪಂದ್ಯದ ಮೂಲಕ ಅನುಜ ಪಾಟಿಲ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪]